For Quick Alerts
  ALLOW NOTIFICATIONS  
  For Daily Alerts

  ಅತಿ ಬುದ್ಧಿವಂತಿಕೆ ಪ್ರದರ್ಶಿಸಿದ ಶೈನ್ ವಿರುದ್ಧ ಗುಟುರು ಹಾಕಿದ ಸುದೀಪ್.!

  |

  Recommended Video

  Bigg Boss Kannada 7 : Shine Shett's Overthinking irks Sudeep

  'ಬಿಗ್ ಬಾಸ್ ಕನ್ನಡ-7' ಕಾರ್ಯಕ್ರಮದಲ್ಲಿ ವಾಸುಕಿ ವೈಭವ್ ಮತ್ತು ಭೂಮಿ ಶೆಟ್ಟಿ ಮಧ್ಯೆ ಸಂಥಿಂಗ್ ಸಂಥಿಂಗ್ ನಡೀತಿದ್ಯೋ, ಇಲ್ವೋ.. ಆದ್ರೆ, ಇಬ್ಬರ ನಡುವೆ ಏನೋ ಇದೆ ಎಂಬ ಗುಸು ಗುಸು ಮಾತ್ರ 'ದೊಡ್ಮನೆ'ಯೊಳಗೆ ಚಾಲ್ತಿಯಲ್ಲಿದೆ.

  'ಬಿಗ್ ಬಾಸ್ ದರ್ಬಾರ್' ಚಟುವಟಿಕೆಯಲ್ಲಿ ನಡೆದ ಸ್ವಯಂವರದಲ್ಲಿ ವಾಸುಕಿ ವೈಭವ್ ಗೂ ಭೂಮಿ ಶೆಟ್ಟಿಗೂ ಮದುವೆ ಬೇರೆ ಮಾಡಲಾಯಿತು. ಟಾಸ್ಕ್ ಅಂತ ಇಬ್ಬರೂ ಸ್ಫೋರ್ಟಿವ್ ಆಗಿ ತೆಗೆದುಕೊಂಡು ಮದುವೆಯಲ್ಲಿ ಪಾಲ್ಗೊಂಡರು. ಹೀಗಾಗಿ, ಇಬ್ಬರಿಗೂ ಕಾಲೆಳೆಯುವ ಸಲುವಾಗಿ ಕಿಚ್ಚ ಸುದೀಪ್ 'ವಾರದ ಕಥೆ ಕಿಚ್ಚನ ಜೊತೆ' ಸಂಚಿಕೆಯನ್ನ ಇದೇ ಟಾಪಿಕ್ ನಿಂದ ಆರಂಭಿಸಿದರು.

  ಸುದೀಪ್ ಮಾತುಗಳನ್ನು ತಮಾಷೆಯಾಗಿ ಸ್ವೀಕರಿಸದೆ, ಅಪಾರ್ಥ.. ಅಪಾರ ಅರ್ಥಗಳನ್ನು ಮಾಡಿಕೊಂಡು ಶೈನ್ ಶೆಟ್ಟಿ ಅತಿ ಬುದ್ಧಿವಂತಿಕೆ ಪ್ರದರ್ಶಿಸಿದರು. ಇದನ್ನ ಗಮನಿಸಿದ ಸುದೀಪ್, ಶೈನ್ ಶೆಟ್ಟಿ ವಿರುದ್ಧ ಗುಟುರು ಹಾಕಿದರು. ಮುಂದೆ ಓದಿರಿ...

  ಸುದೀಪ್ ಹೇಳಿದ್ದೇನು.?

  ಸುದೀಪ್ ಹೇಳಿದ್ದೇನು.?

