twitter
    For Quick Alerts
    ALLOW NOTIFICATIONS  
    For Daily Alerts

    'ಬಿಗ್ ಬಾಸ್' ಬಗ್ಗೆ ಜೈಜಗದೀಶ್ ಬಹಿರಂಗ ಅಸಮಾಧಾನ: ಸುದೀಪ್ ಏನಂದರು.?

    |

    ಒಂದ್ಸಲಿ 'ದೊಡ್ಮನೆ'ಯೊಳಗೆ ಕಾಲಿಟ್ಟರೆ, 'ಬಿಗ್ ಬಾಸ್' ಹಾಕುವ ಎಲ್ಲ ನಿಯಮಗಳನ್ನು ಪಾಲಿಸಲೇ ಬೇಕು. ಒಂದು ವೇಳೆ ನಿಯಮಗಳನ್ನು ಗಾಳಿಗೆ ತೂರಿದರೆ ಲಕ್ಷುರಿ ಬಜೆಟ್ ಗೆ ಕತ್ತರಿ ಬೀಳುವುದು ಗ್ಯಾರೆಂಟಿ.

    ಮೈಕ್ ಸರಿಯಾಗಿ ಧರಿಸದೇ ಇದ್ದರೆ, ಮೈಕ್ ನ ಬ್ಯಾಟರಿ ಚೇಂಜ್ ಮಾಡದೇ ಹೋದರೆ, ಹಗಲು ಹೊತ್ತಿನಲ್ಲಿ ನಿದ್ದೆ ಮಾಡಿದರೆ, ಹೆಚ್ಚು ಆಂಗ್ಲ ಭಾಷೆ ಬಳಸಿದರೆ.. 'ಬಿಗ್ ಬಾಸ್' ಲಕ್ಷುರಿ ಬಜೆಟ್ ಪಾಯಿಂಟ್ ಗಳನ್ನು ಕಡಿತಗೊಳಿಸುತ್ತಾರೆ. ಉಳಿದ ಪಾಯಿಂಟ್ ಗಳಲ್ಲಿ ಸ್ಪರ್ಧಿಗಳು ರೇಷನ್ ಖರೀದಿ ಮಾಡುತ್ತಾರೆ.

    'ಬಿಗ್ ಬಾಸ್ ಕನ್ನಡ-7' ಕಾರ್ಯಕ್ರಮದಲ್ಲಿ ಕಳೆದ ವಾರ ಲಾಟೀನು ಹಿಡಿಯುವ ಟಾಸ್ಕ್ ನ ಸ್ಪರ್ಧಿಗಳಿಗೆ ನೀಡಲಾಗಿತ್ತು. ಇದರಲ್ಲಿ ಎಲ್ಲರೂ ಉತ್ತಮ ಪ್ರದರ್ಶನ ನೀಡಿದ್ದರಿಂದ 22,050 ಲಕ್ಷುರಿ ಬಜೆಟ್ ಪಾಯಿಂಟ್ ಗಳು ಲಭಿಸಿತ್ತು. ಆದರೆ, ನಿಯಮಗಳನ್ನು ಸರಿಯಾಗಿ ಪಾಲಿಸದ ಕಾರಣ 15,065 ಪಾಯಿಂಟ್ ಗಳನ್ನು 'ಬಿಗ್ ಬಾಸ್' ಕಟ್ ಮಾಡಿಬಿಟ್ಟರು.

    ಇದನ್ನ ತಿಳಿದ ಜೈಜಗದೀಶ್ 'ಬಿಗ್ ಬಾಸ್' ಬಗ್ಗೆ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದರು. ಈ ಕುರಿತು ಕಿಚ್ಚ ಸುದೀಪ್ 'ವಾರದ ಕಥೆ ಕಿಚ್ಚನ ಜೊತೆ' ಸಂಚಿಕೆಯಲ್ಲಿ ವಿವರಣೆ ನೀಡಿದರು. ಹೆಚ್ಚಿನ ಮಾಹಿತಿ ಫೋಟೋ ಸ್ಲೈಡ್ ಗಳಲ್ಲಿ ಓದಿರಿ...

