For Quick Alerts
  ALLOW NOTIFICATIONS  
  For Daily Alerts

  'ಅವರು ನನ್ನನ್ನೂ ಬಿಟ್ಟಿಲ್ಲ': ರವಿ ಬೆಳಗೆರೆ ಬಗ್ಗೆ ದುನಿಯಾ ರಶ್ಮಿ ಹೇಳಿದ್ದೇನು.?

  |
  Bigg Boss Kannada 7 : Duniya Rashmi Accuses Ravi Belagere of Cheap Writing 10 years ago

  ರವಿ ಬೆಳಗೆರೆ ಪ್ರಧಾನ ಸಂಪಾದಕರಾಗಿರುವ 'ಹಾಯ್ ಬೆಂಗಳೂರು' ಪತ್ರಿಕೆಯಲ್ಲಿ ಕನ್ನಡ ಚಿತ್ರರಂಗದ ನಟ-ನಟಿಯರ ಕುರಿತು ಎಷ್ಟೋ ವರದಿಗಳು ಪ್ರಕಟ ಆಗಿವೆ. ಹಾಗೇ, 'ದುನಿಯಾ' ಚಿತ್ರ ಬಿಡುಗಡೆ ಆದ ನಂತರ ನಾಯಕಿ ರಶ್ಮಿ ಬಗ್ಗೆಯೂ ಒಂದು ಆರ್ಟಿಕಲ್ ಪಬ್ಲಿಶ್ ಆಗಿತ್ತಂತೆ.

  ದುನಿಯಾ ರಶ್ಮಿಯ ಫ್ಯಾಮಿಲಿ ಪ್ರಾಬ್ಲಂ ಬಗ್ಗೆ 'ಹಾಯ್ ಬೆಂಗಳೂರು' ಪತ್ರಿಕೆಯಲ್ಲಿ ಬರೆಯಲಾಗಿತ್ತಂತೆ. ಆಗ ರವಿ ಬೆಳಗೆರೆಗೆ ಛೀಮಾರಿ ಹಾಕಿದ್ದ ದುನಿಯಾ ರಶ್ಮಿ ಇಂದು ಅದೇ ರವಿ ಬೆಳಗೆರೆ ಜೊತೆಗೆ 'ಬಿಗ್ ಬಾಸ್' ಮನೆಯಲ್ಲಿ ಇದ್ದಾರೆ.

  'ಬಿಗ್ ಬಾಸ್' ಮನೆಯೊಳಗೆ ರವಿ ಬೆಳಗೆರೆಯವರ ನಡವಳಿಕೆ ದುನಿಯಾ ರಶ್ಮಿಗೆ ಇಂಪ್ರೆಸ್ ಆಗಿದೆ. ರವಿ ಬೆಳಗೆರೆಯವರ ಜ್ಞಾನ, ನೆನಪಿನ ಶಕ್ತಿ ಕಂಡು ದುನಿಯಾ ರಶ್ಮಿ ದಂಗಾಗಿದ್ದಾರೆ. ಇಂತಿಪ್ಪ ರಶ್ಮಿ, ರವಿ ಬೆಳಗೆರೆ ಬಗ್ಗೆ ಕಾಮೆಂಟ್ ಮಾಡಿರುವುದಿಷ್ಟು...

  ನನ್ನನ್ನೂ ಬಿಟ್ಟಿಲ್ಲ.!

  ನನ್ನನ್ನೂ ಬಿಟ್ಟಿಲ್ಲ.!

  ''ರವಿ ಬೆಳಗೆರೆ ತುಂಬಾ ತಿಳಿದುಕೊಂಡಿದ್ದಾರೆ. ಅವರ ನೆನಪಿನ ಶಕ್ತಿ ನೋಡಿದರೆ ತುಂಬಾ ಖುಷಿ ಆಗುತ್ತೆ. ತುಂಬಾ ಡೇರಿಂಗ್. ಅವರು ಯಾರನ್ನೂ ಬಿಟ್ಟಿಲ್ಲ. ನನ್ನನ್ನೂ ಬಿಟ್ಟಿಲ್ಲ. ದುನಿಯಾ ಆದ್ಮೇಲೆ ನನ್ನ ಬಗ್ಗೆ ಪೇಪರ್ ನಲ್ಲಿ ಬರೆದಿದ್ದರು. ತುಂಬಾ ಕೆಟ್ಟದಾಗಿ ಬರೆದಿದ್ದರು. ನಮ್ಮ ಮನೆಯಲ್ಲಿನ ಪ್ರಾಬ್ಲಂ ಬಗ್ಗೆ ಆರ್ಟಿಕಲ್ ಬಂದಿತ್ತು'' ಎಂದು 'ಬಿಗ್ ಬಾಸ್' ಮನೆಯಲ್ಲಿ ರಶ್ಮಿ ಹೇಳಿದ್ದಾರೆ.

