For Quick Alerts
  ALLOW NOTIFICATIONS  
  For Daily Alerts

  'ದುನಿಯಾ' ಹಿಟ್ ಆದರೂ ದುಡ್ಡು ಬರ್ಲಿಲ್ಲ: ರಶ್ಮಿ ಗೋಳು ಕೇಳೋರು ಇರಲಿಲ್ಲ.!

  |

  'ದುನಿಯಾ'... ಇದೊಂದು ಸಿನಿಮಾ ಸಾಕಿತ್ತು ರಾತ್ರೋ ರಾತ್ರಿ ನಟ ವಿಜಯ್, ನಟ ಯೋಗೀಶ್, ನಿರ್ದೇಶಕ ಸೂರಿ, ನಟಿ ರಶ್ಮಿ ಸ್ಟಾರ್ ಆಗೋಕೆ. ಇಂದಿಗೂ ಇವರುಗಳ ಹೆಸರಿನ ಜೊತೆಗೆ 'ದುನಿಯಾ' ಫೆವಿಕಾಲ್ ತರಹ ಅಂಟಿಕೊಂಡಿದೆ. ಅಷ್ಟರಮಟ್ಟಿಗೆ ಇವರೆಲ್ಲರ ಬದುಕಲ್ಲಿ 'ದುನಿಯಾ' ಪ್ರಭಾವ ಬೀರಿದೆ.

  Bigg Boss Kannada 7 Actress Duniya Rashmi is Contestant No.11 | FILMIBEAT KANNADA

  'ದುನಿಯಾ' ಚಿತ್ರದ ಬಳಿಕ ಚಿತ್ರರಂಗದಲ್ಲಿ ದುನಿಯಾ ಸೂರಿ, ದುನಿಯಾ ವಿಜಯ್ ಮತ್ತು ಯೋಗೀಶ್ ಭದ್ರವಾಗಿ ನೆಲೆಯೂರಿದರು. ಆದರೆ ನಾಯಕಿ ರಶ್ಮಿ ಮಾತ್ರ ಅಷ್ಟಾಗಿ ಮಿಂಚಲಿಲ್ಲ. ಇದಕ್ಕೆ ಕಾರಣ ಏನಪ್ಪಾ ಅಂದ್ರೆ, 'ದುನಿಯಾ' ಬಳಿಕ ರಶ್ಮಿಗೆ ಚಿತ್ರಗಳ ಆಯ್ಕೆ ವಿಚಾರದಲ್ಲಿ ಕೆಲವರು ಮಿಸ್ ಗೈಡ್ ಮಾಡಿದ್ರಂತೆ.

  ಇನ್ನೂ ''ರಶ್ಮಿ ಕೊಂಚ ದಪ್ಪ'' ಅಂತ್ಹೇಳಿ ಹಲವರು ರಿಜೆಕ್ಟ್ ಮಾಡಿದ್ರಂತೆ. ಮನೆಯಲ್ಲಿನ ಆರ್ಥಿಕ ಸಂಕಷ್ಟದಿಂದಾಗಿ ಚಿತ್ರರಂಗಕ್ಕೆ ಕಾಲಿಟ್ಟ ರಶ್ಮಿಗೆ ''ಚಿತ್ರರಂಗಕ್ಕೆ ಯಾಕಾದ್ರೂ ಬಂದ್ನೋ'' ಅಂತ ಎಷ್ಟೋ ಬಾರಿ ಅನಿಸಿದ್ಯಂತೆ.

  'ದುನಿಯಾ' ಹಿಟ್ ಆದರೂ ರಶ್ಮಿಗೆ ದುಡ್ಡು ಬರಲಿಲ್ಲ. ಮನೆಯಲ್ಲಿ ಕಷ್ಟ ತೀರಲಿಲ್ಲ. ಕೈಗೆ ಚಿತ್ರಗಳು ಸಿಗಲಿಲ್ಲ. ರಶ್ಮಿಯ ಅವತ್ತಿನ ಗೋಳನ್ನ ಕೇಳೋರು ಯಾರೂ ಇರಲಿಲ್ಲ. ಇಂತಹ ತಮ್ಮ ಕಷ್ಟದ ದಿನಗಳನ್ನ ದುನಿಯಾ ರಶ್ಮಿ 'ಬಿಗ್ ಬಾಸ್' ಮನೆಯಲ್ಲಿ ಬಿಚ್ಚಿಟ್ಟಿದ್ದಾರೆ. ಸಂಪೂರ್ಣ ಮಾಹಿತಿ ಫೋಟೋ ಸ್ಲೈಡ್ ಗಳಲ್ಲಿದೆ. ಓದಿರಿ...

