ನಿವೇದಿತಾ ಗೌಡ ಕುರಿತಾದ ಅನುಮಾನಕ್ಕೆ ಕ್ಲಾರಿಟಿ ಕೊಟ್ಟ ಕಿಚ್ಚ ಸುದೀಪ್.!
Recommended Video

'ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮದಲ್ಲಿ ಐವತ್ತು ದಿನಗಳು ಮುಗಿದ್ಮೇಲೆ, ವೈಲ್ಡ್ ಕಾರ್ಡ್ ಸ್ಪರ್ಧಿಗಳಿಗೆ ಎಂಟ್ರಿಕೊಡಲಾಗಿದೆ. ಮಾಡೆಲ್ ಕಮ್ ಡ್ಯಾನ್ಸರ್ ಆಗಿರುವ ಜೀವಿತಾ ಮತ್ತು ನಟಿ ಮೇಘಶ್ರೀ 'ಬಿಗ್ ಬಾಸ್' ಮನೆಗೆ ಮ್ಯಾಜಿಕ್ ಗೊಂಬೆಗಳಾಗಿ ಕಾಲಿಟ್ಟಿದ್ದಾರೆ.
ಇವರಿಬ್ಬರ ಜೊತೆಗೆ 'ಬಿಗ್ ಬಾಸ್' ಮನೆಯೊಳಗೆ ಬಂದವರು ನಿವೇದಿತಾ ಗೌಡ. 'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದ ನಿವೇದಿತಾ ಗೌಡ ಈ ಬಾರಿಯೂ 'ದೊಡ್ಮನೆ' ಪ್ರವೇಶ ಮಾಡಿದ್ದಾರೆ.
ಎಲ್ಲರ ಮುಂದೆ ''ನಾನು ಕೂಡ ವೈಲ್ಡ್ ಕಾರ್ಡ್ ಸ್ಪರ್ಧಿ'' ಅಂತ ನಿವೇದಿತಾ ಗೌಡ ಹೇಳಿಕೊಂಡಿದ್ದಾರೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆ ನಡೆಯುತ್ತಿದೆ. ಹೀಗಿರುವಾಗಲೇ, ಇದೇ ಟಾಪಿಕ್ ಬಗ್ಗೆ 'ವಾರದ ಕಥೆ ಕಿಚ್ಚನ ಜೊತೆ' ಕಾರ್ಯಕ್ರಮದಲ್ಲಿ ಕಿಚ್ಚ ಸುದೀಪ್ ಕ್ಲಾರಿಟಿ ಕೊಟ್ಟಿದ್ದಾರೆ. ಅದೇನು ಅಂತ ತಿಳಿಯಲು ಫೋಟೋ ಸ್ಲೈಡ್ ಗಳಲ್ಲಿ ಓದಿರಿ...

ಸುದೀಪ್ ಕೊಟ್ಟ ಸ್ಪಷ್ಟನೆ ಏನು.?
'ವಾರದ ಕಥೆ ಕಿಚ್ಚನ ಜೊತೆ' ಸಂಚಿಕೆಯ ಆರಂಭದಲ್ಲೇ, ''ಇವತ್ತು ಒಂದು ವಿಚಾರ ನಿಮಗೆ ಕ್ಲಿಯರ್ ಮಾಡಬೇಕು. ಮೂರು ಜನ ವೈಲ್ಡ್ ಕಾರ್ಡ್ ಸ್ಪರ್ಧಿಗಳು ಮನೆಯೊಳಗೆ ಹೋಗಿದ್ದಾರೆ. ಅದರಲ್ಲಿ ಒಬ್ಬರು ಜೀವಿತಾ, ಇನ್ನೊಬ್ಬರು ಮೇಘಶ್ರೀ, ಮತ್ತೊಬ್ಬರು ನಿವೇದಿತಾ ಗೌಡ. ಇಲ್ಲಿ ನಿವೇದಿತಾ ಗೌಡ ಸ್ಪರ್ಧಿ ಅಲ್ಲ. ಅತಿಥಿಯಾಗಿ ಹೋಗಿದ್ದಾರೆ. ಅದು ವೀಕ್ಷಕರಿಗೆ ಮಾತ್ರ ಗೊತ್ತಿದೆ. ಒಳಗಿರುವ ಇತರೆ ಸ್ಪರ್ಧಿಗಳಿಗೆ ಗೊತ್ತಿಲ್ಲ. ನಾನು ಹೇಳುವುದೂ ಇಲ್ಲ'' ಎಂದು ಸ್ಪಷ್ಟ ಪಡಿಸಿದ್ದಾರೆ ಕಿಚ್ಚ ಸುದೀಪ್.

