'ಬಿಗ್ ಬಾಸ್ ಕನ್ನಡ ಸೀಸನ್ 7' ಕಾರ್ಯಕ್ರಮದ 18 ಸ್ಪರ್ಧಿಗಳ ವಿವರ

Recommended Video

Sudeep angry on Kuri Prathap | FILMIBEAT KANNADA

'ಬಿಗ್ ಬಾಸ್ ಕನ್ನಡ ಸೀಸನ್ 7' ನಿನ್ನೆ (ಅಕ್ಟೋಬರ್ 13) ಅದ್ದೂರಿಯಾಗಿ ಶುಭಾರಂಭವಾಗಿದೆ. ಈ ಬಾರಿ 18 ಸ್ಪರ್ಧಿಗಳು ದೊಡ್ಮೆನೆಗೆ ಹೋಗುವ ಅವಕಾಶ ಪಡೆದಿದ್ದಾರೆ. ಹಾಸ್ಯ ನಟ ಕುರಿ ಪ್ರತಾಪ್ ರಿಂದ ಶುರುವಾದ ಬಿಗ್ ಬಾಸ್ ಮನೆ ಪ್ರವೇಶ ನಟ ಹರೀಶ್ ರಾಜ್ ಮೂಲಕ ಅಂತ್ಯವಾಯಿತು.

ಹಿರಿಯ ಪತ್ರಕರ್ತ ರವಿ ಬೆಳಗೆರೆ, ಹಿರಿಯ ನಟ ಜೈಜಗದೀಶ್, ಹಾಸ್ಯ ನಟ ರಾಜು ತಾಳಿಕೋಟೆ, ಅಗ್ನಿಸಾಕ್ಷಿ ನಟಿ ಪ್ರಿಯಾಂಕಾ, ಸುಜಾತ, ದುನಿಯಾ ರಶ್ಮಿ, ಕಿರುತೆರೆ ನಟಿ ಚಂದನ್, ದೀಪಿಕಾ ದಾಸ್, ಭೂಮಿ ಶೆಟ್ಟಿ, ನಿರೂಪಕಿ ಚ್ರೈತ್ರ, ಚೈತ್ರ ಕೊಟ್ಟೂರ್, ನಟ ಚಂದನ್, ಶೈನ್ ಶೆಟ್ಟಿ, ಗುರುಲಿಂಗ ಸ್ವಾಮಿಜಿ, ಡ್ಯಾನ್ಸರ್ ಕಿಶನ್, ಸಂಗೀತ ನಿರ್ದೇಶಕ ವಾಸುಕಿ ವೈಭವ್ ಕಾರ್ಯಕ್ರಮದ ಸ್ಪರ್ಧಿಗಳಾಗಿದ್ದಾರೆ.

ಸಂಜೆ 6 ಗಂಟೆಗೆ ಪ್ರಾರಂಭವಾದ ಕಾರ್ಯಕ್ರಮ ರಾತ್ರಿ 11 ಗಂಟೆವರೆಗೆ ಪ್ರಸಾರ ಆಯಿತು. ಅಂದಹಾಗೆ, 'ಬಿಗ್ ಬಾಸ್ ಕನ್ನಡ ಸೀಸನ್ 7' ಎಲ್ಲ ಸ್ಪರ್ಧಿಗಳ ವಿವರ ಮುಂದಿದೆ ಓದಿ...

