'ಬಿಗ್ ಬಾಸ್' ಮನೆಯೊಳಗೂ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಸದ್ದು.!

Recommended Video

Bigg Boss Kannada 7 : Ravi Belagere Explosive revelations about Gauri Lankesh

'ಬಿಗ್ ಬಾಸ್' ಮನೆಯೊಳಗೆ ಪತ್ರಕರ್ತ, 'ಹಾಯ್ ಬೆಂಗಳೂರು' ಪತ್ರಿಕೆಯ ಪ್ರಧಾನ ಸಂಪಾದಕ ರವಿ ಬೆಳಗೆರೆ ಹೋಗ್ತಾರೆ ಅಂದಾಗಲೇ ವೀಕ್ಷಕರಿಗೆ ಕುತೂಹಲ ಇಮ್ಮಡಿ ಆಗಿತ್ತು. ಹಲವರಿಗಂತೂ ಹಾರ್ಟ್ ಬೀಟ್ ರೈಸ್ ಆಗಿತ್ತು. ಯಾಕಂದ್ರೆ, ರಾಜಕಾರಣಿಗಳು, ಸೆಲೆಬ್ರಿಟಿಗಳು ಸೇರಿದಂತೆ ಅನೇಕ ಪ್ರಭಾವಿಗಳ ಜೊತೆ ಒಡನಾಟ ಹೊಂದಿರುವ ರವಿ ಬೆಳಗೆರೆ ಯಾವಾಗ, ಯಾರ ಬಗ್ಗೆ ಬಾಯಿ ಬಿಡುತ್ತಾರೋ ಅಂತಲೇ ಕಣ್ಣು-ಬಾಯಿ ಬಿಟ್ಟುಕೊಂಡು ಕೆಲವರು ಕಾಯುತ್ತಿದ್ದಾರೆ. ಹೀಗಿರುವಾಗಲೇ, ಗೌರಿ ಲಂಕೇಶ್ ಕೇಸ್ ಬಗ್ಗೆ ರವಿ ಬೆಳಗೆರೆ ಕಾಮೆಂಟ್ ಮಾಡಿದ್ದಾರೆ.

'ಬಿಗ್ ಬಾಸ್' ಮನೆ ಪ್ರವೇಶ ಮಾಡಿದ್ಮೇಲೆ ಇತರೆ ಸ್ಪರ್ಧಿಗಳ ಜೊತೆಗೆ ಹರಟೆ ಹೊಡೆಯುತ್ತಾ ಕಾಲ ಕಳೆಯುತ್ತಿರುವ ರವಿ ಬೆಳಗೆರೆ ಸದ್ಯ 'ಗೌರಿ ಲಂಕೇಶ್ ಹತ್ಯೆ' ಪ್ರಕರಣದ ಬಗ್ಗೆ ಕೆಲ ಮಾಹಿತಿಯನ್ನ ಹೊರ ಹಾಕಿದ್ದಾರೆ.

ಹಾಗ್ನೋಡಿದ್ರೆ, ಪತ್ರಕರ್ತೆ ಗೌರಿ ಲಂಕೇಶ್ ಗೆ ರವಿ ಬೆಳಗೆರೆ ಅತ್ಯಾಪ್ತರು. ಗೌರಿ ಲಂಕೇಶ್ ಹತ್ಯೆಗೀಡಾದಾಗ ''ಸುಂದರವಾದ ಮಡಿಕೆಯನ್ನ ಕೋಲಿನಿಂದ ಒಡೆದು ಹಾಕಿದಂತೆ ಆಯಿತು'' ಎಂದು ಬಹಳ ನೋವಿನಿಂದ ರವಿ ಬೆಳಗೆರೆ ಹೇಳಿದ್ದರು. ಇದೀಗ 'ಬಿಗ್ ಬಾಸ್' ಮನೆಯೊಳಗೆ ಇದೇ ಪ್ರಕರಣದ ಕುರಿತು ಅವರೇನಂದ್ರು ಅಂದ್ರೆ....

