ಬಂದೂಕು ಇಲ್ಲದೆ ರವಿ ಹೊರಗೆ ಬರಲ್ಲ: ಜೀವದ ಭಯದ ಬಗ್ಗೆ ಬಾಯಿ ಬಿಟ್ಟ ಬೆಳಗೆರೆ.!
ಕನ್ನಡ ಪತ್ರಿಕೋದ್ಯಮ ಕಂಡ ಓರ್ವ ಸೆಲೆಬ್ರಿಟಿ ಜರ್ನಲಿಸ್ಟ್ ಅಂದ್ರೆ ಅದು ರವಿ ಬೆಳಗೆರೆ. 'ಹಾಯ್ ಬೆಂಗಳೂರು' ಪತ್ರಿಕೆಗೆ ಪ್ರಧಾನ ಸಂಪಾದಕರಾಗಿರುವ ರವಿ ಬೆಳಗೆರೆಗೆ ದೊಡ್ಡ ಫ್ಯಾನ್ ಫಾಲೋವಿಂಗ್ ಇದೆ.
ತಾರೆಯರು, ರಾಜಕಾರಣಿಗಳು, ರೌಡಿಗಳು... ಹೀಗೆ ಹಲವು ಪ್ರಭಾವಿಗಳ ಕುರಿತು ವರದಿ ಪ್ರಕಟಿಸಿರುವ ರವಿ ಬೆಳಗೆರೆಗೆ ಜೀವ ಭಯ ಇದೆಯಂತೆ. ಬಂದೂಕು ಇಲ್ಲದೆ ರವಿ ಬೆಳಗೆರೆ ಹೊರಗೆಲ್ಲೂ ಹೋಗಲ್ವಂತೆ. ಹಾಗಂತ ಖುದ್ದು ಅವರೇ 'ಬಿಗ್ ಬಾಸ್' ಮನೆಯಲ್ಲಿ ಹೇಳಿಕೊಂಡಿದ್ದಾರೆ.
Recommended Video
''ನನಗೆ ಒಂದು ಬೇರೆ ಮುಖ ಇದೆ. ರವಿ ಬೆಳಗೆರೆ ಅಂದ್ರೆ ತುಂಬಾ ಅಪಾಯಕಾರಿ, ಒರಟ ಅಂತಾರೆ. ಹೌದು, ನಾನು ಹಾಗೆ ಇರದೇ ಹೋಗಿದ್ದರೆ ನನ್ನನ್ನ ಇಷ್ಟೊತ್ತಿಗೆ ಮುಗಿಸಿ ಬಿಡುತ್ತಿದ್ದರು''

''ಬಂದೂಕು ಇಲ್ಲದೆ ನಾನು ಹೊರಗೆ ಬರುವುದಿಲ್ಲ. ಆದರೆ ಬಂದೂಕು ಬಳಸುವ ಮನಸ್ಸು ನನಗೆ ಇಲ್ಲ. ಯಾರನ್ನೂ ಕೊಲ್ಲಲು, ಶೂಟ್ ಮಾಡಲು ನನಗೆ ಇಷ್ಟ ಇಲ್ಲ. ನನಗೆ ಬಹಳ ಮೃದುವಾದ ಮನಸ್ಸು ಇದೆ'' ಎಂದಿದ್ದಾರೆ ರವಿ ಬೆಳಗೆರೆ.
ಅಂದ್ಹಾಗೆ, ವರ್ಷದ ಹಿಂದೆ ಪತ್ರಕರ್ತ ಸುನೀಲ್ ಹೆಗ್ಗರವಳ್ಳಿಯನ್ನ ಕೊಲ್ಲಲು ಸುಪಾರಿ ಕೊಟ್ಟ ಕೇಸಿನಲ್ಲಿ ರವಿ ಬೆಳಗೆರೆ ಬಂಧನಕ್ಕೊಳಗಾಗಿದ್ದರು. ಬಳಿಕ ಜಾಮೀನಿನ ಮೂಲಕ ಬಿಡುಗಡೆಗೊಂಡಿದ್ದರು.


Click it and Unblock the Notifications