18ನೇ ಹಾಗೂ ಕೊನೆಯ ಸ್ಪರ್ಧಿ

18ನೇ ಹಾಗೂ ಕೊನೆಯ ಸ್ಪರ್ಧಿ

ಬಿಗ್ ಬಾಸ್ ಸಂಭಾವ್ಯ ಪಟ್ಟಿಯಲ್ಲಿ ಹೆಸರೇ ಇಲ್ಲದೆ ಇದ್ದ ನಟ ಹರೀಶ್ ರಾಜ್ ಅಚ್ಚರಿ ಎಂಬಂತೆ ದೊಡ್ಮನೆ ಪ್ರವೇಶ ಮಾಡಿದ್ದಾರೆ. ಹಲವು ವರ್ಷಗಳಿಂದ ಕನ್ನಡ ಇಂಡಸ್ಟ್ರಿಯಲ್ಲಿ ಹರೀಶ್ ರಾಜ್ ಗುರುತಿಸಿಕೊಂಡಿದ್ದು, ಇತ್ತೀಚಿಗೆ ಲಿಮ್ಕಾ ದಾಖಲೆಯಲ್ಲಿ ಇವರು ಹೆಸರು ನಮೂದಿಸಿಕೊಂಡಿದ್ದಾರೆ.

17ನೇ ಸ್ಪರ್ಧಿ ಶೈನ್ ಶೆಟ್ಟಿ

17ನೇ ಸ್ಪರ್ಧಿ ಶೈನ್ ಶೆಟ್ಟಿ

17ನೇ ಹಾಗೂ ಕೊನೆಯ ಸ್ಪರ್ಧಿಯಾಗಿ ಕುಂದಾಪುರ ಪ್ರತಿಭೆ ಶೈನ್ ಶೆಟ್ಟಿ ಎಂಟ್ರಿಯಾಗಿದ್ದಾರೆ. ಕಿರುತೆರೆ ಹಾಗೂ ಕೆಲವು ಸಿನಿಮಾಗಳಲ್ಲೂ ನಟಿಸಿದ್ದಾರೆ. ಬಹುಮುಖ ಪ್ರತಿಭೆಯಾಗಿರುವ ಶೈನ್ ಶೆಟ್ಟಿ ಮೇಲೆ ನಿರೀಕ್ಷೆ ಹೆಚ್ಚಿದೆ.

16ನೇ ಸ್ಪರ್ಧಿ ಚೈತ್ರಾ ಕೊಟ್ಟೂರ್

16ನೇ ಸ್ಪರ್ಧಿ ಚೈತ್ರಾ ಕೊಟ್ಟೂರ್

ಸೂಜಿದಾರ ಸಿನಿಮಾದಲ್ಲಿ ಎರಡನೇ ನಾಯಕಿಯಾಗಿ ನಟಿಸಿದ್ದ ಚೈತ್ರಾ ಕೊಟ್ಟೊರ್ 16ನೇ ಸ್ಪರ್ಧಿಯಾಗಿ ಮನೆ ಪ್ರವೇಶ ಮಾಡಿದ್ದಾರೆ. ರಂಗಭೂಮಿ ಕಲಾವಿದೆ ಮತ್ತು ಬರಹಗಾರ್ತಿಯಾಗಿದ್ದಾರೆ.

15ನೇ ಸ್ಪರ್ಧಿ ಚೈತ್ರಾ

15ನೇ ಸ್ಪರ್ಧಿ ಚೈತ್ರಾ

ಬಿಗ್ ಬಾಸ್ ಕನ್ನಡ ಏಳನೇ ಆವೃತ್ತಿ ಅದ್ಧೂರಿಯಾಗಿ ಆರಂಭವಾಗಿದ್ದು, 15ನೇ ಸ್ಪರ್ಧಿಯಾಗಿ ಕಿರುತೆರೆ ನಿರೂಪಕಿ ಚೈತ್ರಾ ವಾಸುದೇವನ್ ಎಂಟ್ರಿಯಾಗಿದ್ದಾರೆ. ಚೈತ್ರಾ ಕೆಲವು ಟಿವಿ ಶೋ, ಸಿಸಿಎಲ್, ಹಾಗೂ ಕೆಲವು ಅವಾರ್ಡ್ ಶೋಗಳನ್ನ ಕೂಡ ನಿರೂಪಣೆ ಮಾಡಿದ್ದಾರೆ.

