ರವಿ ಬೆಳಗೆರೆ ಔಟ್ ಅಂಡ್ ಇನ್: ಸುದ್ದಿ ಆಗಿದ್ದೇ ಒಂದು, ನಡೆದಿರೋದು ಮತ್ತೊಂದು.!
Recommended Video
ಮೊನ್ನೆ ಸೋಮವಾರ ಮಧ್ಯಾಹ್ನದ ಹೊತ್ತಿಗೆ ದಿಢೀರನೆ ಬಂದ ಬ್ರೇಕಿಂಗ್ ನ್ಯೂಸ್ ಪ್ರಕಾರ, 'ಬಿಗ್ ಬಾಸ್' ಮನೆಯೊಳಗೆ ರವಿ ಬೆಳಗೆರೆ ಕುಸಿದು ಬಿದ್ದರು. ಅನಾರೋಗ್ಯದ ಕಾರಣ 'ಬಿಗ್ ಬಾಸ್' ಅನುಮತಿ ಪಡೆದು ರವಿ ಬೆಳಗೆರೆ ಶೋನಿಂದ ಹೊರಬಂದಿದ್ದಾರೆ ಎನ್ನಲಾಗಿತ್ತು.
'ಬಿಗ್ ಬಾಸ್' ಮನೆಯಿಂದಾಚೆ ಬಂದ್ಮೇಲೆ ಚಿಕಿತ್ಸೆ ಪಡೆದ ರವಿ ಬೆಳಗೆರೆ ವಾಪಸ್ 'ಒಂಟಿ ಮನೆ'ಗೆ ತೆರಳಿದ್ದಾರೆ ಎಂಬ ಸುದ್ದಿಯೂ ಅವತ್ತೇ ಬ್ರೇಕ್ ಆಯ್ತು. ಆದ್ರೆ, ಅಸಲಿಗೆ, 'ಬಿಗ್ ಬಾಸ್' ಮನೆಯೊಳಗೆ ರವಿ ಬೆಳಗೆರೆ ಕುಸಿದು ಬೀಳಲಿಲ್ಲ. 'ಬಿಗ್ ಬಾಸ್' ಅನುಮತಿ ಪಡೆದು ರವಿ ಬೆಳಗೆರೆ ವಾಪಸ್ ಹೋಗುವ ಮಾತೂ ಆಡಲಿಲ್ಲ. ಅಷ್ಟಕ್ಕೂ, ನಡೆದಿದ್ದು ಏನು ಅಂದ್ರೆ....

ಬೆಳಗ್ಗೆ 6.50
ಆಗಿನ್ನೂ ಬೆಳಗ್ಗೆ 6.50 ರ ಸಮಯ. ಬಹುತೇಕ ಎಲ್ಲ ಸ್ಪರ್ಧಿಗಳು ನಿದ್ದೆ ಮಾಡುತ್ತಿದ್ದರು. ಇತ್ತ ಎಚ್ಚರಗೊಂಡು ಬಾತ್ ರೂಮ್ ಕಡೆ ಮುಖ ಮಾಡಿದ ರವಿ ಬೆಳಗೆರೆಗೆ ಸುಸ್ತು ಕಾಣಿಸಿಕೊಂಡಿತು. ಮೊದಲೇ ಶುಗರ್ ಪೇಷೆಂಟ್ ಆಗಿರುವ ರವಿ ಬೆಳಗೆರೆ ''ನನಗೆ ಆಂಬ್ಯುಲೆನ್ಸ್ ಅವಶ್ಯಕತೆ ಇದೆ. ತಕ್ಷಣ ಕಳುಹಿಸಿಕೊಡಿ. ಪ್ಲೀಸ್'' ಎಂದು ಕ್ಯಾಮರಾ ಮುಂದೆ ಕೇಳಿಕೊಂಡರು. ರವಿ ಬೆಳಗೆರೆ ಕೋರಿಕೆಗೆ 'ಬಿಗ್ ಬಾಸ್' ತಕ್ಷಣ ಸ್ಪಂದಿಸಿದರು.

ಸಂಜೆ ವಾಪಸ್ ಬಂದ ರವಿ ಬೆಳಗೆರೆ
ಬೆಳಗ್ಗೆ ಹೊರಗೆ ಹೋದ ರವಿ ಬೆಳಗೆರೆ ಸಂಜೆ 6.05 ರ ಸುಮಾರಿಗೆ ಪುನಃ 'ಬಿಗ್ ಬಾಸ್' ಮನೆಯೊಳಗೆ ಕಾಲಿಟ್ಟರು. ಹಾಗೆ ಬರುತ್ತಿದ್ದಂತೆಯೇ ''ಒಂದು ಸತ್ಯ ಹೇಳ್ತೀನಿ. ನಾನು ನನ್ನ ಫ್ಯಾಮಿಲಿಯನ್ನೂ ಮಿಸ್ ಮಾಡಿಕೊಂಡಿಲ್ಲ. ಆದ್ರೆ ನಿಮ್ಮನ್ನೆಲ್ಲ ತುಂಬಾ ಮಿಸ್ ಮಾಡಿಕೊಂಡೆ'' ಎಂದರು.

ಶುಗರ್ ಪೇಷೆಂಟ್
''26 ವರ್ಷಗಳಿಂದ ನಾನು ಡಯಾಬಿಟಿಕ್ ಪೇಷೆಂಟ್. ಬಿಪಿ ಕೂಡ ಬಂದಿದೆ. ಶುಗರ್ ಲೆವೆಲ್ ನಲ್ಲಿ ಏರುಪೇರಾದ ಅನುಭವ ಆಯ್ತು. ಮುನ್ನೆಚ್ಚರಿಕೆ ಕ್ರಮವಾಗಿ ವೈದ್ಯರನ್ನು ಭೇಟಿ ಆಗಬೇಕು ಎಂದು ಕೇಳಿಕೊಂಡೆ'' ಎಂದು ಇತರೆ ಸ್ಪರ್ಧಿಗಳಿಗೆ ರವಿ ಬೆಳಗೆರೆ ವಿವರಿಸಿದರು.

ಕಣ್ಣಿಗೆ ಪಟ್ಟಿ
ತಮ್ಮ ಪರ್ಸನಲ್ ಡಾಕ್ಟರ್ ರನ್ನು ಭೇಟಿ ಆಗಬೇಕೆಂದು ರವಿ ಬೆಳಗೆರೆ ಕೇಳಿಕೊಂಡಾಗ, ಅನುಮತಿ ನೀಡಿದ 'ಬಿಗ್ ಬಾಸ್' ದಿನ-ಸಮಯ ಗೊತ್ತಾಗಬಾರದು ಎಂಬ ಕಾರಣಕ್ಕೆ ಅವರ ಕಣ್ಣಿಗೆ ಪಟ್ಟಿ ಕಟ್ಟಿ ಕಳುಹಿಸಿಕೊಟ್ಟರಂತೆ.


Click it and Unblock the Notifications











