ಡೇಂಜರ್ ಝೋನ್ ನಲ್ಲಿ ಏಳು ಮಂದಿ: ನಿಮ್ಮ ಬೆಂಬಲ ಯಾರಿಗೆ.?
'ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮದಿಂದ ಅಕ್ಷತಾ ಮತ್ತು ರಾಕೇಶ್ ಔಟ್ ಆಗಬೇಕು ಎಂಬುದು ಬಹುತೇಕ ವೀಕ್ಷಕರ ಒತ್ತಾಯ. ಇಷ್ಟು ದಿನ ರಾಕೇಶ್ ಹಾಗೂ ಅಕ್ಷತಾ ಸೇಫ್ ಆಗುತ್ತಲೇ ಇದ್ದರು. ಈ ವಾರವೂ ಹಾಗೇ ಸೇಫ್ ಆಗಲು ಸಾಧ್ಯವೇ.? ಕೊಂಚ ಕಷ್ಟ.!
ಯಾಕಂದ್ರೆ, ರಾಕೇಶ್ ಮತ್ತು ಅಕ್ಷತಾ ಜೊತೆಗೆ ಈ ವಾರ ಡೇಂಜರ್ ಝೋನ್ ನಲ್ಲಿ ಇರುವವರು ಶಶಿ, ಕವಿತಾ, ಜಯಶ್ರೀ, ನಯನ ಮತ್ತು ಧನರಾಜ್.
ಒಂದ್ಕಡೆ ಗ್ರೂಪಿಸಂ ಮಾಡುತ್ತಿರುವ ಶಶಿ, ಕವಿತಾ, ಜಯಶ್ರೀ ಮತ್ತು ಧನರಾಜ್ ಒಟ್ಟೊಟ್ಟಿಗೆ ನಾಮಿನೇಟ್ ಆಗಿದ್ದಾರೆ. ಅತ್ತ ಅಕ್ಷತಾ ಮತ್ತು ರಾಕೇಶ್ ಕೂಡ ಟಾರ್ಗೆಟ್ ಆಗಿದ್ದಾರೆ. ಈ ನಡುವೆ ಸಿಂಗಲ್ ಸಿಂಹಿಣಿ ನಯನಗೂ ಎಲಿಮಿನೇಷನ್ ಟೆನ್ಷನ್ ಮೂಡಿದೆ.
ಎಂಟನೇ ವಾರದ ನಾಮಿನೇಷನ್ ಪ್ರಕ್ರಿಯೆ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ಓದಿರಿ...

ರಾಕೇಶ್ ವಿರುದ್ಧ ನಾಲ್ಕು ಮತಗಳು.!
ತಾನೇ ದೊಡ್ಡ ಗೇಮ್ ಪ್ಲೇಯರ್ ಎಂದುಕೊಂಡಿರುವ ರಾಕೇಶ್ ಈ ವಾರ ನಾಮಿನೇಟ್ ಆಗಿದ್ದಾರೆ. ಎಂ.ಜೆ ರಾಕೇಶ್ ಬಗ್ಗೆ ವೀಕ್ಷಕರ ವಲಯದಲ್ಲಿ ಉತ್ತಮ ಅಭಿಪ್ರಾಯ ಇಲ್ಲ. ಹೀಗಿರುವಾಗ, ಎಂ.ಜೆ ರಾಕೇಶ್ ಈ ವಾರ ಸೇಫ್ ಆಗ್ತಾರಾ.? ನೋಡಬೇಕು.

ಟಾರ್ಗೆಟ್ ಆದ ಶಶಿ
ಕವಿತಾ-ಆಂಡಿ ಜಗಳದಲ್ಲಿ ಮೂಗು ತೂರಿಸಿ, ಕೈ ಮೂಳೆ ಮುರಿದುಕೊಂಡ ಮೇಲೆ ಶಶಿ ನಾಮಿನೇಟ್ ಆಗಿರಲಿಲ್ಲ. ಆದ್ರೆ, ಈ ವಾರ ನಾಮಿನೇಷನ್ ನಿಂದ ಶಶಿ ಮಿಸ್ ಆಗಲಿಲ್ಲ.

