ಹೌದು ಸ್ವಾಮಿ : 'ಬಿಗ್ ಬಾಸ್ - 6' ಓಪನಿಂಗ್ ಡೇಟ್ ಅನೌನ್ಸ್ ಆಯ್ತು!
Recommended Video

ಕನ್ನಡ ಕಿರುತೆರೆಯಲ್ಲಿ 'ಬಿಗ್ ಬಾಸ್' ಎನ್ನುವುದು ಒಂದು ವಿಶೇಷ ಕಾರ್ಯಕ್ರಮ. ಈಗಾಗಲೇ ಕನ್ನಡದಲ್ಲಿ ಈ ಕಾರ್ಯಕ್ರಮ ಐದು ಯಶಸ್ವಿ ಸೀಸನ್ ಗಳನ್ನು ಮುಗಿಸಿದ್ದು, ಈಗ ಆರನೇ ಸೀಸನ್ ಪ್ರಾರಂಭಕ್ಕೆ ದಿನಗಣನೆ ಶುರುವಾಗಿದೆ.
'ಬಿಗ್ ಬಾಸ್' ಕಾರ್ಯಕ್ರಮ ಮತ್ತೆ ಯಾವಾಗ ಶುರು ಆಗುತ್ತದೆ ಎಂಬ ನಿರೀಕ್ಷೆ ಅನೇಕರಲ್ಲಿ ಇತ್ತು. ಇನ್ನು ಅನೇಕರು ನಾನು ಈ ಬಾರಿ 'ಬಿಗ್ ಬಾಸ್' ಗೆ ಹೋಗಬೇಕು ಎಂಬ ಆಸೆ ಇಟ್ಟುಕೊಂಡಿದ್ದಾರೆ. ಅಂದಹಾಗೆ, ಇಂತಹ 'ಬಿಗ್ ಬಾಸ್' ಪ್ರಿಯರಿಗೆ ಈಗ ಕಲರ್ಸ್ ವಾಹಿನಿ ಸಿಹಿ ಸುದ್ದಿ ನೀಡಿದೆ.
ಈಗಾಗಲೇ 'ಬಿಗ್ ಬಾಸ್ ಕನ್ನಡ - 6' ಕಾರ್ಯಕ್ರಮದ ತಯಾರಿಗಳು ಶುರುವಾಗಿದೆ. ಕೆಲ ದಿನಗಳ ಹಿಂದೆಯೇ ಸುದೀಪ್ ಅವರ ಒಂದು ಪ್ರೋಮೋ ಬಿಡುಗಡೆಯಾಗಿದ್ದು, ಇದೀಗ ಹೊಸ ಪ್ರೊಮೋ ರಿಲೀಸ್ ಆಗಿದೆ. ಈ ಬಾರಿ ಬಂದ ಪ್ರೋಮೋ ಮೂಲಕ ಕಾರ್ಯಕ್ರಮದ ಪ್ರಸಾರದ ದಿನಾಂಕ ಘೋಷಣೆ ಮಾಡಲಾಗಿದೆ. ಮುಂದೆ ಓದಿ....

ಅಕ್ಟೋಬರ್ 21
'ಬಿಗ್ ಬಾಸ್' ಕನ್ನಡ ಕಾರ್ಯಕ್ರಮ ಮತ್ತೆ ವೀಕ್ಷಕರ ಮುಂದೆ ಬಂದಿದೆ. ಮುಂದಿನ ತಿಂಗಳಿನಿಂದ ಕಾರ್ಯಕ್ರಮ ಪ್ರಸಾರ ಆಗಲಿದೆ. 'ಬಿಗ್ ಬಾಸ್ ಕನ್ನಡ ಸೀಸನ್ 6'ರ ಗ್ರಾಂಡ್ ಒಪನಿಂಗ್ ಅಕ್ಟೋಬರ್ 21 ರಂದು ನಡೆಯಲಿದೆ. ಸೋ, 'ಬಿಗ್ ಬಾಸ್' ಸಂಭ್ರಮಕ್ಕೆ ಕೆಲವೇ ದಿನಗಳು ಬಾಕಿ ಇವೆ.

ಪ್ರತಿ ದಿನ 8 ಗಂಟೆಗೆ
ಅಕ್ಟೋಬರ್ 21 ರಂದು ಅಂದರೆ ಭಾನುವಾರ ಸಂಜೆ 6 ಗಂಟೆಯಿಂದ ಗ್ರಾಂಡ್ ಒಪನಿಂಗ್ ಕಾರ್ಯಕ್ರಮ ಪ್ರಸಾರ ಆಗಲಿದೆ. ಸೋಮವಾರದಿಂದ ಸ್ಪರ್ಧಿಗಳ ಮೊದಲ ದಿನ ಶುರು ಆಗಲಿದೆ. ಪ್ರತಿ ದಿನ 8 ಗಂಟೆಗೆ ಕಾರ್ಯಕ್ರಮ ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರ ಆಗಲಿದೆ.