  ದುನಿಯಾ ರಶ್ಮಿಗೆ ಸಿಂಗಲ್ ಪೇರೆಂಟ್

  ದುನಿಯಾ ರಶ್ಮಿಗೆ ಸಿಂಗಲ್ ಪೇರೆಂಟ್

  ದುನಿಯಾ ರಶ್ಮಿಯ ತಂದೆ ಮೂಲತಃ ಪುತ್ತೂರಿನವರು. ತಾಯಿ ವಿರಾಜಪೇಟೆಯವರು. ತಂದೆ ಜೊತೆಗೆ ಇದ್ದಾಗ ಕಷ್ಟವನ್ನೇ ಅರಿಯದ ದುನಿಯಾ ರಶ್ಮಿ, ತಾಯಿ ಜೊತೆಗೆ ತಂದೆಯಿಂದ ಬೇರ್ಪಟ್ಟಾಗ ಪಟ್ಟ ಕಷ್ಟ ಒಂದೆರಡಲ್ಲ. ''ನಾವು ಅಪ್ಪನ ಜೊತೆ ಇಲ್ಲ. ನನಗೆ ಸಿಂಗಲ್ ಪೇರೆಂಟ್. ನನಗೆ ಅಣ್ಣ ಮತ್ತು ತಮ್ಮ ಇದ್ದಾನೆ. ನಮ್ಮನ್ನೆಲ್ಲ ಬೆಳೆಸಲು ಅಮ್ಮ ತುಂಬಾ ಕಷ್ಟ ಪಟ್ಟಿದ್ದಾರೆ'' ಅಂತ 'ಬಿಗ್ ಬಾಸ್' ಮನೆಯೊಳಗೆ ರಶ್ಮಿ ಹೇಳಿಕೊಂಡಿದ್ದಾರೆ.

  'ದುನಿಯಾ' ರಶ್ಮಿ ಹೊಸ ಸಿನಿಮಾ ಪ್ರಾರಂಭ'ದುನಿಯಾ' ರಶ್ಮಿ ಹೊಸ ಸಿನಿಮಾ ಪ್ರಾರಂಭ

  ಆಕ್ಟಿಂಗ್ ಬಗ್ಗೆ ಇಂಟ್ರೆಸ್ಟ್ ಇರಲಿಲ್ಲ.!

  ಆಕ್ಟಿಂಗ್ ಬಗ್ಗೆ ಇಂಟ್ರೆಸ್ಟ್ ಇರಲಿಲ್ಲ.!

  ''ನಾನು ಸಡನ್ ಆಗಿ ಕನ್ನಡ ಇಂಡಸ್ಟ್ರಿಗೆ ಬಂದೆ. ಮನೆಯ ಜವಾಬ್ದಾರಿ ಇತ್ತು. ಆಕ್ಟಿಂಗ್ ನಲ್ಲಿ ಇಂಟ್ರೆಸ್ಟ್ ಇರಲಿಲ್ಲ. ಸುಮ್ಮನೆ ಫ್ರೆಂಡ್ ಒಬ್ಬರು ಶೂಟಿಂಗ್ ಗೆ ಕರ್ಕೊಂಡು ಹೋದಾಗ, ಒಂದು ಸಣ್ಣ ಕ್ಯಾರೆಕ್ಟರ್ ಬಾರದೇ ಇದ್ದಾಗ ವಿಷ್ಣುವರ್ಧನ್ ಚಿತ್ರದಲ್ಲಿ ಆಕ್ಟ್ ಮಾಡಿದೆ'' ಅಂತಾರೆ ದುನಿಯಾ ರಶ್ಮಿ.

  ದುನಿಯಾ ರಶ್ಮಿ ಯಾರ್ ಜೊತೆಗೂ ಮಾತಾಡುತ್ತಿಲ್ಲ ಯಾಕೆ?ದುನಿಯಾ ರಶ್ಮಿ ಯಾರ್ ಜೊತೆಗೂ ಮಾತಾಡುತ್ತಿಲ್ಲ ಯಾಕೆ?

  ಯಾಕಾದ್ರೂ ಇಂಡಸ್ಟ್ರಿಗೆ ಬಂದ್ನೋ.!

