'ಬಿಗ್ ಬಾಸ್': ಆರು ಮಂದಿ ಪೈಕಿ ಯಾರು ಈ ವಾರ ಹೊರಗೆ ಬರಬಹುದು.?
Recommended Video

'ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮದಲ್ಲಿ ದಿನಗಳು ಉರುಳುತ್ತಿದ್ದಂತೆಯೇ, ಸ್ಪರ್ಧೆಯ ಕಾವು ಏರುತ್ತಿದೆ. ಒಬ್ಬೊಬ್ಬರು ಒಂದೊಂದು ಸ್ಟ್ರಾಟೆಜಿ, ಗೇಮ್ ಪ್ಲಾನ್ ಇಟ್ಟುಕೊಂಡು ಆಟ ಆಡುತ್ತಿದ್ದಾರೆ. ಯಾರ ಸ್ಟ್ರಾಟೆಜಿ ಯಾವಾಗ ವರ್ಕ್ ಆಗುತ್ತೆ ಅಂತ ಹೇಳುವುದು ಕಷ್ಟ. ಆದ್ರೆ, ಸದ್ಯಕ್ಕೆ ಆರು ಮಂದಿ ಡೇಂಜರ್ ಝೋನ್ ಗೆ ಬಂದಿದ್ದಾರೆ.
ಹಾಗ್ನೋಡಿದ್ರೆ, ಈ ಆರೂ ಮಂದಿ 'ಬಿಗ್ ಬಾಸ್' ಮನೆಯಲ್ಲಿ ವಾದ, ವಿವಾದ, ವಾಕ್ಸಮರಕ್ಕೆ ಸಾಕ್ಷಿ ಆಗಿರುವವರೇ.! 'ಬಿಗ್ ಬಾಸ್' ಕಾರ್ಯಕ್ರಮದಲ್ಲಿ ಹೆಚ್ಚು ಫುಟೇಜ್ ಪಡೆಯುತ್ತಿರುವ ಆರು ಮಂದಿಯೇ ಈ ವಾರ ನಾಮಿನೇಟ್ ಆಗಿದ್ದಾರೆ.
ಈ ಆರು ಮಂದಿ ಪೈಕಿ ಒಬ್ಬರು ಹೊರಗೆ ಹೋದರೂ, ಆಟ ಡಲ್ ಆಗಬಹುದು ಅಥವಾ ಡೈನಾಮಿಕ್ಸ್ ಕೂಡ ಚೇಂಜ್ ಆಗಬಹುದು. ಈ ವಾರದ ನಾಮಿನೇಷನ್ ಪ್ರಕ್ರಿಯೆ ಕುರಿತ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ, ಓದಿರಿ...

ಮೂರು 'ಗೊಂಬೆ'ಗಳು ಸೇಫ್
ಕಳೆದ ವಾರಾಂತ್ಯದಲ್ಲಿ ವೈಲ್ಡ್ ಕಾರ್ಡ್ ರೂಪದಲ್ಲಿ ಮೇಘಶ್ರೀ, ಜೀವಿತಾ ಮತ್ತು ನಿವೇದಿತಾ ಗೌಡ 'ಬಿಗ್ ಬಾಸ್' ಮನೆಯೊಳಗೆ ಬಲಗಾಲಿಟ್ಟು ಬಂದರು. ಹೀಗಾಗಿ, ಈ ವಾರ ಈ ಮೂವರಿಗೂ ಇಮ್ಯೂನಿಟಿ ದೊರಕಿದೆ.

ಮೂವರಿಗೆ ಎಲಿಮಿನೇಷನ್ ಟೆನ್ಷನ್
ವೈಲ್ಡ್ ಕಾರ್ಡ್ ಎಂಟ್ರಿ ಆಗುವ ಸಂದರ್ಭದಲ್ಲಿ ರಾಕೇಶ್, ಅಕ್ಷತಾ ಮತ್ತು ಆಂಡಿ ನೇರವಾಗಿ ನಾಮಿನೇಟ್ ಆಗಿದ್ದರು. ಹೀಗಾಗಿ, ಈ ಮೂವರಿಗೂ ಈ ವಾರ ಎಲಿಮಿನೇಷನ್ ತಲೆಬಿಸಿ ಇದ್ದೇ ಇದೆ.

ರಶ್ಮಿ ವಿರುದ್ಧ ಬಹುತೇಕರು ಸಿಡಿಮಿಡಿ
ರಾಪಿಡ್ ರಶ್ಮಿ ವಿರುದ್ಧ 'ಬಿಗ್ ಬಾಸ್' ಮನೆಯ ಬಹುತೇಕ ಸ್ಪರ್ಧಿಗಳು ಸಿಡಿಮಿಡಿಗೊಂಡಿದ್ದಾರೆ. ಯಾವಾಗಲೂ ರೂಲ್ಸ್ ಬಗ್ಗೆ ಮಾತಾಡುವ ರಶ್ಮಿರನ್ನ ಕವಿತಾ, ಜಯಶ್ರೀ, ಧನರಾಜ್, ಜೀವಿತಾ, ನವೀನ್, ಅಕ್ಷತಾ ಮತ್ತು ಶಶಿ ನಾಮಿನೇಟ್ ಮಾಡಿದರು. ಏಳು ಮತಗಳನ್ನು ಪಡೆದ ರಶ್ಮಿ ಡೇಂಜರ್ ಝೋನ್ ಗೆ ಬಂದರು.

