ರೊಚ್ಚಿಗೆದ್ದ ರಾಜು ತಾಳಿಕೋಟೆ: ಇಲ್ಲಿವರೆಗೂ ಒಂದು ಲೆಕ್ಕ, ಇನ್ಮೇಲೆ ಬೇರೆ ಲೆಕ್ಕ.!

ರಾಜು ತಾಳಿಕೋಟೆ.. ಹೇಳಿ ಕೇಳಿ ಇವರು ಹಾಸ್ಯ ನಟ. ರಂಗಭೂಮಿ ಮತ್ತು ಸಿನಿಮಾಗಳಲ್ಲಿ ಹಾಸ್ಯ ಪಾತ್ರಗಳಲ್ಲಿ ರಾಜು ತಾಳಿಕೋಟೆ ಹೆಚ್ಚು ಕಾಣಿಸಿಕೊಂಡಿದ್ದಾರೆ. ಹೀಗಾಗಿ, 'ಬಿಗ್ ಬಾಸ್' ಮನೆಯೊಳಗೆ ಇವರೊಂಥರಾ ''ಕಾಮಿಡಿ ಕ್ಯಾರೆಕ್ಟರ್'' ಅಂತ ಹಲವು ಸ್ಪರ್ಧಿಗಳು ಭಾವಿಸಿದ್ದಾರೆ.

ಕಾಮಿಡಿ ನಟ ಆಗಿರೋದ್ರಿಂದ ಇವರ ಮಾತುಗಳನ್ನ ಯಾರೂ ಸೀರಿಯಸ್ ಆಗಿ ಪರಿಗಣಿಸುತ್ತಿಲ್ಲ. 'ಬಿಗ್ ಬಾಸ್' ಕೊಡುವ ಚಟುವಟಿಕೆಗಳಲ್ಲಿ ಕೈಲಾದಷ್ಟು ಶ್ರಮ ಹಾಕಿದರೂ, ಯಾರೂ ಗುರುತಿಸುತ್ತಿಲ್ಲ. ಇವೆಲ್ಲದರ ಜೊತೆಗೆ ''ಊರಿಗೆ ಹೋಗಬೇಕು, ಮನೆಯವರನ್ನು ನೋಡಬೇಕು'' ಅಂತ ರಾಜು ತಾಳಿಕೋಟೆ ಹೇಳಿದ್ದು ಕೆಲ ಸ್ಪರ್ಧಿಗಳಿಗೆ 'ಟಾರ್ಗೆಟ್ ಮಾಡುವ ಅಸ್ತ್ರ'ವಾಗಿದೆ.

ನಿನ್ನೆ ನಡೆದ ಓಪನ್ ನಾಮಿನೇಶನ್ ಪ್ರಕ್ರಿಯೆಯಲ್ಲೂ ''ರಾಜು ತಾಳಿಕೋಟೆಗೆ ಸ್ಪರ್ಧಾತ್ಮಕ ಮನೋಭಾವ ಇಲ್ಲ'' ಅಂತ ಕೆಲ ಸ್ಪರ್ಧಿಗಳು ತಿವಿದರು. ಪರಿಣಾಮ ರಾಜು ತಾಳಿಕೋಟೆ ರೊಚ್ಚಿಗೆದ್ದಿದ್ದಾರೆ. ''ಇನ್ಮೇಲೆ ಸಮರ್ಥರು ಯಾರು ಅಂತ ತೋರಿಸುವೆ. ಯುದ್ಧ ಶುರು'' ಅಂತ ಹೇಳುವ ಮೂಲಕ ಹೊಸ ಗೇಮ್ ಪ್ಲಾನ್ ಗೆ ರಾಜು ತಾಳಿಕೋಟೆ ನಾಂದಿ ಹಾಡಿದ್ದಾರೆ. ಮುಂದೆ ಓದಿರಿ...

ಕೇಳಿ ಕೇಳಿ ಬೇಸೆತ್ತ ರಾಜು ತಾಳಿಕೋಟೆ

ಕೇಳಿ ಕೇಳಿ ಬೇಸೆತ್ತ ರಾಜು ತಾಳಿಕೋಟೆ

''ರಾಜು ತಾಳಿಕೋಟೆಗೆ ಸ್ಪರ್ಧಾತ್ಮಕ ಮನೋಭಾವ ಇಲ್ಲ. ಯಾವಾಗಲೂ ಮನೆಗೆ ಹೋಗಬೇಕು ಅಂತಿರುತ್ತಾರೆ'' ಎಂಬ ಕಾರಣಗಳನ್ನು ಇಟ್ಟುಕೊಂಡು ಪದೇ ಪದೇ ಟಾರ್ಗೆಟ್ ಮಾಡಿದ್ರಿಂದ ರಾಜು ತಾಳಿಕೋಟೆ ಬೇಸೆತ್ತಿದ್ದಾರೆ. ಹೀಗಾಗಿ, ನಾಮಿನೇಶನ್ ಪ್ರಕ್ರಿಯೆಯಲ್ಲಿ ಶೈನ್ ಶೆಟ್ಟಿ ಮತ್ತು ವಾಸುಕಿ ವೈಭವ್ ವಿರುದ್ಧ ರಾಜು ತಾಳಿಕೋಟೆ ನೇರವಾಗಿ ತಿರುಗೇಟು ಕೊಟ್ಟರು.

