For Quick Alerts
  ALLOW NOTIFICATIONS  
  For Daily Alerts

  ಬೇಕು ಅಂತ ಜಗಳ ಮಾಡಿಸಿದ 'ಬಿಗ್ ಬಾಸ್' ಬುದ್ಧಿವಂತಿಕೆ ಮೆಚ್ಚಬೇಕು.!

  |
  Bigg Boss Kannada 7:Harish Raj gets secret task at confession room from big Boss | FILMIBEAT KANNADA

  ಒಂದು ಆಪಲ್ ವಿಷಯಕ್ಕಾಗಿ ಗಲಾಟೆ ನಡೆದ ಮೇಲೆ, 'ಬಿಗ್ ಬಾಸ್' ಮನೆಯಲ್ಲಿ ಯಾವ ವಿಚಾರಕ್ಕೂ ದೊಡ್ಡ ಮಟ್ಟದಲ್ಲಿ ಜಗಳ ನಡೆದಿರಲಿಲ್ಲ. ಟಿ.ಆರ್.ಪಿ ಕಂಟೆಂಟ್ ಡೌನ್ ಆಗ್ತಿದೆ ಎಂಬ ಕಾರಣಕ್ಕೋ ಏನೋ... ಸ್ವತಃ 'ಬಿಗ್ ಬಾಸ್' ಬೇಕು ಅಂತ ಜಗಳ ಮಾಡಿಸಿದಂತೆ ಕಾಣುವ ಪ್ರಸಂಗ ನಿನ್ನೆಯ ಸಂಚಿಕೆಯಲ್ಲಿ ಪ್ರಸಾರ ಆಯ್ತು.

  'ಕಲಾಕಾರ್' ಹರೀಶ್ ರಾಜ್ ರನ್ನ ಕನ್ಫೆಶನ್ ರೂಮ್ ಒಳಗೆ ಕರೆದ 'ಬಿಗ್ ಬಾಸ್' ಒಂದು ಸೀಕ್ರೆಟ್ ಟಾಸ್ಕ್ ನೀಡಿದರು. ''ನಾಳೆ ಬೆಳಗ್ಗೆ ಒಳಗೆ ನೀವು ಮನೆಯವರ ಮೇಲೊಂದು ಪ್ರಾಂಕ್ ಮಾಡಬೇಕು. ಇದರಿಂದ ಮನೆಯಲ್ಲಿರುವ ಸಮೀಕರಣ ಬದಲಾಗಬೇಕು'' ಎಂದು ಹರೀಶ್ ರಾಜ್ ಗೆ 'ಬಿಗ್ ಬಾಸ್' ತಿಳಿಸಿದರು.

  ಜೊತೆಗೆ ''ಏನು ಮಾಡುತ್ತೀರಿ... ಹೇಗೆ ಮಾಡುತ್ತೀರಿ... ಎಂಬುದು ನಿಮ್ಮ ನಿರ್ಧಾರ'' ಎಂದು 'ಬಿಗ್ ಬಾಸ್' ಹೇಳಿದರು. ಒತ್ತಾಯಪೂರ್ವಕವಾಗಿ ಜಗಳ ಮಾಡಬೇಕು ಅಂತ 'ಬಿಗ್ ಬಾಸ್' ಹೇಳಲಿಲ್ಲ ನಿಜ. ಆದರೆ, ಮನೆಯ ಸಮೀಕರಣ ಬದಲಾಗಬೇಕು ಅಂತಂದ್ರೆ ಏನಾದರೂ ಒಂದು ವಿವಾದ ಆಗಲೇಬೇಕು ತಾನೇ. ವಿವಾದ ಇದ್ದ ಕಡೆ ಗಲಾಟೆ ಇರಲೇಬೇಕು ಅಲ್ವೇ.?

  ಹೀಗಾಗಿ, ಪ್ರಾಂಕ್ ಅಂತ 'ಬಿಗ್ ಬಾಸ್' ಹೇಳಿ ಕಳುಹಿಸಿದರೂ ಹರೀಶ್ ರಾಜ್ ತಲೆಯಲ್ಲಿ ಜಗಳವೇ ಓಡುತ್ತಿತ್ತು. ಹಾಗೇ, ವಾಕ್ಸಮರಕ್ಕೆ ನಾಂದಿ ಹಾಡಿಯೇ ಬಿಟ್ಟರು. ಅತ್ತ ''ಜಗಳ ಮಾಡಿ'' ಅಂತ ನೇರವಾಗಿ ಹೇಳದೆ ಎಲ್ಲ ಜವಾಬ್ದಾರಿಯನ್ನು ಹರೀಶ್ ರಾಜ್ ಹೆಗಲ ಮೇಲೆ ಹಾಕಿದ 'ಬಿಗ್ ಬಾಸ್' ಬುದ್ಧಿವಂತಿಕೆ ಮೆಚ್ಚಬೇಕಾದ್ದೆ. ಮುಂದೆ ಓದಿರಿ...

