For Quick Alerts
  ALLOW NOTIFICATIONS  
  For Daily Alerts

  'ಜೈಜಗದೀಶ್ ಗಿಂತ ಚಿಕ್ಕ ಮಕ್ಕಳೇ ಎಷ್ಟೋ ವಾಸಿ': ಕೆರಳಿದ ಹರೀಶ್ ರಾಜ್.!

  |

  'ಬಿಗ್ ಬಾಸ್' ಮನೆ ರಣರಂಗ ಆಗಲಿ ಎಂಬ ಕಾರಣಕ್ಕೋ ಏನೋ.. 'ರಣರಂಗ' ಎಂಬ ಲಕ್ಷುರಿ ಬಜೆಟ್ ಟಾಸ್ಕ್ ನ 'ಬಿಗ್ ಬಾಸ್' ನೀಡಿದ್ದಾರೆ. 'ರಣರಂಗ' ಚಟುವಟಿಕೆಯಿಂದಾಗಿ ಈಗಾಗಲೇ ಒಂದು ಬಾರಿ ದೊಡ್ಡ ರಾದ್ಧಾಂತ ಆಗಿತ್ತು. ಇದೀಗ ಇದೇ ಟಾಸ್ಕ್ ನಿಂದ ಜೈಜಗದೀಶ್ ಮತ್ತು ಹರೀಶ್ ರಾಜ್ ನಡುವೆ ವಾಕ್ಸಮರ ನಡೆದಿದೆ.

  ''ಹರೀಶ್ ರಾಜ್ ಭೇದಭಾವ ಮಾಡುತ್ತಿದ್ದಾರೆ. ಸಪ್ತಾಶ್ವ ತಂಡಕ್ಕೆ ಸಪೋರ್ಟ್ ಮಾಡುತ್ತಿದ್ದಾರೆ'' ಅಂತ ಜೈಜಗದೀಶ್ ಆರೋಪ ಮಾಡಿದರು. ಆಮೇಲೆ ''ಅದು ತಮಾಷೆಗೆ ಹೇಳಿದ್ದು'' ಎಂದುಬಿಟ್ಟರು. ಇದು ಕ್ಯಾಪ್ಟನ್ ಸ್ಥಾನದಲ್ಲಿದ್ದ ಹರೀಶ್ ರಾಜ್ ರನ್ನ ಕೆರಳಿಸಿತು.

  ''ಚಿಕ್ಕ ಮಕ್ಕಳು ಹೀಗೆ ಮಾಡ್ತಾರೆ. ಚಿಕ್ಕ ಮಕ್ಕಳೇ ಎಷ್ಟೋ ವಾಸಿ'' ಅಂತ ಜೈಜಗದೀಶ್ ರನ್ನ ಉದ್ದೇಶಿಸಿ ಹರೀಶ್ ರಾಜ್ ಸಿಡುಕಿದರು. ಅಸಲಿಗೆ, ಜೈಜಗದೀಶ್ ಮತ್ತು ಹರೀಶ್ ರಾಜ್ ನಡುವೆ ಸಮರ ನಡೆಯಲು ಕಾರಣ ಏನು ಅಂತೀರಾ.? ಸಂಪೂರ್ಣ ಮಾಹಿತಿ ಫೋಟೋ ಸ್ಲೈಡ್ ಗಳಲ್ಲಿ ಓದಿರಿ...

  ಹೊಸ ಸವಾಲು ಕೊಟ್ಟಿದ್ದ 'ಬಿಗ್ ಬಾಸ್'

  ಹೊಸ ಸವಾಲು ಕೊಟ್ಟಿದ್ದ 'ಬಿಗ್ ಬಾಸ್'

  'ರಣರಂಗ' ಟಾಸ್ಕ್ ನಲ್ಲಿ ನಾಲ್ಕನೇ ಹಂತದ ಸವಾಲಾಗಿ 'ಪಂಜರದ ಗಣಿ'ಯನ್ನ 'ಬಿಗ್ ಬಾಸ್' ನೀಡಿದ್ದರು. ಇದರ ಅನುಸಾರ ಪಂಜರದ ಒಳಗಿರುವ ಬಾವುಟಗಳನ್ನು ಕಿತ್ತು ವಶಕ್ಕೆ ಪಡೆಯಬೇಕು. ಎದುರಾಳಿ ತಂಡದ ಸದಸ್ಯರು ಬಾವುಟಗಳನ್ನು ಪಡೆಯದಂತೆ ತಡೆಯಬೇಕು. ಹಾಗೆ ತಡೆಯುವಾಗ ರೆಡ್ ಲೈನ್ ದಾಟುವ ಹಾಗೆ ಇರಲಿಲ್ಲ.