ಹೊಸ ಪ್ರೊಮೋ ಬಂತು
ಕಾರ್ಯಕ್ರಮ ಗ್ರಾಂಡ್ ಒಪನಿಂಗ್ ಡೇಟ್ ಅನ್ನು ಒಂದು ಪ್ರೊಮೊ ಮೂಲಕ ಬಹಿರಂಗ ಪಡಿಸಲಾಗಿದೆ. ಕಲರ್ಸ್ ಸೂಪರ್ ವಾಹಿನಿಯ ಫೇಸ್ ಬುಕ್ ಪೇಜ್ ನಲ್ಲಿ ಪ್ರೊಮೋವನ್ನು ಹಂಚಿಕೊಳ್ಳಲಾಗಿದೆ. ಸುದೀಪ್ ಅವರ ಈ ಹೊಸ ಪ್ರೊಮೋಗೆ ದೊಡ್ಡ ಪ್ರತಿಕ್ರಿಯೆ ಸಿಗುತ್ತಿದೆ.

ಸ್ಪರ್ಧಿಗಳ ರೀತಿ ಡ್ರಾಮಾ ಮಾಡಿದ ಕಿಚ್ಚ
ಪ್ರೊಮೋದಲ್ಲಿ ಬಿಗ್ ಬಾಸ್ ನ ಹಳೆಯ ಸ್ಪರ್ಧಿಗಳು ಮಾಡುವ ಡ್ರಾಮಾವನ್ನು ಸುದೀಪ್ ತೊರಿಸಿದ್ದಾರೆ. ''ಇಲ್ಲಿ ನಾನು ನಾನಾಗಿದ್ದೇನೆ, ಎಲ್ಲರೂ ನನ್ನನ್ನು ಟಾರ್ಗೆಟ್ ಮಾಡುತ್ತಿದ್ದಾರೆ, ಬಿಗ್ ಬಾಸ್ ಹೇಳಿದರೆ ನಾನು ಮನೆಯಿಂದ ಹೊರಗೆ ಹೋಗುತ್ತೇನೆ'' ಹೀಗೆ ಎಲ್ಲ ಸ್ಪರ್ಧಿಗಳು ಹೇಳುವ ಕಾಮನ್ ಡೈಲಾಗ್ ಅನ್ನು ಇಟ್ಟುಕೊಂಡು ಕಿಚ್ಚ ಕಾಮಿಡಿ ಮಾಡಿದ್ದಾರೆ.

ಈ ಬಾರಿಯೂ 50 - 50 ಮನದಂಡ
ಕಳೆದ ಬಾರಿಯಂತೆ ಈ ಬಾರಿಯೂ ಕಾಮನ್ ಮ್ಯಾನ್ ಹಾಗೂ ಸೆಲಿಬ್ರಿಟಿ ಇಬ್ಬರಿಗೂ ಕಾರ್ಯಕ್ರಮದಲ್ಲಿ ಅವಕಾಶ ನೀಡಲಾಗುತ್ತದೆ. 50 % ಸೆಲಿಬ್ರಿಟಿಗಳು ಹಾಗೂ 50% ಕಾಮನ್ ಮ್ಯಾನ್ ಗಳು ಕಾರ್ಯಕ್ರಮದಲ್ಲಿ ಇರಲಿದ್ದಾರೆ. ಕಾಮನ್ ಮ್ಯಾನ್ ಆಗಿ ನಾನು ಬಿಗ್ ಬಾಸ್ ಗೆ ಹೋಗಬೇಕು ಎಂದು ಅನೇಕರು ಪ್ರಯತ್ನ ಪಡುತ್ತಿದ್ದಾರೆ.

ಸಂಭಾವ್ಯ ಪಟ್ಟಿಯ ಹೆಸರುಗಳು
ಈ ಬಾರಿ ಬಿಗ್ ಬಾಸ್ ಮನೆ ಸೇರುವ ಸಂಭಾವ್ಯ ಪಟ್ಟಿ ಹೊರ ಬಂದಿದೆ. ಕುರಿ ಪ್ರತಾಪ್, ಶುಭಾ ಪುಂಜಾ, ಪ್ರೇಮಾ, ಟೆನ್ನಿಸ್ ಕೃಷ್ಣ, ನಿರೂಪಕಿ ಹೇಮಲತಾ, ಸುಮನ ರಂಗನಾಥ್, ಐದು ರೂಪಾಯಿ ಡಾಕ್ಟರ್ ಶಂಕರೇ ಗೌಡ ಈ ಪಟ್ಟಿಯಲ್ಲಿ ಇರುವ ಪ್ರಮುಖರಾಗಿದ್ದಾರೆ.
ನಿಮ್ಮ ಅಭಿಪ್ರಾಯ ತಿಳಿಸಿ
'ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮದಲ್ಲಿ ನೀವು ಯಾರನ್ನ ನೋಡಲು ಬಯಸುತ್ತಿದ್ದೀರಾ.? ನಿಮ್ಮ ಅಭಿಪ್ರಾಯವನ್ನು ನಮಗೆ ತಿಳಿಸಿ... ಕೆಳಗಿರುವ ಕಾಮೆಂಟ್ ಬಾಕ್ಸ್ ನಲ್ಲಿ..


Click it and Unblock the Notifications