  'ದುನಿಯಾ' ರಶ್ಮಿ ಹೊಸ ಸಿನಿಮಾ ಪ್ರಾರಂಭ'ದುನಿಯಾ' ರಶ್ಮಿ ಹೊಸ ಸಿನಿಮಾ ಪ್ರಾರಂಭ

  ರವಿ ಬೆಳಗೆರೆ ಬಗ್ಗೆ ರಶ್ಮಿ ಹೇಳಿದಿಷ್ಟು.!

  ರವಿ ಬೆಳಗೆರೆ ಬಗ್ಗೆ ರಶ್ಮಿ ಹೇಳಿದಿಷ್ಟು.!

  ''ಅವಾಗೆಲ್ಲ ಬೈದುಕೊಳ್ತಿದ್ವಿ.. ಯಾಕೆ ಈ ತರಹ ಬರೆಯುತ್ತಾರೆ ಅಂತೆಲ್ಲ.. ಆದರೆ ಈಗ ಇವರನ್ನ (ರವಿ ಬೆಳಗೆರೆ) ನೋಡಿದರೆ ತುಂಬಾ ತಿಳಿದುಕೊಳ್ಳಬೇಕು ಅನ್ಸುತ್ತೆ'' ಎಂದಿದ್ದಾರೆ ನಟಿ ರಶ್ಮಿ

  ದುನಿಯಾ ರಶ್ಮಿ ಯಾರ್ ಜೊತೆಗೂ ಮಾತಾಡುತ್ತಿಲ್ಲ ಯಾಕೆ?ದುನಿಯಾ ರಶ್ಮಿ ಯಾರ್ ಜೊತೆಗೂ ಮಾತಾಡುತ್ತಿಲ್ಲ ಯಾಕೆ?

  ರಶ್ಮಿಯ ಫ್ಯಾಮಿಲಿ ಪ್ರಾಬ್ಲಂ ಏನು.?

  ರಶ್ಮಿಯ ಫ್ಯಾಮಿಲಿ ಪ್ರಾಬ್ಲಂ ಏನು.?

  ದುನಿಯಾ ರಶ್ಮಿಯ ತಂದೆ ಮೂಲತಃ ಪುತ್ತೂರಿನವರು. ತಾಯಿ ವಿರಾಜಪೇಟೆಯವರು. ತಂದೆ ಜೊತೆಗೆ ಇದ್ದಾಗ ಕಷ್ಟವನ್ನೇ ಅರಿಯದ ದುನಿಯಾ ರಶ್ಮಿ, ತಾಯಿ ಜೊತೆಗೆ ತಂದೆಯಿಂದ ಬೇರ್ಪಟ್ಟಾಗ ಪಟ್ಟ ಕಷ್ಟ ಒಂದೆರಡಲ್ಲ. ಮನೆಯಲ್ಲಿನ ಆರ್ಥಿಕ ಸಂಕಷ್ಟದಿಂದಾಗಿ ಚಿತ್ರರಂಗಕ್ಕೆ ನಟಿ ರಶ್ಮಿ ಎಂಟ್ರಿಕೊಟ್ಟರು.

  ಅರುಂಧತಿಯಾಗಿ ದುನಿಯಾ ರಶ್ಮಿ ಎರಡನೇ ಇನ್ನಿಂಗ್ಸ್ಅರುಂಧತಿಯಾಗಿ ದುನಿಯಾ ರಶ್ಮಿ ಎರಡನೇ ಇನ್ನಿಂಗ್ಸ್

  'ಬಿಗ್ ಬಾಸ್' ಮೂಲಕ ಅದೃಷ್ಟ ಪರೀಕ್ಷೆ

  'ಬಿಗ್ ಬಾಸ್' ಮೂಲಕ ಅದೃಷ್ಟ ಪರೀಕ್ಷೆ

  'ದುನಿಯಾ' ಆದ್ಮೇಲೆ ರಶ್ಮಿ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದೇ ಕಮ್ಮಿ. ಸದ್ಯ ಸ್ಲಿಮ್ ಆಗಿರುವ ರಶ್ಮಿ ಚಿತ್ರಗಳಲ್ಲಿ ಅಭಿನಯಿಸಲು ಸಜ್ಜಾಗಿದ್ದಾರೆ. 'ಬಿಗ್ ಬಾಸ್' ಮೂಲಕ ಅದೃಷ್ಟ ಪರೀಕ್ಷೆ ಮಾಡುತ್ತಿದ್ದಾರೆ. ಈಗಲಾದರೂ ಅವರ ಅದೃಷ್ಟ ಖುಲಾಯಿಸಲಿ ಅನ್ನೋದೇ ಅವರ ಅಭಿಮಾನಿಗಳ ಹಾರೈಕೆ.

  English summary
  Bigg Boss Kannada 7: Day 2: Duniya Rashmi speaks about Ravi Belagere.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X