  ''ವಾಸುಕಿ ಅವರೇ.. ನಿಮ್ಮ ಬಾಯಿಂದ ಒಂದು ಹಾಡು ಕೇಳುವಾಸೆ. 19 ವರ್ಷ ಆಗಿರಬಹುದು ಅಥವಾ ಅದಕ್ಕಿಂತ ಕಮ್ಮಿ ಇರಬಹುದು. ಆಗಲೇ ನಿರ್ದೇಶಕ ಪ್ರೇಮ್ ನಿಮಗೋಸ್ಕರ ಒಂದು ಹಾಡು ಮಾಡಿದ್ದರು. ವಿ.ನಾಗೇಂದ್ರ ಪ್ರಸಾದ್ ಬರೆದಿರುವ ಹಾಡದು. ವೀಕ್ಷಕರು ಅದನ್ನ ನಿಮ್ಮ ಬಾಯಲ್ಲಿ ಕೇಳಬೇಕು ಅಂತ ಆಸೆ ಪಡುತ್ತಿದ್ದಾರೆ. ಆ ಹಾಡು.. 'ಪ್ರೀತಿ ಏಕೆ ಭೂಮಿ ಮೇಲಿದೆ..'' ಎಂದರು ಕಿಚ್ಚ ಸುದೀಪ್. ಕೂಡಲೇ.. 'ಪ್ರೀತಿ ಏಕೆ ಭೂಮಿ ಮೇಲಿದೆ..' ಹಾಡನ್ನ ಹಾಡಲು ವಾಸುಕಿ ವೈಭವ್ ಆರಂಭಿಸಿದರು. ಆಗ, ''ನನ್ನ ನೋಡಿಕೊಂಡು ಹಾಡಬೇಡಿ. ನಿಮ್ಮ ಬಲಗಡೆ ನೋಡಿಕೊಂಡು ಹಾಡಿ'' ಎಂದು ಸುದೀಪ್ ಹೇಳಿದರು. ಅಷ್ಟಕ್ಕೂ, ವಾಸುಕಿ ವೈಭವ್ ಬಲಗಡೆ ಕೂತಿದ್ದವರು ಭೂಮಿ ಶೆಟ್ಟಿ.

  ಒಳಗೊಳಗೆ ಶುರುವಾಗಿದ್ಯಾ ಪ್ರೇಮ್ ಕಹಾನಿ.? ಕಿಚ್ಚನ ಮಾತಿನ ಅರ್ಥವೇನು.?ಒಳಗೊಳಗೆ ಶುರುವಾಗಿದ್ಯಾ ಪ್ರೇಮ್ ಕಹಾನಿ.? ಕಿಚ್ಚನ ಮಾತಿನ ಅರ್ಥವೇನು.?

  ವಾಸುಕಿ ವೈಭವ್ ತಲೆ ಹೊಕ್ಕ ಹುಳ

  ವಾಸುಕಿ ವೈಭವ್ ತಲೆ ಹೊಕ್ಕ ಹುಳ

  ವಾಸುಕಿ ವೈಭವ್ ಹಾಡು ಹಾಡಿದ ಮೇಲೆ ಕಿಚ್ಚ ಸುದೀಪ್ ಸೀದಾ ಬೇರೆ ಟಾಪಿಕ್ ಗೆ ಹಾರಿಬಿಟ್ಟರು. ಆದ್ರೆ, ಸುದೀಪ್ ಈ ಹಾಡನ್ನ ಹಾಡಿಸಿದ್ದಾದರೂ ಯಾಕೆ ಅಂತ ವಾಸುಕಿ ವೈಭವ್ ಯೋಚಿಸುತ್ತಿದ್ದರು. ಮೊದಲೇ ಗೊಂದಲದಲ್ಲಿದ್ದ ವಾಸುಕಿ ವೈಭವ್ ತಲೆಗೆ ಶೈನ್ ಶೆಟ್ಟಿ ಹುಳ ಬಿಟ್ಟರು. ''ನನಗಿಂತ ಭೂಮಿ ತುಂಬಾ ಚಿಕ್ಕ ಹುಡುಗಿ'' ಅಂತ ವಾಸುಕಿ ವೈಭವ್ ಹೇಳಿದಾಗ, ''ಅದಕ್ಕೆ ಹತ್ತೊಂಬತ್ತು ವರ್ಷಕ್ಕೆ ಮುಂಚೆ ಈ ಹಾಡು ಬರೆದಿದ್ದಾರೆ ಅಂತ ಹೇಳಿದ್ದು. ಅಂದ್ರೆ, ಆ ಸಿನಿಮಾ ಬಂದು ಹತ್ತೊಂಬತ್ತು ವರ್ಷ ಆಗಿಲ್ಲ. ಅವಳು (ಭೂಮಿ) ಭೂಮಿಗೆ ಬಂದು ಹತ್ತೊಂಬತ್ತು ವರ್ಷ ಆಗಿದೆ. ನಿನಗೆ ಅದು ಅರ್ಥ ಆಗಲಿಲ್ಲ ಆಗ'' ಎಂದು ಸುದೀಪ್ ಆಡಿದ ಮಾತುಗಳಿಗೆ ಶೈನ್ ಶೆಟ್ಟಿ ಬೇರೆಯದ್ದೇ ವ್ಯಾಖ್ಯಾನ ಕೊಟ್ಟರು.

  ಓಹ್.. ವಾಸುಕಿ ವೈಭವ್ ಮದುವೆ ಆಗುವ ಹುಡುಗಿ ಭೂಮಿ ಶೆಟ್ಟಿ ತರಹ ಇರ್ಬೇಕು.!ಓಹ್.. ವಾಸುಕಿ ವೈಭವ್ ಮದುವೆ ಆಗುವ ಹುಡುಗಿ ಭೂಮಿ ಶೆಟ್ಟಿ ತರಹ ಇರ್ಬೇಕು.!

