ಜೈಜಗದೀಶ್ 'ಬಿಗ್ ಬಾಸ್' ಆಟ ನೋಡಿ ಮಗಳು ಏನ್ ಹೇಳಿದ್ರು?
ನಟ ಜೈಜಗದೀಶ್ 'ಬಿಗ್ ಬಾಸ್' ಮನೆಯಲ್ಲಿ ಒಂದು ವಾರಗಳನ್ನು ಕಳೆದಿದ್ದಾರೆ. ವೀಕ್ಷಕರ ಜೊತೆಗೆ ಜೈಜಗದೀಶ್ ಕುಟುಂಬ ಕೂಡ ಕಾರ್ಯಕ್ರಮವನ್ನು ನೋಡುತ್ತಿದೆ.
ದಿನನಿತ್ಯ ಕಾರ್ಯಕ್ರಮವನ್ನು ವೀಕ್ಷಿಸುತ್ತಿರುವ ಜೈಜಗದೀಶ್ ಮಗಳು ಅಪ್ಪನನ್ನು ನೋಡಿ ಖುಷಿಪಟ್ಟಿದ್ದಾರೆ. ಅವರ ಆಟದ ಬಗ್ಗೆ ತಮ್ಮ ಅಭಿಪ್ರಾಯವನ್ನು ನಟಿ ವೈಭವಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
''ಅಪ್ಪ ನಿನ್ನ ಬಗ್ಗೆ ನಮಗೆ ಹೆಮ್ಮೆ ಇದೆ. ಅವರು ನಾನ್ ಸೆನ್ಸ್ ವ್ಯಕ್ತಿ ಅಲ್ಲ. ಅವರಲ್ಲಿ ಆಡಂಬರ ಇಲ್ಲ. ಅವರು ತುಂಬ ನೇರ ವ್ಯಕ್ತಿತ್ವ ಉಳ್ಳವರು. ಇದು ಎಲ್ಲರಿಗೂ ಬೇಕಾಗಿರುವುದು ಅಲ್ಲವೇ?. ನಿಮಗೆ ನಮ್ಮ ಪ್ರೋತ್ಸಾಹ ಇದೆ ಅಪ್ಪ. ಚೆನ್ನಾಗಿ ಆಟ ಆಡಿ. ಶಕ್ತಿಯುತವಾಗಿ ಆಟ ಆಡಿ.'' ಎಂದು ಬರೆದುಕೊಂಡಿದ್ದಾರೆ.

'ಬಿಗ್ ಬಾಸ್'ನಲ್ಲಿ 9 ದಿನಗಳು ಉರುಳಿ ಹೋಗಿವೆ. ನಗು, ಅಳು, ಕೋಪ, ಜಗಳ ಎಲ್ಲವೂ ಈಗಾಗಲೇ ಸ್ಪರ್ಧಿಗಳ ನಡುವೆ ಬಂದು ಹೋಗಿದೆ. ಎಲ್ಲ ಸ್ಪರ್ಧಿಗಳ ಜೊತೆಗೆ ಜೈಜಗದೀಶ್ ಹೆಚ್ಚು ಸೇರುತ್ತಿಲ್ಲ. ಅಲ್ಲದೆ, ಕಿಶನ್ ಗೆ ಕೆಟ್ಟ ಪದ ಬಳಕೆ ಮಾಡಿ, ಜೈಜಗದೀಶ್ ಮನಸ್ತಾಪಕ್ಕೆ ಕಾರಣ ಆಗಿದ್ದರು.

ವೈಭವಿ, ವೈಷ್ಣವಿ, ವೈನಿಧಿ ಮೂವರು ಜೈಜಗದೀಶ್ ಅವರ ಪುತ್ರಿಯರು. ಈ ಮೂವರು 'ಯಾನ' ಸಿನಿಮಾದ ಮೂಲಕ ಲಾಂಚ್ ಆಗಿದ್ದಾರೆ.


Click it and Unblock the Notifications











