'ನಾನು ತಾಯಿಯ ಮಗ': ಅಮ್ಮನ ಬಗ್ಗೆ ಮಾತಾಡಿ ಭಾವುಕರಾದ ರವಿ ಬೆಳಗೆರೆ
''ಒಂದು ಒಳ್ಳೆಯ ಅನುಭವಕ್ಕಾಗಿ ನಾನು 'ಬಿಗ್ ಬಾಸ್' ಮನೆಗೆ ಹೋಗುತ್ತಿದ್ದೇನೆ'' ಎಂದು ರವಿ ಬೆಳಗೆರೆ ಹೇಳಿದ್ದರು. ಆ ಒಳ್ಳೆಯ ಅನುಭವ ಮತ್ತು ಸಂತೋಷ ರವಿ ಬೆಳಗೆರೆಗೆ 'ಬಿಗ್ ಬಾಸ್' ಮನೆಯೊಳಗೆ ಆಗಿದೆ.
ಅಪ್ಪ-ಅಮ್ಮನ ಕುರಿತು ಮಾತನಾಡುವ ಅವಕಾಶವನ್ನು ಎಲ್ಲ ಸ್ಪರ್ಧಿಗಳಿಗೂ 'ಬಿಗ್ ಬಾಸ್' ನೀಡಿದ್ದರು. ಈ ವೇಳೆ ತಮ್ಮ ತಂದೆ-ತಾಯಿಯ ಬಗ್ಗೆ ಎಲ್ಲರೂ ಮಾತನಾಡಿ ಕಣ್ಣೀರಿಟ್ಟರು. ಹಾಗೇ ರವಿ ಬೆಳಗೆರೆ ಕೂಡ ''ನಾನು ತಾಯಿಯ ಮಗ'' ಅಂತ್ಹೇಳಿ ಭಾವುಕರಾದರು.
Recommended Video
ಕೊನೆಗೆ ''ಇದು ನನಗೆ ಅತ್ಯಂತ ಸಂತೋಷದ ದಿನ'' ಅಂತ ರವಿ ಬೆಳಗೆರೆ ಹೇಳಿದರು. ಅಂದ್ಹಾಗೆ, ತಮ್ಮ ತಾಯಿಯ ಬಗ್ಗೆ ರವಿ ಬೆಳಗೆರೆ 'ಬಿಗ್ ಬಾಸ್' ಮನೆಯೊಳಗೆ ಹೇಳಿದಿಷ್ಟು...

ಅಮ್ಮನ ಮಗ
''ನಾನು ಕೇವಲ ನನ್ನ ಅಮ್ಮನ ಮಗ. ನನ್ನ ತಂದೆ ಯಾರು ಅಂತ ನನಗೆ ಗೊತ್ತಿಲ್ಲ. ನನ್ನ ತಂದೆ ಅಂತ ಏನಿದ್ದ, ಆತ ತೀರಿಕೊಂಡ ನಂತರ ಹುಟ್ಟಿದ ಮಗು ನಾನು. 1958 ರಲ್ಲಿ ತಂದೆ ಇಲ್ಲದೆ, ಗಂಡ ಇಲ್ಲದೆ ಗರ್ಭ ಧರಿಸಿ ಪ್ರಪಂಚಕ್ಕೆ ಒಂದು ಮಗುವನ್ನ ತಂದಾಕೆಯ ಹೆಸರು ಬೆಳಗೆರೆ ಪಾರ್ವತಮ್ಮ'' - ರವಿ ಬೆಳಗೆರೆ

ತಂದೆಯ ಹೆಸರು ಇಟ್ಟುಕೊಂಡಿಲ್ಲ.!
''ಎಲ್ಲರೂ ತಂದೆಯ ಹೆಸರು ಇಟ್ಟುಕೊಳ್ಳುತ್ತಾರೆ. ನಾನು ತಂದೆಯ ಹೆಸರು ಇಟ್ಟುಕೊಂಡಿಲ್ಲ. ನಾನು ತಾಯಿಯ ಮಗ. ನೀವು ಇವತ್ತು ನನ್ನ ಆಫೀಸಿಗೆ ಬಂದರೆ, ನನ್ನ ಚೇಂಬರ್ ನಲ್ಲಿ ತಂದೆಯ ಫೋಟೋ ಇಲ್ಲ. ನನ್ನ ತಾಯಿಯ ಫೋಟೋ ಇದೆ. ಆ ಫೋಟೋದಲ್ಲಿ ಕರಿಮಣಿ ಇದೆ. ಕುಂಕುಮ ಇದೆ. ಹೂವು ಇದೆ. ಅಷ್ಟರಲ್ಲಾಗಲೇ ನನ್ನ ತಾಯಿಯ ಗಂಡ ತೀರಿಕೊಂಡು ಆರು ತಿಂಗಳಾಗಿತ್ತು'' - ರವಿ ಬೆಳಗೆರೆ

