'ಮಜಾ'ಕ್ಕಾಗಿ ಚೈತ್ರ ಕೋಟೂರು ಹೀಗೆಲ್ಲ ಮಾಡ್ತಿದ್ದಾರಾ.?
Recommended Video
ಪಾಸಿಟೀವೋ, ನೆಗೆಟಿವೋ.. ಒಟ್ನಲ್ಲಿ ಪ್ರಚಾರ ಸಿಕ್ಕರೆ ಸಾಕು ಅಂತ ಕೆಲ ಸಿನಿಮಾ ತಂಡವರು ಏನೇನೋ ಪ್ಲಾನ್ ಮಾಡ್ತಾರೆ. ನೆಗೆಟಿವ್ ಪಬ್ಲಿಸಿಟಿ ಆದರೂ ಪರ್ವಾಗಿಲ್ಲ, ಒಟ್ನಲ್ಲಿ ಹೆಚ್ಚು ಜನರನ್ನು ತಲುಪಲು ಗಾಂಧಿನಗರದ ಕೆಲ ಮಂದಿ ಸರ್ಕಸ್ ಮಾಡುವುದು ನಿಮಗೆಲ್ಲ ಗೊತ್ತೇ ಇದೆ.
ಸೇಮ್ ಟು ಸೇಮ್ ಇದೇ ಸ್ಟ್ರಾಟೆಜಿಯನ್ನ ನಟಿ ಮತ್ತು ಬರಹಗಾರ್ತಿ ಚೈತ್ರ ಕೋಟೂರು 'ಬಿಗ್ ಬಾಸ್' ಮನೆಯಲ್ಲಿ ಅಪ್ಲೈ ಮಾಡುತ್ತಿರುವ ಹಾಗಿದೆ. 'ಬಿಗ್ ಬಾಸ್' ಮನೆಯಲ್ಲಿ ಮೂರು ಹೊತ್ತು ಸುಮ್ಮನೆ ಇದ್ದರೆ, ಕ್ಯಾಮರಾಗಳು ಕೂಡ ಝೂಮ್ ಹಾಕಲ್ಲ. ಹೀಗಾಗಿ ಫುಟೇಜ್ ಪಡೆಯಬೇಕು ಅಂದ್ರೆ ಏನಾದರು ಒಂದನ್ನ ಮಾಡುತ್ತಲೇ ಇರಬೇಕು.
ಕಾಲು ಕೆರೆದುಕೊಂಡು ರಗಳೆ ಮಾಡಿಕೊಳ್ಳದ ಚೈತ್ರ ಕೋಟೂರು, 'ಬಿಗ್ ಬಾಸ್' ಮನೆಯೊಳಗೆ ಪ್ರೀತಿ-ಪ್ರೇಮದ ಆಟ ಆಡುತ್ತಿದ್ದಾರೆ. ಕಳೆದ ವಾರ ಶೈನ್ ಶೆಟ್ಟಿ ಹಿಂದೆ ಬಿದ್ದು ಇಡೀ ಮನೆಯಲ್ಲಿ ಹಾಟ್ ಟಾಪಿಕ್ ಆಗಿದ್ದ ಚೈತ್ರ ಕೋಟೂರು ಈ ವಾರವೂ ಅದನ್ನೇ ಮುಂದುವರೆಸಿದ್ದಾರೆ.

ಶೈನ್ ಶೆಟ್ಟಿಗಾಗಿ ಒಂದು ಕವನ
ಹೇಳಿ ಕೇಳಿ ಚೈತ್ರ ಕೋಟೂರು ಬರಹಗಾರ್ತಿ ಆಗಿರುವುದರಿಂದ 'ಬಚ್ಚಿಟ್ಟ ಒಲವ ಹೇಳಿಬಿಡು ಗೆಳೆಯ..' ಎಂದು ಆರಂಭವಾಗುವ ಒಂದು ಕವನವನ್ನ ಬರೆದು ಯಾರಿಗೂ ಗೊತ್ತಾಗದಂತೆ ಶೈನ್ ಶೆಟ್ಟಿ ಸೂಟ್ ಕೇಸ್ ಒಳಗೆ ಹಾಕಿದ್ದಾರೆ.

