ಮೂವರು ಹುಡುಗಿಯರು ಬಂದ್ರು: 'ಬಿಗ್ ಬಾಸ್' ಮನೆಯ ಆಟದ ದಿಕ್ಕೇ ಬದಲಾಯ್ತು.!

Recommended Video

Bigg Boss Kannada Season 6: ಮೂವರು ಹುಡುಗಿಯರು ಬಂದ್ರು: 'ಬಿಗ್ ಬಾಸ್' ಮನೆಯ ಆಟದ ದಿಕ್ಕೇ ಬದಲಾಯ್ತು.!

'ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮದಲ್ಲಿ ಸರಿಯಾಗಿ ಇಂಟರ್ವಲ್ ಗೆ.. ಅಂದ್ರೆ ಐವತ್ತು ದಿನಗಳು ಕಳೆದ ಮೇಲೆ ಮೂವರು ಹುಡುಗಿಯರು 'ವೈಲ್ಡ್ ಕಾರ್ಡ್' ರೂಪದಲ್ಲಿ 'ದೊಡ್ಮನೆ'ಗೆ ಎಂಟ್ರಿಕೊಟ್ಟರು.

ಅಲ್ಲಿಯವರೆಗೂ ಬರೀ ಗೊಂದಲದ ಗೂಡಾಗಿದ್ದ 'ಬಿಗ್ ಬಾಸ್' ಮನೆಯಲ್ಲಿ ಮೂವರು ಹುಡುಗಿಯರಿಂದ ಡೈನಾಮಿಕ್ಸ್ ಚೇಂಜ್ ಆಗಿದೆ. ಹೇಗೆ ಅಂದ್ರೆ, ಕವಿತಾ ಮೇಲಿನ ಆಂಡಿ ಫೋಕಸ್ ಶಿಫ್ಟ್ ಆಗಿದೆ. ಇನ್ನೂ 'ರಸಿಕರ ರಾಜ', ಡೇಟಿಂಗ್ ನಲ್ಲಿ ದ್ವಿಶತಕ ಬಾರಿಸಿರುವ ಎಂ.ಜೆ.ರಾಕೇಶ್, ಜೀವಿತಾ ಹಿಂದೆ ಬಿದ್ದಿದ್ದಾರೆ.

ಇಷ್ಟು ದಿನ ಸೈಲೆಂಟ್ ಆಗಿ ಸೈಡ್ ನಲ್ಲಿದ್ದ ಮುರಳಿ ಮೂವರು ಹುಡುಗಿಯರಿಂದ ಕೊಂಚ ಫಾರ್ಮ್ ಗೆ ಮರಳಿದ್ದಾರೆ. ಇನ್ನೂ ನವೀನ್ ಮೊಗದಲ್ಲೂ ಹೊಸ ಕಳೆ ಬಂದಿದೆ.

ಮೂವರು ಹುಡುಗಿಯರಿಂದ ಹುಡುಗರಲ್ಲಿ ಹೊಸ ಹುರುಪು ಬಂದಿರುವ ಕಾರಣ ಕವಿತಾ ಮತ್ತು ಅಕ್ಷತಾಗೆ ಹೊಟ್ಟೆಕಿಚ್ಚು ಶುರುವಾಗಿದೆ. ಮುಂದೆ ಓದಿರಿ...

ಮೇಘಶ್ರೀ ಕಂಡ್ರೆ ಕವಿತಾಗೆ ಅಷ್ಟಕಷ್ಟೆ.!

ಮೇಘಶ್ರೀ ಕಂಡ್ರೆ ಕವಿತಾಗೆ ಅಷ್ಟಕಷ್ಟೆ.!

'ಬಿಗ್ ಬಾಸ್' ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿಕೊಟ್ಟಿರುವ ಮೇಘಶ್ರೀ ಕಂಡ್ರೆ ಕವಿತಾಗೆ ಅಷ್ಟಕಷ್ಟೆ. ಹೀಗಾಗಿ, ಮೇಘಶ್ರೀ ಜೊತೆಗೆ ಕವಿತಾ ಮಾತುಕತೆ ನಡೆಸಿಲ್ಲ. ಇದನ್ನೇ ನೆಪ ಮಾಡಿಕೊಂಡ ಮೇಘಶ್ರೀ, ಕವಿತಾರನ್ನ ನಾಮಿನೇಟ್ ಮಾಡಿದ್ದು ನಿಮಗೆ ನೆನಪಿರಬಹುದು.

ಕವಿತಾಗೆ 'ಕಳಪೆ' ಎಂದ ಮೇಘಶ್ರೀ

ಕವಿತಾಗೆ 'ಕಳಪೆ' ಎಂದ ಮೇಘಶ್ರೀ

'ಬಿಗ್ ಬಾಸ್ ವಿಶ್ವವಿದ್ಯಾನಿಲಯ' ಟಾಸ್ಕ್ ನಲ್ಲಿ ಕವಿತಾ ಆಕ್ಟೀವ್ ಆಗಿ ಇರಲಿಲ್ಲ ಎಂಬ ಕಾರಣದೊಂದಿಗೆ ಆಕೆಗೆ 'ಕಳಪೆ' ಪಟ್ಟ ನೀಡಲು ಮೇಘಶ್ರೀ ಮುಂದಾಗಿದ್ದರು. ಇದು ಕವಿತಾಗೆ ಇನ್ನಷ್ಟು ಸಿಟ್ಟು ತರಿಸಿದೆ.

