ಕಿಚ್ಚ ಸುದೀಪ್ ಗೆ ಸಿಟ್ಟು ತರಿಸಿದ ಚೈತ್ರ ಕೋಟೂರು.!

ಕನ್ನಡ ಚಿತ್ರರಂಗದಲ್ಲಿ ನಟಿಯಾಗಿ, ಬರಹಗಾರ್ತಿ ಆಗಿ ಚೈತ್ರ ಕೋಟೂರು ಗುರುತಿಸಿಕೊಂಡಿದ್ದಾರೆ. 'ಬಿಗ್ ಬಾಸ್' ಮನೆಯಲ್ಲಂತೂ ಚೈತ್ರ ಕೋಟೂರು ಗಲಾಟೆಗಳಿಂದಲೇ ಫೇಮಸ್ ಆಗಿದ್ದಾರೆ.

'ಬಿಗ್ ಬಾಸ್' ಮನೆಯೊಳಗೆ ಕಾಲಿಡುತ್ತಿದ್ದಂತೆಯೇ ನಾಮಿನೇಟ್ ಆದ ಚೈತ್ರ ಕೋಟೂರು, ಶೈನ್ ಶೆಟ್ಟಿ ಜೊತೆ ಲವ್ ಆಂಗಲ್ ಆರಂಭಿಸಿದರು. ಬಳಿಕ ಮದುವೆ ಕಥೆ, ಆಪಲ್ ಕಿತ್ತಾಟದಿಂದ ಫುಟೇಜ್ ಪಡೆದ ಚೈತ್ರ ಕೋಟೂರು ಮೂರನೇ ವಾರ ಸೇಫ್ ಆಗಿದ್ದಾರೆ.

ಮೂರನೇ ವಾರ ನಾಮಿನೇಟ್ ಆಗದ ಕಾರಣಕ್ಕೋ ಏನೋ.. ಚೈತ್ರ ಕೋಟೂರು ಸೈಲೆಂಟ್ ಆಗಿ ಸೈಡ್ ನಲ್ಲಿದ್ದರು. ಇದನ್ನೇ ಕಿಚ್ಚ ಸುದೀಪ್ 'ವಾರದ ಕಥೆ ಕಿಚ್ಚನ ಜೊತೆ' ಸಂಚಿಕೆಯಲ್ಲಿ ಪ್ರಶ್ನಿಸಿದರು.

Bigg Boss Kannada 7: Day 20: Chaitra Kotur irritates Kiccha Sudeep

ಆಗ, ''ಎರಡು ವಾರ ನಾನು ನಾಮಿನೇಟ್ ಆಗಿದ್ದರಿಂದ ಒಂದು ಆಸೆ ಬಂದಿತ್ತು. ಒಂದು ವಾರ ನಾಮಿನೇಟ್ ಆಗದೇ ಇರಬೇಕು ಅಂತ ತುಂಬಾ ಅನಿಸಿತ್ತು. ನನ್ನ ಇಚ್ಛೆಯಂತೆ ಈ ವಾರ ಆಯ್ತು. ಈ ವಾರ ನಾನು ಹೆಚ್ಚು ತೊಡಗಿಸಿಕೊಳ್ಳುವುದಕ್ಕಿಂತ ಎಲ್ಲರನ್ನೂ ಗಮನಿಸುತ್ತಿದ್ದೆ'' ಎಂದು ಚೈತ್ರ ಕೋಟೂರು ವಾದ ಮಾಡಿದರು.

''ವ್ಯತ್ಯಾಸ ಎದ್ದು ಕಾಣುತ್ತಿದೆ'' ಅಂತ ಸುದೀಪ್ ತಮ್ಮ ಅಭಿಪ್ರಾಯವನ್ನು ಹೇಳುವಷ್ಟರಲ್ಲಿ ಪದೇ ಪದೇ ಚೈತ್ರ ಕೋಟೂರು ಕೈ ಎತ್ತುತ್ತಿದ್ದರು. ಇದರಿಂದ ಸಿಟ್ಟಿಗೆದ್ದ ಸುದೀಪ್ ಮೊದಲು ಚೈತ್ರ ಕೋಟೂರು ಅವರನ್ನ ಮಾತನಾಡಲು ಬಿಟ್ಟು ಕೊನೆಗೆ ''ಬೇರೆಯವರಿಗೆ ಪೂರ್ತಿ ಮಾತನಾಡಲು ನೀವು ಅವಕಾಶವೇ ಕೊಡಲ್ಲ. ಇದು ಸರಿಯಲ್ಲ'' ಎನ್ನುತ್ತ ಸುದೀಪ್ ಸಿಟ್ಟು ಮಾಡಿಕೊಂಡರು.

ತಮ್ಮನ್ನ ತಾವು ಎಷ್ಟೇ ಸಮರ್ಥಿಸಿಕೊಂಡರೂ, ಚೈತ್ರ ಕೋಟೂರು ಗೇಮ್ ಪ್ಲಾನ್ ಮಾತ್ರ ವೀಕ್ಷಕರಿಗೆ ಗೊತ್ತಾಗಿದೆ.

More from Filmibeat

English summary
Bigg Boss Kannada 7: Day 20: Chaitra Kotur irritates Kiccha Sudeep.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X