ಏನ್ ಅದ್ಭುತ: ಅಕ್ಷತಾ ಆಟವನ್ನು ಮೆಚ್ಚಿ ಚಪ್ಪಾಳೆ ತಟ್ಟಿದ ಕಿಚ್ಚ ಸುದೀಪ.!

Recommended Video

Bigg Boss Kannada Season 6: ಏನ್ ಅದ್ಭುತ: ಅಕ್ಷತಾ ಆಟವನ್ನು ಮೆಚ್ಚಿ ಚಪ್ಪಾಳೆ ತಟ್ಟಿದ ಕಿಚ್ಚ ಸುದೀಪ.!

ಎರಡು ವಾರಗಳ ಹಿಂದಿನ ಫ್ಲ್ಯಾಶ್ ಬ್ಯಾಕ್ ಗೆ ಹೋದರೆ.. ಪಾಂಡವಪುರದ ಹುಡುಗಿ ಅಕ್ಷತಾ ಹೀಗಿರಲಿಲ್ಲ. ಎಂ.ಜೆ.ರಾಕೇಶ್ ಜೊತೆಗೆ ಹೆಚ್ಚು ಕಾಲ ಕಳೆಯುತ್ತಿದ್ದ ಅಕ್ಷತಾ, ಸುದೀಪ್ ಮಾತನ್ನ ಕಿವಿಗೆ ಹಾಕಿಕೊಂಡಿರಲಿಲ್ಲ.

''ಒಂದು ವಾರ ರಾಕೇಶ್ ಜೊತೆಗೆ ಮಾತನಾಡಬೇಡಿ'' ಎಂದು ಸುದೀಪ್ ಹೇಳಿದಾಗ... ಅವರೊಟ್ಟಿಗೆ ಅಕ್ಷತಾ ವಾದ ಮಾಡಿದ್ದರು. ಕೊನೆಗೆ ಸುದೀಪ್ ಗೆ ಕೊಟ್ಟಿದ್ದ ಮಾತಿನಂತೆ ನಡೆದುಕೊಳ್ಳದ ಅಕ್ಷತಾ ತಲೆ ಬಾಗಿ ಕ್ಷಮೆ ಕೂಡ ಕೇಳಿದ್ದರು.

ಸುದೀಪ್ ಮಾತಿಗೆ ಬೆಲೆ ಕೊಡದ ಅಕ್ಷತಾ, ತಾಯಿ ಕಡೆಯಿಂದ ಬಂದ ಕಟ್ಟುನಿಟ್ಟಿನ ಆದೇಶವನ್ನು ಪಾಲಿಸಿ ಎಂ.ಜೆ.ರಾಕೇಶ್ ರಿಂದ ದೂರ ಇದ್ದಾರೆ. ತಮ್ಮ ಆಟದ ಮೇಲೆ ಗಮನ ಹರಿಸುತ್ತಿದ್ದಾರೆ.

ಸದ್ಯ ಎಂ.ಜೆ.ರಾಕೇಶ್ ಜೊತೆ ಮಾತು ಬಿಟ್ಟು 'ಬಿಗ್ ಬಾಸ್' ನೀಡಿದ್ದ ಚಟುವಟಿಕೆಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಅಕ್ಷತಾ ಪಾಂಡವಪುರಗೆ ಸುದೀಪ್ 'ಮೆಚ್ಚುಗೆಯ ಚಪ್ಪಾಳೆ' ತಟ್ಟಿದ್ದಾರೆ. ಮುಂದೆ ಓದಿರಿ...

ಸುದೀಪ್ ಹೊಸ ತೀರ್ಮಾನ

ಸುದೀಪ್ ಹೊಸ ತೀರ್ಮಾನ

''ಈ ವಾರದಿಂದ ಪ್ರತಿವಾರವೂ.. ಗಮನ ಸೆಳೆಯುವ ಆಟ ಆಡುವವರಿಗೆ, ನನ್ನ ಕಡೆಯಿಂದ ವಿಶೇಷ ಚಪ್ಪಾಳೆ ಕೊಡಬೇಕು ಅಂತ ನಾನು ಅಂದುಕೊಂಡಿದ್ದೇನೆ. ನಾಮಿನೇಷನ್, ಎಲಿಮಿನೇಷನ್ ಹಾಗೂ ಜನರ ವೋಟಿಂಗ್ ಗೆ ಇದು ಸಂಬಂಧ ಇಲ್ಲ. ಇದು ಬರಿ ನನಗೆ ಇಷ್ಟ ಆದ ಸ್ಪರ್ಧಿಗೆ ನಾನು ಕೊಡುವ ವಿಶೇಷ ಚಪ್ಪಾಳೆ... ಕಿಚ್ಚನ ಮೆಚ್ಚುಗೆಯ ಚಪ್ಪಾಳೆ'' ಎಂದು 'ವಾರದ ಕಥೆ ಕಿಚ್ಚನ ಜೊತೆ' ಸಂಚಿಕೆಯಲ್ಲಿ ಸುದೀಪ್ ಘೋಷಿಸಿದರು.