  ಬೆಂಕಿ ಬಿದ್ದ ಮೇಲೆ ಅಕ್ಷರಶಃ 'ರಣರಂಗ'ವಾದ ಬಿಗ್ ಬಾಸ್ ಮನೆ.!ಬೆಂಕಿ ಬಿದ್ದ ಮೇಲೆ ಅಕ್ಷರಶಃ 'ರಣರಂಗ'ವಾದ ಬಿಗ್ ಬಾಸ್ ಮನೆ.!

  ರೆಡ್ ಲೈನ್ ದಾಟಿದ ಚಂದನ್

  ರೆಡ್ ಲೈನ್ ದಾಟಿದ ಚಂದನ್

  ಬಾವುಟಗಳನ್ನು ಪಡೆಯದಂತೆ ತಡೆಯುವಾಗ, ಚಂದನ್ ಆಚಾರ್ ಎರಡೆರಡು ಬಾರಿ ರೆಡ್ ಲೈನ್ ದಾಟಿದ್ದರು. ಇದನ್ನ ಗಮನಿಸಿದ ಪ್ರಿಯಾಂಕಾ, ಕ್ಯಾಪ್ಟನ್ ಹರೀಶ್ ರಾಜ್ ಗೆ ಮಾಹಿತಿ ನೀಡಿದರು. ಆದರೆ, ಗದ್ದಲದಲ್ಲಿದ್ದ ಹರೀಶ್ ರಾಜ್ ಆ ಬಗ್ಗೆ ತಕ್ಷಣ ಪ್ರತಿಕ್ರಿಯೆ ಕೊಡಲಿಲ್ಲ. ಆಗ ಜೈಜಗದೀಶ್, ''ಹರೀಶ್ ಸಪ್ತಾಶ್ವ ತಂಡಕ್ಕೆ ಸಪೋರ್ಟ್ ಮಾಡುತ್ತಿದ್ದಾರೆ'' ಎಂದುಬಿಟ್ಟರು. ಈ ಮಾತಿಂದ ಹರೀಶ್ ರಾಜ್ ರೊಚ್ಚಿಗೆದ್ದರು.

  ಯಾರು ಏನೇ ಅಂದ್ರೂ ಜೈಜಗದೀಶ್ ಮಾಡಿದ್ದು ತಪ್ಪು ಅಂತಿದ್ದಾರೆ ವೀಕ್ಷಕರು.!ಯಾರು ಏನೇ ಅಂದ್ರೂ ಜೈಜಗದೀಶ್ ಮಾಡಿದ್ದು ತಪ್ಪು ಅಂತಿದ್ದಾರೆ ವೀಕ್ಷಕರು.!

  ಟೆಂಪರ್ ರೈಸ್ ಮಾಡಿಕೊಂಡ ಹರೀಶ್ ರಾಜ್

  ಟೆಂಪರ್ ರೈಸ್ ಮಾಡಿಕೊಂಡ ಹರೀಶ್ ರಾಜ್

  ಜೈಜಗದೀಶ್ ಆಡಿದ ಮಾತನ್ನು ಕೇಳಿಸಿಕೊಂಡ ಕೂಡಲೆ, ''ಹೀಗೆಲ್ಲ ಹೇಳಿದರೆ ನಾನು ಸುಮ್ಮನೆ ಇರಲ್ಲ'' ಅಂತ ಹರೀಶ್ ರಾಜ್ ಟೆಂಪರ್ ರೈಸ್ ಮಾಡಿಕೊಂಡರು. ಬಳಿಕ ''ಅದು ತಮಾಷೆಗೆ ಹೇಳಿದ್ದು'' ಎನ್ನುತ್ತಿದ್ದರು ಜೈಜಗದೀಶ್. ಆದರೂ ಹರೀಶ್ ರಾಜ್ ಸಿಟ್ಟು ಕಮ್ಮಿ ಆಗಲಿಲ್ಲ. ''ಕ್ಯಾಪ್ಟನ್ ಆಗಿ ಅವರಿಗೆ ಸಪೋರ್ಟ್ ಮಾಡಿ ನನಗೇನು ಸಿಗುತ್ತೆ. ನನಗೆ ಏನಾದರೂ ಲಾಭ ಇದ್ಯಾ.? ತಮಾಷೆ ಅಲ್ಲ ಇದು'' ಎಂದು ಹರೀಶ್ ರಾಜ್ ತಿರುಗೇಟು ಕೊಟ್ಟರು.

