For Quick Alerts
  ALLOW NOTIFICATIONS  
  For Daily Alerts

  'ಕಳಪೆ' ಕಿತ್ತಾಟ: ವಾಸುಕಿ ವೈಭವ್ ಮತ್ತು ಹರೀಶ್ ರಾಜ್ ಕಿವಿ ಹಿಂಡಿದ ಕಿಚ್ಚ ಸುದೀಪ್.!

  |

  'ಬಿಗ್ ಬಾಸ್' ಮನೆ ಅಂದ್ಮೇಲೆ ಅಲ್ಲಿ ಪ್ರತಿ ವಾರ ಲಕ್ಷುರಿ ಬಜೆಟ್ ಟಾಸ್ಕ್ ಇದ್ದೇ ಇರುತ್ತೆ. ಟಾಸ್ಕ್ ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದವರಿಗೆ 'ಬೆಸ್ಟ್ ಪರ್ಫಾಮೆನ್ಸ್', ಕಳಪೆ ಪ್ರದರ್ಶನ ನೀಡಿದವರಿಗೆ 'ಕಳಪೆ ಬೋರ್ಡ್' ಲಭಿಸುತ್ತದೆ. ವಾರದ ಕ್ಯಾಪ್ಟನ್ ಆಗಿರುವವರಿಗೆ ಅತಿ ಕಷ್ಟದ ಕೆಲಸ ಅಂದ್ರೆ ಇದೇ.

  ಯಾರಿಗೇ ಆಗಲಿ 'ಕಳಪೆ ಬೋರ್ಡ್' ಕೊಟ್ಟು ಜೈಲಿಗೆ ತಳ್ಳಿದರೆ ಬೇಸರ ಆಗೇ ಆಗುತ್ತೆ. ಬೇಸರ, ಅಸಮಾಧಾನ ಇದ್ದ ಕಡೆ ಗಲಾಟೆ ಸಹಜ. ಈ ಕಿತ್ತಾಟ ಬೇಡ ಅಂತ ಕೆಲವರು 'ಕಳಪೆ ಬೋರ್ಡ್'ಗೆ ಪಾಲಿಷ್ ಬಳಿಯುವ ಕೆಲಸ ಮಾಡುತ್ತಿದ್ದಾರೆ. ಇನ್ನೂ 'ಪಾಪ ಪ್ರಜ್ಞೆ' ಹೆಸರಿನಲ್ಲಿ ಕಳಪೆ ಬೋರ್ಡ್ ಸ್ವೀಕರಿಸಿ ಈ ವಾರ ಜೈಲಿಗೆ ಹೋಗಿದ್ದವರು ವಾಸುಕಿ ವೈಭವ್. ಇದನ್ನ ಸೂಕ್ಷ್ಮವಾಗಿ ಗಮನಿಸಿದ ಕಿಚ್ಚ ಸುದೀಪ್ 'ವಾರದ ಕಥೆ ಕಿಚ್ಚನ ಜೊತೆ' ಸಂಚಿಕೆಯಲ್ಲಿ ವಾಸುಕಿ ವೈಭವ್ ಮತ್ತು ಹರೀಶ್ ರಾಜ್ ಗೆ ಕಿವಿ ಹಿಂಡಿದರು.

  ಬೆಸ್ಟ್ ಪರ್ಫಾಮೆನ್ಸ್ ಕುರಿತು ಥಟ್ ಅಂತ ನಿರ್ಧಾರ ಪ್ರಕಟ ಮಾಡಿದ ಹರೀಶ್ ರಾಜ್, ಕಳಪೆ ಬೋರ್ಡ್ ಕೊಡುವ ಸಂದರ್ಭದಲ್ಲಿ ಮಾತ್ರ ಹಿಂದು ಮುಂದು ನೋಡಿದರು. ವಾಸುಕಿ ವೈಭವ್ ಮುಂದೆ ಬಂದಾಗ, ಅವರ ಕುತ್ತಿಗೆಗೆ ಕ್ಯಾಪ್ಟನ್ ಹರೀಶ್ ರಾಜ್ ಕಳಪೆ ಬೋರ್ಡ್ ಹಾಕಿ ಕೈ ತೊಳೆದುಕೊಂಡರು. ಇದೇ ವಿಚಾರದ ಕುರಿತು ಸುದೀಪ್ ಪಂಚಾಯಿತಿ ನಡೆಸಿದರು. ಮುಂದೆ ಓದಿರಿ...

  ಕ್ಲಾರಿಟಿ ಕಾಣಲಿಲ್ಲ.!

  ಕ್ಲಾರಿಟಿ ಕಾಣಲಿಲ್ಲ.!