ತಂದೆ ಯಾರು ಅನ್ನೋದು ಮುಖ್ಯ ಅಲ್ಲ
''ಅಮ್ಮ ಸ್ನಾನ ಮಾಡುತ್ತಿದ್ದರೆ ನಾನು ರಕ್ಷಣೆ ಮಾಡಬೇಕಿತ್ತು. ಅದು ಆಗ ನನ್ನ ಜೀವನದ ಆದರ್ಶ ಆಗಿತ್ತು. ನನ್ನ ತಾಯಿಗೆ ಪಾರ್ಶ್ವವಾಯು ಅಟ್ಯಾಕ್ ಆಯ್ತು. ನನ್ನ ತಾಯಿ ಒಬ್ಬ ಲೇಖಕಿ. ನನ್ನನ್ನ ಹುಟ್ಟಿಸಿದ ಮನುಷ್ಯ ಕೂಡ ಒಬ್ಬ ಲೇಖಕ. ತಂದೆ ಯಾರು ಅನ್ನೋದು ಮುಖ್ಯ ಅಲ್ಲ. ತಾಯಿ ಮಾತ್ರ ಮುಖ್ಯ'' - ರವಿ ಬೆಳಗೆರೆ

ತಾಯಿಯನ್ನ ನೋಡಿಕೊಳ್ಳಲು ಮದುವೆ ಆದೆ
''ನಾನು 21 ವರ್ಷ ಇದ್ದಾಗ ಮದುವೆ ಆದೆ. ಯಾಕಂದ್ರೆ, ನನ್ನ ತಾಯಿಯನ್ನ ನೋಡಿಕೊಳ್ಳುವವರು ಯಾರೂ ಇರಲಿಲ್ಲ. ಇನ್ನೊಂದು ಹೆಣ್ಣು ಬೇಕು ಅಂತ ಮದುವೆ ಆದೆ. ''ನನ್ನ ತಾಯಿ ಬದುಕಿರುವಷ್ಟು ದಿನ ಚೆನ್ನಾಗಿ ನೋಡ್ಕೋ'' ಅಂತ ನಾನು ಲಲಿತಾಗೆ ಹೇಳಿದ್ದೆ. ನಾವಿಬ್ಬರು ನನ್ನ ತಾಯಿಯನ್ನ ತುಂಬಾ ಚೆನ್ನಾಗಿ ನೋಡಿಕೊಂಡ್ವಿ'' - ರವಿ ಬೆಳಗೆರೆ

ಕಣ್ಣೀರು ಹಾಕಿದ ರವಿ ಬೆಳಗೆರೆ
''ಎರಡನೇ ಬಾರಿ ನನ್ನ ತಾಯಿಗೆ ಪಾರ್ಶ್ವವಾಯು ಅಟ್ಯಾಕ್ ಆಯ್ತು. ಅವತ್ತು ನನ್ನ ತಾಯಿ ಏಳಲಿಲ್ಲ. ಅವರಿಗೆ ಪ್ರಜ್ಞೆ ಇರಲಿಲ್ಲ. ಪ್ರಜ್ಞೆ ಬಂದು ''ರವಿ'' ಅಂತ ಕರೆಯಬಹುದೇನೋ ಅಂತ ಇಡೀ ರಾತ್ರಿ ಕಾದಿದ್ದೇನೆ. ಆದರೆ ಅಂದು ಬೆಳಗ್ಗೆ, ಗಂಜಿ ತರಲು ಹೋದಾಗ, ''ಅಮ್ಮ ಹೋಗಿಬಿಟ್ಟರು'' ಅಂತ ಹೇಳಿ ರವಿ ಬೆಳಗೆರೆ ಕಣ್ಣೀರು ಸುರಿಸಿದರು.


Click it and Unblock the Notifications











