ಜಾಂಡೀಸ್ ತಪಾಸಣೆ: 'ಬಿಗ್ ಬಾಸ್' ಮನೆಯಿಂದ ಹೊರ ಬಂದ ಕಿಶನ್.!

Recommended Video

Kishan goes out og Bigg Boss house , why ?

'ಬಿಗ್ ಬಾಸ್ ಕನ್ನಡ-7' ಕಾರ್ಯಕ್ರಮ ಶುರುವಾಗಿ ಇನ್ನೂ ಒಂದು ವಾರ ಕಳೆದಿಲ್ಲ. ಅಷ್ಟು ಬೇಗ ಇಬ್ಬರು ಸ್ಪರ್ಧಿಗಳು ಅನಾರೋಗ್ಯದ ಕಾರಣದಿಂದ 'ಒಂಟಿ ಮನೆ'ಯಿಂದ ಹೊರಬರಬೇಕಾದ ಪರಿಸ್ಥಿತಿ ಬಂದಿದೆ.

ಮೊದಲ ದಿನವೇ ಲೋ ಶುಗರ್ ನಿಂದ ಬಳಲಿದ ಹಿರಿಯ ಪತ್ರಕರ್ತ ರವಿ ಬೆಳಗೆರೆ, ಚಿಕಿತ್ಸೆಗಾಗಿ 'ಬಿಗ್ ಬಾಸ್' ಮನೆಯಿಂದ ಆಚೆ ಕಾಲಿಟ್ಟಿದ್ದರು. ವೈದ್ಯರ ಸಲಹೆ ಮೇರೆಗೆ ಈ ಶನಿವಾರದವರೆಗೆ ಮಾತ್ರ ರವಿ ಬೆಳಗೆರೆ 'ಬಿಗ್ ಬಾಸ್' ಮನೆಯಲ್ಲಿ ಅತಿಥಿಯಾಗಿ ಇರಲಿದ್ದಾರೆ.

ಹೀಗಿರುವಾಗಲೇ 'ಬಿಗ್ ಬಾಸ್' ಮನೆಯ ಮತ್ತೋರ್ವ ಸ್ಪರ್ಧಿಗೆ ಆರೋಗ್ಯ ಸಮಸ್ಯೆ ಎದುರಾಗಿದೆ. ಜಾಂಡೀಸ್ ಕುರಿತ ಹೆಚ್ಚಿನ ತಪಾಸಣೆಗಾಗಿ ನಾಲ್ಕನೇ ದಿನದ ರಾತ್ರಿ ಡ್ಯಾನ್ಸರ್ ಕಿಶನ್ ರನ್ನ 'ಬಿಗ್ ಬಾಸ್' ಆಸ್ಪತ್ರೆಗೆ ಕಳುಹಿಸಿದ್ದಾರೆ.

bigg-boss-kannada-7-day-4-dancer-kishan-is-taken-to-hospital-for-jaundice-test

ಒಂದು ವೇಳೆ ಕಿಶನ್ ಗೆ ಜಾಂಡೀಸ್ ಉಲ್ಬಣವಾಗಿದ್ದರೆ, ಆಟದಲ್ಲಿ ಮುಂದುವರೆಯುವುದು ಅವರಿಗೆ ಕಷ್ಟವಾಗಬಹುದು. ಹಾಗ್ನೋಡಿದ್ರೆ, ಕಿಶನ್ ಈ ವಾರ ನಾಮಿನೇಟ್ ಆಗಿರಲಿಲ್ಲ. ಸೇಫ್ ಆಗಿದ್ದ ಕಿಶನ್ ಟಾಸ್ಕ್ ಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು.

'ಬಿಗ್ ಬಾಸ್ ಕನ್ನಡ-7' ಆವೃತ್ತಿಯ ಮೊದಲ 'ವಾರದ ಕಥೆ ಕಿಚ್ಚನ ಜೊತೆ' ಇಂದು ನಡೆಯಲಿದೆ. ಇವತ್ತು 'ದೊಡ್ಮನೆ'ಯಿಂದ ಯಾರು ಔಟ್ ಆಗ್ತಾರೆ ಎಂಬುದೇ ಸದ್ಯದ ಕುತೂಹಲ.

More from Filmibeat

English summary
Bigg Boss Kannada 7: Day 4: Dancer Kishan Is Taken To Hospital for Jaundice Test.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X