For Quick Alerts
  ALLOW NOTIFICATIONS  
  For Daily Alerts

  ವೀಕ್ಷಕರಿಗೆ ಒಂದು ಸಂಶಯವಿದೆ: ಕ್ಲಾರಿಟಿ ಕೊಡ್ತೀರಾ 'ಬಿಗ್ ಬಾಸ್'.?

  |

  ''ಬಿಗ್ ಬಾಸ್' ಒಂದು ರಿಯಾಲಿಟಿ ಶೋ ಅಲ್ಲ.. ಅದೊಂದು ಸ್ಕ್ರಿಪ್ಟೆಡ್ ಶೋ.. ಇಲ್ಲಿ ವೀಕ್ಷಕರ ಅಭಿಪ್ರಾಯ ಮತ್ತು ಮತಕ್ಕೆ ಯಾವುದೇ ಬೆಲೆ ಇಲ್ಲ.. ಯಾರಿಗೆ ಗೆಲುವು ಸಿಗಬೇಕು ಎಂಬುದು ಮೊದಲೇ ನಿರ್ಧಾರ ಆಗಿರುತ್ತೆ.. ಅದಕ್ಕೆ ತಕ್ಕಂತೆ 'ಬಿಗ್ ಬಾಸ್' ಆಟ ಆಡಿಸುತ್ತಾರೆ'' ಎಂಬೆಲ್ಲ ಮಾತುಗಳು ಕೇಳಿಬಂದಿವೆ.

  ಹೀಗಿದ್ದರೂ, 'ಬಿಗ್ ಬಾಸ್' ಕಾರ್ಯಕ್ರಮವನ್ನ ಸೂಕ್ಷ್ಮವಾಗಿ ನೋಡುವ ವೀಕ್ಷಕರ ಸಂಖ್ಯೆ ಕಮ್ಮಿ ಏನಿಲ್ಲ. ಹಾಗೇ, ನೆಚ್ಚಿನ ಸ್ಪರ್ಧಿಗಳಿಗೆ ವೋಟ್ ಮಾಡುವ ವೀಕ್ಷಕರು ಅಸಂಖ್ಯಾತ ಮಂದಿ ಇದ್ದಾರೆ. ''ನಾವು ವೋಟ್ ಮಾಡುವ ಸ್ಪರ್ಧಿ ಖಂಡಿತ ಸೇಫ್ ಆಗುತ್ತಾರೆ'' ಎಂಬ ನಂಬಿಕೆ ಮೇಲೆ ಹಲವು ವೀಕ್ಷಕರು ಮತ ಚಲಾಯಿಸುತ್ತಾರೆ. ಒಮ್ಮೊಮ್ಮೆ ತಮ್ಮ ನೆಚ್ಚಿನ ಸ್ಪರ್ಧಿ ಔಟ್ ಆದಾಗ ಬೇಸರ ಪಟ್ಟುಕೊಂಡ ವೀಕ್ಷಕರೂ ಇದ್ದಾರೆ.

  ಅದೆಲ್ಲ ಬಿಡಿ... ಸದ್ಯ 'ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮವನ್ನ ಬಿಟ್ಟೂ ಬಿಡದೆ ನೋಡುತ್ತಿರುವ ವೀಕ್ಷಕರಿಗೆ ಒಂದು ಸಂಶಯ ಕಾಡುತ್ತಿದೆ. ಅದೇನು ಅಂತೀರಾ.? ಫೋಟೋ ಸ್ಲೈಡ್ ಗಳಲ್ಲಿ ಓದಿರಿ...

  'ವಾರದ ಕಥೆ ಕಿಚ್ಚನ ಜೊತೆ' ಕಾರ್ಯಕ್ರಮದಲ್ಲಿ ನಡೆದಿದ್ದೇನು.?

  'ವಾರದ ಕಥೆ ಕಿಚ್ಚನ ಜೊತೆ' ಕಾರ್ಯಕ್ರಮದಲ್ಲಿ ನಡೆದಿದ್ದೇನು.?

  'ಬಿಗ್ ಬಾಸ್' ಮನೆಯಿಂದ ಹೊರಗೆ ಹೋಗಲು ಕಳೆದ ವಾರ ಒಂಬತ್ತು ಮಂದಿ ನಾಮಿನೇಟ್ ಆಗಿದ್ದರು. ಒಂಬತ್ತು ಮಂದಿ ಪೈಕಿ 'ವಾರದ ಕಥೆ ಕಿಚ್ಚನ ಜೊತೆ' ಕಾರ್ಯಕ್ರಮದಲ್ಲಿ ಧನರಾಜ್ ರನ್ನು ಸುದೀಪ್ ಸೇಫ್ ಮಾಡಿದಾಗ ಧನರಾಜ್ ಹೇಳಿದ್ದೇನು ಗೊತ್ತಾ.?