  ಬೇಸರ ಮಾಡಿಕೊಂಡ ವಾಸುಕಿ ವೈಭವ್

  ಬೇಸರ ಮಾಡಿಕೊಂಡ ವಾಸುಕಿ ವೈಭವ್

  ಶೈನ್ ಶೆಟ್ಟಿ ಹಾಗೆ ಹೇಳುತ್ತಿದ್ದಂತೆಯೇ, ''ಏನಪ್ಪಾ ಇದು.. ನನಗೆ ಬೇಜಾರಾಯ್ತು. ಹೀಗಂದಿದ್ರೆ, ನಾನು ಸ್ವಯಂವರಕ್ಕೂ ಹೋಗುತ್ತಿರಲಿಲ್ಲ. ನಾನು ಒಂದು ದಿನವೂ ಅವಳ ಜೊತೆ ಆ ರೀತಿ ನಡೆದುಕೊಂಡಿಲ್ಲ'' ಎಂದರು ವಾಸುಕಿ ವೈಭವ್. ಆಗ, ''ಭೂಮಿ ಪೊಸೆಸ್ಸಿವ್ ಆಗಿದ್ದಾರೆ. ಅದು ಪ್ರೀತಿ ತರಹ ಪ್ರೊಜೆಕ್ಟ್ ಆಗಿರಬಹುದು'' ಅಂತ ಶೈನ್ ಶೆಟ್ಟಿ ಹೇಳಿದರು.

  ಓವರ್ ಥಿಂಕ್ ಮಾಡಬೇಡಿ

  ಓವರ್ ಥಿಂಕ್ ಮಾಡಬೇಡಿ

  ''ಶೈನ್ ಶೆಟ್ಟಿ ಅವರೇ... ಆ ಹಾಡು 'ಎಕ್ಸ್ ಕ್ಯೂಸ್ ಮೀ' ಚಿತ್ರದ್ದು. ಹದಿನಾರು ವರ್ಷ ಆಗಿದೆ ಆ ಚಿತ್ರ ತೆರೆಗೆ ಬಂದು. ಭೂಮಿ ಅವರಿಗೆ 21 ವರ್ಷ. ನೀವೆಲ್ಲ ಓವರ್ ಥಿಂಕ್ ಮಾಡ್ತಿದ್ದೀರಾ. ನೀವು ಮಾಡಿದ ಸ್ವಯಂವರವನ್ನ ತಮಾಷೆಯಾಗಿ ಮುಂದುವರೆಸಲು ಆ ಹಾಡನ್ನ ಹಾಡಿಸಿದರೆ, ಪ್ರೊಜೆಕ್ಟ್ ಆಗುತ್ತಿರುವ ರೀತಿ ಬಗ್ಗೆ ಓವರ್ ಥಿಂಕ್ ಮಾಡಿದರೆ, ನಾನು ಎಲಿಮಿನೇಶನ್ ಬಗ್ಗೆ ಮಾತ್ರ ಮಾತನಾಡಿ ಎಪಿಸೋಡ್ ಮುಗಿಸುವೆ. ಈ ತರಹ ಓವರ್ ಥಿಂಕ್ ಮಾಡಬೇಡಿ. ನಿಮ್ಮನ್ನ ತಪ್ಪಾಗಿ ತೋರಿಸಿ 'ಬಿಗ್ ಬಾಸ್'ಗೆ ಏನಾಗಬೇಕಿದೆ.? ಆ ರೀತಿ 'ಬಿಗ್ ಬಾಸ್' ಓಡುತ್ತೆ ಅಂತ ಅಂದುಕೊಂಡಿದ್ದೀರಾ.? ಕೆಲವರು ತುಂಬಾ ಲೆಕ್ಕಾಚಾರದಿಂದ ಆಟ ಆಡುತ್ತಿದ್ದೀರಾ. ಅಷ್ಟೊಂದು ತಲೆ ಕೆಡಿಸಿಕೊಳ್ಳಬೇಡಿ. ಅತಿಯಾದ ಬುದ್ಧಿವಂತಿಕೆಯನ್ನ ಒಳ್ಳೆಯ ಟ್ರ್ಯಾಕ್ ಗೆ ಹಾಕಿ'' ಎಂದು ಸುದೀಪ್ ಗುಟುರು ಹಾಕಿದರು.

  English summary
  Bigg Boss Kannada 7: Day 20: Shine Shetty's overthinking irks Kiccha Sudeep.
  Monday, November 4, 2019, 7:30
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X