'ಅಗ್ನಿಸಾಕ್ಷಿ' ಪ್ರಿಯಾಂಕಾ ಇಷ್ಟ ಪಟ್ಟು ಮೆಸೇಜ್ ಹಾಕಿದ್ರೆ, ಚಂದನ್ ಹೀಗಾ ಮಾಡೋದು.?

Recommended Video

Bigg Boss Kannada 7 : Chandrika like Chandan acting in movie Kirik Party movie

'ಅಗ್ನಿಸಾಕ್ಷಿ' ಚಂದ್ರಿಕಾ ಯಾರಿಗ್ತಾನೆ ಗೊತ್ತಿಲ್ಲ ಹೇಳಿ. ಸನ್ನಿಧಿ ಅಂಡ್ ಫ್ಯಾಮಿಲಿಗೆ ದಿನ ನಿತ್ಯ ಟಾರ್ಚರ್ ಕೊಡುವ ಚಂದ್ರಿಕಾ ಪಾತ್ರಧಾರಿ ಪ್ರಿಯಾಂಕಾ ಇದೀಗ 'ಬಿಗ್ ಬಾಸ್' ಮನೆ ಸೇರಿದ್ದಾರೆ.

'ಅಗ್ನಿಸಾಕ್ಷಿ' ಧಾರಾವಾಹಿಯಲ್ಲಿ ಮನೆಹಾಳು ಐಡಿಯಾಗಳನ್ನು ಮಾಡಿ ಒಂದು ಲೆವೆಲ್ ಗೆ ಸಕ್ಷಸ್ ಆಗುತ್ತಿದ್ದ ಚಂದ್ರಿಕಾ ಅಲಿಯಾಸ್ ಪ್ರಿಯಾಂಕಾ 'ಬಿಗ್ ಬಾಸ್' ಮನೆಯೊಳಗೆ ಸದ್ಯಕ್ಕೆ ಕೂಲ್ ಆಗಿದ್ದಾರೆ. ಅವರ ಯಾವುದೇ ಸ್ಟ್ರಾಟೆಜಿ ಇನ್ನೂ ವೀಕ್ಷಕರ ಗಮನಕ್ಕೆ ಬಂದಿಲ್ಲ.

'ಬಿಗ್ ಬಾಸ್' ಮನೆಯೊಳಗೆ ಎಲ್ಲರ ಜೊತೆ ಮಾತುಕತೆ ಆಡುತ್ತಾ ಕಾಲ ಕಳೆಯುತ್ತಿರುವ ಪ್ರಿಯಾಂಕಾ ಒಂದು ಸತ್ಯವನ್ನು ಬಾಯಿಬಿಟ್ಟಿದ್ದಾರೆ. ದೊಡ್ಮನೆಯೊಳಗೆ ಕಾಲಿಟ್ಟಿರುವ ಓರ್ವ ನಟನಿಗೆ ಪ್ರಿಯಾಂಕಾ ಫ್ಯಾನ್ ಅಂತೆ. ಅಭಿಮಾನದಿಂದ ಆ ನಟನಿಗೆ ಮೆಸೇಜ್ ಮಾಡಿದರೆ, ಆತ ರಿಪ್ಲೈ ಕೊಡ ಮಾಡ್ಲಿಲ್ವಂತೆ. ಏನಿದು ಕಥೆ ಅಂತ ತಿಳ್ಕೊಳ್ಬೇಕಾದ್ರೆ, ಫೋಟೋ ಸ್ಲೈಡ್ ಗಳತ್ತ ಕಣ್ಣಾಡಿಸಿ...(ಚಿತ್ರ ಕೃಪೆ: ಕಲರ್ಸ್ ಕನ್ನಡ/ವೂಟ್ )

ಯಾರಿಗೆ ಪ್ರಿಯಾಂಕಾ ಫ್ಯಾನ್.?

ಯಾರಿಗೆ ಪ್ರಿಯಾಂಕಾ ಫ್ಯಾನ್.?

'ಅಗ್ನಿಸಾಕ್ಷಿ' ಸೀರಿಯಲ್ ನಟಿ ಪ್ರಿಯಾಂಕಾ ಫ್ಯಾನ್ ಆಗಿರೋದು ಬೇರೆ ಯಾರಿಗೂ ಅಲ್ಲ. 'ಕಿರಿಕ್ ಪಾರ್ಟಿ' ಚಿತ್ರದಲ್ಲಿ ಕಾಣಿಸಿಕೊಂಡಿದ್ದ ನಟ ಚಂದನ್ ಆಚಾರ್ ಗೆ. ರಕ್ಷಿತ್ ಶೆಟ್ಟಿ ಅಭಿನಯದ 'ಕಿರಿಕ್ ಪಾರ್ಟಿ' ಚಿತ್ರದಲ್ಲಿ ಕಾಲೇಜ್ ಸ್ಟೂಡೆಂಟ್ ಅಲೆಕ್ಸಾಂಡರ್ ಪಾತ್ರಕ್ಕೆ ಚಂದನ್ ಆಚಾರ್ ಜೀವ ತುಂಬಿದ್ದರು.

