ಬಿಗ್ ಬಾಸ್ ಮನೆಯ ಲವ್ ಸ್ಟೋರಿಗಳ ಅಸಲಿ ಮುಖ ಬಿಚ್ಚಿಟ್ಟ ಸುಜಾತ

Recommended Video

Exclusive interview with Bigg Boss Sujatha Akshaya | FILMIBEAT KANNADA

ಬಿಗ್ ಬಾಸ್ ಶೋನಲ್ಲಿ ಲವ್ ಸ್ಟೋರಿಗಳು ನಡೆಯುವುದು ಸಾಮಾನ್ಯ. ಈ ಸೀಸನ್ ನಲ್ಲಿ ಯಾವ ಜೋಡಿ ಲವ್ ಬರ್ಡ್ಸ್ ಎನಿಸಿಕೊಳ್ಳುತ್ತಾರೆ ಎನ್ನುವುದು ಬಹಳ ಕುತೂಹಲ ಮೂಡಿಸಿತ್ತು.

ಪ್ರಿಯಾಂಕಾ, ದೀಪಿಕಾ ದಾಸ್, ಭೂಮಿ ಶೆಟ್ಟಿ, ಚಂದನಾ ಎಂಬ ಬ್ಯೂಟಿಫುಲ್ ಹುಡುಗಿಯರು ಬಿಗ್ ಬಾಸ್ ಮನೆಯಲ್ಲಿದ್ದ ಕಾರಣ ಇವರಲ್ಲಿ ಯಾರು ಲವ್ ಬರ್ಡ್ಸ್ ಖ್ಯಾತಿಗೆ ಒಳಗಾಗ್ತಾರೆ ಎಂಬ ಚರ್ಚೆ ಜೋರಾಗಿತ್ತು. ನಿರೀಕ್ಷೆಯಂತೆ ವಾಸುಕಿ ವೈಭವ್, ಶೈನ್ ಶೆಟ್ಟಿ, ಕಿಶನ್ ಹೆಸರುಗಳು ಒಬ್ಬೊಬ್ಬರ ಜೊತೆ ಅಂಟಿಕೊಂಡಿದೆ.

ಇದೀಗ, ಬಿಗ್ ಬಾಸ್ ಮನೆಯಿಂದ ಹೊರಬಂದಿರುವ ಸುಜಾತ, ಬಿಗ್ ಬಾಸ್ ಮನೆಯಲ್ಲಿ ಎಷ್ಟು ಲವ್ ಸ್ಟೋರಿಗಳಿವೆ ಎಂದು ಬಿಚ್ಚಿಟ್ಟಿದ್ದಾರೆ. ಹಾಗಿದ್ರೆ, ಬಿಗ್ ಮನೆಯಲ್ಲಿ ಎಷ್ಟು ಲವ್ ಸ್ಟೋರಿ ಇದೆ? ಮುಂದೆ ಓದಿ.....

ಚಂದನಾ ಅಂದ್ರೆ ಕಿಶನ್ ಗೆ ಇಷ್ಟ

ಚಂದನಾ ಅಂದ್ರೆ ಕಿಶನ್ ಗೆ ಇಷ್ಟ

ಬಿಗ್ ಬಾಸ್ ವೀಕ್ಷಕರು ಗಮನಿಸುತ್ತಿದ್ದಂತೆ ಹಾಗೂ ಸ್ವತಃ ಕಿಶನ್ ಹೇಳಿಕೊಂಡಿರುವಂತೆ, ಚಂದನಾ ಅವರ ಮೇಲೆ ಕಿಶನ್ ಅವರಿಗೆ ಪ್ರೀತಿಯಾಗಿದೆ. ಚಂದನಾ ಅಂದ್ರೆ ತುಂಬಾ ಇಷ್ಟ ಎಂದು ಅವರೇ ಹೇಳಿದ್ದರು. ಇದು ನಿಜ ಇರಬಹುದು ಎಂದು ಸುಜಾತ ಫಿಲ್ಮಿಬೀಟ್ ಜೊತೆ ಮಾತನಾಡಿದ ಸಂದರ್ಶನದಲ್ಲಿ ಹೇಳಿದ್ದಾರೆ. ಆದರೆ, ಚಂದನಾ ಕಡೆಯಿಂದ ಇದಕ್ಕೆ ಯಾವ ಪ್ರತಿಕ್ರಿಯೆ ಸಿಕ್ಕಿಲ್ಲ ಎನ್ನುವುದು ಅಷ್ಟೇ ಸತ್ಯ.