14ನೇ ಸ್ಪರ್ಧಿ ರಾಜುತಾಳಿಕೋಟೆ

14ನೇ ಸ್ಪರ್ಧಿ ರಾಜುತಾಳಿಕೋಟೆ

ಬಿಗ್ ಬಾಸ್ ಕನ್ನಡ ಏಳನೇ ಆವೃತ್ತಿ ಅದ್ಧೂರಿಯಾಗಿ ಆರಂಭವಾಗಿದ್ದು, 14ನೇ ಸ್ಪರ್ಧಿಯಾಗಿ ಹಾಸ್ಯನಟ ರಾಜು ತಾಳಿಕೋಟೆ ಎಂಟ್ರಿ ಕೊಟ್ಟಿದ್ದಾರೆ. ಮನಸಾರೆ ಚಿತ್ರದ ಮೂಲಕ ರಾಜು ತಾಳಿಕೋಟೆ ಹೆಚ್ಚು ಖ್ಯಾತಿ ಗಳಿಸಿಕೊಂಡಿದ್ದಾರೆ.

13ನೇ ಸ್ಪರ್ಧಿ ಸುಜಾತ

13ನೇ ಸ್ಪರ್ಧಿ ಸುಜಾತ

13ನೇ ಸ್ಪರ್ಧಿಯಾಗಿ ರಾಧಾ ರಮಣ ಧಾರಾವಾಹಿಯಲ್ಲಿ ವಿಲನ್ ಪಾತ್ರ ನಿರ್ವಹಿಸುತ್ತಿರುವ ಸುಜಾತ ಎಂಟ್ರಿ ಕೊಟ್ಟಿದ್ದಾರೆ. ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಈ ಧಾರಾವಾಹಿ ಮುಗಿದಿದ್ದು, ಈಗ ಬಿಗ್ ಮನೆಗೆ ಸಿತಾರ ಆಟ ಆಡಲು ಬಂದಿದ್ದಾರೆ. ನಟಿ ಪ್ರಿಯಾಂಕಾ ಉಪೇಂದ್ರ ಇವರನ್ನ ಕಳುಹಿಸಿಕೊಟ್ಟರು.

12ನೇ ಸ್ಪರ್ಧಿ ಚಂದನ್

12ನೇ ಸ್ಪರ್ಧಿ ಚಂದನ್

'ಕಿರಿಕ್ ಪಾರ್ಟಿ' ಚಿತ್ರದ ಮೂಲಕ ಸ್ಟಾರ್ ಆದ ನಟ ಚಂದನ್ ಆಚಾರ್ 12ನೇ ಸ್ಪರ್ಧಿಯಾಗಿ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಇತ್ತೀಚಿಗೆ ಕೆಮಿಸ್ಟ್ರಿ ಆಫ್ ಕರಿಯಪ್ಪ ಸಿನಿಮಾದ ಮೂಲಕ ಯಶಸ್ಸು ಪಡೆದುಕೊಂಡಿದ್ದರು.

11ನೇ ದುನಿಯಾ ರಶ್ಮಿ

11ನೇ ದುನಿಯಾ ರಶ್ಮಿ

11ನೇ ಸ್ಪರ್ಧಿಯಾಗಿ ಬಿಗ್ ಬಾಸ್ ಮನೆಗೆ ಕನ್ನಡದ ಖ್ಯಾತ ನಟಿ ದುನಿಯಾ ರಶ್ಮಿ ಪ್ರವೇಶ ಮಾಡಿದ್ದಾರೆ. ದುನಿಯಾ ಸಿನಿಮಾ ಬಳಿಕ ಹಲವು ಚಿತ್ರಗಳಲ್ಲಿ ನಟಿಸಿದರೂ ಬ್ರೇಕ್ ಸಿಕ್ಕಿರಲಿಲ್ಲ. ಈಗ ಬಿಗ್ ಮನೆಯಲ್ಲಿ ತಮ್ಮ ಅದೃಷ್ಟ ಬದಲಿಸಲು ಮುಂದಾಗಿದ್ದಾರೆ.

