For Quick Alerts
  ALLOW NOTIFICATIONS  
  For Daily Alerts

  ಶೈನ್ ಶೆಟ್ಟಿ ಇಲ್ಲದೇ ಚೈತ್ರ ಕೋಟೂರು ಸೇಫ್ ಆಗೋಕೆ ಚಾನ್ಸೇ ಇಲ್ವಾ?

  |

  ಯಾರು ಏನೇ ಅಂದರೂ 'ಬಿಗ್ ಬಾಸ್' ಮನೆಯಲ್ಲಿ ಕನ್ಟೆನ್ಟ್ ಇದ್ದವರಿಗೆ ಮಾತ್ರ ಬೆಲೆ. ಕನ್ಟೆನ್ಟ್ ಕೊಡದವರು 'ಬಿಗ್ ಬಾಸ್' ಮನೆಯಲ್ಲಿ ಇದ್ದರೆಷ್ಟು, ಹೋದರೆಷ್ಟು ನೀವೇ ಹೇಳಿ.. ಅದರಲ್ಲೂ ನಾಮಿನೇಟ್ ಆದವರಂತೂ ಸಂಚಿಕೆಯಲ್ಲಿ ಹೆಚ್ಚು ಹೊತ್ತು ಕಾಣಿಸಿಕೊಳ್ಳಲೇಬೇಕು. ಇಲ್ಲಾಂದ್ರೆ ಜನ ವೋಟ್ ಮಾಡುವುದಾದರೂ ಹೇಗೆ.?

  'ಬಿಗ್ ಬಾಸ್' ಎಂಬ ಬಿಗ್ ರಿಯಾಲಿಟಿ ಶೋದಲ್ಲಿನ ಈ ಸತ್ಯ ಬರಹಗಾರ್ತಿ, ಸಹಾಯಕ ನಿರ್ದೇಶಕಿ ಚೈತ್ರ ಕೋಟೂರುಗೆ ಚೆನ್ನಾಗಿ ಗೊತ್ತಿದೆ. ಅದಕ್ಕೆ ಆಕೆ ನಾಮಿನೇಟ್ ಆದಾಗಲೆಲ್ಲಾ ಶೈನ್ ಶೆಟ್ಟಿ ಹಿಂದೆ ಬಿದ್ದು ಕ್ಯಾಮರಾ ಫೋಕಸ್ ಆಗುವ ಹಾಗೆ ಮಾಡುತ್ತಿದ್ದಾರೆ. ಅಷ್ಟಕ್ಕೂ, ಇದನ್ನೆಲ್ಲ ನಾವು ಹೇಳ್ತಿಲ್ಲ.. ಚೈತ್ರ ಕೋಟೂರು ಗೇಮ್ ಪ್ಲಾನ್ ನ ಶೈನ್ ಶೆಟ್ಟಿ ಡೀಕೋಡ್ ಮಾಡಿದ್ದಾರೆ.

  ''ನಾಮಿನೇಟ್ ಆದಾಗಲೆಲ್ಲಾ ನನ್ನ ಬಗ್ಗೆ ಏನಾದರೂ ಒಂದು ಶುರು ಮಾಡುತ್ತಾರೆ'' ಎಂದು ಶೈನ್ ಶೆಟ್ಟಿ ಬೇಸರ ವ್ಯಕ್ತ ಪಡಿಸಿದ್ದಾರೆ.

  ನಿಮಗೆ ಗೊತ್ತಾ.. ಚೈತ್ರ ಕೋಟೂರುಗೆ ಈಗಾಗಲೇ ಮದುವೆ ಆಗಿದ್ಯಂತೆ.!ನಿಮಗೆ ಗೊತ್ತಾ.. ಚೈತ್ರ ಕೋಟೂರುಗೆ ಈಗಾಗಲೇ ಮದುವೆ ಆಗಿದ್ಯಂತೆ.!

  ಹಾಗ್ನೋಡಿದ್ರೆ, ಚೈತ್ರ ಕೋಟೂರು ಕಳೆದ ವಾರ ನಾಮಿನೇಟ್ ಆಗಿರಲಿಲ್ಲ. ಆಗ ಶೈನ್ ಶೆಟ್ಟಿಗೆ ಚೈತ್ರ ಕೋಟೂರು ಕ್ಯಾರೆ ಕೂಡ ಎನ್ನಲಿಲ್ಲ. ಆದರೆ ಈ ವಾರ ಅದೇ ಶೈನ್ ಶೆಟ್ಟಿ ಕ್ಯಾಪ್ ಹಿಡಿದುಕೊಂಡು 'ನನ್ನ ಮಗು' ಅಂತ ಹೇಳಿಕೊಂಡು ಚೈತ್ರ ಕೋಟೂರು ಓಡಾಡುತ್ತಿದ್ದಾರೆ. ಇದು ಶೈನ್ ಶೆಟ್ಟಿಗೆ ಕಿರಿಕಿರಿ ತಂದಿದೆ. ''ಹೀಗೆ ಮಾಡಬೇಡಿ'' ಅಂತ ಚೈತ್ರ ಕೋಟೂರುಗೆ ಶೈನ್ ಶೆಟ್ಟಿ ನೇರವಾಗಿ ಕ್ಲಾಸ್ ತೆಗೆದುಕೊಂಡರು.

  ಇದು ಕಾಳ್ ಹಾಕ್ತಿರೋದಾ ಇಲ್ಲ ಗೇಮ್ ಸ್ಟ್ರಾಟೆಜಿನಾ.? ಚೈತ್ರ ತಲೆಯಲ್ಲಿ ಏನಿದೆ.?ಇದು ಕಾಳ್ ಹಾಕ್ತಿರೋದಾ ಇಲ್ಲ ಗೇಮ್ ಸ್ಟ್ರಾಟೆಜಿನಾ.? ಚೈತ್ರ ತಲೆಯಲ್ಲಿ ಏನಿದೆ.?

  ಪರಿಣಾಮ, ಒಬ್ಬರೇ ಕೂತು ಚೈತ್ರ ಕೋಟೂರು ಗೊಳೋ ಎಂದು ಕಣ್ಣೀರು ಸುರಿಸಿದರು. ಶೈನ್ ಶೆಟ್ಟಿ ಮತ್ತು ಲವ್ ಆಂಗಲ್ ಬಿಟ್ಟರೆ ಚೈತ್ರ ಕೋಟೂರು ತಲೆಯಲ್ಲಿ ಬೇರೇನೂ ಇಲ್ವಾ.? ಶೈನ್ ಶೆಟ್ಟಿ ಇಲ್ಲಾಂದ್ರೆ ಚೈತ್ರ ಕೋಟೂರು ಸೇಫ್ ಆಗೋಕೆ ಚಾನ್ಸೇ ಇಲ್ವಾ.? ಈ ಪ್ರಶ್ನೆಗಳಿಗೆ ಉತ್ತರ ವಾರಾಂತ್ಯದಲ್ಲಿ ಸುದೀಪ್ ಬಂದ್ಮೇಲೆ ಸಿಗಬಹುದೇನೋ.?!

  English summary
  Bigg Boss Kannada 7: Day 24: Shine Shetty annoyed with Chaitra Kotur.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X