  ಸೋನು ಪಾಟೀಲ್ ದೊಡ್ಡ ಡವ್ ರಾಣಿ, ಆಕೆಯದ್ದು ಚೀಪ್ ಗೇಮ್ ಎಂದ ವೀಕ್ಷಕರು.!

  ಧನರಾಜ್ ಹೇಳಿದ್ದೇನು.?

  ಧನರಾಜ್ ಹೇಳಿದ್ದೇನು.?

  ''ನನಗೆ ನಿಮ್ಮ ಕೈಯಿಂದ ಖರ್ಚು ಮಾಡಿ ಆಪ್ ಡೌನ್ ಲೋಡ್ ಮಾಡಿ ಸೇಫ್ ಮಾಡಿದಂತಹ ಎಲ್ಲಾ ಕನ್ನಡ ಸಹೃದಯವಂತರಿಗೆ ನನ್ನ ಅನಂತ ಅನಂತ ಧನ್ಯವಾದಗಳು. ನಿಮ್ಮ ಪ್ರೀತಿ ಹಾರೈಕೆ ಸದಾ ಹೀಗೇ ಇರಲಿ ಅಂತ ನಾನು ಕೇಳಿಕೊಳ್ಳುತ್ತೇನೆ'' ಎಂದು ಧನರಾಜ್ ಹೇಳಿದರು.

  ಏನು.. ಶಶಿ 'ರೈತ' ಅಂತ ಸುಳ್ಳು ಹೇಳಿಕೊಂಡು 'ಬಿಗ್ ಬಾಸ್' ಮನೆಗೆ ಬಂದ್ರಾ.?

  ವೀಕ್ಷಕರಿಗೆ ಇದೇ ಸಂಶಯ.!

  ವೀಕ್ಷಕರಿಗೆ ಇದೇ ಸಂಶಯ.!

  ಈ ಬಾರಿ ವೂಟ್ ಆಪ್ ನಿಂದಲೇ ವೋಟ್ ಮಾಡಬೇಕು ಎಂಬ ಸಂಗತಿ ಸ್ಪರ್ಧಿಗಳಿಗೆ ಹೇಗೆ ಗೊತ್ತಾಯಿತು ಎಂಬ ಸಂಶಯ ವೀಕ್ಷಕರಲ್ಲಿ ಕಾಡುತ್ತಿದೆ. ಈ ಬಗ್ಗೆ ಅನುಮಾನ ವ್ಯಕ್ತಪಡಿಸಿ ಕಲರ್ಸ್ ಸೂಪರ್ ವಾಹಿನಿಯ ಫೇಸ್ ಬುಕ್ ಪುಟದಲ್ಲಿ ವೀಕ್ಷಕರು ಕಾಮೆಂಟ್ ಮಾಡಿದ್ದಾರೆ.

  ಆಂಡ್ರ್ಯೂ-ಧನರಾಜ್ ಕಿತ್ತಾಟ: ವೀಕ್ಷಕರ ಸಪೋರ್ಟ್ ಯಾರಿಗೆ.?

  ಕ್ಲಾರಿಟಿ ಕೊಡ್ತೀರಾ 'ಬಿಗ್ ಬಾಸ್'

  ಕ್ಲಾರಿಟಿ ಕೊಡ್ತೀರಾ 'ಬಿಗ್ ಬಾಸ್'

  ಕಳೆದ ಐದು ಸೀಸನ್ ಗಳಲ್ಲಿ ಎಸ್.ಎಂ.ಎಸ್ ಮೂಲಕ ತಮ್ಮ ನೆಚ್ಚಿನ ಸ್ಪರ್ಧಿಗಳಿಗೆ ವೀಕ್ಷಕರು ಮತ ಹಾಕಬೇಕಿತ್ತು. ಆದ್ರೆ, ಈ ಬಾರಿ ವೂಟ್ ನಲ್ಲಿ ಮತ ಹಾಕುವ ಅವಕಾಶ ಕಲ್ಪಿಸಲಾಗಿದೆ. ಇದು ಸ್ಪರ್ಧಿಗಳ ಗಮನಕ್ಕೆ ಬಂದಿದ್ಯಾ ಎಂಬ ಡೌಟ್ ಸದ್ಯ ವೀಕ್ಷಕರಿಗೆ ಮೂಡಿದೆ. ಈ ಡೌಟ್ ಗೆ 'ಬಿಗ್ ಬಾಸ್' ಕ್ಲಾರಿಟಿ ಕೊಡಬೇಕು.

  ಆಡಮ್ ನ ಔಟ್ ಮಾಡಿದ 'ಬಿಗ್ ಬಾಸ್'ಗೆ ಡೌನ್ ಡೌನ್ ಎಂದ ವೀಕ್ಷಕರು.!

  English summary
  Bigg Boss Kannada 6: Will Bigg Boss clarify Viewers doubt.?

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X