ಶಂಕರ್ ನಾಗ್ ಗೆ 'ಕೋತಿ' ಎಂದಿದ್ದ ಆ ಬಜಾರಿ ನಟಿ ಯಾರು.?

'ಒಂದಾನೊಂದು ಕಾಲದಲ್ಲಿ' ಚಿತ್ರದ ಮೂಲಕ ಸಿನಿ ಪಯಣ ಆರಂಭಿಸಿದ ಶಂಕರ್ ನಾಗ್ ಕನ್ನಡಿಗರ ನೆಚ್ಚಿನ ನಟ. ಅದರಲ್ಲೂ ಆಟೋ ಡ್ರೈವರ್ ಗಳ ಆರಾಧ್ಯ ದೈವ. 80 ರ ದಶಕದಲ್ಲಿ ಸೂಪರ್ ಸ್ಟಾರ್ ಆಗಿ ಮೆರೆದ ಶಂಕರ್ ನಾಗ್ ಕನ್ನಡ ಚಿತ್ರರಂಗಕ್ಕೆ ನೀಡಿದ ಯಶಸ್ವಿ ಸಿನಿಮಾಗಳು ಒಂದೆರಡಲ್ಲ.

'ಆಟೋ ರಾಜಾ', 'ಸಿಬಿಐ ಶಂಕರ್', 'ಎಸ್.ಪಿ.ಸಾಂಗ್ಲಿಯಾನ', 'ಸೀತಾ ರಾಮು', 'ಗೀತಾ', 'ಮಿಂಚಿನ ಓಟ' ಸೇರಿದಂತೆ ಶಂಕ್ರಣ್ಣನ ಹಲವು ಸಿನಿಮಾಗಳು ಈಗಲೂ ಜನರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿವೆ.

bigg-boss-kannada-7-day-3-ravi-belagere-speaks-about-shankar-nag-and-manjula

ಇಂತಿಪ್ಪ ಪ್ರತಿಭಾವಂತ ನಟ ಶಂಕರ್ ನಾಗ್ ಗೆ ನಟಿ ಮಂಜುಳಾ 'ಕೋತಿ' ಎಂದಿದ್ದರಂತೆ. ಹೌದು, ಈ ವಿಚಾರವನ್ನು ಹಿರಿಯ ಪತ್ರಕರ್ತ ರವಿ ಬೆಳಗೆರೆ 'ಬಿಗ್ ಬಾಸ್' ಮನೆಯಲ್ಲಿ ಬಹಿರಂಗ ಪಡಿಸಿದ್ದಾರೆ.

''ಮಂಜುಳಾ ಮುಂದೆ ಮೊದಲ ಬಾರಿ ಶಂಕರ್ ನಾಗ್ ನ ಕರೆದುಕೊಂಡು ಬಂದು ನಿಲ್ಲಿಸುತ್ತಾರೆ. 'ಈತ ಹೀರೋ ನಿನ್ನ ಸಿನಿಮಾಗೆ' ಅಂದಾಗ, 'ಇದು ಯಾವ ಕೋತಿನ ತಂದು ಹೀರೋ ಅಂತ ಮಾಡ್ತೀರಿ' ಎಂದು ಮಂಜುಳಾ ಡೈರೆಕ್ಟ್ ಆಗಿ ಶಂಕರನ ಮುಂದೆಯೇ ಹೇಳಿದ್ದಳು. ಟ್ರಾಜೆಡಿ ಅಂದ್ರೆ ಮಂಜುಳಾ ಬಾಡಿ ತಂದಿದ್ದೇ ಶಂಕರ'' ಎಂದಿದ್ದಾರೆ ರವಿ ಬೆಳಗೆರೆ.

ಅಂದ್ಹಾಗೆ, ಅಗ್ನಿ ಅವಘಡದಿಂದಾಗಿ 1986 ರಲ್ಲಿ ನಟಿ ಮಂಜುಳಾ ಸಾವನ್ನಪ್ಪಿದರು ಎಂಬುದು ನಿಮ್ಮ ಮಾಹಿತಿಗಿರಲಿ.

More from Filmibeat

English summary
Bigg Boss Kannada 7: Day 3: Ravi Belagere Speaks About Shankar Nag and Manjula.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X