ರವಿ ಬೆಳಗೆರೆ ಅಭಿಮಾನಿಗಳಿಗೆ ಬೇಸರದ ಸುದ್ದಿಯೊಂದು ಇಲ್ಲಿದೆ.!

Recommended Video

Bigg Boss Kannada 7 : Shocking news Ravi Belagere Unwell to Stay In Bigg Boss House| Filmibeat Kannada

'ಬಿಗ್ ಬಾಸ್ ಕನ್ನಡ-7' ಕಾರ್ಯಕ್ರಮದಲ್ಲಿ ರವಿ ಬೆಳಗೆರೆ ಭಾಗವಹಿಸುತ್ತಾರೆ ಅಂತ ಗೊತ್ತಾದ ಕೂಡಲೆ ''ಈ ಬಾರಿ ಟಿ.ಆರ್.ಪಿ ಗ್ಯಾರೆಂಟಿ. ಕಂಟೆಂಟ್ ಗೆ ಯಾವುದೇ ಕೊರತೆ ಇಲ್ಲ'' ಅಂತಲೇ ಹಲವರು ಲೆಕ್ಕಾಚಾರ ಹಾಕಿದ್ದರು.

ಪ್ರಭಾವಿಗಳನ್ನು ಬಲ್ಲ ರವಿ ಬೆಳಗೆರೆ 'ಬಿಗ್ ಬಾಸ್' ಮನೆಯೊಳಗೆ ಒಂದಾದ ಮೇಲೊಂದರಂತೆ ಬಾಂಬ್ ಗಳನ್ನು ಸ್ಫೋಟಿಸಬಹುದು ಎಂದು ವೀಕ್ಷಕರು ಕಾಯುತ್ತಿದ್ದರು.

ಆದ್ರೀಗ, ರವಿ ಬೆಳಗೆರೆ ಅಭಿಮಾನಿಗಳ ನಿರೀಕ್ಷೆಗೆ ಬಕೆಟ್ ಗಟ್ಟಲೆ ತಣ್ಣೀರು ಎರಚಿದಂತಾಗಿದೆ. 'ಬಿಗ್ ಬಾಸ್' ಮನೆಯೊಳಗೆ ರವಿ ಬೆಳಗೆರೆ ಇದೀಗ ಜಸ್ಟ್ ಗೆಸ್ಟ್ ಅಷ್ಟೇ. ಈ ಶನಿವಾರದವರೆಗೆ ಮಾತ್ರ ಅವರು 'ಒಂಟಿ ಮನೆ'ಯೊಳಗೆ ಇರ್ತಾರೆ. ಮುಂದೆ ಓದಿರಿ....

ಮೊದಲ ದಿನವೇ ಅನಾರೋಗ್ಯ

ಮೊದಲ ದಿನವೇ ಅನಾರೋಗ್ಯ

'ಬಿಗ್ ಬಾಸ್' ಮನೆಯೊಳಗೆ ಕಾಲಿಟ್ಟ ಮೊದಲ ದಿನವೇ ರವಿ ಬೆಳಗೆರೆ ರವರಿಗೆ ಶುಗರ್ ಲೆವೆಲ್ ನಲ್ಲಿ ಏರುಪೇರು ಉಂಟಾಯ್ತು. ಹೊರಗೆ ಹೋಗಿ ಚಿಕಿತ್ಸೆ ಪಡೆದು ವಾಪಸ್ ಬಂದ ಬಳಿಕ ವೈದ್ಯರ ಸಲಹೆ ಮೇರೆಗೆ ರವಿ ಬೆಳಗೆರೆ ರವರನ್ನು ಆಟದಲ್ಲಿ ಮುಂದುವರೆಸದಿರಲು 'ಬಿಗ್ ಬಾಸ್' ನಿರ್ಧರಿಸಿದ್ದಾರೆ.

'ಬಿಗ್ ಬಾಸ್' ಘೋಷಣೆ

'ಬಿಗ್ ಬಾಸ್' ಘೋಷಣೆ

''ಡಾಕ್ಟರ್ ಸಲಹೆಯ ಮೇರೆಗೆ ರವಿ ಬೆಳಗೆರೆಯವರು ಆಟದಲ್ಲಿ ಮುಂದುವರೆಯಲು ಸಾಧ್ಯವಾಗುತ್ತಿಲ್ಲ. ಆದರೆ ಈ ಶನಿವಾರದ ತನಕ ಅವರು ಈ ಮನೆಯಲ್ಲಿ ಮುಂದುವರೆಯುತ್ತಾರೆ. ಅವರನ್ನು ಅತಿಥಿಯಂತೆ ನೋಡಿಕೊಳ್ಳುವುದು ನಿಮ್ಮ ಜವಾಬ್ದಾರಿ'' ಎಂದು 'ಬಿಗ್ ಬಾಸ್' ಘೋಷಿಸಿದ್ದಾರೆ.

ವೋಟ್ ಮಾಡಬೇಡಿ

ವೋಟ್ ಮಾಡಬೇಡಿ

ಇನ್ನೂ ''ವೀಕ್ಷಕರು ಗಮನಿಸಿ: ರವಿ ಬೆಳಗೆರೆಯವರು ಅತಿಥಿಯಾಗಿ ಮನೆಯಲ್ಲಿ ಮುಂದುವರೆಯುತ್ತಿರುವುದರಿಂದ ಅವರ ವೋಟಿಂಗ್ ಲೈನ್ ಕ್ಲೋಸ್ ಆಗಿದೆ'' ಎಂಬ ಸೂಚನೆ 'ಬಿಗ್ ಬಾಸ್' ಕಡೆಯಿಂದ ಸಿಕ್ಕಿದೆ.

ನಿಮ್ಮ ಪ್ರತಿಕ್ರಿಯೆ ಏನು.?

ನಿಮ್ಮ ಪ್ರತಿಕ್ರಿಯೆ ಏನು.?

'ಬಿಗ್ ಬಾಸ್' ನೀಡಿರುವ ಈ ಸಡನ್ ಟ್ವಿಸ್ಟ್ ಗೆ ನಿಮ್ಮ ಪ್ರತಿಕ್ರಿಯೆ ಏನು.? ನಿಮ್ಮ ಅಭಿಪ್ರಾಯವನ್ನು ನಮಗೆ ತಿಳಿಸಿ.. ಕೆಳಗಿರುವ ಕಾಮೆಂಟ್ ಬಾಕ್ಸ್ ಮೂಲಕ.

More from Filmibeat

English summary
Bigg Boss Kannada 7: Day 1: Ravi Belagere to continue as a guest, not contestant in Bigg Boss house.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X