For Quick Alerts
  ALLOW NOTIFICATIONS  
  For Daily Alerts

  ಕಿಶನ್ ಆಡಿದ್ದು ಅದೆಂಥ ಮಾತು.? ಚಂದನಾ ಕೆನ್ನೆ ಫುಲ್ ಕೆಂಪು ಕೆಂಪು.!

  |
  Bigg Boss Kannada 7 : Chandana blushes over Kishan's statement

  'ಬಿಗ್ ಬಾಸ್' ಮನೆ ಅಂದ್ಮೇಲೆ ಅಲ್ಲಿ ಲವ್ ಸ್ಟೋರಿಗಳು, ವಾದ-ವಿವಾದಗಳು, ಗದ್ದಲ-ಗೊಂದಲಗಳು ಇರಲೇಬೇಕು. ಹಾಗೇ, ಈ ಆವೃತ್ತಿ... ಅಂದ್ರೆ 'ಬಿಗ್ ಬಾಸ್ ಕನ್ನಡ-7' ಕಾರ್ಯಕ್ರಮದಲ್ಲಿ ಕಮ್ಮಿ ಅಂದರೂ ಎರಡ್ಮೂರು ಪ್ರೇಮ್ ಕಹಾನಿ ಶುರುವಾಗುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿವೆ.

  ಇಂಟ್ರೆಸ್ಟಿಂಗ್ ಅಂದ್ರೆ, ಈಗಾಗಲೇ ಟ್ರೈಯಾಂಗಲ್ ಲವ್ ಸ್ಟೋರಿ ಆರಂಭವಾಗಿದೆ. ಇದು ಸ್ಪಷ್ಟವಾಗಿ ಕಿಚ್ಚ ಸುದೀಪ್ ಕಣ್ಣಿಗೂ ಬಿದ್ದಿದೆ. ಹೀಗಾಗಿ ಲವ್ ಸ್ಟೋರಿ ಅಂತ ಡೈರೆಕ್ಟಾಗಿ ಒತ್ತಿ ಹೇಳದೆ, 'ಟ್ರೈಯಾಂಗಲ್ ಫ್ರೆಂಡ್ ಶಿಪ್' ಎನ್ನುತ್ತಾ 'ವಾರದ ಕಥೆ ಕಿಚ್ಚನ ಜೊತೆ' ಸಂಚಿಕೆಯಲ್ಲಿ ಸುದೀಪ್ ಮಾತಿಗಿಳಿದರು.

  ಎದುರಿಗೆ ಯಾರೇ ಇದ್ದರೂ, ನೇರವಾಗಿ ಮಾತನಾಡುವ ಸ್ವಭಾವ ಕಿಶನ್ ಗಿದೆ. ಹೀಗಾಗಿ, ಟ್ರೈಯಾಂಗಲ್ ಫ್ರೆಂಡ್ ಶಿಪ್ ಬಗ್ಗೆ ಸುದೀಪ್ ಮಾತಿಗಿಳಿದಾಗ 'ಚಂದನಾ'ಗೆ ಟ್ರೈ ಮಾಡುತ್ತಿರುವುದನ್ನ ಕಿಶನ್ ಒಪ್ಪಿಕೊಂಡರು.

  ಒಳಗೊಳಗೆ ಶುರುವಾಗಿದ್ಯಾ ಪ್ರೇಮ್ ಕಹಾನಿ.? ಕಿಚ್ಚನ ಮಾತಿನ ಅರ್ಥವೇನು.?ಒಳಗೊಳಗೆ ಶುರುವಾಗಿದ್ಯಾ ಪ್ರೇಮ್ ಕಹಾನಿ.? ಕಿಚ್ಚನ ಮಾತಿನ ಅರ್ಥವೇನು.?

  ಚಂದನಾ ಮತ್ತು ತಮ್ಮ ನಡುವೆ ಮೂರನೇ ಪಾಯಿಂಟ್ ಆಗಿ ಶೈನ್ ಶೆಟ್ಟಿ ಬಂದಿರುವುದನ್ನೂ ಕಿಶನ್ ಬಹಿರಂಗ ಪಡಿಸಿದರು. ಸದ್ಯಕ್ಕೆ 'ಫ್ರೆಂಡ್ ಶಿಪ್' ಅಂತ ಹೇಳಿರುವ ಕಿಶನ್ ಮುಂದೆ ಅದನ್ನ ಪ್ರೀತಿ ಎಂದರೂ ಅಚ್ಚರಿ ಪಡಬೇಡಿ.

  ಅಂದ್ಹಾಗೆ, ಸುದೀಪ್ ಮುಂದೆ ಇಷ್ಟೆಲ್ಲ ಚರ್ಚೆ ನಡೆಯುತ್ತಿದ್ದಾಗ ಚಂದನಾ ಕೆನ್ನೆ ಕೆಂಪೋ ಕೆಂಪು.!

  English summary
  Bigg Boss Kannada 7: Week 3: Chandana blushes over Kishan's statement.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X