ಬೆಂಕಿ ಬಿದ್ದ ಮೇಲೆ ಅಕ್ಷರಶಃ 'ರಣರಂಗ'ವಾದ ಬಿಗ್ ಬಾಸ್ ಮನೆ.!

ಮೂರು ವಾರಗಳ ಕಾಲ 'ಬಿಗ್ ಬಾಸ್' ಮನೆ ಶಾಂತವಾಗಿತ್ತು. ಅಲ್ಲೊಂದು ಇಲ್ಲೊಂದು ಕಿರಿಕ್ ಬಿಟ್ಟರೆ, ಹೊಡೆದಾಟ-ಕಚ್ಚಾಟ ಯಾವತ್ತೂ ನಡೆದಿರಲಿಲ್ಲ. ಅಂತಹ ಟಾಸ್ಕ್ ಕೂಡ ಇಲ್ಲಿಯವರೆಗೂ 'ಬಿಗ್ ಬಾಸ್' ಕೊಟ್ಟಿರಲಿಲ್ಲ.

ಆದ್ರೀಗ, ನಾಲ್ಕನೇ ವಾರಕ್ಕೆ ಕಾಲಿಟ್ಟಿದ್ದೇ ತಡ.. ಓಪನ್ ನಾಮಿನೇಶನ್ ಎಂಬ ಬೆಂಕಿಯನ್ನ 'ಬಿಗ್ ಬಾಸ್' ಹಚ್ಚಿದರು. ಅಲ್ಲಿಂದ ಶುರುವಾದ ಅಸಮಾಧಾನದ ಬೇಗುದಿ ನಿನ್ನೆ ಚಟುವಟಿಕೆ ನೆಪದಲ್ಲಿ ಸ್ಫೋಟಗೊಂಡಿತು. ಹೆಸರಿಗೆ 'ರಣರಂಗ' ಎಂಬ ಟಾಸ್ಕ್ ನ 'ಬಿಗ್ ಬಾಸ್' ಕೊಟ್ಟರು. ನೋಡಿದ್ರೆ, ಕ್ಷಣಾರ್ಧದಲ್ಲಿ ಇಡೀ 'ಬಿಗ್ ಬಾಸ್' ಮನೆ ಅಕ್ಷರಶಃ ರಣರಂಗವಾಗಿ ಮಾರ್ಪಾಟಾಗಿತ್ತು.

ಲಕ್ಷುರಿ ಬಜೆಟ್ ಮೇಲೆ ಹಕ್ಕು ಸಾಧಿಸಲು ಭೂಮಿ ಶೆಟ್ಟಿ ಮತ್ತು ದೀಪಿಕಾ ದಾಸ್ ನೇತೃತ್ವದ ಎರಡು ತಂಡಗಳ ನಡುವೆ ಜಿದ್ದಾ-ಜಿದ್ದಿ ನಡೆಯಿತು. ಈ ನಡುವೆ ವಾದ-ವಿವಾದ-ವಾಕ್ಸಮರ ನಾನ್ ಸ್ಟಾಪ್ ಆಗಿತ್ತು. ಈ ಎಲ್ಲದರ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ, ಓದಿರಿ...

'ಬಿಗ್ ಬಾಸ್' ಕೊಟ್ಟ ಲಕ್ಷುರಿ ಬಜೆಟ್ ಟಾಸ್ಕ್ ಯಾವುದು.?

'ಬಿಗ್ ಬಾಸ್' ಕೊಟ್ಟ ಲಕ್ಷುರಿ ಬಜೆಟ್ ಟಾಸ್ಕ್ ಯಾವುದು.?

ಸಹಕಾರ ಮತ್ತು ಒಗ್ಗಟ್ಟಿನ ಮಹತ್ವ ತಿಳಿಯಲು 'ರಣರಂಗ' ಎಂಬ ಲಕ್ಷುರಿ ಬಜೆಟ್ ಟಾಸ್ಕ್ ನ 'ಬಿಗ್ ಬಾಸ್' ನೀಡಿದರು. ಇದರ ಅನುಸಾರ ಸ್ಪರ್ಧಿಗಳನ್ನು ಎರಡು ತಂಡಗಳಾಗಿ ವಿಭಜಿಸಬೇಕಿತ್ತು. ಎರಡು ತಂಡಗಳ ನಾಯಕರನ್ನಾಗಿ ಭೂಮಿ ಶೆಟ್ಟಿ ಮತ್ತು ದೀಪಿಕಾ ದಾಸ್ ರನ್ನ ಹರೀಶ್ ರಾಜ್ ಆಯ್ಕೆ ಮಾಡಿದರು. ಅಲ್ಲಿಗೆ, ಭೂಮಿ ಶೆಟ್ಟಿ ತಂಡ (ಸಿಡಿಲು)ದಲ್ಲಿ ಕಿಶನ್, ಪ್ರಿಯಾಂಕಾ, ವಾಸುಕಿ ವೈಭವ್, ಕುರಿ ಪ್ರತಾಪ್, ರಾಜು ತಾಳಿಕೋಟೆ ಮತ್ತು ಜೈಜಗದೀಶ್ ಇದ್ದರೆ ದೀಪಿಕಾ ದಾಸ್ (ಸಪ್ತಾಶ್ವ) ತಂಡದಲ್ಲಿ ಶೈನ್ ಶೆಟ್ಟಿ, ಪೃಥ್ವಿ, ಚಂದನ್, ಚೈತ್ರ ಕೋಟೂರು, ಚಂದನಾ ಮತ್ತು ಸುಜಾತ ಇದ್ದಾರೆ. ಚಟುವಟಿಕೆಯ ಅಂತ್ಯದಲ್ಲಿ ಯಾವ ತಂಡಕ್ಕೆ ಹೆಚ್ಚು ಅಂಕ ಇರುತ್ತದೋ ಆ ತಂಡ ಗೆದ್ದಂತೆ.

