twitter
    For Quick Alerts
    ALLOW NOTIFICATIONS  
    For Daily Alerts

    380 ರೂಪಾಯಿಯನ್ನ ಇಟ್ಟುಕೊಂಡು ಬೆಂಗಳೂರಿಗೆ ಬಂದ ರವಿ ಬೆಳಗೆರೆ ಇಂದು ಕೋಟ್ಯಧೀಶ್ವರ.!

    |

    ಅದೃಷ್ಟ ಅನ್ನೋದು ಯಾವಾಗ ಹೇಗೆ ಬರುತ್ತೆ ಅಂತ ಹೇಳುವುದೇ ಕಷ್ಟ. ಬಳ್ಳಾರಿಯಲ್ಲಿ ಇರುವಾಗ ಕಷ್ಟದ ಜೀವನ ಸಾಗಿಸಿದ ರವಿ ಬೆಳಗೆರೆ ಬೆಂಗಳೂರಿನ ಕಡೆ ಮುಖ ಮಾಡಿದರು.

    ಬೆಂಗಳೂರಿಗೆ ಬಂದು ಹಲವು ಪತ್ರಿಕೆಗಳಲ್ಲಿ ಕೆಲಸ ಮಾಡಿದ ರವಿ ಬೆಳಗೆರೆ ಮುಂದೆ ಸ್ವಂತ ಪತ್ರಿಕೆ 'ಹಾಯ್ ಬೆಂಗಳೂರು' ತೆರೆಯುತ್ತಾರೆ. 'ಹಾಯ್ ಬೆಂಗಳೂರು' ಪತ್ರಿಕೆಯಿಂದ ರವಿ ಬೆಳಗೆರೆ ನಸೀಬು ಬದಲಾಗುತ್ತೆ.

    Recommended Video

    Bigg Boss Kannada 7 : Ravi Belagere's stories entertain contestants i want to listen to him too

    ಕೇವಲ 380 ರೂಪಾಯಿಯನ್ನ ಜೇಬಿನಲ್ಲಿ ಇಟ್ಟುಕೊಂಡು ಬೆಂಗಳೂರಿಗೆ ಬರುವ ರವಿ ಬೆಳಗೆರೆ 'ಹಾಯ್ ಬೆಂಗಳೂರು' ಪತ್ರಿಕೆಯಿಂದ, 'ಕ್ರೈಂ ಡೈರಿ' ಎಂಬ ಕಾರ್ಯಕ್ರಮದಿಂದ ಕೋಟ್ಯಾಂತರ ರೂಪಾಯಿ ಸಂಪಾದಿಸುತ್ತಾರೆ. ಇದನ್ನೆಲ್ಲ ಸ್ವತಃ ರವಿ ಬೆಳಗೆರೆ 'ಬಿಗ್ ಬಾಸ್' ಮನೆಯಲ್ಲಿ ಹೇಳಿಕೊಂಡಿದ್ದಾರೆ. ಆ ಕಥೆ ಇಲ್ಲಿದೆ ನೋಡಿ...

    ಪತ್ರಿಕೆಯಿಂದ ಲಾಭ

    ಪತ್ರಿಕೆಯಿಂದ ಲಾಭ

    ''ಬೆಂಗಳೂರಿಗೆ ಬಂದಾಗ ನನ್ನ ಬಳಿ ಇದ್ದದ್ದು ಕೇವಲ 380 ರೂಪಾಯಿ ಮತ್ತು ಒಂದು ಮೋಟರ್ ಸೈಕಲ್. ಎಲ್ಲ ಪತಿಕೆಗಳಲ್ಲಿ ಕೆಲಸ ಮಾಡಿ, ಎಲ್ಲರ ಬಳಿ ಜಗಳ ಮಾಡಿ ಕೊನೆಗೆ ನನ್ನದೇ ಪತ್ರಿಕೆ ಶುರು ಮಾಡಿದೆ. ಊಟಕ್ಕೆ ಆದರೆ ಸಾಕು ಅಂತ ಸ್ವಂತ ಪೇಪರ್ ಮಾಡಿದೆ. ಅದರಿಂದ ತುಂಬಾ ಲಾಭ ಬಂತು'' - ರವಿ ಬೆಳಗೆರೆ

    'ಬಿಗ್ ಬಾಸ್' ಮನೆಯೊಳಗೂ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಸದ್ದು.!'ಬಿಗ್ ಬಾಸ್' ಮನೆಯೊಳಗೂ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಸದ್ದು.!

