ಆಂಟಿ ಎಂದು ರೇಗಿಸಿದ ಕಿಶನ್, ವಾಸುಕಿ: ಕಣ್ಣೀರಿಟ್ಟ ಭೂಮಿ ಶೆಟ್ಟಿ
ಕರಾವಳಿ ಕುವರಿ ಭೂಮಿ ಶೆಟ್ಟಿ ಸೂಕ್ಷ್ಮ ಮನಸ್ಸಿನ 'ಕಿನ್ನರಿ'. ಎಲ್ಲರೊಂದಿಗೆ ಆತ್ಮೀಯವಾಗಿ ಇರುವ ಭೂಮಿ ಶೆಟ್ಟಿಗೆ ಯಾರಾದರೂ ಸ್ವಲ್ಪ ಕಾಲೆಳೆದರೂ ಸಾಕು ಕಣ್ಣೀರ ಕೋಡಿ ಹರಿದು ಬಿಡುತ್ತದೆ. ಸ್ನೇಹದಲ್ಲಿ ಕೊಂಚ ಗ್ಯಾಪ್ ಇದೆ ಅಂತ ಅನಿಸಿದರೂ, ಅದನ್ನ ಭೂಮಿ ಶೆಟ್ಟಿ ಸಕಾರಾತ್ಮಕವಾಗಿ ಸ್ವೀಕರಿಸುವುದಿಲ್ಲ. ಇದೇ ಕಾರಣಕ್ಕೆ 'ಬಿಗ್ ಬಾಸ್' ಮನೆಯೊಳಗೆ ಭೂಮಿ ಶೆಟ್ಟಿ ಮತ್ತು ಪ್ರಿಯಾಂಕಾ ನಡುವೆ ಮನಸ್ತಾಪ ಆಗಿತ್ತು.
ಸದ್ಯಕ್ಕೆ ಭೂಮಿ ಶೆಟ್ಟಿ ಮತ್ತು ಪ್ರಿಯಾಂಕಾ ನಡುವೆ ಭಿನ್ನಾಭಿಪ್ರಾಯ ಏನೇ ಇದ್ದರೂ.. ಇಬ್ಬರ ಸ್ನೇಹ ಮಾತ್ರ ಗಟ್ಟಿಯಾಗಿದೆ. ಈ ನಡುವೆ 'ರಣರಂಗ' ಚಟುವಟಿಕೆಯ ಗ್ಯಾಪ್ ನಲ್ಲಿ ವಾಸುಕಿ ವೈಭವ್ ಮತ್ತು ಕಿಶನ್.. ಭೂಮಿ ಶೆಟ್ಟಿಗೆ 'ಆಂಟಿ ಆಂಟಿ' ಅಂತ ರೇಗಿಸುತ್ತಿದ್ದರು.
ಇಬ್ಬರ ಮುಂದೆ ಪ್ರತಿಕ್ರಿಯೆ ಕೊಡದ ಭೂಮಿ ಶೆಟ್ಟಿ ಬಾಯ್ತಂಬ ಸಕ್ಕರೆ ಹಾಕಿಕೊಂಡು ಸುಮ್ಮನಾದರು. ಬಳಿಕ ಪ್ರಿಯಾಂಕಾ ಮುಂದೆ ಕಣ್ಣೀರು ಸುರಿಸಿದರು. ''ನನ್ನ ಜೊತೆ ನೀನು ಹೆಚ್ಚು ಮಾತನಾಡಲ್ಲ'' ಎನ್ನುತ್ತ ಪ್ರಿಯಾಂಕಾ ಜೊತೆ ಗೋಳು ತೋಡಿಕೊಂಡರು ಭೂಮಿ ಶೆಟ್ಟಿ.

ಚಟುವಟಿಕೆಗಳಲ್ಲಿ ಅನಿಸಿದ್ದನ್ನ ನೇರವಾಗಿ ಮಾತನಾಡುವ ಭೂಮಿ ಶೆಟ್ಟಿ ಸ್ನೇಹ-ಸಂಬಂಧಗಳಲ್ಲಿ ತುಂಬಾ ಭಾವುಕರು. ಸಣ್ಣ ಸಣ್ಣ ವಿಚಾರಕ್ಕೂ ಕಣ್ಣೀರು ಹಾಕಿ ಬೇಸರ ಮಾಡಿಕೊಳ್ಳುವ ಭೂಮಿ ಶೆಟ್ಟಿ 'ಬಿಗ್ ಬಾಸ್' ಮನೆಯಲ್ಲಿ ನೂರು ದಿನ ತುಂಬಿಸುತ್ತಾರಾ.?


Click it and Unblock the Notifications