10ನೇ ಸ್ಪರ್ಧಿ ಡ್ಯಾನ್ಸರ್ ಕಿಶನ್

10ನೇ ಸ್ಪರ್ಧಿ ಡ್ಯಾನ್ಸರ್ ಕಿಶನ್

ಚಿಕ್ಕಮಗಳೂರಿನ ಖ್ಯಾತ ಡ್ಯಾನ್ಸರ್ ಕಿಶನ್ ಈ ಬಾರಿಯ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಕಿಶನ್ ಯಾರು ಎನ್ನುವುದು ಕನ್ನಡಿಗರಿಗೆ ಪರಿಚಯವಿಲ್ಲ. ಆದ್ರೆ ಬಿಗ್ ಮನೆಯ ಮೂಲಕ ಎಲ್ಲರಿಗೂ ಚಿರಪರಿಚಿತರಾಗಲಿದ್ದಾರೆ.

9ನೇ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟ ಭೂಮಿ ಶೆಟ್ಟಿ

9ನೇ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟ ಭೂಮಿ ಶೆಟ್ಟಿ

ಕಿನ್ನರಿ ಧಾರಾವಾಹಿ ಖ್ಯಾತಿಯ ನಟಿ ಭೂಮಿ ಶೆಟ್ಟಿ ಈ ಬಾರಿಯ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಕುಂದಾಪುರದ ಈ ಸುಂದರಿ ಬಿಗ್ ಬಾಸ್ ಮನೆಯಲ್ಲಿದ್ದು ಪ್ರೇಕ್ಷಕರ ಮನ ಗೆಲ್ತಾರಾ ಕಾದು ನೋಡಬೇಕು.

8ನೇ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟ ಸ್ವಾಮಿಜಿ

8ನೇ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟ ಸ್ವಾಮಿಜಿ

ಈ ಬಾರಿಯ ಬಿಗ್ ಬಾಸ್ ಗೆ ಒಬ್ಬ ಸ್ವಾಮೀಜಿ ಕೂಡ ಎಂಟ್ರಿ ಕೊಟ್ಟಿದ್ದಾರೆ. ಹಾವೇರಿ ತಾಲೂಕಿನ ಅಗಡಿ ಗ್ರಾಮದ ಅಕ್ಕಿ ಮಠದ ಗುರುಲಿಂಗ ಸ್ವಾಮೀಜಿ ಈ ಬಾರಿಯ ಬಿಗ್ ಬಾಸ್ ಮನೆಯಲ್ಲಿ ಕಾಣಸಿಗಲಿದ್ದಾರೆ.

ಬಿಗ್ ಮನೆಯ 7ನೇ ಸ್ಪರ್ಧಿ ಜೈ ಜಗದೀಶ್

ಬಿಗ್ ಮನೆಯ 7ನೇ ಸ್ಪರ್ಧಿ ಜೈ ಜಗದೀಶ್

ಬಿಗ್ ಮನೆಯ 7ನೇ ಸ್ಪರ್ಧಿಯಾಗಿ ಹಿರಿಯ ನಟ ಜೈ ಜಗದೀಶ್ ಎಂಟ್ರಿ ಕೊಟ್ಟಿದ್ದಾರೆ. ನಟ, ನಿರ್ದೇಶಕ, ನಿರ್ಮಾಪಕನಾಗಿ ಖ್ಯಾತಿಗಳಿಸಿರುವ ಜೈ ಜಗದೀಶ್ ಬಿಗ್ ಬಾಸ್ ಎಂಬ ಹೊಸ ಲೋಕಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಬಿಗ್ ಮನೆಯಲ್ಲಿ ಜೈ ಜಗದೀಶ್ ಹೇಗಿರಲಿದ್ದಾರೆ ಎನ್ನುವುದು ಕುತೂಹಲ.

