ಇನ್ಮುಂದೆ 'ಬಿಗ್ ಬಾಸ್' ಸ್ಪರ್ಧಿಗಳಿಗೆ ಸಿಗಲಿದೆ 'ಕಿಚ್ಚನ ಮೆಚ್ಚುಗೆಯ ಚಪ್ಪಾಳೆ'.!

'ಬಿಗ್ ಬಾಸ್ ಕನ್ನಡ' ಕಾರ್ಯಕ್ರಮದ ಐದು ಆವೃತ್ತಿಗಳನ್ನು ಕಿಚ್ಚ ಸುದೀಪ್ ಯಶಸ್ವಿಯಾಗಿ ನಿರೂಪಣೆ ಮಾಡಿದ್ದಾರೆ. ಆರನೇ ಆವೃತ್ತಿಯಲ್ಲೂ ಕಿಚ್ಚ ಕಮಾಲ್ ಮಾಡುತ್ತಿದ್ದಾರೆ.

ಇಲ್ಲಿಯವರೆಗೂ ಎಲ್ಲಾ ಸೀಸನ್ ಗಳಲ್ಲಿ ಉತ್ತಮ ಪ್ರದರ್ಶನ ನೀಡಿದ ಸ್ಪರ್ಧಿಗಳಿಗೆ ಸುದೀಪ್ ಭೇಷ್ ಎಂದಿದ್ದಾರೆ. ಆದ್ರೆ, ಇನ್ಮುಂದೆ.. ಚಟುವಟಿಕೆಗಳಲ್ಲಿ ಉತ್ತಮ ಪ್ರದರ್ಶನ ತೋರುವ ಸ್ಪರ್ಧಿಗಳಿಗೆ 'ಕಿಚ್ಚನ ಮೆಚ್ಚುಗೆಯ ಚಪ್ಪಾಳೆ' ಸಿಗಲಿದೆ.

ಹೌದು... 'ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮದ ಬಹುದೊಡ್ಡ ವಿಶೇಷತೆ ಅಂದ್ರೆ ಇದೇ.!

Bigg Boss Kannada 6: Week 8: Sudeep to appreciate Best Performer every week

''ಈ ವಾರದಿಂದ ಪ್ರತಿವಾರವೂ.. ಗಮನ ಸೆಳೆಯುವ ಆಟ ಆಡುವವರಿಗೆ, ನನ್ನ ಕಡೆಯಿಂದ ವಿಶೇಷ ಚಪ್ಪಾಳೆ ಕೊಡಬೇಕು ಅಂತ ನಾನು ಅಂದುಕೊಂಡಿದ್ದೇನೆ. ನಾಮಿನೇಷನ್, ಎಲಿಮಿನೇಷನ್, ಜನರ ವೋಟಿಂಗ್ ಗೆ ಇದು ಸಂಬಂಧ ಇಲ್ಲ. ಇದು ಬರೀ ನನಗೆ ಇಷ್ಟ ಆದ ಸ್ಪರ್ಧಿಗೆ ನಾನು ಕೊಡುವ ವಿಶೇಷ ಚಪ್ಪಾಳೆ... ಕಿಚ್ಚನ ಮೆಚ್ಚುಗೆಯ ಚಪ್ಪಾಳೆ'' ಎಂದು 'ವಾರದ ಕಥೆ ಕಿಚ್ಚನ ಜೊತೆ' ಸಂಚಿಕೆಯಲ್ಲಿ ಸುದೀಪ್ ಘೋಷಿಸಿದ್ದಾರೆ.

ಕಿಚ್ಚನ ಮೆಚ್ಚುಗೆಯ ಮೊದಲ ಚಪ್ಪಾಳೆಯಂತೂ ಪಾಂಡವಪುರದ ಹುಡುಗಿ ಅಕ್ಷತಾ ಪಾಲಾಗಿದೆ. ಇನ್ಮೇಲೆ ಕಿಚ್ಚನಿಂದ ವಿಶೇಷ ಚಪ್ಪಾಳೆ ಗಿಟ್ಟಿಸಲು ಸ್ಪರ್ಧಿಗಳಲ್ಲಿ ಪೈಪೋಟಿ ಏರ್ಪಟ್ಟರೂ ಆಶ್ಚರ್ಯ ಇಲ್ಲ ಬಿಡಿ.

More from Filmibeat

English summary
Bigg Boss Kannada 6: Week 8: Sudeep to appreciate Best Performer every week.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X