ಸಿಟ್ಟು ಹೊರಹಾಕಿದ ರಾಜು ತಾಳಿಕೋಟೆ

ಸಿಟ್ಟು ಹೊರಹಾಕಿದ ರಾಜು ತಾಳಿಕೋಟೆ

ಚಟುವಟಿಕೆಯಲ್ಲಿ ರಾಜು ತಾಳಿಕೋಟೆ ಮೂರು ಗಂಟೆ ಲಾಟೀನು ಹಿಡಿದಿದ್ದರು. ಆದರೆ, ಶೈನ್ ಶೆಟ್ಟಿ ಕೇವಲ ಎರಡು ಗಂಟೆ ಮಾತ್ರ ಲಾಟೀನು ಹಿಡಿದಿದ್ದರು. ಇದನ್ನ ಪ್ರಸ್ತಾಪಿಸಿ ಶೈನ್ ಶೆಟ್ಟಿಯನ್ನ ರಾಜು ತಾಳಿಕೋಟೆ ನಾಮಿನೇಟ್ ಮಾಡಿದರು. ಇನ್ನೂ ''ವಾಸುಕಿ ವೈಭವ್ ಪೆದ್ದ'' ಎಂದು ತಮ್ಮ ಸಿಟ್ಟನ್ನ ರಾಜು ತಾಳಿಕೋಟೆ ಹೊರಹಾಕಿದರು.

ಇನ್ಮೇಲೆ ಹೊಸ ಲೆಕ್ಕ.!

ಇನ್ಮೇಲೆ ಹೊಸ ಲೆಕ್ಕ.!

''ನಾನು ಅಸಮರ್ಥ ಅಂತ ತಿಳಿದುಕೊಂಡಿರುವ ಎಲ್ಲರಿಗೂ ನಾನು ಸಮರ್ಥ ಅಂತ ತೋರಿಸಿಕೊಳ್ಳಬೇಕಾಗಿದೆ. ಇಷ್ಟು ದಿನ ನಾನು ಊರಿಗೆ ಹೋಗಬೇಕು ಅಂತಿದ್ದೆ. ಇನ್ಮೇಲೆ ಹಾಗೆ ಹೇಳಲ್ಲ. ಡೈರೆಕ್ಟ್ ಯುದ್ಧವೇ. ಯುದ್ಧ ಮಾಡಲು ಬತ್ತಳಿಕೆಯಲ್ಲಿ ಸಾಕಷ್ಟು ಅಸ್ತ್ರಗಳನ್ನು ಹೊತ್ತು ತಂದಿದ್ದೇನೆ. ಅದನ್ನೆಲ್ಲ ಉಪಯೋಗಿಸಬಾರದು ಅಂತ ಇಷ್ಟು ದಿನ ಸುಮ್ಮನೆ ಇದ್ದೆ. ಇನ್ಮೇಲೆ ಬಳಸುತ್ತೇನೆ. ನಾನು ಮಂಗನ ಜಾತಿಯವನು'' ಅಂತ ರಾಜು ತಾಳಿಕೋಟೆ ಹೇಳಿದ್ದಾರೆ. ಇದನ್ನ ನೋಡಿದರೆ ಅವರು ಜಿದ್ದಿಗೆ ಬಿದ್ದಿರುವುದು ಸ್ಪಷ್ಟ.

ಪಕ್ಕಾ ಪ್ಲಾನ್ ಮಾಡುತ್ತಿರುವ ರಾಜು ತಾಳಿಕೋಟೆ

ಪಕ್ಕಾ ಪ್ಲಾನ್ ಮಾಡುತ್ತಿರುವ ರಾಜು ತಾಳಿಕೋಟೆ

'ಬಿಗ್ ಬಾಸ್' ಮನೆಯಲ್ಲಿ ಹೆಚ್ಚು ದಿನ ಉಳಿಯಲು ಗ್ರೂಪಿಸಂ ಸೇರಿದಂತೆ ಹಲವು ಪ್ಲಾನ್ ಗಳನ್ನು ರಾಜು ತಾಳಿಕೋಟೆ ಮಾಡುತ್ತಿದ್ದಾರೆ. ತಮ್ಮ ಗುಂಪಿಗೆ ಚಂದನ್ ಆಚಾರ್ ನ ಸೆಳೆಯಲು ರಾಜು ತಾಳಿಕೋಟೆ ಶತ ಪ್ರಯತ್ನ ಮಾಡಿದ್ದಾರೆ. ವಾಸುಕಿ ವೈಭವ್ ಮತ್ತು ಶೈನ್ ಶೆಟ್ಟಿ ಗ್ಯಾಂಗ್ ನ ಬ್ರೇಕ್ ಮಾಡುವಲ್ಲಿ ರಾಜು ತಾಳಿಕೋಟೆ ಯಶಸ್ವಿ ಆಗ್ತಾರಾ.? ನೋಡಬೇಕು. ಅಂದ್ಹಾಗೆ, ರಾಜು ತಾಳಿಕೋಟೆ ಈ ವಾರ ನಾಮಿನೇಟ್ ಆಗಿದ್ದಾರೆ. ಅವರನ್ನ ಸೇಫ್ ಮಾಡುವ ಜವಾಬ್ದಾರಿ ನಿಮ್ಮ ಮೇಲಿದೆ.

More from Filmibeat

English summary
Bigg Boss Kannada 7: Day 22: Raju Talikote annoyed with Vasuki Vaibhav and Shine Shetty.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X