ಮೊದಲನೇ ಮೆಚ್ಚುಗೆಯ ಚಪ್ಪಾಳೆ ಯಾರಿಗೆ.?

ಮೊದಲನೇ ಮೆಚ್ಚುಗೆಯ ಚಪ್ಪಾಳೆ ಯಾರಿಗೆ.?

ಮೊದಲನೇ 'ಮೆಚ್ಚುಗೆಯ ಚಪ್ಪಾಳೆ' ಲಭಿಸಿದ್ದು ಅಕ್ಷತಾ ಪಾಂಡವಪುರಗೆ. ''ನಿಮ್ಮ ನಡವಳಿಕೆ, ಟಾಸ್ಕ್ ನಲ್ಲಿ ಭಾಗವಹಿಸಿದ ರೀತಿಯನ್ನು ಗಮನದಲ್ಲಿ ಇಟ್ಟುಕೊಂಡು ಈ ಚಪ್ಪಾಳೆ ಕೊಡುತ್ತಿರುವೆ. ಈ ವಾರ ನಿಮ್ಮ ಆಟ ತುಂಬಾ ಚೆನ್ನಾಗಿತ್ತು. ಮಧ್ಯದಲ್ಲಿ ಪರ್ಸನಲ್ ಆಟ್ಯಾಕ್ ಆದರೂ, ನಿಮ್ಮ ತಾಳ್ಮೆ ಕಳೆದುಕೊಳ್ಳದೆ ಆಡಿದ್ರಿ. ಕಳೆದ ಎರಡು ವಾರ ಎಮೋಷನಲಿ ನಿಮಗೆ ಚಾಲೆಂಜಿಂಗ್ ಆಗಿತ್ತು. ಅದನ್ನ ಮೀರಿ ನಿಂತು ಕಮ್ ಬ್ಯಾಕ್ ಮಾಡಿದ್ದೀರಾ ಅನಿಸ್ತು'' ಎಂದು ಅಕ್ಷತಾಗೆ ಸುದೀಪ್ ಚಪ್ಪಾಳೆ ತಟ್ಟುತ್ತಾ ಹೊಗಳಿದರು.

ಚಟುವಟಿಕೆಯಲ್ಲಿ ಅಕ್ಷತಾ ಉತ್ತಮ ಪ್ರದರ್ಶನ

ಚಟುವಟಿಕೆಯಲ್ಲಿ ಅಕ್ಷತಾ ಉತ್ತಮ ಪ್ರದರ್ಶನ

ಕಳೆದ ವಾರ 'ಗೋಡೆ ಕಟ್ಟಿ ನೋಡು, ಮದುವೆ ಮಾಡಿ ನೋಡು' ಎಂಬ ವಿಶೇಷ ಚಟುವಟಿಕೆಯನ್ನ 'ಬಿಗ್ ಬಾಸ್' ನೀಡಿದ್ದರು. ಇದರಲ್ಲಿ ಗರ್ಭಿಣಿ ಹೆಂಗಸಿನ ಪಾತ್ರ ನಿರ್ವಹಿಸಿದ ಅಕ್ಷತಾ ಮಗುವಿಗೆ ಜನ್ಮ ನೀಡಿದ್ದರು. ಹಾಗೇ, ಚಟುವಟಿಕೆ ವೇಳೆ ಆಂಡಿ ಏನೇನೋ ಮಾತನಾಡಿದ್ದರೂ, ಅದರ ಬಗ್ಗೆ ತಲೆ ಕೆಡಿಸಿಕೊಳ್ಳದ ಅಕ್ಷತಾ ಆಟದ ಮೇಲೆ ಗಮನ ಹರಿಸಿದ್ದರು.

ರಾಕೇಶ್ ರಿಂದ ದೂರ ಇರುವ ಅಕ್ಷತಾ

ರಾಕೇಶ್ ರಿಂದ ದೂರ ಇರುವ ಅಕ್ಷತಾ

ಸದ್ಯ ರಾಕೇಶ್ ಜೊತೆಗಿನ ಸ್ನೇಹಕ್ಕೆ ಅಕ್ಷತಾ ಫುಲ್ ಸ್ಟಾಪ್ ಇಟ್ಟು, ಎಲ್ಲಾ ಸ್ಪರ್ಧಿಗಳ ಜೊತೆಗೆ ಸಮಯ ಕಳೆಯುತ್ತಿದ್ದಾರೆ. ಈ ಎಲ್ಲವನ್ನೂ ಪರಿಗಣಿಸಿ, 'ಕಿಚ್ಚನ ಮೆಚ್ಚುಗೆಯ ಮೊದಲ ಚಪ್ಪಾಳೆ'ಯನ್ನು ಅಕ್ಷತಾಗೆ ಸುದೀಪ್ ನೀಡಿದ್ದಾರೆ.

More from Filmibeat

English summary
Bigg Boss Kannada 6: Week 8: Sudeep appreciated Akshata Pandavapura for her best performance.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X