'ಬಿಗ್ ಬಾಸ್': ಈ ವಾರ ಅಕ್ಷತಾಗೆ ನೀವೆಲ್ಲ ವೋಟ್ ಹಾಕ್ತೀರಾ.?

Recommended Video

Bigg Boss Kannada Season 6: ಬಿಗ್ ಬಾಸ್ ಮನೆಯಲ್ಲಿ ಏಳು ಜನ ನಾಮಿನೇಟ್ ಆದ್ರು | FILMIBEAT KANNADA

''ರಾಕೇಶ್ ಮತ್ತು ಅಕ್ಷತಾ ರನ್ನ ಮೊದಲು ಹೊರಗೆ ಹಾಕಿ'' - ಹೀಗೆನ್ನುವ ನೂರಾರು ಕಾಮೆಂಟ್ ಗಳು ಕಲರ್ಸ್ ಸೂಪರ್ ಅಫೀಶಿಯಲ್ ಫೇಸ್ ಬುಕ್ ಪುಟದಲ್ಲಿಯೇ ಇವೆ.

''ರಾಕೇಶ್-ಅಕ್ಷತಾ ನಡುವಿನ ಗೆಳೆತನವನ್ನು ನೋಡಲು ಆಗುತ್ತಿಲ್ಲ. ಪ್ಲೀಸ್ ಅವರಿಬ್ಬರನ್ನು ಆಚೆ ಹಾಕಿ'' ಅಂತ ವೀಕ್ಷಕರು ಮೂರ್ನಾಲ್ಕು ವಾರಗಳಿಂದಲೂ ಆಗ್ರಹಿಸುತ್ತಿದ್ದಾರೆ.

ಈ ವಾರ ನಾಮಿನೇಷನ್ ಪ್ರಕ್ರಿಯೆಯಿಂದ ರಾಕೇಶ್ ಬಚಾವ್ ಆಗ್ಬಿಟ್ಟರು. ಡೇಂಜರ್ ಝೋನ್ ನಲ್ಲಿ ಅಕ್ಷತಾ ಇದ್ದಾರೆ. ಅಕ್ಷತಾಗೆ ವೋಟ್ ಹಾಕಿ ಸೇಫ್ ಮಾಡುವುದು, ಬಿಡುವುದು ಈಗ ವೀಕ್ಷಕರ ಕೈಯಲ್ಲಿದೆ.

ಅಷ್ಟಕ್ಕೂ, ಈ ವಾರ ಅಕ್ಷತಾ ಜೊತೆಗೆ ಯಾರ್ಯಾರು ನಾಮಿನೇಟ್ ಆಗಿದ್ದಾರೆ ಅಂದ್ರಾ.? ಫೋಟೋ ಸ್ಲೈಡ್ ಗಳಲ್ಲಿ ಓದಿರಿ...

ಅಕ್ಷತಾಗೆ ಅತಿ ಹೆಚ್ಚು ವೋಟ್ ಗಳು.!

ಅಕ್ಷತಾಗೆ ಅತಿ ಹೆಚ್ಚು ವೋಟ್ ಗಳು.!

ಮುರಳಿ, ನವೀನ್, ಧನರಾಜ್, ಸೋನು ಪಾಟೀಲ್, ಜಯಶ್ರೀ ಮತ್ತು ಶಶಿ ಕುಮಾರ್... ಅಕ್ಷತಾ ವಿರುದ್ಧ ಮತ ಚಲಾಯಿಸಿದರು. ಹೀಗಾಗಿ, ಅಕ್ಷತಾ ಪಾಂಡವಪುರ ನಾಮಿನೇಟ್ ಆಗಲೇ ಬೇಕಾಯಿತು.

ಡೇಂಜರ್ ಝೋನ್ ನಲ್ಲಿ ಆಂಡಿ

ಡೇಂಜರ್ ಝೋನ್ ನಲ್ಲಿ ಆಂಡಿ

ಪಾಯಸದಲ್ಲಿ ಖಾರದ ಪುಡಿ ಬೆರೆಸಿದ ಆಂಡಿ ಈ ವಾರ ನಾಮಿನೇಟ್ ಆಗಿದ್ದಾರೆ. ಮುರಳಿ, ಅಕ್ಷತಾ, ನವೀನ್ ಮತ್ತು ಜಯಶ್ರೀ.. ಆಂಡ್ರ್ಯೂ ರನ್ನ ನಾಮಿನೇಟ್ ಮಾಡಿದರು.