ಟಾರ್ಗೆಟ್ ಆದ ಕವಿತಾ
ಚಟುವಟಿಕೆಗಳಲ್ಲಿ ಸರಿಯಾದ ನಿರ್ಣಯ ತೆಗೆದುಕೊಳ್ಳದ, ತಾರತಮ್ಯ ಮಾಡುವ ಕವಿತಾ ವಿರುದ್ಧ ಐದು ಮತಗಳು ಚಲಾವಣೆ ಆದವು. ಪರಿಣಾಮ, ಈ ವಾರ 'ಬಿಗ್ ಬಾಸ್' ಮನೆಯಿಂದ ಹೊರ ಹೋಗಲು ಕವಿತಾ ಕೂಡ ನಾಮಿನೇಟ್ ಆಗಿದ್ದಾರೆ.

ಮುಖ ಗಂಟು ಮಾಡಿಕೊಳ್ಳುವ ಜಯಶ್ರೀ
ಚಟುವಟಿಕೆಗಳನ್ನು ಸ್ಪೋರ್ಟಿವ್ ಆಗಿ ತೆಗೆದುಕೊಳ್ಳದ ಜಯಶ್ರೀ ರವರನ್ನ ನಾಲ್ಕು ಮಂದಿ ನಾಮಿನೇಟ್ ಮಾಡಿದರು.

ಡೇಂಜರ್ ಝೋನ್ ನಲ್ಲಿ ಮುರಳಿ
ಯಾರ ಬಗ್ಗೆಯೂ ನೋವಾಗುವ ಹಾಗೆ ಮಾತನಾಡದೆ, ಸೇಫ್ ಗೇಮ್ ಆಡುತ್ತಿರುವ ಮುರಳಿ ಈ ಬಾರಿ ಟಾರ್ಗೆಟ್ ಆದರು. ಮುರಳಿ ವಿರುದ್ಧ ಮೂರು ಮತಗಳು ಬಿದ್ದವು.

ಜಸ್ಟ್ ಮಿಸ್ ಆದವರು
ನವೀನ್ ಮತ್ತು ಶಶಿಗೆ ತಲಾ ಎರಡು ಮತಗಳು ಬಿದ್ದಿದ್ದವು. ಇನ್ನೂ ಧನರಾಜ್ ವಿರುದ್ಧ ಒಂದು ಮತ ಬಿದ್ದಿತ್ತು. ಹೀಗಾಗಿ, ಈ ಮೂವರೂ ಈ ಬಾರಿಯ ಎಲಿಮಿನೇಷನ್ ನಿಂದ ಜಸ್ಟ್ ಮಿಸ್ ಆದರು.

ರಾಕೇಶ್ ಗೆ ಸಿಕ್ಕ ವಿಶೇಷ ಅಧಿಕಾರ
ಕ್ಯಾಪ್ಟನ್ ಆಗಿ ಆಯ್ಕೆ ಆಗುವ ಮುನ್ನವೇ ರಾಕೇಶ್ ನೇರವಾಗಿ ನಾಮಿನೇಟ್ ಆಗಿದ್ದರು. ಹೀಗಾಗಿ, ಮನೆಯ ಕ್ಯಾಪ್ಟನ್ ರಾಕೇಶ್ ಗೆ 'ಬಿಗ್ ಬಾಸ್' ವಿಶೇಷ ಅಧಿಕಾರ ನೀಡಿದರು. ಇದರ ಅನುಸಾರ, ನಾಮಿನೇಟ್ ಆಗಿರುವ ಸದಸ್ಯರಲ್ಲಿ ಒಬ್ಬರನ್ನು ರಾಕೇಶ್ ಸೇಫ್ ಮಾಡಬಹುದಿತ್ತು. ಅಥವಾ ತಮ್ಮನ್ನ ತಾವು ಉಳಿಸಿಕೊಳ್ಳಬಹುದಿತ್ತು. ಆಗ 'ಗುಡ್ನೆಸ್' ಹೆಸರಿನಲ್ಲಿ ಮುರಳಿಯನ್ನ ರಾಕೇಶ್ ಸೇಫ್ ಮಾಡಿದರು.

ಕ್ಯಾಪ್ಟನ್ ಆಗಿದ್ದರೂ ರಾಕೇಶ್ ಎಲಿಮಿನೇಷನ್ ತಲೆ ನೋವು.!
ಕೈಗೆ ಬಂದಿದ್ದ ಅಧಿಕಾರವನ್ನು ಬೇರೆಯವರಿಗೆ ಬಿಟ್ಟುಕೊಟ್ಟು ರಾಕೇಶ್ ನಾಮಿನೇಟ್ ಆಗಿದ್ದಾರೆ. ಹೀಗಾಗಿ, ಕ್ಯಾಪ್ಟನ್ ಆಗಿದ್ದರೂ ರಾಕೇಶ್ ಗೆ ಎಲಿಮಿನೇಷನ್ ತಲೆ ನೋವು ತಪ್ಪಿಲ್ಲ.

ನಿಮ್ಮ ಮತ ಯಾರಿಗೆ.?
ರಾಕೇಶ್, ಆಂಡಿ, ಅಕ್ಷತಾ, ಜಯಶ್ರೀ, ಕವಿತಾ ಮತ್ತು ರಶ್ಮಿ... ಈ ಆರು ಮಂದಿ ಪೈಕಿ ನಿಮ್ಮ ಮತ ಯಾರಿಗೆ.? ಯಾರು ಔಟ್ ಆಗಬೇಕು ಎಂಬುದು ನಿಮ್ಮ ಇಚ್ಛೆ.? ನಿಮ್ಮ ಅಭಿಪ್ರಾಯವನ್ನು ನಮಗೆ ತಿಳಿಸಿ.. ಕೆಳಗಿರುವ ಕಾಮೆಂಟ್ ಬಾಕ್ಸ್ ಮೂಲಕ.


Click it and Unblock the Notifications