ಮೊದಲ ಸವಾಲು ಯಾವುದು.?

ಮೊದಲ ಸವಾಲು ಯಾವುದು.?

'ರಣರಂಗ' ಚಟುವಟಿಕೆಯಲ್ಲಿ ನೀಡಿದ ಮೊದಲ ಹಂತದ ಸವಾಲು 'ಗಾಳಿ ಗೋಪುರ'. ಇದರ ಅನುಸಾರ 'ಬಿಗ್ ಬಾಸ್' ನೀಡುವ ವಸ್ತುಗಳನ್ನು ಬಳಸಿಕೊಂಡು ಗೋಪುರ ಕಟ್ಟಬೇಕಿತ್ತು. ವಸ್ತುಗಳನ್ನು ಪಡೆದುಕೊಳ್ಳಲು ಎರಡು ತಂಡಗಳ ನಡುವೆ ಕಿತ್ತಾಟ ಆರಂಭವಾಯಿತು. ನೂಕಾಟದಲ್ಲಿ ಎರಡ್ಮೂರು ಬಾರಿ ಪ್ರಿಯಾಂಕಾ ಬಿದ್ದರು. ಸಾಲದಕ್ಕೆ ಮುಖಕ್ಕೆ ಗಾಯ ಮಾಡಿಕೊಂಡರು.

ತೆಂಗಿನಕಾಯಿ ಜಗಳ

ತೆಂಗಿನಕಾಯಿ ಜಗಳ

ಕಟ್ಟಿದ ಗೋಪುರವನ್ನು ಕಾಪಾಡಿಕೊಳ್ಳುವುದು ಆಯಾ ತಂಡಗಳ ಜವಾಬ್ದಾರಿ. ಎದುರಾಳಿ ತಂಡದ ಗೋಪುರವನ್ನು ಕೆಡವಲು ಚೆಂಡನ್ನು ಎಸೆಯಲಾಗುತ್ತಿತ್ತು. ಆದರೆ ಜೈಜಗದೀಶ್ ಕೈಯಲ್ಲಿ ಚೆಂಡಿನ ಬದಲು ತೆಂಗಿನಕಾಯಿ ಇತ್ತು. ಚೆಂಡನ್ನು ಎಸೆಯದಂತೆ ಚೈತ್ರ ಕೋಟೂರುಗೆ ಜೈಜಗದೀಶ್ ಎಚ್ಚರಿಸುತ್ತಿದ್ದರು. ಹೀಗಿರುವಾಗಲೇ ಛೂಚೆಂಡು ಆರಂಭವಾಯಿತು. ಆಗಲೇ, ನೆಲಕ್ಕೆ ತೆಂಗಿನಕಾಯಿಯನ್ನ ಜೈಜಗದೀಶ್ ಎಸೆದರು. ''ತೆಂಗಿನಕಾಯಿ ಕಾಲಿಗೆ ಬಿದಿದ್ದರೆ ಏನು ಗತಿ.?'' ಅಂತ ಚೈತ್ರ ಕೋಟೂರು ಕ್ಯಾತೆ ತೆಗೆದರು. ಇದು ಎರಡು ತಂಡಗಳ ನಡುವೆ ದೊಡ್ಡ ವಾಕ್ಸಮರಕ್ಕೆ ಕಾರಣವಾಯಿತು.

ಜಿದ್ದಾ-ಜಿದ್ದಿ

ಜಿದ್ದಾ-ಜಿದ್ದಿ

ಗೋಪುರವನ್ನು ಕಾಪಾಡಿಕೊಳ್ಳಲು ಎರಡು ತಂಡಗಳ ನಡುವೆ ಜಿದ್ದಾ-ಜಿದ್ದಿ ನಡೆಯಿತು. ಒಂದು ಕಡೆ ಕುರಿ ಪ್ರತಾಪ್, ರಾಜು ತಾಳಿಕೋಟೆ ಗೋಪುರವನ್ನು ಬೀಳಿಸಿದರೆ, ಇನ್ನೊಂದು ಕಡೆ ಶೈನ್ ಶೆಟ್ಟಿ ಗೋಪುರವನ್ನು ಕೆಡವಿದರು. ಈ ಟೈಮ್ ನಲ್ಲಿ ವಾದ-ವಾಗ್ವಾದ ನಡೆಯಿತು. ಅತ್ತ ಸಂಬಂಧ ಇಲ್ಲದೇ ಇದ್ದರೂ, ತೆಂಗಿನಕಾಯಿ ಮ್ಯಾಟರ್ ನಲ್ಲಿ ಮೂಗು ತೂರಿಸಿ ಭೂಮಿ ಶೆಟ್ಟಿಗೆ ಚಂದನ್ ಆಚಾರ್ ಕಿರಿಕಿರಿ ಮಾಡಿದರು. ಇಷ್ಟೆಲ್ಲ ಗಲಾಟೆ ನಡುವೆ ಭೂಮಿ ಶೆಟ್ಟಿ ನೇತೃತ್ವದ ಸಿಡಿಲು ತಂಡ 'ಗಾಳಿ ಗೋಪುರ' ಸವಾಲಿನಲ್ಲಿ ವಿಜೇತರಾದರು.

More from Filmibeat

English summary
Bigg Boss Kannada 7: Day 23: Verbal spat between contestants during Ranaranga Task.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X