Star Suvarna Jackpot: ಸ್ಟಾರ್ ಸುವರ್ಣ ಜಾಟ್ ಪಾಟ್‌ನಲ್ಲಿ ಬಿಗ್ ಬಾಸ್ ಸ್ಪರ್ಧಿಗಳು : ರಿಯಾಲಿಟಿ ಶೋನಲ್ಲಿ ಸಖತ್ ಟ್ವಿಸ್ಟ್!

By ಅನಿತಾ ಬನಾರಿ

ಬಿಗ್ ಬಾಸ್ ಸೀಸನ್ 10 ಬಹಳಷ್ಟು ಜನ ಮೆಚ್ಚುಗೆ ಪಡೆದಿರುವಂತೆಯೇ ಸ್ಟಾರ್ ಸುವರ್ಣದಲ್ಲಿ ಇದೀಗ ಹೊಸದೊಂದು ರಿಯಾಲಿಟಿ ಶೋ ಹೊರಬರಲಿದೆ. ಅಷ್ಟಕ್ಕೂ ಸ್ಟಾರ್ ಸುವರ್ಣ ರಿಯಾಲಿಟಿ ಶೋಗೂ ಬಿಗ್ ಬಾಸ್‌ಗೂ ಏನಪ್ಪಾ ಸಂಬಂಧ ಅಂತ ಯೋಚಿಸ್ತಿದ್ದೀರಾ? ಖಂಡಿತಾ ಸಂಬಂಧ ಇದೆ.

ಕಲರ್ಸ್ ಕನ್ನಡದಲ್ಲಿ ವರ್ಷಗಳಿಂದ ಪ್ರಸಾರವಾಗುತ್ತಿರುವ ಬಿಗ್ ಬಾಸ್ ರಿಯಾಲಿಟಿ ಶೋ ನಮ್ಮೆಲ್ಲರಿಗೂ ಚಿರಪರಿಚಿತ. ಇದೀಗ ಬಿಗ್ ಬಾಸ್ ರಿಯಾಲಿಟಿ ಶೋ ಸೀಸನ್ 7ರ ಸ್ಪರ್ಧಿಗಳು ಸುವರ್ಣ ಚಾನೆಲ್‌ನಲ್ಲಿ ಪ್ರಸಾರಗೊಳ್ಳುತ್ತಿರುವ 'ಸುವರ್ಣ ಜಾಕ್ ಪಾಟ್' ಎಂಬ ಹೊಸ ರಿಯಾಲಿಟಿ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ.

Bigg Boss Kannada 7 contestants Shine Shetty Deepika Das in Star Suvarna Jackpot

ಹೌದು.. ಬಿಗ್ ಬಾಸ್ ಸೀಸನ್ 7ರ ಫೇಮಸ್ ಸ್ಪರ್ಧಿಗಳಾದ ಶೈನ್ ಶೆಟ್ಟಿ, ದೀಪಿಕಾ ದಾಸ್, ಪ್ರಿಯಾಂಕಾ ಶಿವಣ್ಣ, ಆರ್ ಜೆ ಪೃಥ್ವಿ ಮುಂತಾದವರು ಈ ಜಾಕ್ ಪಾಟ್ ಎಂಬ ರಿಯಾಲಿಟಿ ಶೋನಲ್ಲಿ ಭಾಗವಹಿಸುತ್ತಿದ್ದು, ಅದರ ಪ್ರೋಮೋ ಈಗಾಗಲೇ ಬಿಡುಗಡೆಯಾಗಿದೆ. ಈ ಪ್ರೋಮೊ ನೋಡಿ ಸಖತ್ ಕ್ಯೂರಿಯಸ್ ಆಗಿರುವ ಪ್ರೇಕ್ಷಕರು ಕಾರ್ಯಕ್ರಮದ ಆರಂಭಕ್ಕೆ ಕಾಯುತ್ತಿದ್ದಾರೆ.