  ಕ್ಯಾತೆ ತೆಗೆದ ಹರೀಶ್ ರಾಜ್

  ಕ್ಯಾತೆ ತೆಗೆದ ಹರೀಶ್ ರಾಜ್

  'ಬಿಗ್ ಬಾಸ್' ಮನೆಯ ಸಮೀಕರಣ ಬದಲಾಯಿಸಲು ಒಂದೊಳ್ಳೆ ಅವಕಾಶಕ್ಕಾಗಿ ಕಾಯುತ್ತಿದ್ದ ಹರೀಶ್ ರಾಜ್ ಅಡುಗೆ ಮನೆಯ ಕಡೆ ಮುಖ ಮಾಡಿದರು. ಅಲ್ಲಿ, ಅಮೆಜಾನ್ ಉಚ್ಛಾರಣೆ ವಿಷಯದಲ್ಲಿ ಎಲ್ಲರನ್ನೂ ಸುಜಾತ ತಿದ್ದುತ್ತಿದ್ದರು. ಇದೇ ವಿಚಾರಕ್ಕೆ ಹರೀಶ್ ರಾಜ್ ಮತ್ತು ಸುಜಾತ ನಡುವೆ ಬೆಂಕಿಯ ಕಿಡಿ ಹೊತ್ತುಕೊಂಡಿತು. ಅಮೆಜಾನ್ ನಿಂದ ಶುರುವಾದ ಇಬ್ಬರ ಜಗಳ ಅಡುಗೆ ವಿಚಾರದವರೆಗೂ ತಲುಪಿತು.

  ಇಡೀ ರಾತ್ರಿ ಲಾಟೀನ್ ಕೈಬಿಡದ ಹರೀಶ್ ರಾಜ್ ಗೆ ಭೇಷ್ ಎನ್ನಲೇಬೇಕು.!ಇಡೀ ರಾತ್ರಿ ಲಾಟೀನ್ ಕೈಬಿಡದ ಹರೀಶ್ ರಾಜ್ ಗೆ ಭೇಷ್ ಎನ್ನಲೇಬೇಕು.!

  ಸುಜಾತ ವಿರುದ್ಧ ಹರೀಶ್ ರಾಜ್ ಕಿಡಿ

  ಸುಜಾತ ವಿರುದ್ಧ ಹರೀಶ್ ರಾಜ್ ಕಿಡಿ

  ''ಜೈಜಗದೀಶ್ ಗೆ ಸಾರಿನಲ್ಲಿ ತರಕಾರಿ ಹಾಕುವ ವಿಷಯದಲ್ಲಿ ಸುಜಾತ ಕೊಂಕು ಮಾತಾಡುತ್ತಾರೆ. ಉಪ್ಪಿಟ್ಟು ಪೇಸ್ಟ್ ತರಹ ಆಗಿತ್ತು. ಬೇಗ ಬೇಗ ನುಂಗಲು ಆಗುತ್ತಿರಲಿಲ್ಲ. ನನ್ನ ಜೀವನದಲ್ಲಿ ಇಷ್ಟೊಂದು ಚಪಾತಿ ಮಾಡಿಲ್ಲ ಎಂದರೆ 'ತಿನ್ನಲು ಚೆನ್ನಾಗಿರುತ್ತಾ.?' ಅಂತ ಕೇಳ್ತಾರೆ ಸುಜಾತ ಎಂದೆಲ್ಲಾ ಹೇಳಿ ಟೆಂಪರ್ ರೈಸ್ ಮಾಡಿಕೊಂಡು ಬಿಟ್ಟರು ಹರೀಶ್ ರಾಜ್.

  ಆಪಲ್ ಆಯ್ತು.. ಈಗ ಲಾಟೀನ್ ಗಾಗಿ ಗೊಂದಲ, ಗದ್ದಲ, ಗುಸುಗುಸು.!ಆಪಲ್ ಆಯ್ತು.. ಈಗ ಲಾಟೀನ್ ಗಾಗಿ ಗೊಂದಲ, ಗದ್ದಲ, ಗುಸುಗುಸು.!

  ತಿರುಗೇಟು ಕೊಟ್ಟ ಸುಜಾತ

  ತಿರುಗೇಟು ಕೊಟ್ಟ ಸುಜಾತ

  ಹರೀಶ್ ರಾಜ್ ಪಾಯಿಂಟ್ ಮಾಡಿ ತೋರಿಸಿದ ಎಲ್ಲದಕ್ಕೂ ಸುಜಾತ ಸಬೂಬು ನೀಡಿದರು. ಜೊತೆಗೆ ''ನಾನು ಮಾತನಾಡುವುದೇ ಹಾಗೇ.. ಬೇರೆಯವರಿಗಾಗಿ ನಾನು ಚೇಂಜ್ ಆಗಲು ಸಾಧ್ಯವಿಲ್ಲ. ನಾನು ಇರುವುದೇ ಹೀಗೆ. ಹದಿನೈದು ಮಂದಿಗೆ ಅಡುಗೆ ಮಾಡಬೇಕು ಅಂದ್ರೆ ಜೋಕ್ ಅಲ್ಲ'' ಎಂದು ಹರೀಶ್ ರಾಜ್ ಗೆ ಸುಜಾತ ತಿರುಗೇಟು ಕೊಟ್ಟರು.