    ಗರಂ ಆದ ಜೈಜಗದೀಶ್.!

    ಗರಂ ಆದ ಜೈಜಗದೀಶ್.!

    ಲಕ್ಷುರಿ ಬಜೆಟ್ ನಲ್ಲಿ 15,065 ಪಾಯಿಂಟ್ ಗಳನ್ನು 'ಬಿಗ್ ಬಾಸ್' ಕಟ್ ಮಾಡಿದ ಕೂಡಲೆ, ''ಪಾಯಿಂಟ್ಸ್ ಕೊಡುವುದು ಯಾಕೆ.? ಕಿತ್ತು ಕೊಳ್ಳುವುದು ಯಾಕೆ.? ಅದರ ಬದಲು ಗಂಜಿ ಕೊಟ್ಟರೆ, ಕುಡಿದುಕೊಂಡು ಇರಬಹುದು'' ಎನ್ನುತ್ತ ಜೈಜಗದೀಶ್ ಗರಂ ಆಗಿಬಿಟ್ಟಿದ್ದರು. ಇದೇ ಟಾಪಿಕ್ ಕುರಿತು 'ವಾರದ ಕಥೆ ಕಿಚ್ಚನ ಜೊತೆ' ಸಂಚಿಕೆಯಲ್ಲಿ ಸುದೀಪ್ ಚರ್ಚಿಸಿದರು.

    'ಬಿಗ್ ಬಾಸ್' ಸಾಮ್ರಾಜ್ಯದಲ್ಲಿ 'ರಾಜ' ಜೈಜಗದೀಶ್ ದರ್ಬಾರ್.!'ಬಿಗ್ ಬಾಸ್' ಸಾಮ್ರಾಜ್ಯದಲ್ಲಿ 'ರಾಜ' ಜೈಜಗದೀಶ್ ದರ್ಬಾರ್.!

    ದೀಪಿಕಾ ದಾಸ್ ಹೇಳಿದ್ದೇನು.?

    ದೀಪಿಕಾ ದಾಸ್ ಹೇಳಿದ್ದೇನು.?

    ''ಬೇಕು ಬೇಕು ಅಂತ ಪಾಯಿಂಟ್ಸ್ ಕಟ್ ಆಯ್ತು ಅಂತ ಅನಿಸ್ತಾ.?'' ಎಂದು ಎಲ್ಲರಿಗೂ ಸುದೀಪ್ ಕೇಳಿದಾಗ, ''ಮೈಕ್ ಸರಿಯಾಗಿ ಧರಿಸದೇ ಇರುವುದಕ್ಕೆಲ್ಲಾ ಮಾಮೂಲಿಯಾಗಿ ನೂರು ಪಾಯಿಂಟ್ ಗಳನ್ನು ಕಟ್ ಮಾಡುತ್ತಿದ್ದರು. ಆದ್ರೆ, ಈ ಬಾರಿ ಪಾಯಿಂಟ್ಸ್ ಜಾಸ್ತಿ ತೆಗೆದುಕೊಂಡಿದ್ವಿ. ಹೀಗಾಗಿ, ಅದನ್ನ ಸಮ ಮಾಡಲು ಸ್ವಲ್ಪ ಜಾಸ್ತಿ ಕಟ್ ಆಯ್ತು ಅಂತ ನನಗೆ ಅನಿಸ್ತು'' ಎಂದರು ದೀಪಿಕಾ ದಾಸ್.

    ಎರಡು ವಾರ: 'ಬಿಗ್ ಬಾಸ್' ಮನೆಯೊಳಗೆ ಏನ್ ನಡೀತಿದೆ.? ವೀಕ್ಷಕರಿಗೆ ಅರ್ಥ ಆಗ್ತಿಲ್ಲ.!ಎರಡು ವಾರ: 'ಬಿಗ್ ಬಾಸ್' ಮನೆಯೊಳಗೆ ಏನ್ ನಡೀತಿದೆ.? ವೀಕ್ಷಕರಿಗೆ ಅರ್ಥ ಆಗ್ತಿಲ್ಲ.!