ಅಂದ ಹಾಗೆ, ನಟಿ ನಿರೂಪಕಿ ಅನುಪಮ ಗೌಡ ಅವರು ಈ ಕಾರ್ಯಕ್ರಮವನ್ನು ನಿರೂಪಿಸಲಿದ್ದು, ಸ್ಯಾಂಡಲ್ ವುಡ್‌ನ ನೆಚ್ಚಿನ ಜೋಡಿ ಮಿಲನಾ ನಾಗರಾಜ್ ಹಾಗೂ ಡಾರ್ಲಿಂಗ್ ಕೃಷ್ಣ ಕೂಡ ಈ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಕಾರ್ಯಕ್ರಮದ ವಿಶೇಷವೇನೆಂದರೆ, ಸ್ಪರ್ಧಿಗಳು 50 ಲಕ್ಷದವರೆಗೆ ಬಹುಮಾನ ಗೆಲ್ಲುವ ಅವಕಾಶ ಇದೆ. 50 ಲಕ್ಷದವರೆಗಿನ ಫ್ರಿಜ್ ಟಿವಿ ಅಥವಾ ಇತರ ಗೃಹ ಉಪಯೋಗಿ ವಸ್ತುಗಳನ್ನು ಗೆಲ್ಲುವ ವಿಶೇಷ ಅವಕಾಶ ಈ ಸೆಲೆಬ್ರಿಟಿಗಳಿಗೆ ಸಿಗುತ್ತದೆ. ಅದಕ್ಕಾಗಿಯೇ ಒಂದಷ್ಟು ಗೇಮ್ ಗಳನ್ನು ಆಯೋಜಿಸಿದ್ದು, ಹಂತ ಹಂತವಾಗಿ ಆಟಗಳಲ್ಲಿ ಗೆಲ್ಲುತ್ತ ಮುಂದೆ ಹೋದವರೇ ವಿನ್ನರ್.

Bigg Boss Kannada 7 contestants Shine Shetty Deepika Das in Star Suvarna Jackpot

ಬಿಗ್ ಬಾಸ್ ಸೀಸನ್ ಏಳರಲ್ಲಿ ಜನ ಮೆಚ್ಚಿದ ಜೋಡಿ ಎನಿಸಿಕೊಂಡಿದ್ದ ಶೈನ್ ಶೆಟ್ಟಿ ಹಾಗೂ ದೀಪಿಕಾ ದಾಸ್ ಅವರು ಈ ಶೋನಲ್ಲಿ ಮತ್ತೆ ಬಂದಿರುವುದು ಪ್ರೇಕ್ಷಕರಿಗಂತೂ ಫುಲ್ ಖುಷಿ ತಂದಿದೆ. ಮನರಂಜನೆ, ಡ್ಯಾನ್ಸ್, ಆಟ, ಮೋಜು ಹೀಗೆ ಬೇರೆ ಬೇರೆ ರೀತಿಯಲ್ಲಿ ಈ ಶೋ ಜನರನ್ನು ರಂಜಿಸಲಿದೆ.

ಇನ್ನು ಇದರಲ್ಲಿರುವ ಮೆಮೋರಿ ಗೇಮ್ ಬಹಳ ಇಂಟರೆಸ್ಟಿಂಗ್ ಆಗಿದೆ ಎಂಬ ಮಾಹಿತಿ ಹೊರಬಂದಿದೆ. ಒಟ್ಟಿನಲ್ಲಿ ಬಿಗ್ ಬಾಸ್ ಸೀಸನ್ ಏಳರ ಫೇವರೆಟ್ ಸ್ಪರ್ಧಿಗಳು ಈ ರಿಯಾಲಿಟಿ ಶೋನಲ್ಲಿ ಭಾಗವಹಿಸುತ್ತಿದ್ದು ಹಂತ ಹಂತವಾಗಿ ಹತ್ತು ಹಲವು ಮಜಲುಗಳನ್ನು ಹೊಂದಿರುವ ಈ ಶೋ ಇದೇ ಭಾನುವಾರ 27ರಂದು ಆರಂಭಗೊಳ್ಳಲಿದೆ.

More from Filmibeat

English summary
Anupama Gowda will be hosting new reality show Jackpot in Star Suvarna:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X