  ಯಾಕಾದ್ರೂ ಇಂಡಸ್ಟ್ರಿಗೆ ಬಂದ್ನೋ.!

  ''ವಿಜಯ ರಾಘವೇಂದ್ರ ಅಭಿನಯದ 'ಕಲ್ಲರಳಿ ಹೂವಾಗಿ' ಚಿತ್ರದಲ್ಲಿ ಒಂದು ಸಣ್ಣ ಪಾತ್ರ ಮಾಡಿದೆ. ಅದೇ ಸಿನಿಮಾದಲ್ಲಿ ದುನಿಯಾ ವಿಜಯ್ ಕೂಡ ಚಿಕ್ಕ ಪಾತ್ರ ಮಾಡಿದ್ದರು. ಮುಂದೆ ಅವರೇ 'ದುನಿಯಾ'ಗೆ ರೆಫರ್ ಮಾಡಿದರು. ನಂತರದ ದಿನಗಳಲ್ಲಿ ಇಂಡಸ್ಟ್ರಿಗೆ ಯಾಕಾದ್ರೂ ಬಂದೆ ಅಂತ ಎಷ್ಟೋ ಬಾರಿ ಅನಿಸಿದೆ'' - ದುನಿಯಾ ರಶ್ಮಿ.

  ಅರುಂಧತಿಯಾಗಿ ದುನಿಯಾ ರಶ್ಮಿ ಎರಡನೇ ಇನ್ನಿಂಗ್ಸ್ಅರುಂಧತಿಯಾಗಿ ದುನಿಯಾ ರಶ್ಮಿ ಎರಡನೇ ಇನ್ನಿಂಗ್ಸ್

  'ದುನಿಯಾ' ಬಳಿಕ ಯಾಕೆ ಸಿನಿಮಾ ಮಾಡಲಿಲ್ಲ.?

  'ದುನಿಯಾ' ಬಳಿಕ ಯಾಕೆ ಸಿನಿಮಾ ಮಾಡಲಿಲ್ಲ.?

  ''ದುನಿಯಾ ನಂತರ ಮೂವೀಸ್ ಮಾಡಬೇಕಿತ್ತು. ಆದರೆ ನನಗೆ ಕೆಲವರು ತುಂಬಾ ಮಿಸ್ ಗೈಡ್ ಮಾಡಿದರು. ಒಂದು ಕಡೆ ದುಡ್ಡು ಪ್ರಾಬ್ಲಂ ಇತ್ತು. ದುನಿಯಾ ಹಿಟ್ ಆದರೂ ದುಡ್ಡು ಬರಲಿಲ್ಲ. 'ಅಕ್ಕ ತಂಗಿ' ಅಂತ ಸಿನಿಮಾ ಮಾಡಿದೆ. ದಪ್ಪ-ದಪ್ಪ ಅಂತ ಎಷ್ಟೋ ಚಿತ್ರಗಳಲ್ಲಿ ರಿಜೆಕ್ಟ್ ಮಾಡಿದರು. ಎಷ್ಟೇ ಸಣ್ಣ ಆದರೂ ಕರೆದು ಆಫರ್ ಕೊಡ್ತಾರಾ.? ಅದೂ ಇಲ್ಲ'' ಅಂತ ಬೇಸರ ವ್ಯಕ್ತಪಡಿಸಿದ್ದಾರೆ ನಟಿ ರಶ್ಮಿ.

  ಇಂದು ಖುಷಿಯ ಜೀವನ

  ಇಂದು ಖುಷಿಯ ಜೀವನ

  ''ಈಗ ತುಂಬಾ ಹ್ಯಾಪಿಯಾಗಿ ಇದ್ದೇವೆ. ಅಣ್ಣ ದುಬೈನಲ್ಲಿ ಇದ್ದಾರೆ. ತಮ್ಮನದ್ದು ಮೊಬೈಲ್ ಶಾಪ್ ಇದೆ. 'ಬಿಗ್ ಬಾಸ್' ಬಳಿಕ ವೃತ್ತಿ ಜೀವನವನ್ನು ಚೆನ್ನಾಗಿ ರೂಪಿಸಿಕೊಳ್ಳಬೇಕು'' ಎನ್ನುತ್ತಾರೆ ನಟಿ ರಶ್ಮಿ.

  English summary
  Bigg Boss Kannada 7: Day 2: Duniya Rashmi speaks about her struggling days.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X