  'ಬಿಗ್ ಬಾಸ್' ಬಗ್ಗೆ ಜೈಜಗದೀಶ್ ಬಹಿರಂಗ ಅಸಮಾಧಾನ: ಸುದೀಪ್ ಏನಂದರು.?'ಬಿಗ್ ಬಾಸ್' ಬಗ್ಗೆ ಜೈಜಗದೀಶ್ ಬಹಿರಂಗ ಅಸಮಾಧಾನ: ಸುದೀಪ್ ಏನಂದರು.?

  ಮಕ್ಕಳೇ ಎಷ್ಟೋ ವಾಸಿ

  ಮಕ್ಕಳೇ ಎಷ್ಟೋ ವಾಸಿ

  ಹರೀಶ್ ರಾಜ್ ಸಿಟ್ಟನ್ನು ಕಂಡು ''ಕ್ಷಮಿಸಿ ಬಿಡಿ ತಪ್ಪಾಯ್ತು'' ಎಂದು ಜೈಜಗದೀಶ್ ಕೈಮುಗಿದರು. ಆಗ ''ನನ್ನನ್ನೂ ಕ್ಷಮಿಸಿ ಬಿಡಿ.. ನಿಮ್ಮ ಪಾದಕ್ಕೆ ಬಿದ್ದು ಬಿಡ್ತೀನಿ'' ಅಂತ ಹರೀಶ್ ರಾಜ್ ಹೇಳಿದರು. ಸಾಲದಕ್ಕೆ, ''ಸೀರಿಯಸ್ ಆಗಿ ಹೇಳಿ, ಆಮೇಲೆ ತಮಾಷೆ ಅಂದ್ರೆ ಹೇಗೆ. ನಿಮ್ಮ ಸೀನಿಯಾರಿಟಿಗೆ ಇದು ತರವಲ್ಲ. ಈ ರೀತಿಯ ತಮಾಷೆ ಮಾಡಬೇಡಿ. ನಿಮ್ಮ ಬಗ್ಗೆ ನಮಗೆ ಗೌರವ ಇದೆ. ದಯವಿಟ್ಟು ಅದನ್ನ ಉಳಿಸಿಕೊಳ್ಳಿ'' ಎಂದರು ಹರೀಶ್ ರಾಜ್. ''ದೊಡ್ಡ ದೊಡ್ಡ ಮಾತುಗಳು ಬೇಡ. ಏನೋ ತಮಾಷೆಗೆ ಆ ತರಹ ಹೇಳಿದ್ವಿ'' ಅಂತ ಜೈಜಗದೀಶ್ ಎಷ್ಟೇ ಸಮಾಧಾನ ಮಾಡಿದರೂ, ಅದನ್ನ ಕೇಳಿಸಿಕೊಳ್ಳದೆ ''ಚಿಕ್ಕ ಮಕ್ಕಳು ಆ ತರಹ ಮಾಡುತ್ತಾರೆ. ಚಿಕ್ಕ ಮಕ್ಕಳೇ ಎಷ್ಟೋ ವಾಸಿ'' ಎಂದರು ಹರೀಶ್ ರಾಜ್. ಇಷ್ಟೆಲ್ಲ ಗಲಾಟೆ ನಡುವೆ 'ಸಿಡಿಲು' ತಂಡ 'ಪಂಜರದ ಗಣಿ' ಟಾಸ್ಕ್ ನಲ್ಲಿ ವಿಜೇತರಾದರು. ಟಾಸ್ಕ್ ಮುಗಿದ ಮೇಲೆ ಜೈಜಗದೀಶ್ ಮತ್ತು ಹರೀಶ್ ರಾಜ್ ಪ್ಯಾಚಪ್ ಆದರು.

  English summary
  Bigg Boss Kannada 7: Day 24: Verbal spat between Jai Jagadeesh and Harish Raj during Panjarada Gani Task.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X