    ಕೋಟಿ ಕೋಟಿ ದುಡ್ಡು

    ಕೋಟಿ ಕೋಟಿ ದುಡ್ಡು

    ''ಕೋಟ್ಯಾಂತರ ರೂಪಾಯಿ ದುಡ್ಡು ಬಂತು. ಒಂದು 'ಕ್ರೈಂ ಡೈರಿ' ಕಾರ್ಯಕ್ರಮ ಮಾಡಿದ್ಮೇಲೆ, ಕೋಟಿಗಟ್ಟಲೆ ದುಡ್ಡು ಬಂತು. 'ಎಂದೂ ಮರೆಯದ ಹಾಡು' ಮಾಡಿದೆ. ಇಂದಿಗೂ ಜನ ಆ ಕಾರ್ಯಕ್ರಮವನ್ನು ಮರೆತಿಲ್ಲ'' - ರವಿ ಬೆಳಗೆರೆ

    ರವಿ ಬೆಳಗೆರೆ ಅಭಿಮಾನಿಗಳಿಗೆ ಬೇಸರದ ಸುದ್ದಿಯೊಂದು ಇಲ್ಲಿದೆ.!ರವಿ ಬೆಳಗೆರೆ ಅಭಿಮಾನಿಗಳಿಗೆ ಬೇಸರದ ಸುದ್ದಿಯೊಂದು ಇಲ್ಲಿದೆ.!

    ಪ್ರಾರ್ಥನಾ ಶಾಲೆ

    ಪ್ರಾರ್ಥನಾ ಶಾಲೆ

    ''ಬಂದ ದುಡ್ಡನ್ನೆಲ್ಲ ಸೇರಿಸಿ 'ಪ್ರಾರ್ಥನಾ' ಅಂತ ಸ್ಕೂಲ್ ಮಾಡಿದೆ. ನನ್ನ ತಾಯಿಯ ಹೆಸರು ಪಾರ್ವತಿ. ನನ್ನ ತಾಯಿಯ ಸ್ಮರಣೆಯಲ್ಲಿ 'ಪ್ರಾರ್ಥನಾ' ಅಂತ ಶಾಲೆ ಓಪನ್ ಮಾಡಿದೆ. ನನ್ನ ಸ್ಕೂಲ್ ನ ವೈಶಿಷ್ಟ್ಯ ಏನು ಅಂದರೆ, ಅಪ್ಲಿಕೇಶನ್ ಫಾರ್ಮ್ ನಲ್ಲಿ ಜಾತಿ ಅನ್ನೋದೇ ಇಲ್ಲ'' - ರವಿ ಬೆಳಗೆರೆ

    'ಅವರು ನನ್ನನ್ನೂ ಬಿಟ್ಟಿಲ್ಲ': ರವಿ ಬೆಳಗೆರೆ ಬಗ್ಗೆ ದುನಿಯಾ ರಶ್ಮಿ ಹೇಳಿದ್ದೇನು.?'ಅವರು ನನ್ನನ್ನೂ ಬಿಟ್ಟಿಲ್ಲ': ರವಿ ಬೆಳಗೆರೆ ಬಗ್ಗೆ ದುನಿಯಾ ರಶ್ಮಿ ಹೇಳಿದ್ದೇನು.?

    ಇಂದು ಅಮ್ಮ ಇರಬೇಕಿತ್ತು

    ಇಂದು ಅಮ್ಮ ಇರಬೇಕಿತ್ತು

    ''ನಾವ್ಯಾರೂ ಕೂಡ ಯಾವ ಮಗುವಿನಿಂದಲೂ ಡೊನೇಶನ್ ತೆಗೆದುಕೊಳ್ಳುವುದಿಲ್ಲ. ಎಂಟು ಸಾವಿರ ಮಕ್ಕಳು ಓದುತ್ತಾರೆ. ನನ್ನ ಬಳಿ ಐದು ಕಾರು ಇದೆ. ಆದರೆ ನನ್ನ ಬಳಿ ಈಗ ತಾಯಿ ಇಲ್ಲ. ಒಂದು ಬಾರಿ ಅವಳು ಬಂದು ಇದನ್ನೆಲ್ಲ ನೋಡಿದರೆ ಸಾಕಿತ್ತು'' ಅಂತ ಕಣ್ಣೀರಿಟ್ಟರು ರವಿ ಬೆಳಗೆರೆ

    English summary
    Bigg Boss Kannada 7: Day 3: Ravi Belagere speaks about his success life.
    Friday, October 18, 2019, 8:28
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X