ಇದು ಕಾಳ್ ಹಾಕ್ತಿರೋದಾ ಇಲ್ಲ ಗೇಮ್ ಸ್ಟ್ರಾಟೆಜಿನಾ.? ಚೈತ್ರ ತಲೆಯಲ್ಲಿ ಏನಿದೆ.?

ಕನ್ನಡ ಕಿರುತೆರೆಯಲ್ಲಿ 'ಬಿಗ್ ಬಾಸ್' ಶುರುವಾಗಿ ಆರು ವರ್ಷಗಳು ಉರುಳಿವೆ. ಆರು ಸೀಸನ್ ಗಳಲ್ಲಿ ಒಂದೊಂದು ಸ್ಪರ್ಧಿಯೂ 'ಬಿಗ್ ಬಾಸ್' ಮನೆಯಲ್ಲಿ ಸರ್ವೈವ್ ಆಗೋಕೆ ಭಿನ್ನ-ವಿಭಿನ್ನ ಸ್ಟ್ರಾಟೆಜಿ ಬಳಸಿದ್ದಾರೆ.

ಸುಮ್ ಸುಮ್ನೆ ಜಗಳ ಮಾಡಿಕೊಂಡು ಕೆಲವರು ಗುರುತಿಸಿಕೊಂಡಿದ್ದರೆ, ಹಲವರು ಕಣ್ಣೀರು ಕಹಾನಿಗಳನ್ನ ಹೊರಗೆ ಹಾಕಿ ವೀಕ್ಷಕರ ಸಿಂಪಥಿ ಗಿಟ್ಟಿಸಿಕೊಂಡಿದ್ದಾರೆ. ಇನ್ನೂ ಹ್ಯಾಂಡ್ಸಮ್ ಹುಡುಗ-ಬಬ್ಲಿ ಹುಡುಗಿ ಇದ್ದರಂತೂ 'ಬಿಗ್ ಬಾಸ್' ಮನೆಯಲ್ಲಿ ಲವ್ ಆಂಗಲ್ ವರ್ಕ್ ಆಗುತ್ತೆ.

Recommended Video

Bigg Boss Kannada 7 Kannada Actress, writer Chaithra Kotoor is Contestant No.16

ಭುವನ್-ಸಂಜನಾ, ಜೆಕೆ-ಶ್ರುತಿ ಪ್ರಕಾಶ್ ಸೇರಿದಂತೆ ಒಂದೊಂದು ಸೀಸನ್ ನಲ್ಲಿ ಒಂದೊಂದು ಲವ್ ಆಂಗಲ್ ಹೈಲೈಟ್ ಆಗಿದೆ. ಬಹುಶಃ ಇದನ್ನ ಮೈಂಡ್ ನಲ್ಲಿ ಇಟ್ಟುಕೊಂಡು ಚೈತ್ರ ಕೋಟೂರ್ ಗೇಮ್ ಸ್ಟ್ರಾಟೆಜಿ ಮಾಡಿಕೊಂಡಿದ್ದಾರಾ.? ಇಲ್ಲ, ಕುಡ್ಲದ ಕುವರ ಶೈನ್ ಶೆಟ್ಟಿಗೆ ಚೈತ್ರ ಕೋಟೂರ್ ನಿಜಕ್ಕೂ ಫಿದಾ ಆಗಿದ್ದಾರಾ.? ಸದ್ಯಕ್ಕೆ ಈ ಪ್ರಶ್ನೆಗಳಿಗೆ ನಿಖರ ಉತ್ತರ ಇಲ್ಲ. ಆದರೆ, ಚೈತ್ರ ಕೋಟೂರ್ ಮನಸ್ಸಿನಲ್ಲಿ ಏನೋ ಒಂದು ಇರೋದಂತೂ ಸತ್ಯ.

ಅದಕ್ಕೆ ಸಾಕ್ಷಿ ಶೈನ್ ಶೆಟ್ಟಿ ಜೊತೆಗೆ ಚೈತ್ರ ಕೋಟೂರ್ ನಡೆಸಿರುವ ಮಾತುಕತೆ. ಏನಪ್ಪಾ ಇದು ಅಂತೀರಾ.? ಸಂಪೂರ್ಣ ಮಾಹಿತಿ ಫೋಟೋ ಸ್ಲೈಡ್ ಗಳಲ್ಲಿ ಓದಿರಿ...

ಶೈನ್ ಶೆಟ್ಟಿಯ ಪೂರ್ವಾಪರ ಕೇಳಿದ ಚೈತ್ರ

ಶೈನ್ ಶೆಟ್ಟಿಯ ಪೂರ್ವಾಪರ ಕೇಳಿದ ಚೈತ್ರ

ಕರಾವಳಿಯ ಕುವರ ಶೈನ್ ಶೆಟ್ಟಿ ಜೊತೆ ಮಾತಿಗೆ ಕುಳಿತ ಚೈತ್ರ ಕೋಟೂರ್, ಅವರ ಪೂರ್ವಾಪರವನ್ನೆಲ್ಲ ವಿಚಾರಿಸುತ್ತಿದ್ದರು. ಶೈನ್ ಶೆಟ್ಟಿ ಹುಟ್ಟಿದ್ದು, ಬೆಳೆದಿದ್ದು, ಓದಿದ್ದನ್ನೆಲ್ಲ ಕೇಳಿದ್ಮೇಲೆ ತಮ್ಮ ಬಗ್ಗೆಯೂ ಚೈತ್ರ ಹೇಳಿಕೊಳ್ಳುತ್ತಿದ್ದರು.