ಚಂದನ್ ಆಚಾರ್ ಗೆ ಪ್ರಿಯಾಂಕಾ ಕ್ಲೀನ್ ಬೌಲ್ಡ್

ಚಂದನ್ ಆಚಾರ್ ಗೆ ಪ್ರಿಯಾಂಕಾ ಕ್ಲೀನ್ ಬೌಲ್ಡ್

'ಕಿರಿಕ್ ಪಾರ್ಟಿ' ಚಿತ್ರದಲ್ಲಿ ಚಂದನ್ ಆಚಾರ್ ನಟನೆ ನೋಡಿ ಪ್ರಿಯಾಂಕಾ ಫ್ಲಾಟ್ ಆಗಿದ್ದರು. ಚಂದನ್ ಆಚಾರ್ ಬಳಿ ತಮ್ಮ ಅಭಿಮಾನವನ್ನು ವ್ಯಕ್ತಪಡಿಸಲು ಇನ್ಸ್ಟಾಗ್ರಾಮ್ ನಲ್ಲಿ ಪ್ರಿಯಾಂಕಾ ಮೆಸೇಜ್ ಕೂಡ ಮಾಡಿದ್ದರು. ಆದ್ರೆ, ಅದಕ್ಕೆ ಚಂದನ್ ಆಚಾರ್ ಮಾತ್ರ ಪ್ರತಿಕ್ರಿಯೆ ಕೊಟ್ಟಿಲ್ಲ.

ಬೇಸರ ವ್ಯಕ್ತಪಡಿಸಿದ ಪ್ರಿಯಾಂಕಾ

ಬೇಸರ ವ್ಯಕ್ತಪಡಿಸಿದ ಪ್ರಿಯಾಂಕಾ

''ಕಿರಿಕ್ ಪಾರ್ಟಿ' ಸಿನಿಮಾ ನೋಡಿದಾಗ, ನಿಮ್ಮ ಪಾತ್ರ ತುಂಬಾ ಇಷ್ಟ ಆಗಿತ್ತು. ನಾನು ನಿಮ್ಮ ಫ್ಯಾನ್ ಅಂತ ನಾಲ್ಕು ಬಾರಿ ಇನ್ಸ್ಟಾಗ್ರಾಮ್ ನಲ್ಲಿ ಮೆಸೇಜ್ ಮಾಡಿದ್ದೆ. ಆದ್ರೆ, ನೀವು ರಿಪ್ಲೈ ಮಾಡಿಲ್ಲ. ನನಗೆ ಶೇಮ್ ಆಯ್ತು. ವೆರಿ ಬ್ಯಾಡ್'' ಅಂತ ಚಂದನ್ ಆಚಾರ್ ಬಳಿ ಪ್ರಿಯಾಂಕಾ 'ಬಿಗ್ ಬಾಸ್' ಮನೆಯಲ್ಲಿ ಬೇಸರ ವ್ಯಕ್ತಪಡಿಸಿದರು.

ಥ್ಯಾಂಕ್ಸ್ ಹೇಳಿದ ಚಂದನ್ ಆಚಾರ್

ಥ್ಯಾಂಕ್ಸ್ ಹೇಳಿದ ಚಂದನ್ ಆಚಾರ್

ಪ್ರಿಯಾಂಕಾ ಆಡಿದ ಮಾತುಗಳನ್ನು ಕೇಳಿ ಚಂದನ್ ಆಚಾರ್ ಅಚ್ಚರಿಗೊಂಡರು. ಪ್ರಿಯಾಂಕಾ ಅಭಿಮಾನಕ್ಕೆ ಧನ್ಯವಾದ ತಿಳಿಸಿದರು. ಈ ಮಾತುಕತೆಯಿಂದ 'ಬಿಗ್ ಬಾಸ್' ಮನೆಯಲ್ಲಿ ಚಂದನ್-ಪ್ರಿಯಾಂಕಾ ಗೇಮ್ ಸ್ಟ್ರಾಟೆಜಿ ಬದಲಾಗುತ್ತಾ.? ನೋಡಬೇಕು.

More from Filmibeat

English summary
Bigg Boss Kannada 7 - Agnisakshi fame Priyanka reveals that she is a fan of 'Kirik Party' fame Chandan Achar.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X