'ಅಸ್ಪೃಶ್ಯತೆ' ವಿವಾದ: ಕೈ ಮುಗಿದು ಕ್ಷಮೆ ಕೇಳಿದ ಚೈತ್ರ ಕೋಟೂರು

''ನಾವೇನು Untouchables ಆ.? ನಾವೇನು ಅಸ್ಪೃಶ್ಯರಾ.?'' ಎನ್ನುತ್ತ ನಕ್ಕಿದ್ದ ಚೈತ್ರ ಕೋಟೂರುಗೆ ಅಂಬೇಡ್ಕರ್ ಸೇನೆಯಿಂದ ಹೋರಾಟದ ಬಿಸಿ ಮುಟ್ಟಿತ್ತು. ಅಸ್ಪೃಶ್ಯತೆ ಬಗ್ಗೆ ಕೇವಲವಾಗಿ ಮಾತನಾಡದಿಂದ ಚೈತ್ರ ಕೋಟೂರು ಅವರನ್ನ 'ಬಿಗ್ ಬಾಸ್' ಮನೆಯಿಂದ ಕೂಡಲೆ ಹೊರ ಹಾಕಿ ಎಂದು ಅಂಬೇಡ್ಕರ್ ಸೇನೆ ಆಗ್ರಹಿಸಿತ್ತು.

'ಬಿಗ್ ಬಾಸ್' ಮನೆಯೊಳಗೆ ನಡೆದ ಮಾತಿಗೆ ಹೊರಗೆ ಪ್ರತಿಭಟನೆಯ ಕಾವು ಏರುತ್ತಿದ್ದಂತೆಯೇ ಕನ್ ಫೆಶನ್ ರೂಮ್ ನಲ್ಲಿ ಚೈತ್ರ ಕೋಟೂರು ಕ್ಷಮೆ ಕೇಳಿದ್ದಾರೆ. ''ನನ್ನ ಮಾತಿಂದ ಬೇಸರ ಆಗಿದ್ದರೆ, ದಯವಿಟ್ಟು ಕ್ಷಮಿಸಿ'' ಎಂದು ಕೈಮುಗಿದು ಕ್ಷಮೆಯಾಚಿಸಿದ್ದಾರೆ ಚೈತ್ರ ಕೋಟೂರು.

''ಯಾವುದೇ ಜಾತಿ ಅಥವಾ ಧರ್ಮದ ನೆಲೆಯಲ್ಲಿ ಇದನ್ನ ನಾನು ಖಂಡಿತ ಬಳಸಿಲ್ಲ. ನಿಮ್ಮ ಮನಸ್ಸಿಗೆ ಇದರಿಂದ ಬೇಸರ ಆಗಿದ್ದರೆ, ದಯವಿಟ್ಟು ಕ್ಷಮೆ ಇರಲಿ. ಕುವೆಂಪು ಹೇಳಿದಂತೆ ವಿಶ್ವಮಾನವಳು ನಾನು. ಯಾವುದೇ ಜಾತಿ, ಧರ್ಮ, ಮತಕ್ಕೆ ನಾನು ಒಳಗಾಗುವುದಿಲ್ಲ. ಮನುಷ್ಯತ್ವಕ್ಕೆ ಬೆಲೆ ಕೊಡುತ್ತೇನೆ. ಅಸ್ಪೃಶ್ಯತೆ ಅನ್ನೋದು ಇಲ್ಲ. ಸಂಪೂರ್ಣವಾಗಿ ಅದು ಹೋಗಬೇಕು ಎಂಬುದನ್ನು ಬಯಸುತ್ತೇನೆ. ಈ ಭೂಮಿ ಮೇಲೆ ಪ್ರತಿಯೊಬ್ಬರಿಗೂ ಸಮಾನವಾಗಿ ಬದುಕುವ ಹಕ್ಕಿದೆ. ನನ್ನ ಮಾತಿನಿಂದ ಬೇರೆ ತರಹ ಅರ್ಥ ಆಗಿದ್ದರೆ, ದಯವಿಟ್ಟು ಕ್ಷಮಿಸಿ'' ಎಂದು ಚೈತ್ರ ಕೋಟೂರು ಕೈಮುಗಿದು ಕ್ಷಮೆ ಕೇಳಿದ್ದಾರೆ.

Bigg Boss Kannada 7: Chaitra Kotur Apologizes For Her Comments On Untouchables

ಚೈತ್ರ ಕೋಟೂರು ವಿರುದ್ಧ ನಿನ್ನೆಯಷ್ಟೇ 'ಬಿಗ್ ಬಾಸ್' ಮನೆ ಮುಂದೆ (ಬಿಡದಿ ಬಳಿಯ ಇನೋವೇಟಿವ್ ಫಿಲ್ಮ್ ಸಿಟಿ) ದಲಿತ ಪರ ಸಂಘಟನೆಗಳು ಪ್ರತಿಭಟನೆ ನಡೆಸಿದ್ದರು. ಚೈತ್ರ ಕೋಟೂರು ವಿರುದ್ಧ ಧಿಕ್ಕಾರ ಕೂಗಿ, ಆಕೆಯ ಭಾವಚಿತ್ರ ಇರುವ ಫ್ಲೆಕ್ಸ್ ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತ ಪಡಿಸಿದ್ದರು.

ಚೈತ್ರ ಕೋಟೂರು ಹೇಳಿದ್ದೇನು.?
'ಬಿಗ್ ಬಾಸ್ ಕನ್ನಡ-7' ಕಾರ್ಯಕ್ರಮದಲ್ಲಿ ನಾಲ್ಕನೇ ವಾರದ ನಾಮಿನೇಷನ್ ಪ್ರಕ್ರಿಯೆ ಮುಗಿದ ಮೇಲೆ ಹರೀಶ್ ರಾಜ್ ಬಳಿ ಚರ್ಚೆ ಮಾಡುತ್ತಿದ್ದಾಗ, ''ದೀಪಿಕಾ ದಾಸ್ ಎಲ್ಲರಿಗೂ ತಿನ್ನಿಸುತ್ತಾರೆ, ತಬ್ಬಿಕೊಳ್ಳುತ್ತಾರೆ, ಮುತ್ತು ಕೊಡುತ್ತಾರೆ. ನನ್ನ ಮಾತ್ರ ಮುಟ್ಟಲ್ಲ. ಏನು Untouchables ಆ ನಾವು.? ಅಸ್ಪೃಶ್ಯರಾ ನಾವು..'' ಎಂದು ನಕ್ಕಿದ್ದರು. ಇದೇ ಮಾತು ವಿವಾದಕ್ಕೆ ಕಾರಣವಾಗಿತ್ತು.

More from Filmibeat

English summary
Bigg Boss Kannada 7: Chaitra Kotur apologizes for her comments on Untouchables.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X