ಒಂದು ಆಯುಧ, ನಾಲ್ಕು ಮರ್ಡರ್

ಒಂದು ಆಯುಧ, ನಾಲ್ಕು ಮರ್ಡರ್

''ಗೌರಿ ಲಂಕೇಶ್ ಮರ್ಡರ್ ಕೇಸ್ ನಲ್ಲಿ ಬಹಳ ನಿಗೂಢ ಅನಿಸಿದ್ದು ಏನು ಅಂತಂದ್ರೆ, ಅಮೋಲ್ ಕಾಳೆ ಒಂದೇ ಆಯುಧ ಇಟ್ಟುಕೊಂಡು ಬೇರೆ ಬೇರೆಯವರ ಬಳಿ ನಾಲ್ಕು ಮರ್ಡರ್ ಮಾಡಿಸುತ್ತಾನೆ'' ಅಂತ 'ಬಿಗ್ ಬಾಸ್' ಮನೆಯೊಳಗೆ ರವಿ ಬೆಳಗೆರೆ ಹೇಳಿದ್ದಾರೆ.

ಅವತ್ತು ಗೌರಿಗೆ ಏನಾಯ್ತು.?

ಅವತ್ತು ಗೌರಿಗೆ ಏನಾಯ್ತು.?

''ಅವತ್ತು ಗೌರಿಗೆ ಮಧ್ಯಾಹ್ನ ಆಕೆಯ ತಂಗಿ ಚಪಾತಿ-ಪಲ್ಯ ಮಾಡಿ ಕೊಟ್ಟಿರುತ್ತಾಳೆ. ಆ ಟಿಫನ್ ಕ್ಯಾರಿಯರ್ ತಗೊಂಡು ಗೇಟ್ ತೆಗೆದು ಕಾರ್ ಪಾರ್ಕ್ ಮಾಡೋಕೆ ಗೌರಿ ಬರ್ತಾರೆ. ಆಗ ಆಕೆಯನ್ನ ಶೂಟ್ ಮಾಡಿದರು. ಓಡಿದಾಗ ಮತ್ತೆ ಮೂರು ಬುಲೆಟ್ ಹಾರಿಸ್ತಾರೆ'' - ರವಿ ಬೆಳಗೆರೆ

ಹತ್ತು ಸಾವಿರ ಪುಟಗಳ ಚಾರ್ಜ್ ಶೀಟ್

ಹತ್ತು ಸಾವಿರ ಪುಟಗಳ ಚಾರ್ಜ್ ಶೀಟ್

''ಸಿಸಿಟಿವಿಯಲ್ಲಿ ಸೆರೆಯಾಗಿರುವುದು ಶೂಟ್ ಮಾಡಿದ ಮಾಸ್ಕ್ ಧರಿಸಿರುವ ಯುವಕನ ನಾಲ್ಕು ಸೆಕೆಂಡ್ ಗಳ ದೃಶ್ಯ. ಇದನ್ನ ಇಟ್ಟುಕೊಂಡು ಎಂಟು ತಿಂಗಳು ಬೆಂಗಳೂರು ಪೊಲೀಸರು ಹುಚ್ಚರಾಗಿಬಿಟ್ಟರು. ಇದೇ ಪ್ರಕರಣಕ್ಕೆ ಸಂಬಂಧಪಟ್ಟ ಹಾಗೆ ಒಂದು ಚಾರ್ಜ್ ಶೀಟ್ ಫೈಲ್ ಮಾಡ್ತಾರೆ. ಎಫ್.ಐ.ಆರ್ ಆದ್ಮೇಲೆ ಹಾಕಿರುವ ದೋಷಾರೋಪಣಾ ಪಟ್ಟಿಯಲ್ಲಿ ಹತ್ತು ಸಾವಿರ ಪುಟಗಳಿವೆ'' - ರವಿ ಬೆಳಗೆರೆ

ಶಾಕ್ ಆದ ಸ್ಪರ್ಧಿಗಳು.!

ಶಾಕ್ ಆದ ಸ್ಪರ್ಧಿಗಳು.!

ದೋಷಾರೋಪಣಾ ಪಟ್ಟಿಯಲ್ಲಿ ಹತ್ತು ಸಾವಿರ ಪುಟಗಳಿವೆ ಎಂಬ ಸಂಗತಿಯನ್ನ ರವಿ ಬೆಳಗೆರೆ ಹೇಳುತ್ತಿದ್ದಂತೆಯೇ ಇತರೆ ಸ್ಪರ್ಧಿಗಳು ಶಾಕ್ ಆದರು.

More from Filmibeat

English summary
Bigg Boss Kannada 7: Day 1: Ravi Belagere comments on Gauri Lankesh murder case.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X