ತೆಂಗಿನಕಾಯಿ ತಿಕ್ಕಾಟ: ಸುದೀಪ್ ಮುಂದೆ ಕ್ಷಮೆ ಕೇಳಿದ ಜೈಜಗದೀಶ್
Recommended Video
'ಬಿಗ್ ಬಾಸ್ ಕನ್ನಡ-7' ಕಾರ್ಯಕ್ರಮದಲ್ಲಿ ನಾಲ್ಕನೇ ವಾರ 'ರಣರಂಗ' ಎಂಬ ಲಕ್ಷುರಿ ಬಜೆಟ್ ಟಾಸ್ಕ್ ಚಾಲ್ತಿಯಲ್ಲಿತ್ತು. 'ರಣರಂಗ' ಚಟುವಟಿಕೆಯಲ್ಲಿ ಮೊಟ್ಟ ಮೊದಲ ರಂಪ ಆರಂಭವಾಗಿದ್ದು ಜೈಜಗದೀಶ್ ರಿಂದ.
ತಮ್ಮ ತಂಡದ ಗೋಪುರವನ್ನು ಎದುರಾಳಿಗಳಿಂದ ಕಾಪಾಡಿಕೊಳ್ಳಲು ಜೈಜಗದೀಶ್ ಕೈಯಲ್ಲಿ ತೆಂಗಿನಕಾಯಿ ಹಿಡಿದುಕೊಂಡಿದ್ದರು. ಎದುರಾಳಿ ತಂಡದ ಸದಸ್ಯರು ಗೋಪುರವನ್ನು ಹೊಡೆದುರುಳಿಸಲು ಬಾಲ್ ಗಳನ್ನ ಎಸೆಯುತ್ತಿದ್ದಾಗ, ಅದನ್ನ ತಡೆಯಲು ಚೈತ್ರ ಕೋಟೂರು ಕಾಲು ಬಳಿ ಜೈಜಗದೀಶ್ ತೆಂಗಿನಕಾಯಿ ಎಸೆದರು. ಇದೇ ವಿಷಯಕ್ಕೆ ಅಂದು ದೊಡ್ಡ ಗಲಾಟೆ ನಡೆದಿತ್ತು.
ಇದೇ ವಿಚಾರದ ಕುರಿತು 'ವಾರದ ಕಥೆ ಕಿಚ್ಚನ ಜೊತೆ' ಸಂಚಿಕೆಯಲ್ಲಿ ಸುದೀಪ್ ಪಂಚಾಯತಿ ನಡೆಸಿದರು. ''ಜೈಜಗದೀಶ್ ತೆಂಗಿನಕಾಯಿ ಎಸೆದಿದ್ದು ಸರಿ ಅಲ್ಲ'' ಅಂತ ಸುದೀಪ್ ಹೇಳಿದರು.

ಆಗ ''ತೆಂಗಿನಕಾಯಿ ಯಾಕೆ ಕೊಟ್ಟರು ಅಂತ ಗೊತ್ತಿರಲಿಲ್ಲ. ಬಾಲ್ ಹೊಡೆಯೋಕೆ ಸ್ಟಾರ್ಟ್ ಮಾಡಿದಾಗ, ಹೊಡೆಯಬೇಡಿ ಅಂತ ನಾನು ತೆಂಗಿನಕಾಯಿ ಇಟ್ಟುಕೊಂಡು ಹೆದರಿಸುತ್ತಿದ್ದೆ. ಹೊಡೆಯುವ ಉದ್ದೇಶ ನನಗಿರಲಿಲ್ಲ. ನಮ್ಮ ಗೋಪುರ ಕೆಡವಲು ಮುಂದೆ ಬಂದಾಗ ನಾನು ನೆಲಕ್ಕೆ ತೆಂಗಿನಕಾಯಿ ಎಸೆದೆ. ನನ್ನಿಂದ ತಪ್ಪಾಯ್ತು. ಕ್ಷಮಿಸಿ'' ಎಂದು ಜೈಜಗದೀಶ್ ಕ್ಷಮೆ ಕೇಳಿದರು.


Click it and Unblock the Notifications