ಲವ್-ಮದುವೆ ಬಗ್ಗೆ ಮಾತುಕತೆ

ಲವ್-ಮದುವೆ ಬಗ್ಗೆ ಮಾತುಕತೆ

''ಲವ್ ಮಾಡಬೇಕು, ಮದುವೆ ಆಗಬೇಕು ಅನ್ಸಲ್ವಾ.? ಯಾವ ತರಹದ ಹುಡುಗಿ ಬೇಕು.?'' ಅಂತೆಲ್ಲ ಶೈನ್ ಶೆಟ್ಟಿಗೆ ಚೈತ್ರ ಕೋಟೂರ್ ಕೇಳಿದರು. ಅದಕ್ಕೆ ''ಲಕ್ಷಣವಾಗಿ ಇದ್ದರೆ ಸಾಕು'' ಅಂತ ಮಾತ್ರ ಶೈನ್ ಶೆಟ್ಟಿ ಹೇಳಿದರು.

ಶೈನ್ ಶೆಟ್ಟಿ ಅಭಿಪ್ರಾಯ

ಶೈನ್ ಶೆಟ್ಟಿ ಅಭಿಪ್ರಾಯ

ಇಷ್ಟೆಲ್ಲ ಮಾತುಕತೆ ಆದ್ಮೇಲೆ, ''ನನ್ನ ಬಗ್ಗೆ ಏನು ಅನಿಸುತ್ತೆ.?'' ಅಂತ ಚೈತ್ರ ನಗುನಗುತ್ತಾ ಕೇಳಿದಾಗ ''ಮದುವೆ ಆಗುವ ಬಗ್ಗೆ ಯೋಚನೆ ಮಾಡುತ್ತಿದ್ದೀರಾ ಅನ್ಸುತ್ತೆ. 'ಬಿಗ್ ಬಾಸ್' ನಿಂದ ಹೊರಗೆ ಹೋದ ಮೇಲೆ ನಿಮಗೆ ಖಂಡಿತ ಮದುವೆ ಆಗುತ್ತೆ. ನಿಮ್ಮ ಅಭಿರುಚಿಗೆ ತಕ್ಕ ಹಾಗೆ ಇರುವ ಹುಡುಗ ಸಿಕ್ಕೇ ಸಿಗುತ್ತಾನೆ'' ಎಂದುಬಿಟ್ಟರು ಶೈನ್ ಶೆಟ್ಟಿ.

ತಲೆ ಕೆರ್ಕೊಂಡ ಶೈನ್ ಶೆಟ್ಟಿ.!

ತಲೆ ಕೆರ್ಕೊಂಡ ಶೈನ್ ಶೆಟ್ಟಿ.!

ಅಭಿರುಚಿ ಬಗ್ಗೆ ಶೈನ್ ಶೆಟ್ಟಿ ಪ್ರಸ್ತಾಪ ಮಾಡುತ್ತಿದ್ದಂತೆಯೇ, ''ನಿಮಗೆ ನನ್ನ ಅಭಿರುಚಿ ಇಲ್ವಾ.?'' ಅಂತ ಚೈತ್ರ ಕೋಟೂರ್ ಕೇಳಿಯೇಬಿಟ್ಟರು. ಚೈತ್ರ ಮಾತುಗಳನ್ನು ಕೇಳಿ ತಲೆ ಕೆರ್ಕೊಂಡು, ಕನ್ ಫ್ಯೂಸ್ ಆಗಿ ''ನನಗೆ ಅರ್ಥ ಆಗುತ್ತಿಲ್ಲ'' ನಕ್ಕರು.

ಇದು ಗೇಮ್ ಸ್ಟ್ರಾಟೆಜಿ.?

ಇದು ಗೇಮ್ ಸ್ಟ್ರಾಟೆಜಿ.?

''ಸೀರಿಯಸ್ ಆಗಬೇಡಿ, ಸುಮ್ಮನೆ ಕೇಳ್ದೆ'' ಅಂತ ಮಾತುಕತೆಯ ಅಂತ್ಯದಲ್ಲಿ ಚೈತ್ರ ಕೋಟೂರ್ ಹೇಳಿದರೂ ಮೇಲ್ನೋಟಕ್ಕೆ ಇದು ಸ್ಟ್ರಾಟೆಜಿ ಅಂತ ವೀಕ್ಷಕರಿಗೆ ಅರ್ಥ ಆಗುತ್ತೆ. ಹೇಳಿ ಕೇಳಿ ಚೈತ್ರ ಕೋಟೂರ್ ಈ ವಾರ ನಾಮಿನೇಟ್ ಆಗಿದ್ದಾರೆ. ಹೀಗಾಗಿ, 'ಬಿಗ್ ಬಾಸ್' ಮನೆಯಲ್ಲಿ ಉಳಿದುಕೊಳ್ಳಲು ಚೈತ್ರ ಹೀಗೆ ಮಾಡ್ತಿದ್ದಾರಾ.? ಉತ್ತರ ಮುಂದಿನ ದಿನಗಳಲ್ಲಿ ಸಿಗಬಹುದು.

More from Filmibeat

English summary
Bigg Boss Kannada 7: Day 2: Is This Chaitra Kotur's Game Strategy.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X