ಅಚ್ಚರಿ ಎಲಿಮಿನೇಷನ್: 'ಬಿಗ್ ಬಾಸ್' ಮನೆಯಿಂದ ಹೊರನಡೆದ ನಯನ.!
Recommended Video

'ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮದ ಸ್ಪರ್ಧಿಗಳ ಪಟ್ಟಿಯಲ್ಲಿ ಕೊಂಚ ಜನಪ್ರಿಯ ಮತ್ತು ಕಠಿಣ ಸ್ಪರ್ಧಾಳು ಎಂಬ ಭಾವನೆ ವೀಕ್ಷಕರಿಗೆ ಮೂಡಿದ್ದು ನಯನ ಪುಟ್ಟಸ್ವಾಮಿ ನೋಡಿದ್ಮೇಲೆ.!
ಯಾಕಂದ್ರೆ, ಈಗಾಗಲೇ ಒಂದು ರಿಯಾಲಿಟಿ ಶೋ ಗೆದ್ದಿರುವಾಕೆ ನಯನ ಪುಟ್ಟಸ್ವಾಮಿ. 'ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು' ಕಾರ್ಯಕ್ರಮದಲ್ಲಿ ಗೆಲುವಿನ ನಗೆ ಬೀರಿದ್ದ ನಯನ ಪುಟ್ಟಸ್ವಾಮಿ 'ಬಿಗ್ ಬಾಸ್' ನಲ್ಲೂ ಎಲ್ಲರಿಗೂ ಕಠಿಣ ಸ್ಪರ್ಧೆ ನೀಡಬಹುದು ಎಂದು ವೀಕ್ಷಕರು ಭಾವಿಸಿದ್ದರು.
ಹಾಗ್ನೋಡಿದ್ರೆ, 'ಬಿಗ್ ಬಾಸ್' ಮನೆಯಲ್ಲಿ ಗ್ರೂಪಿಸಂ ಮಾಡದೆ.. ನೇರವಾಗಿ ಆಟ ಆಡುತ್ತಿದ್ದ ನಯನ ಎಂಟನೇ ವಾರ ಎಲಿಮಿನೇಟ್ ಆಗಿದ್ದಾರೆ. ಮುಂದೆ ಓದಿರಿ...

ಸೈಲೆಂಟ್ ಆಗಿದ್ದ ನಯನ
ನಿಜ ಹೇಳ್ಬೇಕಂದ್ರೆ, 'ಬಿಗ್ ಬಾಸ್' ಕಾರ್ಯಕ್ರಮದಲ್ಲಿ ಈ ವಾರವೆಲ್ಲಾ ನಯನ ಕೊಂಚ ಮಂಕಾಗಿದ್ದರು. ಚಟುವಟಿಕೆ ನಡೆಯುವ ಸಂದರ್ಭದಲ್ಲೂ ನಯನ ಎದ್ದು ಕಾಣಲಿಲ್ಲ. ವಾದ-ವಿವಾದಗಳಿಗೆ ನಯನ ಸಾಕ್ಷಿ ಆಗಲಿಲ್ಲ. ಸೈಲೆಂಟ್ ಆಗಿದ್ದ ನಯನ 'ಬಿಗ್ ಬಾಸ್' ಮನೆಯಿಂದ ಹೊರ ನಡೆದಿದ್ದಾರೆ.

ಇತರರಿಗಿಂತ ಕಮ್ಮಿ ವೋಟ್ಸ್
ರಾಕೇಶ್, ಅಕ್ಷತಾ, ಶಶಿ, ಕವಿತಾ, ಜಯಶ್ರೀ ಮತ್ತು ಧನರಾಜ್ ಗೆ ಹೋಲಿಸಿದರೆ ನಯನಗೆ ಕಮ್ಮಿ ವೋಟ್ ಗಳು ಲಭಿಸಿತ್ತು. ವೀಕ್ಷಕರ ಬೆಂಬಲದ ಆಧಾರದ ಮೇಲೆ ನಯನಗೆ ಗೇಟ್ ಪಾಸ್ ಕೊಡಲಾಗಿದೆ.

ಗ್ರೂಪಿಸಂ ಮಾಡದ ನಯನ
ಅತ್ತ ಜಯಶ್ರೀ, ಶಶಿ ಮತ್ತು ಕವಿತಾ ಗ್ರೂಪ್ ನಲ್ಲಿ ನಯನ ಗುರುತಿಸಿಕೊಳ್ಳಲಿಲ್ಲ. ಗಾಯಕ ನವೀನ್ ಸಜ್ಜು ಜೊತೆಗೆ ಹೆಚ್ಚು ಆತ್ಮೀಯವಾಗಿದ್ದ ನಯನ ಪುಟ್ಟಸ್ವಾಮಿ ಯಾರಿಗೂ ಅಂಜದೆ ಆಟ ಆಡುತ್ತಿದ್ದರು.

ಅಚ್ಚರಿ ತಂದ ಎಲಿಮಿನೇಷನ್
ಈ ವಾರ ರಾಕೇಶ್, ಅಕ್ಷತಾ, ಶಶಿ, ಕವಿತಾ, ಜಯಶ್ರೀ, ಧನರಾಜ್ ಮತ್ತು ನಯನ ಡೇಂಜರ್ ಝೋನ್ ನಲ್ಲಿದ್ದರು. ನಯನ ಔಟ್ ಆಗುತ್ತಾರೆ ಎಂಬ ನಿರೀಕ್ಷೆ ವೀಕ್ಷಕರಿಗೆ ಇರಲಿಲ್ಲ. ಆದ್ರೆ, ನಯನಗೆ ಕಮ್ಮಿ ವೋಟ್ ಗಳು ಬಂದಿರೋದು ನಿಜಕ್ಕೂ ಅಚ್ಚರಿ ತಂದಿದೆ.


Click it and Unblock the Notifications