6ನೇ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟ ದೀಪಿಕಾ ದಾಸ್

6ನೇ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟ ದೀಪಿಕಾ ದಾಸ್

ಬಿಗ್ ಬಾಸ್ ಮನೆಯ 6ನೇ ಸ್ಪರ್ಧಿಯಾಗಿ ಕಿರುತೆರೆಯ ಖ್ಯಾತ ಧಾರಾವಾಹಿ ನಾಗಿಣಿ ಖ್ಯಾತಿಯ ನಟಿ ದೀಪಿಕಾ ದಾಸ್. ಕಿರುತೆರೆ ಪ್ರೇಕ್ಷಕರ ಮನಗೆದ್ದಿದ್ದ ದೀಪಿಕಾ ದಾಸ್ ಈಗ ಬಿಗ್ ಬಾಸ್ ಮನೆಗೆ ಎಂಟ್ರಿಕೊಟ್ಟಿದ್ದಾರೆ. ಬಿಗ್ ಮನೆಯಲ್ಲಿ ದೀಪಿಕಾ ಎಷ್ಟು ಮನರಂಜನೆ ನೀಡಲಿದ್ದಾರೆ ಎನ್ನುವುದು ಪ್ರೇಕ್ಷಕರ ಕುತೂಹಲ.

5ನೇ ಸ್ಪರ್ಧಿ ವಾಸುಕಿ ವೈಭವ್

5ನೇ ಸ್ಪರ್ಧಿ ವಾಸುಕಿ ವೈಭವ್

ವಾಸುಕಿ ವೈಭವ್ ಕಾರ್ಯಕ್ರಮದ 5ನೇ ಸ್ಪರ್ಧಿಯಾಗಿದ್ದಾರೆ. ಕನ್ನಡ ಚಿತ್ರರಂಗಕ್ಕೆ ಹೊಸತನದ ಹಾಡುಗಳನ್ನು ನೀಡುತ್ತಿರುವ ಸಂಗೀತ ನಿರ್ದೇಶಕ. ರಂಗಭೂಮಿ ನಟನಾಗಿಯೂ ಗುರುತಿಸಿಕೊಂಡಿದ್ದಾರೆ. 'ರಾಮಾ ರಾಮಾ ರೇ', 'ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ', 'ಒಂದಲ್ಲ ಎರಡಲ್ಲ' ಚಿತ್ರಗಳು ವಾಸುಕಿ ವೈಭವ್ ಅವರ ಪ್ರಮುಖ ಸಿನಿಮಾಗಳಾಗಿವೆ.

4ನೇ ಸ್ಪರ್ಧಿ ಚಂದನ

4ನೇ ಸ್ಪರ್ಧಿ ಚಂದನ

ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ರಾಜ ರಾಣಿ' ಧಾರಾವಾಹಿಯಲ್ಲಿ ಚುಕ್ಕಿ ಪಾತ್ರಧಾರಿಯಾಗಿ ನಟಿಸುತ್ತಿದ್ದರು.

3ನೇ ಸ್ಪರ್ಧಿ ರವಿ ಬೆಳಗೆರೆ

3ನೇ ಸ್ಪರ್ಧಿ ರವಿ ಬೆಳಗೆರೆ

ಈ ಬಾರಿ ಬಿಗ್ ಮನೆಯ ಬಹು ನಿರೀಕ್ಷೆಯ ಸ್ಪರ್ಧಿ ಅಂದ್ರೆ ಹಿರಿಯ ಪತ್ರಕರ್ತ ರವಿ ಬೆಳಗೆರೆ. ಪತ್ರಿಕೋದ್ಯಮ, ಬರವಣಿಗೆ, ಶಾಲೆ, ಯೂ ಟ್ಯೂಬ್ ಹೀಗೆ ನಾನಾವಿಭಾಗಗಳಲ್ಲಿ ಬ್ಯುಸಿಯಾಗಿರುವ ರವಿ ಬೆಳಗೆರೆ ಈಗ ಬಿಗ್ ಬಾಸ್ ಎನ್ನುವ ಹೊಸ ಪ್ರಪಂಚಕ್ಕೆ ಎಂಟ್ರಿ ಕೊಡುತ್ತಿದ್ದಾರೆ.

