ಚಂದನಾ ಕಂಡ್ರೆ ಮಾತ್ರ ಹರೀಶ್ ರಾಜ್ ಗೆ 'ಅಯ್ಯೋ ಪಾಪ' ಅನಿಸಿದ್ಯಾಕೆ.?

'ಬಿಗ್ ಬಾಸ್ ಕನ್ನಡ-7' ಕಾರ್ಯಕ್ರಮದಲ್ಲಿ ನಾಲ್ಕನೇ ವಾರದ ಲಕ್ಷುರಿ ಬಜೆಟ್ ಟಾಸ್ಕ್ 'ರಣರಂಗ' ಮುಕ್ತಾಯ ಆದ್ಮೇಲೆ ಬೆಸ್ಟ್ ಪರ್ಫಾಮರ್ ಆಗಿ ಹೊರಹೊಮ್ಮಿದವರು ಚಂದನಾ.

'ಮಾಡು ಇಲ್ಲವೇ ಬಿಡು' ಟಾಸ್ಕ್ ನಲ್ಲಿ ತ್ರಿಕೋನ ಆಕಾರದ ಮೇಲೆ ನಿಂತಿದ್ದ ಚಂದನಾ ರನ್ನ ಕೆಳಗೆ ಇಳಿಸಲು ಎದುರಾಳಿ ತಂಡದ ಸದಸ್ಯರು ನೀರನ್ನು ಎರಚುತ್ತಿದ್ದರು. ಕೆಲವರು ಚಂದನಾ ರನ್ನ ಟಾರ್ಗೆಟ್ ಮಾಡಿ, ಆಕೆಯ ಮುಖಕ್ಕೆ ನೀರು ಎರಚುತ್ತಿದ್ದರು. ಇದನ್ನ ಹತ್ತಿರದಿಂದ ಗಮನಿಸಿದ್ದ ಹರೀಶ್ ರಾಜ್, ಕೊನೆಗೆ ಚಿಕ್ಕ ಹುಡುಗಿ ಎಂಬ ಕಾರಣ ನೀಡಿ ಚಂದನಾಗೆ 'ಬೆಸ್ಟ್ ಪರ್ಫಾಮೆನ್ಸ್ ಮೆಡಲ್' ನೀಡಿದರು. ಇದು ಹಲವರಲ್ಲಿ ಅಸಮಾಧಾನ ತಂದಿತ್ತು.

ಚಂದನಾ ಮಾತ್ರ ಅಲ್ಲ.. ಅದೇ ಟಾಸ್ಕ್ ನಲ್ಲಿ ಚೈತ್ರ ಕೋಟೂರು ಕೂಡ ಟಾರ್ಗೆಟ್ ಆಗಿದ್ದರು. ಭೂಮಿ ಶೆಟ್ಟಿ, ದೀಪಿಕಾ ದಾಸ್ ಮತ್ತು ಪ್ರಿಯಾಂಕಾ ಕೂಡ ಒಂಟಿ ಕಾಲಲ್ಲಿ ನಿಂತಿದ್ದರು. ಹೀಗಿದ್ದರೂ, ಇವರನ್ನ ಪರಿಗಣಿಸದ ಪರಿಣಾಮ ಹರೀಶ್ ರಾಜ್ ಗೆ 'ಪಕ್ಷಪಾತಿ' ಎಂದು ಬೆಟ್ಟು ಮಾಡಲು ಆರಂಭಿಸಿದರು.

ಹಾಗಾದ್ರೆ, ಹರೀಶ್ ರಾಜ್ ನ್ಯಾಯವಾಗಿ ಇರ್ಲಿಲ್ವಾ.? ಪಕ್ಷಪಾತ ಮಾಡಿದ್ರಾ.? ಇದೇ ಟಾಪಿಕ್ ಕುರಿತು 'ವಾರದ ಕಥೆ ಕಿಚ್ಚನ ಜೊತೆ' ಕಾರ್ಯಕ್ರಮದಲ್ಲಿ ಸುದೀಪ್ ಪಂಚಾಯತಿ ನಡೆಸಿದರು. ಮುಂದೆ ಓದಿರಿ...