ದೀಪಿಕಾ ಜೊತೆ ಫ್ಲರ್ಟ್ ಕಿಶನ್

ದೀಪಿಕಾ ಜೊತೆ ಫ್ಲರ್ಟ್ ಕಿಶನ್

ಬಿಗ್ ಬಾಸ್ ಮನೆಯ ಲೇಡಿ ಕಿಂಗ್ ಎನಿಸಿಕೊಂಡಿರುವ ದೀಪಿಕಾ ದಾಸ್ ಅಂದ್ರೆ ಕೂಡ ಮನೆಯಲ್ಲಿ ಕೆಲವರಿಗೆ ಒಂಥರಾ ಕ್ರಶ್. ಅವಕಾಶ ಸಿಕ್ಕಾಗೆಲ್ಲಾ ದೀಪಿಕಾ ಅವರ ಜೊತೆ ಫ್ಲರ್ಟ್ ಮಾಡೋಕೆ ಹೋಗ್ತಾರಂತೆ ಕಿಶನ್. ಇದು ಕೂಡ ಮನೆಯಲ್ಲಿ ಗಮನಿಸಿರುವ ವಿಚಾರ ಎಂದು ಸುಜಾತ ತಿಳಿಸಿದ್ದಾರೆ.

ಶೈನ್ ಶೆಟ್ಟಿ ಮತ್ತು ಚಂದನಾ

ಶೈನ್ ಶೆಟ್ಟಿ ಮತ್ತು ಚಂದನಾ

ಮತ್ತೊಂದೆಡೆ ಚಂದನಾ ಮತ್ತು ಶೈನ್ ಶೆಟ್ಟಿ ಅವರ ಆತ್ಮೀಯತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಎಂದು ಸುಜಾತ ಅಭಿಪ್ರಾಯ ಪಟ್ಟಿದ್ದಾರೆ. ಚಂದನಾ ಅವರು ಶೈನ್ ಜೊತೆ ಇರಲು ಹೆಚ್ಚು ಇಷ್ಟ ಪಡ್ತಾರೆ, ಅವರ ಜೊತೆಯಲ್ಲಿ ಹೆಚ್ಚು ಸಮಯ ಕಳೆಯುತ್ತಾರೆ, ಅದು ಪ್ರೀತಿನಾ ಅಥವಾ ಸ್ನೇಹನಾ ಗೊತ್ತೇ ಆಗಲ್ಲ ಎಂದು ಈ ಜೋಡಿಯ ಮೇಲೂ ಅನುಮಾನ ವ್ಯಕ್ತಪಡಿಸಿದ್ದಾರೆ ಸುಜಾತ.

ವಾಸುಕಿ ಇನ್ನು ಕನ್ ಫ್ಯೂಶನ್

ವಾಸುಕಿ ಇನ್ನು ಕನ್ ಫ್ಯೂಶನ್

ವಾಸುಕಿ ಅವರ ನಡೆಯ ಬಗ್ಗೆ ಸುಜಾತ ಅವರೇ ಗೊಂದಲ ವ್ಯಕ್ತಪಡಿಸಿದ್ದಾರೆ. ವಾಸುಕಿ ಒಂದೊಂದು ಸಂದರ್ಭದಲ್ಲಿ ಒಂದೊಂದು ರೀತಿ ಇರ್ತಾರೆ. ಅವರನ್ನು ಅರ್ಥ ಮಾಡಿಕೊಳ್ಳುವುದು ಕಷ್ಟ. ಆದರೆ, ವಾಸುಕಿ ಕೂಡ ಈ ಲವ್ ಸ್ಟೋರಿಗಳಲ್ಲಿ ಇದ್ದಾರೆ ಎಂದು ಸುಜಾತ ಬಹಿರಂಗಪಡಿಸಿದ್ದಾರೆ.

More from Filmibeat

English summary
Bigg Boss Kannada 7: Radha Ramana fame Sujatha eliminated from bigg boss. she shared experience about bigg boss show.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X