    ಕಮ್ಮಿ ಪಾಯಿಂಟ್ಸ್ ಕೊಡಬಹುದಿತ್ತಲ್ವಾ.?

    ಕಮ್ಮಿ ಪಾಯಿಂಟ್ಸ್ ಕೊಡಬಹುದಿತ್ತಲ್ವಾ.?

    ''ಚಟುವಟಿಕೆಯಲ್ಲಿ ಲಾಟೀನ್ ಭಾರ ಇರಲಿಲ್ಲ. ಕೂರುವ ಅವಕಾಶ ಇಲ್ಲ ಎನ್ನುವುದು ಬಿಟ್ಟರೆ ಆರಾಮಾಗಿ ಮಾಡಬಹುದಾದ ಟಾಸ್ಕ್ ಅಂತ ಕಿಶನ್ ಹೇಳಿದ್ದರು. ಹೀಗಿರುವಾಗ, ಐದು ನಿಮಿಷಕ್ಕೆ ಒಂದು ಪಾಯಿಂಟ್ ಮಾತ್ರ ಕೊಡಬಹುದಿತ್ತು. ಆದರೆ ಬಿಗ್ ಬಾಸ್ ಹಾಗೆ ಮಾಡಲಿಲ್ಲ. ನಿಯಮಗಳನ್ನು ಗಾಳಿಗೆ ತೂರಿದ್ದಕ್ಕೆ ಮೂರು ಸಾವಿರ ಪಾಯಿಂಟ್ ಗಳು ಕಟ್ ಆಯ್ತು. ಚಾಕಲೇಟ್ ನ ಕದ್ದು ತಿಂದಿದ್ದಕ್ಕೆ ಮೂರು ಪಟ್ಟು ಹೆಚ್ಚು ಪಾಯಿಂಟ್ ಹೋಗಲೇಬೇಕು. ಯಾಕಂದ್ರೆ, ಅದು ತಪ್ಪು. ಮೂರು ಬಾರಿ ಕದ್ದು ತಿನ್ನುವುದು ಸರಿ ಅಲ್ಲ'' ಎಂದರು ಸುದೀಪ್.

    ಒಂದು ವಾರದ 'ಬಿಗ್ ಬಾಸ್': ರವಿ ಬೆಳಗೆರೆ ಕಿಂಗ್, ಮಿಕ್ಕವರೆಲ್ಲ ಠುಸ್.!ಒಂದು ವಾರದ 'ಬಿಗ್ ಬಾಸ್': ರವಿ ಬೆಳಗೆರೆ ಕಿಂಗ್, ಮಿಕ್ಕವರೆಲ್ಲ ಠುಸ್.!

    ಇದು ದಾಖಲೆ.!

    ಇದು ದಾಖಲೆ.!

    ''ನಿಮ್ಮಲ್ಲಿ ಯಾರಿಗೂ ಗೊತ್ತಿಲ್ಲದ ವಿಷಯ ಏನಂದ್ರೆ, ನೀವು ಪಡೆದ 6,985 ಲಕ್ಷುರಿ ಬಜೆಟ್ ಪಾಯಿಂಟ್ಸ್ ಇಲ್ಲಿಯವರೆಗೂ ಹೈಯೆಸ್ಟ್. ಹಾಗೇ, ಒಟ್ಟಾರೆಯಾಗಿ ಗಳಿಸಿದ್ದ 22,050 ಪಾಯಿಂಟ್ಸ್ ಕೂಡ ಇಲ್ಲಿಯವರೆಗೂ ಅತಿ ಹೆಚ್ಚು'' ಎಂದು ಈ ಬಾರಿ ಸ್ಪರ್ಧಿಗಳು ಸೃಷ್ಟಿಸಿದ್ದ ಹೊಸ ದಾಖಲೆ ಬಗ್ಗೆ ಸುದೀಪ್ ಮಾಹಿತಿ ನೀಡಿದರು.

    English summary
    Bigg Boss Kannada 7: Day 20: Sudeep spoke about luxury budget record.
    Monday, November 4, 2019, 13:13
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X