ಸುದೀಪ್ ಕೇಳಿದ್ದೇನು.?

ಸುದೀಪ್ ಕೇಳಿದ್ದೇನು.?

''ಮನೆಯ ಕ್ಯಾಪ್ಟನ್ ಹರೀಶ್ ರಾಜ್ ನ್ಯಾಯವಾಗಿದ್ರಾ ಅಥವಾ ಪಕ್ಷಪಾತಿನಾ.?'' ಎಂಬ ಪ್ರಶ್ನೆಯನ್ನ 'ವಾರದ ಕಥೆ ಕಿಚ್ಚನ ಜೊತೆ' ಸಂಚಿಕೆಯಲ್ಲಿ ಸುದೀಪ್ ಪ್ರಶ್ನೆ ಮಾಡಿದರು. ಅದಕ್ಕೆ ಕುರಿ ಪ್ರತಾಪ್, ''ಪಕ್ಷಪಾತ ಮಾಡಿಲ್ಲ. ಆದ್ರೆ, ಚಂದನಾ ರನ್ನ ಚಿಕ್ಕ ಹುಡುಗಿ ಅಂತ ಪರಿಗಣಿಸಿದ್ದು ಸರಿ ಅಲ್ಲ. ವಯಸ್ಸಾದವರನ್ನೂ ಅದೇ ರೀತಿ ನೋಡಬೇಕಿತ್ತು'' ಎಂದರು. ಇನ್ನೂ ''ಒಂದು ಆಟ ಆಡುವಾಗ ಸಚಿನ್ ಚಿಕ್ಕ ಹುಡುಗ ಅಂತ ಸ್ಲೋ ಆಗಿ ಬಾಲ್ ಹಾಕುವುದಿಲ್ಲ. ಇಲ್ಲಿ ಚಿಕ್ಕ ಹುಡುಗಿ ಅಂತ ಮಾತು ಬಂದರೆ ಚಾಲೆಂಜ್ ಆಗಿ ಆಡಲು ಸಾಧ್ಯವಿಲ್ಲ'' ಅಂತ ಜೈಜಗದೀಶ್ ಹೇಳಿದರು.

ಆಟ ಆಡಿದ್ದು ತಪ್ಪಾ.?

ಆಟ ಆಡಿದ್ದು ತಪ್ಪಾ.?

''ಮಾಡು ಇಲ್ಲವೆ ಬಿಡು' ಆಟದಲ್ಲಿ ನಮಗೆ ವಹಿಸಿದ್ದ ಕೆಲಸವನ್ನು ನಾವು ಮಾಡ್ತಿದ್ವಿ. ನಾವು ಎಲ್ಲರಿಗೂ ಟಾರ್ಗೆಟ್ ಮಾಡಿದ್ವಿ. ಒಬ್ಬರನ್ನೇ ಟಾರ್ಗೆಟ್ ಮಾಡಲಿಲ್ಲ. ನನಗೆ ಕಳಪೆ ಬೋರ್ಡ್ ಕೊಟ್ಟಿದ್ದರೆ, ತೆಗೆದುಕೊಳ್ಳುತ್ತಿದ್ದೆ'' ಎಂದು ರಾಜು ತಾಳಿಕೋಟೆ ಕಡ್ಡಿ ತುಂಡು ಮಾಡಿದ ಹಾಗೆ ಮಾತನಾಡಿದರು.

ಕ್ಯಾಪ್ಟನ್ ಆಗಲೇಬಾರದು.!

ಕ್ಯಾಪ್ಟನ್ ಆಗಲೇಬಾರದು.!