2ನೇ ಸ್ಪರ್ಧಿಯಾಗಿ ಅಗ್ನಿಸಾಕ್ಷಿ ಚಂದ್ರಿಕಾ ಎಂಟ್ರಿ

2ನೇ ಸ್ಪರ್ಧಿಯಾಗಿ ಅಗ್ನಿಸಾಕ್ಷಿ ಚಂದ್ರಿಕಾ ಎಂಟ್ರಿ

ಬಿಗ್ ಬಾಸ್ ಮನೆಗೆ ಎರಡನೆ ಸ್ಪರ್ಧಿಯಾಗಿ ಅಗ್ನಿಸಾಕ್ಷಿ ಧಾರಾವಾಹಿ ಖ್ಯಾತಿ ನಟಿ ಚಂದ್ರಿಕಾ ಅಲಿಯಾಸ್ ಪ್ರಿಯಾಂಕಾ ಎಂಟ್ರಿಕೊಟ್ಟಿದ್ದಾರೆ. ಧಾರಾವಾಹಿಯಲ್ಲಿ ವಿಲನ್ ಆಗಿ ಎಲ್ಲರ ಮನಗೆದಿದ್ದ ಪ್ರಿಯಾಂಕಾ ಬಿಗ್ ಬಾಸ್ ಮನೆಯಲ್ಲಿ ಹೇಗಿರಲಿದ್ದಾರೆ. ಎಷ್ಟು ಮನರಂಜನೆ ನೀಡಲಿದ್ದಾರೆ ಎನ್ನುವುದು ಪ್ರೇಕ್ಷಕರ ಕುತೂಹಲ.

1ನೇ ಸ್ಪರ್ಧಿ ಕುರಿ ಪ್ರತಾಪ್

1ನೇ ಸ್ಪರ್ಧಿ ಕುರಿ ಪ್ರತಾಪ್

ಬಿಗ್ ಬಾಸ್ ಸೀಸನ್-7 ಗೆ ಮೊದಲ ಸ್ಪರ್ಧಿಯಾಗಿ ಹಾಸ್ಯ ಕಲಾವಿದ ಕುರಿ ಪ್ರತಾಪ್ ಎಂಟ್ರಿಕೊಟ್ಟಿದ್ದಾರೆ. ಕಿರುತೆರೆ ಮತ್ತು ಹಿರಿತೆರೆಯಲ್ಲಿ ಅಭಿನಯಿಸುತ್ತ ಅಭಿಮಾನಿಗಳನ್ನು ನಗಿಸುತ್ತಿದ್ದ ಕುರಿ ಪ್ರತಾಪ್ ಬಿಗ್ ಬಾಸ್ ಮನೆಯಲ್ಲಿ ಹೇಗಿರಲಿದ್ದಾರೆ ಎನ್ನುವುದು ಪ್ರೇಕ್ಷಕರ ಕುತೂಹಲ. ಮೊದಲ ದಿನವೆ ಎಲ್ಲರನ್ನು ನಗಿಸುತ್ತಲೆ ಬಿಗ್ ಮನೆಗೆ ಎಂಟ್ರಿ ಕೊಟ್ಟ ಕುರಿ ಪ್ರತಾಪ್ ಈ ಬಾರಿಯ ಬಹು ನಿರೀಕ್ಷೆಯ ಸ್ಪರ್ಧಿಯಾಗಿದ್ದಾರೆ.

More from Filmibeat

English summary
Bigg Boss Kannada season-7 grand opening: check out the final Contestant list.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X