ಡೇಂಜರ್ ಝೋನ್ ನಲ್ಲಿ ಅಕ್ಷತಾ
ಅಕ್ಷತಾಗೆ ಈ ವಾರವೂ ನಾಮಿನೇಷನ್ ತಲೆ ಬಿಸಿ ತಪ್ಪಿಲ್ಲ. ರಾಕೇಶ್ ಜೊತೆಗಿನ ಗೆಳೆತನವೇ ಅಕ್ಷತಾ ಪದೇ ಪದೇ ನಾಮಿನೇಟ್ ಆಗಲು ಕಾರಣವಾಗಿದೆ.

ಟಾರ್ಗೆಟ್ ಆದ ಕವಿತಾ
ಕ್ಯಾಪ್ಟನ್ ಆಗಿದ್ದಾಗ ಪಕ್ಷಪಾತ ಮಾಡಿದ ಕಾರಣಕ್ಕೆ ಕವಿತಾ ಈ ವಾರ ಟಾರ್ಗೆಟ್ ಆಗಿದ್ದಾರೆ. ಪದೇ ಪದೇ ತಪ್ಪು ಮಾಡಿ ಕ್ಷಮೆ ಕೇಳುವ ಕವಿತಾ ಈ ಶನಿವಾರ ಬಚಾವ್ ಆಗುತ್ತಾರಾ.?

ಜಯಶ್ರೀ ಮಿಸ್ ಆಗಲಿಲ್ಲ
'ಬಿಗ್ ಬಾಸ್' ಮನೆಯ ರಿಮೋಟ್ ಕಂಟ್ರೋಲ್ ಜಯಶ್ರೀ ಈ ವಾರ ನಾಮಿನೇಟ್ ಆಗಿದ್ದಾರೆ. ಜಯಶ್ರೀ ಪರವಾಗಿ ನೀವು ಮತ ಚಲಾವಣೆ ಮಾಡ್ತೀರಾ.?

ಮುರಳಿ ಕಣ್ಣು ಇವರಿಬ್ಬರ ಮೇಲೆ
ರಶ್ಮಿ, ನಯನ ಮತ್ತು ಧನರಾಜ್ ಗೆ ನಾಮಿನೇಷನ್ ನಲ್ಲಿ ತಲಾ ಒಂದೊಂದು ಮತಗಳು ಬಿದ್ದಿದ್ದವು. ಈ ಮೂವರ ಪೈಕಿ ಇಬ್ಬರನ್ನು ನಾಮಿನೇಟ್ ಮಾಡುವ ಅಧಿಕಾರ ಕ್ಯಾಪ್ಟನ್ ಮುರಳಿಗೆ ಲಭಿಸಿತು. ಹೀಗಾಗಿ, ಧನರಾಜ್ ಮತ್ತು ನಯನ ರನ್ನ ಮುರಳಿ ನಾಮಿನೇಟ್ ಮಾಡಿದರು.

ನಿಮ್ಮ ಬೆಂಬಲ ಯಾರಿಗೆ.?
ರಾಕೇಶ್, ಅಕ್ಷತಾ, ಶಶಿ, ಕವಿತಾ, ಜಯಶ್ರೀ, ಧನರಾಜ್ ಮತ್ತು ನಯನ... ಈ ಏಳು ಮಂದಿ ಪೈಕಿ ನಿಮ್ಮ ಬೆಂಬಲ ಯಾರಿಗೆ.? ಯಾರು ಸೇಫ್ ಆಗಬೇಕು.? ಯಾರು ಔಟ್ ಆಗಬೇಕು.? ನಿಮ್ಮ ಅಭಿಪ್ರಾಯವನ್ನು ನಮಗೆ ತಿಳಿಸಿ.. ಕೆಳಗಿರುವ ಕಾಮೆಂಟ್ ಬಾಕ್ಸ್ ಮೂಲಕ.


Click it and Unblock the Notifications