''ಈ ಮನೆಯಲ್ಲಿ ಕ್ಯಾಪ್ಟನ್ ಆಗಲೇಬಾರದು ಅನಿಸುತ್ತದೆ. ಯಾಕಂದ್ರೆ ಒಂದು ನಿರ್ಧಾರ ಹೇಳುತ್ತಿದ್ದಂತೆಯೇ, ಪಕ್ಷಪಾತ ಅಂತ ಅಂದುಕೊಳ್ಳುತ್ತಾರೆ. ಹೆಸರನ್ನು ತೆಗೆದುಕೊಂಡಿದ್ದಕ್ಕೆ, ನಾನು ಇವತ್ತು ಕೆಟ್ಟವನಾಗಿ ಕಾಣಿಸಿಕೊಳ್ಳುತ್ತಿದ್ದೇನೆ. ಆ ನೀರಿನ ಟಾಸ್ಕ್ ನನ್ನ ನಿರ್ಧಾರಕ್ಕೆ ಮೇಜರ್ ಕಾರಣ. 'ಮಾಡು ಇಲ್ಲವೇ ಬಿಡು' ಟಾಸ್ಕ್ ನಲ್ಲಿ ಚಂದನಾ ಮೂಗು ಕೆಂಪಾಗಿತ್ತು. ಚೈತ್ರ ಕೋಟೂರುಗೆ ಜ್ವರ ಬಂತು. ಎಲ್ಲರ ಟಾರ್ಗೆಟ್ ಚಂದನಾ ಆಗಿದ್ದರು. ಚಂದನಾ ಬಿಟ್ಟು ಬೇರೆ ಯಾರೂ ಕಾಣಿಸಲೇ ಇಲ್ವಾ.? ಇದೇ ಆಟದಲ್ಲಿ ನಿಮ್ಮ ತಂಗಿಯೋ, ತಾಯಿಯೋ, ತಂದೆಯೋ ಇದ್ದಿದ್ದರೆ ಇಷ್ಟೇ ಫೋರ್ಸ್ ನಲ್ಲಿ ನೀವು ಆಡುತ್ತಿದ್ರಾ.? ಎಂಬುದು ನನ್ನ ಪ್ರಶ್ನೆ'' ಅಂತಾರೆ ಹರೀಶ್ ರಾಜ್.

ಬುದ್ದಿವಾದ ಹೇಳಿದ ಸುದೀಪ್

ಬುದ್ದಿವಾದ ಹೇಳಿದ ಸುದೀಪ್

''ನನಗೆ ಅಷ್ಟು ಏಟು ಬಿದ್ದಿದ್ದಕ್ಕೆ, ನಾನು ಎಷ್ಟು ಶಕ್ತಿಶಾಲಿ ಅಂತ ನನಗೆ ಗೊತ್ತಾಯಿತು. ಹಾಗೇ ಎಲ್ಲರಿಗೂ ಗೊತ್ತಾಯಿತು'' ಅಂತ ಚಂದನಾ ಇದೇ ಸಮಯದಲ್ಲಿ ಹೇಳಿದರು. ಆಗ, ''ಸ್ಟ್ರಾಟೆಜಿ ಇಟ್ಟುಕೊಂಡು ಯಾರನ್ನಾದರೂ ಟಾರ್ಗೆಟ್ ಮಾಡಿ ಕೆಳಗೆ ಇಳಿಸುತ್ತಾರೆ ಅಂದ್ರೆ ಅದು ಆಟ ಆಡುವವರಿಗೆ ಬಿಟ್ಟಿದ್ದು. ಅದು ತಪ್ಪು ಅಂತ ನಾವು ಹೇಳಲು ಆಗಲ್ಲ'' ಎಂದರು ಸುದೀಪ್. ಜೊತೆಗೆ, ''ಚಂದನಾ ಚಿಕ್ಕವರು ಅಂತ ಹೇಳಿ ಹೇಳಿ ನಾಳೆ ಅವರು ನಿಮ್ಮಿಂದ ಔಟ್ ಆಗುವ ಪರಿಸ್ಥಿತಿ ಬಂದರೆ.? ನೀವು ಮಾಡಿದ್ದನ್ನ ತಪ್ಪು ಅಂತ ಹೇಳುತ್ತಿಲ್ಲ. ಆದರೆ ತಿದ್ದುಕೊಳ್ಳಿ'' ಎಂದು ಹರೀಶ್ ರಾಜ್ ಗೆ ಸುದೀಪ್ ಬುದ್ಧಿವಾದ ಹೇಳಿದರು.

More from Filmibeat

English summary
Bigg Boss Kannada 7: Day 27: Was Harish Raj partial during his captaincy.?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X