ದಿಢೀರ್ ಅಂತ ಮಂಕಾಗಿದ್ದೇ ಜಯಶ್ರೀಗೆ ಮುಳುವಾಯಿತೇ.?

Recommended Video

Bigg Boss Kannada Season 6: ದಿಢೀರ್ ಅಂತ ಮಂಕಾಗಿದ್ದೇ ಜಯಶ್ರೀಗೆ ಮುಳುವಾಯಿತೇ.? | FILMIBEAT KANNADA

'ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮದಲ್ಲಿ ವೀಕ್ಷಕರಿಗೆ ಪರಿಚಿತರಾಗಿದ್ದ ಕೆಲವೇ ಕೆಲವು ಸ್ಪರ್ಧಿಗಳ ಪೈಕಿ ಜಯಶ್ರೀ ಕೂಡ ಒಬ್ಬರು. 'ಬಿಗ್ ಬಾಸ್' ಮನೆಗೆ ಎಂಟ್ರಿಕೊಡುತ್ತಲೇ ಪ್ರಬಲ ಸ್ಪರ್ಧಿಯಾಗಿ ಗುರುತಿಸಿಕೊಂಡ ಜಯಶ್ರೀ ಬರ್ತಾ ಬರ್ತಾ ಯಾಕೋ ಮಂಕಾಗಿಬಿಟ್ಟರು.

ಜಯಶ್ರೀ-ಶಶಿ-ಧನರಾಜ್-ಕವಿತಾ.. ಈ ನಾಲ್ವರದ್ದು ಒಂದು ಗುಂಪು. ಈ ಗ್ರೂಪ್ ಗೆ 'ಗೌರವ ಅಧ್ಯಕ್ಷೆ' ಆಗಿದ್ದರೂ, ಗುಂಪಿನಲ್ಲೇ ಮೂಲೆಗುಂಪಾಗಿಬಿಟ್ಟರು ಜಯಶ್ರೀ. 'ಜೀವದ ಗೆಳತಿ' ಅಂತ ಕರೆದರೂ, ಜಯಶ್ರೀಯನ್ನೇ ಕವಿತಾ ನಾಮಿನೇಟ್ ಮಾಡಿದ್ದರು. ಇನ್ನೂ ಶಶಿ ವರ್ತನೆಯಿಂದ ಬೇಸರಗೊಂಡಿದ್ದ ಜಯಶ್ರೀ ಕೊಂಚ ದೂರ ಸರಿದಿದ್ದರು.

ಗುಂಪಿನಲ್ಲಿ ಭಿನ್ನಾಭಿಪ್ರಾಯ ಸೇರಿದಂತೆ ಹಲವು ಕಾರಣಗಳಿಂದ ಕಳೆದ ಎರಡು ವಾರಗಳಿಂದ ಜಯಶ್ರೀ ಕೊಂಚ ಸೈಲೆಂಟ್ ಆಗಿದ್ದರು. ಬಹುಶಃ ಇದೇ ಕಾರಣಕ್ಕೆ ಜಯಶ್ರೀ ಒಂಬತ್ತೇ ವಾರ ಎಲಿಮಿನೇಟ್ ಆಗಿದ್ದಾರೆ. ಮುಂದೆ ಓದಿರಿ...

'ಬಿಗ್ ಬಾಸ್' ಮನೆಯಿಂದ ಹೊರಬಂದ ಜಯಶ್ರೀ

'ಬಿಗ್ ಬಾಸ್' ಮನೆಯಿಂದ ಹೊರಬಂದ ಜಯಶ್ರೀ

ಒಂಬತ್ತನೇ ವಾರಕ್ಕೆ ಔಟ್ ಆಗುವ ಸ್ಪರ್ಧಿ ಜಯಶ್ರೀ ಅಲ್ಲವೇ ಅಲ್ಲ. ಗ್ರ್ಯಾಂಡ್ ಫಿನಾಲೆವರೆಗೂ ಜಯಶ್ರೀ ಬರಬಹುದು ಎಂದು ಹಲವು ವೀಕ್ಷಕರು ಊಹಿಸಿದ್ದರು. ಆದ್ರೆ, ಗೇಮ್ ಪ್ಲಾನ್ ನಲ್ಲಿ ಕೊಂಚ ಹಿಂದೆ ಸರಿದ ಜಯಶ್ರೀ 'ಬಿಗ್ ಬಾಸ್' ಮನೆಯಿಂದ ಔಟ್ ಆಗಿದ್ದಾರೆ.

