For Quick Alerts
  ALLOW NOTIFICATIONS  
  For Daily Alerts

  ಇಡೀ ರಾತ್ರಿ ಲಾಟೀನ್ ಕೈಬಿಡದ ಹರೀಶ್ ರಾಜ್ ಗೆ ಭೇಷ್ ಎನ್ನಲೇಬೇಕು.!

  |

  'ಬಿಗ್ ಬಾಸ್ ಕನ್ನಡ-7' ಕಾರ್ಯಕ್ರಮದಲ್ಲಿ ಕೊನೆಯ ಸ್ಪರ್ಧಿಯಾಗಿ 'ದೊಡ್ಮನೆ'ಯೊಳಗೆ ಕಾಲಿಟ್ಟವರು ನಟ ಹರೀಶ್ ರಾಜ್. 'ಬಿಗ್ ಬಾಸ್' ಮನೆಯಲ್ಲಿ ಯಾರೊಂದಿಗೂ ಕಿತ್ತಾಡದೆ, ಭಿನ್ನಾಭಿಪ್ರಾಯಕ್ಕೆ ಆಸ್ಪದ ಕೊಡದೆ ಸೇಫ್ ಆಗಿ ಆಟ ಆಡುತ್ತಿರುವ ಹರೀಶ್ ರಾಜ್ ಇದೀಗ ಪ್ರಬಲ ಸ್ಪರ್ಧಿಯಾಗಿ ಹೊರಹೊಮ್ಮುತ್ತಿದ್ದಾರೆ.

  'ಬಿಗ್ ಬಾಸ್ ದರ್ಬಾರ್' ಟಾಸ್ಕ್ ನಡುವೆ ಎಲ್ಲಾ ಸ್ಪರ್ಧಿಗಳಿಗೂ ಲಾಟೀನ್ ಹಿಡಿಯುವ ಚಟುವಟಿಕೆಯನ್ನ 'ಬಿಗ್ ಬಾಸ್' ನೀಡಿದ್ದಾರೆ. ಲಾಟೀನ್ ಕೈಗೆ ಬಂದ ಕೂಡಲೆ ಸ್ಪರ್ಧಿಗಳು ಸದಾ ಕಾಲ ನಿಂತಿರಬೇಕು ಅಥವಾ ಓಡಾಡುತ್ತಿರಬೇಕು. ಅಪ್ಪಿ-ತಪ್ಪಿಯೂ ಲಾಟೀನ್ ಹಿಡಿದ ಸ್ಪರ್ಧಿ ಕೂರುವಂತಿಲ್ಲ. ಲಾಟೀನ್ ನ ಕೆಳಗೆ ಇಡುವಂತಿಲ್ಲ.

  'ಬಿಗ್ ಬಾಸ್' ಸಾಮ್ರಾಜ್ಯದಲ್ಲಿ 'ರಾಜ' ಜೈಜಗದೀಶ್ ದರ್ಬಾರ್.!'ಬಿಗ್ ಬಾಸ್' ಸಾಮ್ರಾಜ್ಯದಲ್ಲಿ 'ರಾಜ' ಜೈಜಗದೀಶ್ ದರ್ಬಾರ್.!

  ಲಾಟೀನ್ ಹಿಡಿಯುವ ಸರದಿ ಹರೀಶ್ ರಾಜ್ ಗೆ ಬಂದಾಗ ರಾತ್ರಿ ಸುಮಾರು 9.30 ಆಗಿತ್ತು. ಬೆಳಗಿನ ಜಾವ 6 ಗಂಟೆವರೆಗೂ ಲಾಟೀನ್ ಹಿಡಿದಿದ್ದಾರೆ ಹರೀಶ್ ರಾಜ್. ಇಡೀ ರಾತ್ರಿ ನಿದ್ದೆ ಮಾಡದೆ, ಎಲ್ಲೂ ಕೂರದೆ, ಏಕಾಗ್ರತೆ ಕಳೆದುಕೊಳ್ಳದೆ ತಮ್ಮ ಪಾಲಿನ ಲಾಟೀನ್ ಟಾಸ್ಕ್ ಪೂರ್ಣಗೊಳಿಸಿದ್ದಾರೆ ಹರೀಶ್ ರಾಜ್.

  ಕ್ಯಾಮರಾಗಳೊಂದಿಗೆ ಮಾತನಾಡುತ್ತ, ಕೆಲವರನ್ನು ಅನುಕರಣೆ ಮಾಡುತ್ತಾ ಇಡೀ ರಾತ್ರಿ ನಿದ್ದೆ ಇಲ್ಲದೆ ಹರೀಶ್ ರಾಜ್ ಕಳೆದಿದ್ದಾರೆ. ರಾತ್ರಿ ಹೊತ್ತು ಏಕಾಂಗಿಯಾಗಿ ಟಾಸ್ಕ್ ಮಾಡಿದರೆ ಜನ ಗುರುತಿಸುತ್ತಾರೆ ಎಂಬ ಸ್ಟ್ರಾಟೆಜಿ ಈಗಾಗಲೇ 'ಬಿಗ್ ಬಾಸ್' ಮನೆಯಲ್ಲಿ ಹಲವರಲ್ಲಿ ಇದೆ.

  ಆಪಲ್ ಆಯ್ತು.. ಈಗ ಲಾಟೀನ್ ಗಾಗಿ ಗೊಂದಲ, ಗದ್ದಲ, ಗುಸುಗುಸು.!ಆಪಲ್ ಆಯ್ತು.. ಈಗ ಲಾಟೀನ್ ಗಾಗಿ ಗೊಂದಲ, ಗದ್ದಲ, ಗುಸುಗುಸು.!

  ಅಂಥದ್ರಲ್ಲಿ, ಅದೇ ಸ್ಟ್ರಾಟೆಜಿ ಇಟ್ಟುಕೊಂಡು ಕಿತ್ತಾಡದೆ ತಮ್ಮ ಪಾಲಿಗೆ ಬಂದಿದ್ದನ್ನ ಸವಾಲಾಗಿ ಸ್ವೀಕರಿಸಿ ಎಂಟು ಗಂಟೆಗೂ ಅಧಿಕ ಕಾಲ ಲಾಟೀನ್ ಹಿಡಿದ ಹರೀಶ್ ರಾಜ್ ಗೆ ಭೇಷ್ ಎನ್ನಲೇಬೇಕು. ಇದೇ ಕಾರಣಕ್ಕೆ ಈ ವಾರ ಹರೀಶ್ ರಾಜ್ ಗೆ ಕಿಚ್ಚನ ಮೆಚ್ಚಿನ ಚಪ್ಪಾಳೆ ಸಿಕ್ಕರೂ ಆಶ್ಚರ್ಯವಿಲ್ಲ.!

  English summary
  Bigg Boss Kannada 7: Day 16: Harish Raj spends whole night without sleep for lateen task.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X