ನುಡಿದಂತೆ ನಡೆದ 'ಬಿಗ್ ಬಾಸ್' ವಿನ್ನರ್ ಶಶಿ ಕುಮಾರ್.!
Recommended Video

'ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮ ಮುಗಿದ್ಮೇಲೆ ವಿನ್ನರ್ ಶಶಿ ಕುಮಾರ್ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. ನೋಡಲು ಹ್ಯಾಂಡ್ಸಮ್ ಆಗಿ ಕಾಣುವ ಶಶಿ ಕುಮಾರ್ ಗೆ ಕಿರುತೆರೆ ಮತ್ತು ಬೆಳ್ಳಿತೆರೆಯಿಂದ ಅವಕಾಶಗಳು ಹುಡುಕಿಕೊಂಡು ಬರುತ್ತಿವೆ.
ನಟನೆಯಲ್ಲಿ ಆಸಕ್ತಿ ಹೊಂದಿರುವ ಶಶಿ ಕುಮಾರ್ ಪಾತ್ರಗಳ ಆಯ್ಕೆ ಬಗ್ಗೆ ಚ್ಯೂಸಿ ಆಗಿದ್ದಾರೆ. ಜೊತೆಗೆ ವ್ಯವಸಾಯದ ಬಗ್ಗೆ ಹೆಚ್ಚು ಗಮನ ಹರಿಸುವುದಾಗಿಯೂ ಹೇಳಿದ್ದಾರೆ. ಈ ಎಲ್ಲದರ ನಡುವೆ ಶಶಿ ಒಂದೊಳ್ಳೆ ಕೆಲಸ ಮಾಡಿದ್ದಾರೆ. 'ಬಿಗ್ ಬಾಸ್' ಮನೆಯಲ್ಲಿ ಆಡಿದ ಮಾತನ್ನು ಶಶಿ ಕುಮಾರ್ ನಡೆಸಿಕೊಟ್ಟಿದ್ದಾರೆ.
2019 ರ ಆರಂಭದಲ್ಲಿ 'ಬಿಗ್ ಬಾಸ್' ಮನೆಯೊಳಗೆ 'ನ್ಯೂ ಇಯರ್ ರೆಸಲ್ಯೂಷನ್' ಬಗ್ಗೆ ಹೇಳಬೇಕಾದಾಗ, ''ಪ್ರತಿ ತಿಂಗಳು ವೈಟ್ ಬ್ಲಡ್ ಸೆಲ್ಸ್ ದಾನ ಮಾಡುವೆ. ನನ್ನ ಜೊತೆ ಮಿನಿಮಂ ಐದು ಜನರ ಅಂಗಾಂಗಗಳನ್ನು ದಾನ ಮಾಡಿಸುವೆ'' ಎಂದು ಶಶಿ ಕುಮಾರ್ ಹೇಳಿದ್ದರು.

ಅದರಂತೆ, ಶಶಿ ಮತ್ತು ಕುಟುಂಬದ ಸದಸ್ಯರು ರಕ್ತದಾನ ಹಾಗೂ ಅಂಗಾಂಗ ದಾನ ಮಾಡಿದ್ದಾರೆ. ರಾಮಯ್ಯ ಆಸ್ಪತ್ರೆಯಲ್ಲಿ ರಕ್ತದಾನ ಮಾಡಿದ ಶಶಿ ಮತ್ತು ಕುಟುಂಬದ ಸದಸ್ಯರು, ಸತ್ತ ನಂತರ ದೇಹದ ಅಂಗಾಂಗಗಳನ್ನು ದಾನ ಮಾಡುವುದಾಗಿ ದಾನದ ಪ್ರತಿಗೆ ಸಹಿ ಹಾಕಿದ್ದಾರೆ. ಅಂತೂ ನುಡಿದಂತೆ ನಡೆದು ಅಭಿಮಾನಿಗಳ ಮನಸ್ಸನ್ನು ಶಶಿ ಗೆದ್ದಿದ್ದಾರೆ.


Click it and Unblock the Notifications











