'ಬಿಗ್ ಬಾಸ್' ಮನೆಯ ಉರ್ಸಿಂಗ, ಕಾಡು ಪಾಪ, ಸಿಡುಕ್ ಸಿಂಡ್ರಿ ಯಾರು ಗೊತ್ತಾ.?

Recommended Video

Bigg Boss Kannada 7: ಎದುರಾಳಿ ತಂಡಕ್ಕೆ ಅಡ್ಡ ಹೆಸರು ಇಡುವ ಟಾಸ್ಕ್ ಕೊಟ್ಟ ಬಿಗ್ ಬಾಸ್ |Filmibeat kannada

'ಬಿಗ್ ಬಾಸ್ ಕನ್ನಡ-7' ಕಾರ್ಯಕ್ರಮದಲ್ಲಿ ಈ ವಾರ 'ರಣರಂಗ' ಎಂಬ ಲಕ್ಷುರಿ ಬಜೆಟ್ ಟಾಸ್ಕ್ ನಡೆಯುತ್ತಿರುವುದು ನಿಮಗೆಲ್ಲ ಗೊತ್ತೇ ಇದೆ. 'ರಣರಂಗ'ದ ನಡುವೆ ಸ್ಪರ್ಧಿಗಳ ಹುಮ್ಮಸ್ಸು ಹೆಚ್ಚಿಸಲು 'ಬಿಗ್ ಬಾಸ್' ಒಂದು ವಿಶೇಷ ಚಟುವಟಿಕೆ ನೀಡಿದ್ದರು. ಅದರ ಅನುಸಾರ ಎದುರಾಳಿ ತಂಡದ ಸದಸ್ಯರಿಗೆ ಅಡ್ಡ ಹೆಸರು ಇಡಬೇಕಿತ್ತು. ಅದಕ್ಕೆ ಸೂಕ್ತ ಕಾರಣಗಳನ್ನೂ ನೀಡಬೇಕಿತ್ತು.

ಹಾಗಾದ್ರೆ, ಯಾರಿಗೆ ಯಾವ ಅಡ್ಡ ಹೆಸರು ಇಡಲಾಗಿದೆ ಗೊತ್ತಾ.? ಲಿಸ್ಟ್ ಇಲ್ಲಿದೆ ನೋಡಿ...

'ಬಿಗ್ ಬಾಸ್' ಮನೆಯೊಳಗೆ ಸಣ್ಣ ಸಣ್ಣ ವಿಷಯಕ್ಕೂ ಚಂದನಾ ಕಣ್ಣೀರು ಹಾಕ್ತಾರಂತೆ. ಅದಕ್ಕೆ ಚಂದನಾಗೆ 'ಅಳುಮುಂಜಿ' ಅಂತ ಕರೆಯಲಾಗಿದೆ. ರಾಜು ತಾಳಿಕೋಟೆ ಹೆಚ್ಚಾಗಿ ಸ್ಮೋಕಿಂಗ್ ಝೋನ್ ನಲ್ಲೇ ಕಾಲ ಕಳೆಯುತ್ತಾರೆ. ಹೀಗಾಗಿ ಅವರಿಗೆ 'ಮೋಟ್ ಬೀಡಿ' ಅಂತ ನಾಮಕರಣ ಮಾಡಲಾಗಿದೆ.

Bigg Boss Kannada 7: Day 24: Nick Names Of All The Contestants

ಸಿಲ್ಲಿ ಸಿಲ್ಲಿ ವಿಷಯಗಳನ್ನು ಕೆದಕುವುದು, ಬೇಗ ಉರ್ಕೊಂಡು ಬೇರೆಯವರನ್ನೂ ಉರಿಸುವ ಕೆಲಸ ಮಾಡುವುದು ಚಂದನ್ ಆಚಾರ್. ಅದಕ್ಕೆ ಅವರಿಗೆ 'ಉರ್ಸಿಂಗ' ಅಂತ ನಿಕ್ ನೇಮ್ ಇಡಲಾಗಿದೆ. ಇನ್ನೂ ಜಾಸ್ತಿ ಡವ್ ಮಾಡುವ ಕಿಶನ್ 'ಡವ್ ರಾಜ' ಅಂತೆ.

'ಮುಟ್ಟಿದ್ರೆ ಮುನಿ' ತರಹ ಆಡುವ ದೀಪಿಕಾಗೆ ಸ್ವಲ್ಪ ಮುನಿಸು ಜಾಸ್ತಿ. ಹಾಗಾಗಿ, 'ನಾಗಿಣಿ' ದೀಪಿಕಾ ದಾಸ್ ಗೆ 'ಮುನಿಯಮ್ಮ' ಅಂತ ಹೆಸರು ಕೊಡಲಾಗಿದೆ. ಕರಾವಳಿ ಕುವರಿ ಭೂಮಿ ಶೆಟ್ಟಿಗೆ ಡಿಸ್ನಿ ಲ್ಯಾಂಡ್ ಗೆ ಹೋಗುವಾಸೆ ಇದೆ. ಡಿಸ್ನಿ ಲ್ಯಾಂಡ್ ನಲ್ಲಿ ಭೂಮಿಗೆ ಒಳ್ಳೆ ಹುಡುಗ ಸಿಗ್ಲಿ ಅಂತ ಡಿಸ್ನಿ ದಿನೇಶ ಅಂತ ಹೆಸರು ನೀಡಲಾಗಿದೆ.

ಮೈಯಲ್ಲಿ ಕೂದಲು ಹೆಚ್ಚಾಗಿರುವ ಕಾರಣ ಶೈನ್ ಶೆಟ್ಟಿ 'ಕಾಡು ಪಾಪ' ಆದರೆ, ಸದಾ ಸಿಡುಕುವ ಪ್ರಿಯಾಂಕಾ 'ಸಿಡುಕ್ ಸಿಂಡ್ರಿ'. ಇನ್ನೂ ನೈಟಿ ತರಹ ಡ್ರೆಸ್ ಗಳನ್ನು ಧರಿಸುವ ಪೃಥ್ವಿಗೆ 'ನೈಟಿ' ಅಂತಲೇ ಕರೆಯಲಾಗುತ್ತಿದೆ.

ಆಗಾಗ ಗಂಟಲು ಸರಿ ಮಾಡಿಕೊಳ್ಳುವ ವಾಸುಕಿ ವೈಭವ್ ಗೆ 'ಗಳಗಂಟೆ'. ಜೋರಾಗಿ ಮಾತನಾಡುವ ಸುಜಾತಗೆ 'ಬಾಯಿಬಡುಕಿ', ಸಿಟ್ಟು ಮಾಡಿಕೊಳ್ಳುವ ಜೈಜಗದೀಶ್ ಗೆ 'ಲೊಟ್ಟೆ ಸಿಟ್ರೇಶ್', ನಿಮಿಷಕ್ಕೆ ಒಂದೊಂದು ಕಥೆ ಹೇಳುವ ಚೈತ್ರ ಕೋಟೂರು 'ಊಸರವಳ್ಳಿ', ಹೆಚ್ಚು ಕನ್ ಫ್ಯೂಸ್ ಆಗುವ ಕುರಿ ಪ್ರತಾಪ್ ಗೆ 'ಗೊಂದ್ಲೇಶ' ಅಂತ ನಾಮಕರಣ ಮಾಡಲಾಗಿದೆ.

More from Filmibeat

English summary
Bigg Boss Kannada 7: Day 24: Here is the list of nick names for all the contestants.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X