ಮೇಘಶ್ರೀ ವರ್ಸಸ್ ಕವಿತಾ

ಮೇಘಶ್ರೀ ವರ್ಸಸ್ ಕವಿತಾ

ಮೇಘಶ್ರೀ ಮತ್ತು ಕವಿತಾ ನಡುವೆ ಸದ್ಯ ಎಲ್ಲವೂ ಸರಿಯಿಲ್ಲ. ಮೇಘಶ್ರೀ ಬಗ್ಗೆ ತಮ್ಮ ಅಸಮಾಧಾನವನ್ನು ಅಕ್ಷತಾ ಮುಂದೆ ಕವಿತಾ ಹೊರಹಾಕಿದ್ದಾರೆ. ಇಬ್ಬರ ನಡುವಿನ ಮುಸುಕಿನ ಗುದ್ದಾಟ ಯಾವಾಗ ತಾರಕಕ್ಕೇರುತ್ತದೋ, ನೋಡಬೇಕು.

ಆಂಡಿ ಜೊತೆ ಕವಿತಾ ಮಾತುಕತೆ

ಆಂಡಿ ಜೊತೆ ಕವಿತಾ ಮಾತುಕತೆ

ಅಚ್ಚರಿ ಅಂದ್ರೆ ಇದೇ ನೋಡಿ... ಆಂಡ್ರ್ಯೂ ಕಂಡ್ರೆ ಮೂಗು ಮುರಿಯುತ್ತಿದ್ದ ಕವಿತಾ, ಇದೀಗ ಆಂಡಿ ಜೊತೆಗೆ ಕೂಲಾಗಿ ಮಾತನಾಡುತ್ತಿದ್ದಾರೆ. ಆಂಡಿ ಫೋಕಸ್ 'ಮೂವರು ಹುಡುಗಿಯರ' ಶಿಫ್ಟ್ ಆಗಿರುವುದೇ ಇದಕ್ಕೆ ಕಾರಣ ಎನ್ನಬಹುದೇನೋ.?

ನಿವೇದಿತಾ ಕಂಡ್ರೆ ಅಕ್ಷತಾಗೆ ಆಗಲ್ಲ.!

ನಿವೇದಿತಾ ಕಂಡ್ರೆ ಅಕ್ಷತಾಗೆ ಆಗಲ್ಲ.!

ಇನ್ನೂ ನಿವೇದಿತಾ ಕಂಡ್ರೆ ಅಕ್ಷತಾಗೆ ಒಂಥರಾ ಅಲರ್ಜಿ. ''ನಿವೇದಿತಾ ಕುಟುಂಬಕ್ಕೆ ಸೇರಲ್ಲ'' ಅಂತ ಚಟುವಟಿಕೆಯೊಂದರಲ್ಲಿ ಅಕ್ಷತಾ ಹೇಳಿದ್ದರು. ಹೀಗಾಗಿ, ಅಪ್ಪತಪ್ಪಿ ನಿವೇದಿತಾ ಜೊತೆಗೆ ರಾಕೇಶ್ ಮಾತನಾಡಿಬಿಟ್ಟರೆ ಅಕ್ಷತಾಗೆ ಉರಿ ಉರಿ ಶುರುವಾಗುತ್ತೆ.

ಹೊಸ ಹುರುಪು

ಹೊಸ ಹುರುಪು

ವೈಲ್ಡ್ ಕಾರ್ಡ್ ಎಂಟ್ರಿ ಆದ್ಮೇಲೆ ಮುರಳಿ ಆಟದ ವೈಖರಿ ಬದಲಾಗಿದೆ. ಟಾಸ್ಕ್ ಗಳಲ್ಲಿ ಮುರಳಿ ಹೆಚ್ಚು ಗಮನ ವಹಿಸುತ್ತಿದ್ದಾರೆ. ಇನ್ನೂ ನವೀನ್ ಗೂ ಹೊಸ ಸ್ಫೂರ್ತಿ ಸಿಕ್ಕ ಹಾಗಾಗಿದೆ.

ಜೀವಿತಾ ಹಿಂದೆ ರಾಕೇಶ್

ಜೀವಿತಾ ಹಿಂದೆ ರಾಕೇಶ್

ಅತ್ತ ಅಕ್ಷತಾ ದೂರ ಸರಿದ್ಮೇಲೆ, ಜೀವಿತಾ ಹಿಂದೆ ರಾಕೇಶ್ ಬಿದ್ದಿದ್ದಾರೆ. ಹೀಗಾಗಿ, ಟಾಸ್ಕ್ ಗಳಲ್ಲಿ ರಾಕೇಶ್ ನ ಟಾರ್ಗೆಟ್ ಮಾಡಿ ಅಕ್ಷತಾ ಸಿಟ್ಟು ತೀರಿಸಿಕೊಳ್ಳುತ್ತಿರುವ ಹಾಗಿದೆ.

More from Filmibeat

English summary
Bigg Boss Kannada 6: Week 9: Dynamics changed after 3 Wild Card Entries.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X