'ಮಜಾ' ಇರುತ್ತಂತೆ.!
''ಸುಮ್ನೆ ಒಂದು ಸಣ್ಣ ಕವನ ಬರೆದಿದ್ದೇನೆ. ಬರೆಯಬೇಕು ಅಂತ ಬರೆದಿದ್ದಲ್ಲ, ಸುಮ್ನೆ ಆಟಕ್ಕಾಗಿ ಬರೆದಿದ್ದೇನೆ. ತಪ್ಪಾಗಿದ್ದರೆ ಕ್ಷಮಿಸಿ. ಇದನ್ನ ಶೈನ್ ಬ್ಯಾಗ್ ಒಳಗೆ ಇಡಬೇಕು ಅಂದುಕೊಂಡಿದ್ದೇನೆ. ಇದರಲ್ಲಿ ನನ್ನ ಹೆಸರು ಬರೆದಿಲ್ಲ. ನಾನೇ ಬರೆದಿದ್ದು ಅಂತ ಯಾವ ಕಾರಣಕ್ಕೂ ಒಪ್ಪಿಕೊಳ್ಳಲ್ಲ. ಮಜಾ ಇರುತ್ತೆ ಅಂತ ಮಾಡ್ತಾ ಇದ್ದೀನಿ'' ಎಂದು ಶೈನ್ ಶೆಟ್ಟಿ ಸೂಟ್ ಕೇಸ್ ಒಳಗೆ ಕವನವನ್ನ ಇಟ್ಟು 'ಬಿಗ್ ಬಾಸ್' ಮುಂದೆ ಚೈತ್ರ ಕೋಟೂರು ಹೇಳಿಕೊಂಡಿದ್ದಾರೆ.

ನಾಟಕ ಮಾಡಿದ ಚೈತ್ರ
ಕವನ ಶೈನ್ ಶೆಟ್ಟಿಗೆ ಸಿಕ್ಕ ಕೂಡಲೆ ಇದೆಲ್ಲ ಚೈತ್ರ ಕೋಟೂರು ಕೆಲಸ ಎಂಬುದು ಅವರಿಗೆ ಸ್ಪಷ್ಟವಾಗಿದೆ. ಅದೇ ಕವನ ಕುರಿ ಪ್ರತಾಪ್, ಭೂಮಿ ಶೆಟ್ಟಿ ಮತ್ತು ಹರೀಶ್ ರಾಜ್ ಕೈ ಸೇರಿದ್ಮೇಲೆ ಚೈತ್ರ ರನ್ನ ಕೇಳಿದಾಗ, ''ಯಾರು ಬರೆದಿರುವುದು.? ಎಲ್ಲಿ ಸಿಕ್ತು.? ಕವನ ಚೆನ್ನಾಗಿದೆ'' ಅಂತೆಲ್ಲ ಚೈತ್ರ ಕೋಟೂರು ನಾಟಕ ಮಾಡಿದರು.

ಪ್ಯೂರ್ ಸ್ಟ್ರಾಟೆಜಿ.!
ಏನೇ ಡ್ರಾಮಾ ಮಾಡಿದರೂ, ಹೀಗೆಲ್ಲ ಮಾಡ್ತಿರೋದು ಚೈತ್ರ ಕೋಟೂರು ಅಂತ 'ಬಿಗ್ ಬಾಸ್' ಮನೆಯಲ್ಲಿ ಇರುವವರೆಲ್ಲರಿಗೂ ಗೊತ್ತು. ಹೀಗಿದ್ದರೂ, 'ಮಜಾ' ಇರುತ್ತೆ ಅಂತ ಚೈತ್ರ ಹೇಳ್ತಿರೋದನ್ನ ಕೇಳಿದರೆ ಇದು ಪ್ಯೂರ್ ಸ್ಟ್ರಾಟೆಜಿ ಅಂತಲೇ ಅರ್ಥ. ಅಂದ್ಹಾಗೆ, ಚೈತ್ರ ಕೋಟೂರು ರವರ ಸ್ಟ್ರಾಟೆಜಿ ನಿಮಗೆ ಮನರಂಜನೆ ಕೊಡ್ತಿದ್ಯಾ.? ನಿಮ್ಮ ಅಭಿಪ್ರಾಯವನ್ನು ತಮಗೆ ತಿಳಿಸಿ.. ಕೆಳಗಿರುವ ಕಾಮೆಂಟ್ ಬಾಕ್ಸ್ ಮೂಲಕ.


Click it and Unblock the Notifications











