'ಬಿಗ್ ಬಾಸ್' ಮನೆಯಲ್ಲಿ ಸೋನು ಪಾಟೀಲ್ ಪ್ಲಾನ್ ವರ್ಕೌಟ್ ಆಗಲಿಲ್ಲ.!

Recommended Video

Bigg Boss Kannada 6: ಬಿಗ್ ಬಾಸ್' ಮನೆಯಲ್ಲಿ ಸೋನು ಪಾಟೀಲ್ ಪ್ಲಾನ್ ವರ್ಕೌಟ್ ಆಗಲಿಲ್ಲ.! | FILMIBEAT KANNADA

'ಉತ್ತರ ಕರ್ನಾಟಕದ ಜವಾರಿ ಹುಡುಗಿ', 'ಪಟಾಕಿ', 'ಆಟಂ ಬಾಂಬು' ಅಂತೆಲ್ಲಾ ಬಿಲ್ಡಪ್ ತಗೊಂಡು 'ಬಿಗ್ ಬಾಸ್' ಮನೆಗೆ ಬಂದಿದ್ದ ಸೋನು ಪಾಟೀಲ್ ಏಳನೇ ವಾರವೇ ಎಲಿಮಿನೇಟ್ ಆಗಿದ್ದಾರೆ.

ಮಾತು ಮಾತಿಗೂ ''ನಾನು ಉತ್ತರ ಕರ್ನಾಟಕದ ಹುಡುಗಿ'' ಎನ್ನುತ್ತಿದ್ದ ಸೋನು ಪಾಟೀಲ್ ಗೆ 'ಉತ್ತರ ಕರ್ನಾಟಕ' ಅಂತ ಯಾಕೆ ಕರೆಯುತ್ತಾರೆ ಅನ್ನೋದೇ ಗೊತ್ತಿರಲಿಲ್ಲ.

ಇನ್ನೂ ಆಗಾಗ ''ತುತ್ತು ಅನ್ನಕ್ಕೂ ಕಷ್ಟ ಪಟ್ಟಿದ್ದೇನೆ. ಬಸ್ ಸ್ಟ್ಯಾಂಡ್ ನಲ್ಲಿ ಮಲಗಿದ್ದೇನೆ'' ಎನ್ನುತ್ತಾ ಸೋನು ಪಾಟೀಲ್ ಸಿಂಪಥಿ ಗಿಟ್ಟಿಸಿಕೊಳ್ಳುತ್ತಿದ್ದಾರೆ ಅನ್ನೋದು ಹಲವರ ಆರೋಪ ಆಗಿತ್ತು.

Bigg Boss Kannada 6: Week 7: Sonu Patil eliminated

ಸೋನು ಪಾಟೀಲ್ ವಿರುದ್ಧ ಆಂಡ್ರ್ಯೂ ತಿರುಗಿ ಬಿದ್ದ ಮೇಲೆ ''ಉತ್ತರ ಕರ್ನಾಟಕ'' ಅನ್ನೋದನ್ನ ಸೋನು ಪಾಟೀಲ್ ನಿಲ್ಲಿಸಿದ್ದರು. ಅದಾದ ಮೇಲೆ ತೀರಾ ಮಂಕಾದ ಸೋನು ಪಾಟೀಲ್ ಏಳನೇ ವಾರ 'ಬಿಗ್ ಬಾಸ್' ಮನೆಯಿಂದ ಹೊರಗೆ ಬಂದಿದ್ದಾರೆ.

'ಬಿಗ್ ಬಾಸ್' ಮನೆಯಲ್ಲಿ ಸೋನು ಪಾಟೀಲ್ ಅಂದುಕೊಂಡ ಹಾಗೆ ಉತ್ತರ ಕರ್ನಾಟಕ ಮತ್ತು ಸಿಂಪಥಿ ಪ್ಲಾನ್ ವರ್ಕ್ ಆಗಲಿಲ್ಲ. ಇನ್ನೂ ನವೀನ್ ಜೊತೆಗೆ ಲವ್ ಟ್ರ್ಯಾಕ್ ಕೂಡ ಅಷ್ಟೊಂದು ಕಮಾಲ್ ಮಾಡಲಿಲ್ಲ. ಇನ್ನೂ ಯಾವುದೇ ಗುಂಪಿಗೆ ಸೇರದ ಸೋನು ಪಾಟೀಲ್ ಇದೀಗ ಔಟ್ ಆಗಿದ್ದಾರೆ.

ಸೋನು ಪಾಟೀಲ್ ಜೊತೆಗೆ ಧನರಾಜ್, ರಶ್ಮಿ, ನವೀನ್, ಅಕ್ಷತಾ, ಆಂಡ್ರ್ಯೂ ಮತ್ತು ಜಯಶ್ರೀ ನಾಮಿನೇಟ್ ಆಗಿದ್ದರು. ಇತರರಿಗೆ ಹೋಲಿಸಿದರೆ, ವೀಕ್ಷಕರಿಂದ ಕಮ್ಮಿ ಬೆಂಬಲ ಪಡೆದ ಸೋನು ಪಾಟೀಲ್ ಗಂಟು ಮೂಟೆ ಕಟ್ಟಿಕೊಂಡು ಮನೆ ಕಡೆ ಹೆಜ್ಜೆ ಹಾಕಿದ್ದಾರೆ.

More from Filmibeat

English summary
Bigg Boss Kannada 6: Week 7: Sonu Patil eliminated.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X