ಪ್ಲೀಸ್ ಮನೆಗೆ ಕಳುಹಿಸಿ ಎಂದಿದ್ದ ಜಯಶ್ರೀ

ಪ್ಲೀಸ್ ಮನೆಗೆ ಕಳುಹಿಸಿ ಎಂದಿದ್ದ ಜಯಶ್ರೀ

ಆಂಡ್ರ್ಯೂ ಜೊತೆಗೆ ಕಿತ್ತಾಟ ನಡೆದ್ಮೇಲೆ, ಮಾನಸಿಕವಾಗಿ ನೊಂದಿದ್ದ ಜಯಶ್ರೀ ''ಪ್ಲೀಸ್ ನನ್ನನ್ನ ಮನೆಗೆ ಕಳುಹಿಸಿ. ಇಲ್ಲಿ ಇರಲು ಆಗುತ್ತಿಲ್ಲ'' ಎಂದು ಕಣ್ಣೀರು ಹಾಕಿ 'ಬಿಗ್ ಬಾಸ್' ಬಳಿ ಮನವಿ ಮಾಡಿದ್ದರು. ಇದು ಕೂಡ ಜಯಶ್ರೀ ಆಟಕ್ಕೆ ಮೈನಸ್ ಪಾಯಿಂಟ್ ಆಯಿತು.

ನಾಲ್ವರು ನಾಮಿನೇಟ್ ಮಾಡಿದ್ದರು.!

ನಾಲ್ವರು ನಾಮಿನೇಟ್ ಮಾಡಿದ್ದರು.!

'ಆಟಗಳನ್ನು ಸ್ಪೋರ್ಟಿವ್ ಆಗಿ ತೆಗೆದುಕೊಳ್ಳದ' ಜಯಶ್ರೀ ರವರನ್ನ ಕವಿತಾ, ರಶ್ಮಿ, ನಿವೇದಿತಾ ಗೌಡ ಸೇರಿದಂತೆ ಒಟ್ಟು ನಾಲ್ಕು ಮಂದಿ ನಾಮಿನೇಟ್ ಮಾಡಿದ್ದರು.

ಇತರರಿಗೆ ಹೋಲಿಸಿದರೆ ಕಡಿಮೆ ಬೆಂಬಲ

ಇತರರಿಗೆ ಹೋಲಿಸಿದರೆ ಕಡಿಮೆ ಬೆಂಬಲ

ಜಯಶ್ರೀ ಜೊತೆಗೆ ರಶ್ಮಿ, ಆಂಡ್ರ್ಯೂ, ಅಕ್ಷತಾ, ರಾಕೇಶ್ ಮತ್ತು ಕವಿತಾ.. ಈ ವಾರ 'ಬಿಗ್ ಬಾಸ್' ಮನೆಯಿಂದ ಹೊರಗೆ ಹೋಗಲು ನಾಮಿನೇಟ್ ಆಗಿದ್ದರು. ಇವರೆಲ್ಲರಿಗೆ ಹೋಲಿಸಿದರೆ, ಜಯಶ್ರೀಗೆ ವೀಕ್ಷಕರ ಬೆಂಬಲ ಕಮ್ಮಿ ಸಿಕ್ಕಿದೆ. ಹೀಗಾಗಿ, ಜಯಶ್ರೀ ಹೊರನಡೆದಿದ್ದಾರೆ.

More from Filmibeat

English summary
Bigg Boss Kannada 6: Week 9: Jayashree eliminated.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X