ನಾಮಿನೇಟ್ ಆದ ಸೋನು ಪಾಟೀಲ್

ನಾಮಿನೇಟ್ ಆದ ಸೋನು ಪಾಟೀಲ್

ಅಕ್ಷತಾ ಮತ್ತು ರಾಕೇಶ್ ರಿಂದಾಗಿ ಸೋನು ಪಾಟೀಲ್ ಈ ವಾರ 'ಬಿಗ್ ಬಾಸ್' ಮನೆಯಿಂದ ಹೊರಹೋಗಲು ನಾಮಿನೇಟ್ ಆಗಿದ್ದಾರೆ.

ಧನರಾಜ್ ಗೆ ಎಲಿಮಿನೇಷನ್ ಪರೀಕ್ಷೆ

ಧನರಾಜ್ ಗೆ ಎಲಿಮಿನೇಷನ್ ಪರೀಕ್ಷೆ

ರಶ್ಮಿ ಮತ್ತು ರಾಕೇಶ್ ಮತ ಚಲಾವಣೆ ಮಾಡಿದ ಪರಿಣಾಮ ಧನರಾಜ್ ಕೂಡ ಎಲಿಮಿನೇಷನ್ ಪರೀಕ್ಷೆ ಎದುರಿಸಬೇಕಾಗಿದೆ.

ಕ್ಯಾಪ್ಟನ್ ಕವಿತಾ ಕೃಪೆ

ಕ್ಯಾಪ್ಟನ್ ಕವಿತಾ ಕೃಪೆ

ವಾರದ ಕ್ಯಾಪ್ಟನ್ ಆಗಿರುವ ಕವಿತಾಗೆ ಇಬ್ಬರನ್ನು ನಾಮಿನೇಟ್ ಮಾಡುವ ಅಧಿಕಾರ ಇತ್ತು. ಇದನ್ನ ಬಳಸಿಕೊಂಡ ಕವಿತಾ ರಶ್ಮಿ ಮತ್ತು ನವೀನ್ ರನ್ನ ನಾಮಿನೇಟ್ ಮಾಡಿದರು.

ಬಚಾವ್ ಆದ ರಾಕೇಶ್

ಬಚಾವ್ ಆದ ರಾಕೇಶ್

ನಾಮಿನೇಟ್ ಆಗಿದ್ದ ರಾಕೇಶ್, 'ನನ್ ಬಲೂನೇ ಸ್ಟ್ರಾಂಗು ಗುರು' ಚಟುವಟಿಕೆಯಲ್ಲಿ ಗೆದ್ದು ಸೇಫ್ ಆದರು. ರಾಕೇಶ್ ಬದಲು ಜಯಶ್ರೀ ನಾಮಿನೇಟ್ ಆಗಬೇಕಾಯಿತು.

ನಿಮ್ಮ ಮತ ಯಾರಿಗೆ.?

ನಿಮ್ಮ ಮತ ಯಾರಿಗೆ.?

ಅಕ್ಷತಾ, ಆಂಡಿ, ಸೋನು, ಧನರಾಜ್, ರಶ್ಮಿ, ನವೀನ್ ಮತ್ತು ಜಯಶ್ರೀ.. ಈ ಏಳು ಜನರ ಪೈಕಿ ನಿಮ್ಮ ಮತ ಯಾರಿಗೆ.? ಯಾರು ಔಟ್ ಆಗಬೇಕು ಎಂಬುದು ನಿಮ್ಮ ಇಚ್ಛೆ.? ನಿಮ್ಮ ಅಭಿಪ್ರಾಯವನ್ನು ನಮಗೆ ತಿಳಿಸಿ.. ಕೆಳಗಿರುವ ಕಾಮೆಂಟ್ ಬಾಕ್ಸ್ ಮೂಲಕ.

More from Filmibeat

English summary
Bigg Boss Kannada 6: Week 7: 7 Contestants are nominated for this week's elimination.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X