  'ಬಿಗ್ ಬಾಸ್': ಇಡೀ ಸಂಚಿಕೆಯನ್ನು ಕೊಂದ ಒಂದು ಆಪಲ್.!'ಬಿಗ್ ಬಾಸ್': ಇಡೀ ಸಂಚಿಕೆಯನ್ನು ಕೊಂದ ಒಂದು ಆಪಲ್.!

  ದನಿ ಗೂಡಿಸದ ಇತರರು

  ದನಿ ಗೂಡಿಸದ ಇತರರು

  ಹರೀಶ್ ರಾಜ್ ಮತ್ತು ಸುಜಾತ ನಡುವೆ ವಾದ-ವಾಗ್ವಾದ ನಡೆಯುತ್ತಿದ್ದರೂ, ಇತರರು ದನಿ ಗೂಡಿಸಲಿಲ್ಲ. ಒಂದಿಬ್ಬರು ಹೊರತು ಪಡಿಸಿದರೆ, ಬಹುತೇಕ ಎಲ್ಲರೂ ಮೂಕ ಪ್ರೇಕ್ಷಕರಾಗಿದ್ದರು. ಇದೇ ಗ್ಯಾಪ್ ನಲ್ಲಿ ಚಂದನ್ ಆಚಾರ್ ಮತ್ತು ಶೈನ್ ಶೆಟ್ಟಿ ನಡುವೆ ವಾಕ್ಸಮರ ನಡೆಯಿತು.

  ಅನುಮಾನ ಇದೆ.!

  ಅನುಮಾನ ಇದೆ.!

  ಕನ್ಫೆಶನ್ ರೂಮ್ ಒಳಗೆ ಹೋಗಿ ಬರುತ್ತಿದ್ದ ಹಾಗೆ, ಹರೀಶ್ ರಾಜ್ ಗೆ ಸೀಕ್ರೆಟ್ ಟಾಸ್ಕ್ ಬಂದಿರಬೇಕು ಎಂಬ ಅನುಮಾನ ವಾಸುಕಿ ವೈಭವ್ ಗೆ ಬಂತು. ಇನ್ನೂ, ಇಷ್ಟೆಲ್ಲ ಗಲಾಟೆ ಆದ್ಮೇಲೆ ''ಕನ್ಫೆಶನ್ ರೂಮ್ ಒಳಗೆ ಹೋಗಿ ಬಂದ ಎಫೆಕ್ಟ್ ಇದು'' ಎಂದು ಜೈಜಗದೀಶ್ ಹೇಳುತ್ತಾರೆ. ಆಗ ಸುಜಾತಗೂ ಜ್ಞಾನೋದಯ ಆಗುತ್ತದೆ. ಅಲ್ಲಿಗೆ, ಹರೀಶ್ ರಾಜ್ ಸುಮ್ ಸುಮ್ನೆ ಕ್ಯಾತೆ ತೆಗೆದಿದ್ದಾರೆ ಎಂಬ ಅನುಮಾನ ಕೆಲವರಲ್ಲಿ ಇದ್ದ ಹಾಗಿದೆ.

  ಪ್ರಾಂಕ್ ನೆಪ.?

  ಪ್ರಾಂಕ್ ನೆಪ.?

  ಹರೀಶ್ ರಾಜ್ ಗಲಾಟೆ ಮಾಡಿದ್ದು 'ಪ್ರಾಂಕ್' ಗಾಗಿ ಇರಬಹುದು. ಆದರೆ, ಅಡುಗೆ ಮತ್ತು ಊಟದ ವಿಷಯದಲ್ಲಿ ಹರೀಶ್ ರಾಜ್ ಹೇಳಿದ್ದೆಲ್ಲವೂ ಸತ್ಯವೇ. ಪ್ರಾಂಕ್ ನೆಪದಲ್ಲಿ ತಮ್ಮೊಳಗಿದ್ದ ಸಿಟ್ಟನ್ನೆಲ್ಲಾ ಹರೀಶ್ ರಾಜ್ ಹೊರಗೆ ಹಾಕಿದ್ರಾ.? ಇಲ್ಲಿಯವರೆಗೂ ಸೇಫ್ ಗೇಮ್ ಆಡುತ್ತಿದ್ದ ಹರೀಶ್ ರಾಜ್ ಸ್ಟ್ರಾಟೆಜಿಯನ್ನ 'ಬಿಗ್ ಬಾಸ್' ಬೇಕು ಅಂತ ಬದಲಿಸಿದ್ರಾ.? ಎಂಬ ಡೌಟ್ ಸದ್ಯ ವೀಕ್ಷಕರಲ್ಲಿ ಕಾಡುತ್ತಿದೆ.

  English summary
  Bigg Boss Kannada 7: Day 17: Harish Raj pranks Sujatha over Kitchen issues.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X