  ''ಕ್ಯಾಪ್ಟನ್ ಆದ್ಮೇಲೆ ಎರಡು ನಿರ್ಧಾರ ಮಾಡಬೇಕಿತ್ತು. ಒಂದು ಅತ್ಯುತ್ತಮ ಮತ್ತೊಂದು ಕಳಪೆ. ಬೆಸ್ಟ್ ಪರ್ಫಾಮೆನ್ಸ್ ಬಗ್ಗೆ ಮಾತು ಬಂದಾಗ ನಿಮಗೆ ಯಾವುದೇ ಕನ್ ಫ್ಯೂಶನ್ ಇರಲಿಲ್ಲ. ಆದರೆ, ಕಳಪೆ ಅಂತ ಬಂದಾಗ ಇಡೀ ಮನೆ ಜೊತೆಗೆ ಚರ್ಚೆಗೆ ಇಳಿಯುತ್ತೀರಿ. ಇಲ್ಲಿ ಕ್ಲಾರಿಟಿ ಕಾಣಿಸಲಿಲ್ಲ'' ಎಂದು ಮನೆಯ ಕ್ಯಾಪ್ಟನ್ ಆಗಿದ್ದ ಹರೀಶ್ ರಾಜ್ ಗೆ ಕಿಚ್ಚ ಸುದೀಪ್ ಪ್ರಶ್ನೆ ಮಾಡಿದರು.

  'ಬಿಗ್ ಬಾಸ್' ಮನೆಯಲ್ಲಿ ಹೀಗೆ ಆಗಿರೋದು ಬಹುಶಃ ಇದೇ ಮೊದಲು.!'ಬಿಗ್ ಬಾಸ್' ಮನೆಯಲ್ಲಿ ಹೀಗೆ ಆಗಿರೋದು ಬಹುಶಃ ಇದೇ ಮೊದಲು.!

  ಹರೀಶ್ ರಾಜ್ ಹೇಳಿದ್ದೇನು.?

  ಹರೀಶ್ ರಾಜ್ ಹೇಳಿದ್ದೇನು.?

  ''ನಿಜವಾಗಲೂ ನನಗೆ ಕ್ಲಾರಿಟಿ ಸಿಗಲಿಲ್ಲ. ಎಲ್ಲರೂ ಏಟು ತಿಂದಿದ್ದಾರೆ. ಪ್ರತಿಯೊಂದು ಟಾಸ್ಕ್ ನಲ್ಲಿ ಎಲ್ಲರೂ ಪೈಪೋಟಿಗೆ ಬಿದ್ದು ಆಡಿದ್ದಾರೆ. ಹೀಗಿರುವಾಗ ಕಳಪೆ ಅಂತ ಯಾರಿಗೆ ಕೊಡುವುದು ಅನ್ನೋದು ಗೊತ್ತಾಗಲಿಲ್ಲ. ಎರಡೂ ತಂಡದ ಕ್ಯಾಪ್ಟನ್ ಗಳನ್ನೂ ಕೇಳಿದಾಗ, ಯಾರಿಗೆ ಕಳಪೆ ಪರ್ಫಾಮೆನ್ಸ್ ಕೊಡುವುದು ಅಂತ ಅವರಿಗೂ ತಿಳಿಯಲಿಲ್ಲ. ಕ್ಯಾಮರಾ ಹಾಳು ಮಾಡಿದ್ದಕ್ಕೆ, ಸುಜಾತ ರನ್ನ ತಳ್ಳಿದ್ದಕ್ಕೆ.. ರಾಜು ತಾಳಿಕೋಟೆ ಅವರಿಗೆ ಕಳಪೆ ಬೋರ್ಡ್ ಕೊಡಲು ನಿರ್ಧಾರ ಮಾಡಿದ್ದೆ. ಆದರೆ ಆ ಹೊತ್ತಲ್ಲಿ ವಯಸ್ಸನ್ನೂ ಪರಿಗಣನೆಗೆ ತೆಗೆದುಕೊಳ್ಳಬೇಕಾಗಿತ್ತು. ಆಗ ವಾಸುಕಿ ವೈಭವ್ ''ಪಾಪಪ್ರಜ್ಞೆ ಕಾಡುತ್ತಿದೆ'' ಎಂದರು. ನಂತರ ನನ್ನ ನಿರ್ಧಾರವನ್ನ ಬದಲಿಸಿಕೊಂಡು ವಾಸುಕಿ ವೈಭವ್ ಗೆ ಕಳಪೆ ಬೋರ್ಡ್ ಕೊಟ್ಟೆ'' ಎಂದು ವಿವರಣೆ ನೀಡಿದರು ಹರೀಶ್ ರಾಜ್.

