ಜೀವಿತಾ ಆಟಕ್ಕೆ ಬೆರಗಾಗಿ ಚಪ್ಪಾಳೆ ತಟ್ಟಿದ ಕಿಚ್ಚ ಸುದೀಪ್.!
Recommended Video

'ಬಿಗ್ ಬಾಸ್' ಮನೆಯೊಳಗೆ ಮಾಡೆಲ್ ಕಮ್ ನಟಿ ಜೀವಿತಾ ಕಾಲಿಟ್ಟು ಜಸ್ಟ್ ಒಂದು ವಾರ ಕಳೆದಿದೆ ಅಷ್ಟೇ. 'ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮದ 50 ದಿನಗಳ ಆಟವನ್ನ ಹೊರಗಿನಿಂದ ನೋಡಿಕೊಂಡು ಬಂದ ಜೀವಿತಾ ತಲೆಯಲ್ಲಿ ಗೇಮ್ ಪ್ಲಾನ್ ಪಕ್ಕಾ ಇದೆ.
ಹೀಗಿರುವುದಕ್ಕೆ, 'ಬಿಗ್ ಬಾಸ್ ವಿಶ್ವವಿದ್ಯಾನಿಲಯ' ಟಾಸ್ಕ್ ನಲ್ಲಿ ಜೀವಿತಾ ಉತ್ತಮ ಪ್ರದರ್ಶನ ನೀಡಿದರು. ಸಾಲದಕ್ಕೆ ಬಂದ ಒಂದು ವಾರಕ್ಕೆ ಕ್ಯಾಪ್ಟನ್ ಆಗಿ ಕೂಡ ಆಯ್ಕೆ ಆದರು.
ಜೀವಿತಾ ರವರ ಈ ಆಟವನ್ನ ನೋಡಿ ಕಿಚ್ಚ ಸುದೀಪ್ ಕೂಡ ಬೆರಗಾಗಿದ್ದಾರೆ. ಪರಿಣಾಮ, ಜೀವಿತಾಗೆ ಕಿಚ್ಚನ ಮೆಚ್ಚುಗೆಯ ಚಪ್ಪಾಳೆ ಸಿಕ್ಕಿದೆ.

''ಎರಡು ಟಾಸ್ಕ್ ನಲ್ಲಿ ಟಾಪರ್ ಆದ್ರಿ. ನಿಮ್ಮ ಬೆಲ್ಲಿ ಡ್ಯಾನ್ಸ್ ಕೂಡ ಚೆನ್ನಾಗಿತ್ತು. ವೈಲ್ಡ್ ಕಾರ್ಡ್ ನಲ್ಲಿ ಬಂದು ಒಂದೇ ವಾರಕ್ಕೆ ಕ್ಯಾಪ್ಟನ್ ಆಗುವುದು ಸುಲಭ ಅಂತೂ ಖಂಡಿತ ಅಲ್ಲ. ಹೀಗಾಗಿ ಈ ವಾರದ ಕಿಚ್ಚನ ಮೆಚ್ಚಿನ ಚಪ್ಪಾಳೆ ನಿಮಗೆ'' ಅಂತ ಹೇಳುತ್ತಾ ಜೀವಿತಾಗೆ ಚಪ್ಪಾಳೆ ತಟ್ಟಿದರು ಸುದೀಪ್.
ಎಲ್ಲರ ಗಮನ ಸೆಳೆಯುವಂತೆ ಆಟ ಆಡುವ ಸ್ಪರ್ಧಿಗೆ ಕಿಚ್ಚನ ಕಡೆಯಿಂದ ಕಳೆದ ವಾರದಿಂದ ಚಪ್ಪಾಳೆ ಸಿಗುತ್ತಿದೆ. ಕಿಚ್ಚನ ಮೆಚ್ಚುಗೆಯ ಚಪ್ಪಾಳೆ ಮೊದಲು ಅಕ್ಷತಾಗೆ ಸಿಕ್ಕಿತ್ತು. ಇದೀಗ ಜೀವಿತಾ ಪಾಲಾಗಿದೆ. ಮುಂದೆ ಯಾರಿಗೆ ಸಿಗುತ್ತೋ, ನೋಡಬೇಕು.


Click it and Unblock the Notifications