ನಿವೇದಿತಾ ಗೌಡ ಫುಲ್ ಖುಷ್
''ಲಾಂಚ್ ದಿನ ಇಲ್ಲಿಗೆ ಬಂದಿದ್ದಾಗ, ಒಳಗೆ ಹೋಗಲು ತುದಿಗಾಲಿನಲ್ಲಿ ನಿಂತಿದ್ರಿ. ಐವತ್ತು ದಿನ ಮುಗಿದ ಮೇಲೆ ಒಳಗೆ ಹೋಗಿದ್ದೀರಾ. ಹೇಗನಿಸುತ್ತಿದೆ.?'' ಎಂದು ನಿವೇದಿತಾ ಗೌಡಗೆ ಸುದೀಪ್ ಪ್ರಶ್ನಿಸಿದರು. ಅದಕ್ಕೆ ತಮ್ಮದೇ ಶೈಲಿಯಲ್ಲಿ ''ಖುಷಿ ಆಗುತ್ತಿದೆ'' ಅಂತ ವಿವರಣೆ ನೀಡಿದರು ನಿವೇದಿತಾ ಗೌಡ.

ಎಲ್ಲರಿಗೂ ಅನುಮಾನ ಇದೆ.!
'ವಾರದ ಕಥೆ ಕಿಚ್ಚನ ಜೊತೆ' ಸಂಚಿಕೆಯಲ್ಲಿ 'ಯೆಸ್ ಆರ್ ನೋ' ಸೆಗ್ಮೆಂಟ್ ಗೆ ಚಾಲನೆ ಕೊಟ್ಟಾಗ, ''ನಿವೇದಿತಾ ಗೌಡ ಅವರು ಸ್ಪರ್ಧಿ ಅಲ್ಲ. ಒಂದು ವಾರದ ಅತಿಥಿ'' ಎಂಬ ಹೇಳಿಕೆಯನ್ನ ಸುದೀಪ್ ನೀಡಿದರು. ಇದಕ್ಕೆ ನಿವೇದಿತಾ ಗೌಡ ಉತ್ತರ ಕೊಡುವ ಹಾಗಿರಲಿಲ್ಲ. ಆದರೂ ಉಳಿದ ಎಲ್ಲಾ ಸ್ಪರ್ಧಿಗಳು ''ಯೆಸ್'' ಎಂದರು. ಅಲ್ಲಿಗೆ, ನಿವೇದಿತಾ ಕೇವಲ ಅತಿಥಿ ಎಂಬ ಡೌಟ್ ಎಲ್ಲರಿಗೂ ಇದ್ದೇ ಇದೆ.

ನಯನ ಹೇಳಿದ್ದೇನು.?
''ಈಗಾಗಲೇ ನಿವೇದಿತಾ ಗೌಡ ಸ್ಪರ್ಧಿಯಾಗಿ ಇದ್ದವರು. ಈಗ ಅತಿಥಿಯಾಗಿ ಬಂದಿರಬಹುದು ಎಂಬುದು ನನ್ನ ಅನಿಸಿಕೆ'' ಎಂದು ನಯನ ಪುಟ್ಟಸ್ವಾಮಿ ಹೇಳಿದರು. ಆಗ, ''ರೂಲ್ಸ್ ಮಾಡುವುದು ನಾವೇ.. ಬಳಿಕ ಅದನ್ನ ತಿದ್ದುವುದು ನಾವೇ'' ಅಂತ್ಹೇಳಿ ಎಲ್ಲರ ತಲೆಗೂ ಸುದೀಪ್ ಹುಳ ಬಿಟ್ಟಿದ್ದಾರೆ.

ಎಷ್ಟು ದಿನ ಇರಬಹುದು ನಿವೇದಿತಾ ಗೌಡ.?
'ಬಿಗ್ ಬಾಸ್' ಮನೆಯಲ್ಲಿ ಬರೀ ಒಂದು ವಾರ ಇರಲು ನಿವೇದಿತಾ ಗೌಡ ಬಂದಿದ್ದಾರಾ.? ಅಂದಾಜು ಆಕೆ ಎಷ್ಟು ದಿನ ಮನೆಯಲ್ಲಿ ಇರಬಹುದು.? ಎಂಬುದರ ಬಗ್ಗೆ ಇನ್ನೂ ಕ್ಲಾರಿಟಿ ಸಿಕ್ಕಿಲ್ಲ. 'ಬಿಗ್ ಬಾಸ್' ಆಟ ಇನ್ಮುಂದೆ ಹೇಗೆ ಇರುತ್ತೋ, ನೋಡಬೇಕು.


Click it and Unblock the Notifications