  ದೀಪಿಕಾ ದಾಸ್ ಶ್ರಮಕ್ಕೆ 'ವೆಲ್ ಡನ್' ಎಂದ ಕಿಚ್ಚ ಸುದೀಪ್ದೀಪಿಕಾ ದಾಸ್ ಶ್ರಮಕ್ಕೆ 'ವೆಲ್ ಡನ್' ಎಂದ ಕಿಚ್ಚ ಸುದೀಪ್

  ಗರಂ ಆದ ಸುದೀಪ್

  ಗರಂ ಆದ ಸುದೀಪ್

  ''ನಿಮ್ಮ ನಿಮ್ಮ ಅಗತ್ಯಗಳಿಗೆ ತಕ್ಕಂತೆ ಕಳಪೆ ಬೋರ್ಡ್ ನ ಬಳಸಿಕೊಳ್ಳಬೇಡಿ. ಕಳಪೆ ಈಸ್ ಕಳಪೆ. ಅದನ್ನ ಹಾಕಿಕೊಂಡು ಹುತಾತ್ಮ ಆಗುವ ಪ್ರಯತ್ನ ಮಾಡಬೇಡಿ. ತ್ಯಾಗ ಮಾಡಲು ಹೋಗಬೇಡಿ. ಇದರಲ್ಲಿ ಪಾಪ ಪ್ರಜ್ಞೆ ಏನಿದೆ.? ಟಾಸ್ಕ್ ಅಂದ್ಮೇಲೆ ಟಾಸ್ಕ್. ಕಳಪೆ ಬೋರ್ಡ್ ನ ತುಂಬಾ ಪಾಲಿಷ್ ಮಾಡುತ್ತಿದ್ದೀರಾ. ಅದನ್ನ ಮಾಡಬೇಡಿ. ಇದರಿಂದ ಮೆಡಲ್ ಗೆ ಅವಮಾನ ಆಗುತ್ತಿದೆ. ವಾಸುಕಿ ಅವರೇ ಇದು ಸರಿ ಅಲ್ಲ. ವಾಸುಕಿ ಕೇಳಿದ ತಕ್ಷಣ ಕಳಪೆ ಬೋರ್ಡ್ ಕೊಟ್ಟಿದ್ದು ಕೂಡ ಸರಿ ಅಲ್ಲ'' ಎಂದು ಸುದೀಪ್ ಗರಂ ಆದರು.

  ಇಲ್ಲಿ ಎಲ್ಲರೂ ಒಂದೇ.!

  ಇಲ್ಲಿ ಎಲ್ಲರೂ ಒಂದೇ.!

  ''ವಯಸ್ಸನ್ನ ಮಾತ್ರ ನಾನು ನೋಡಿದ್ದು. ತಪ್ಪಾಗಿದ್ದರೆ ದಯವಿಟ್ಟು ಕ್ಷಮಿಸಿ ಎಂದು ಹರೀಶ್ ರಾಜ್ ಹೇಳಿದಾಗ 'ಬಿಗ್ ಬಾಸ್' ಮನೆಗೆ ಬಂದಿದ್ದಾರೆ ಅಂದ್ರೆ ಅವರು ಸ್ಪರ್ಧಿ. ಕೆಲವು ಸಮಸ್ಯೆ ಇರಬಹುದು. ಅದನ್ನ ಮಾನವೀಯತೆ ನೆಲೆಗಟ್ಟಿನಲ್ಲಿ ನೋಡಿಕೊಳ್ಳುತ್ತಾರೆ'' ಎಂದರು ಕಿಚ್ಚ ಸುದೀಪ್.

  ಈ ನಿರ್ಧಾರಕ್ಕೆ ಏನನ್ನಬೇಕು.?

  ಈ ನಿರ್ಧಾರಕ್ಕೆ ಏನನ್ನಬೇಕು.?

  ಎಲ್ಲದಕ್ಕಿಂತ ತಮಾಷೆ ಅಂತ ಅನಿಸಿದ್ದು... ವಾಸುಕಿ ವೈಭವ್ ಕುತ್ತಿಗೆಯಲ್ಲಿ ಕಳಪೆ ಬೋರ್ಡ್, ತೋಳಿನ ಮೇಲೆ ಕ್ಯಾಪ್ಟನ್ ಬ್ಯಾಂಡ್. ಮನೆಯವರ ನಿರ್ಧಾರ ಎಷ್ಟು ಕನ್ ಫ್ಯೂಸಿಂಗ್ ಆಗಿದೆ ಎಂಬುದಕ್ಕೆ ಇದೇ ಉತ್ತಮ ನಿದರ್ಶನ ಎಂದರು ಕಿಚ್ಚ ಸುದೀಪ್.

  English summary
  Bigg Boss Kannada 7: Day 27: Kiccha Sudeep schools Harish Raj and Vasuki Vaibhav.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X