ಜೈಜಗದೀಶ್ ಮೇಲೆ ಇದೇನಿದು ಗಂಭೀರ ಆರೋಪ.?

'ಬಿಗ್ ಬಾಸ್' ಮನೆಯ ಅಡುಗೆ ಮನೆ ಅಂದ್ರೆ ಒಂಥರಾ ಕಿರಿಕ್ ಸೆಂಟರ್ ಇದ್ದ ಹಾಗೆ. ಎಷ್ಟೇ ಅನ್ಯೋನ್ಯವಾಗಿ ಎಲ್ಲ ಸ್ಪರ್ಧಿಗಳು ಇದ್ದರೂ, ಭಿನ್ನಾಭಿಪ್ರಾಯ-ಮನಸ್ತಾಪ ಶುರುವಾಗಲು ಊಟದ ಮ್ಯಾಟರ್ ಸಾಕು.!

ರೇಷನ್ ನಲ್ಲಿ ಕೊಂಚ ಕಮ್ಮಿ ಸಿಕ್ಕರೂ, ಹೊಟ್ಟೆಗೆ ಸ್ವಲ್ಪ ಕಡಿಮೆ ಬಿದ್ದರೂ 'ಬಿಗ್ ಬಾಸ್' ಮನೆಯಲ್ಲಿ ವಾರ್ ಆಗುವುದು ಗ್ಯಾರೆಂಟಿ. ಹಾಗ್ನೋಡಿದ್ರೆ, 'ಬಿಗ್ ಬಾಸ್' ಕನ್ನಡ ಕಾರ್ಯಕ್ರಮದ ಏಳು ಆವೃತ್ತಿಗಳಲ್ಲಿ ಹೆಚ್ಚು ಗಲಾಟೆ ನಡೆದಿರುವುದೇ ಊಟದ ವಿಷಯಕ್ಕೆ.!

ಇನ್ನೂ ಎಂಜಲು ತಟೆ ತೊಳೆಯುವ ಸಲುವಾಗಿಯೂ ದೊಡ್ಡ ದೊಡ್ಡ ಗಲಾಟೆಗಳೇ ನಡೆದು ಬಿಟ್ಟಿದೆ. ಸೇಮ್ ಟು ಸೇಮ್ ಇದೇ.. ಈ ಸೀಸನ್ ನಲ್ಲೂ ರಿಪೀಟ್ ಆಗುತ್ತಿದೆ.

ಸ್ಯಾಂಡಲ್ ವುಡ್ ನಲ್ಲಿ ಜೈಜಗದೀಶ್ ಅಂದ್ರೆ ಕ್ಲಾಸ್ ನಟ. ಇಂತಿಪ್ಪ ಜೈಜಗದೀಶ್ ರವರಿಗೆ 'ಬಿಗ್ ಬಾಸ್' ಮನೆಯಲ್ಲಿ ಟೆಂಪರ್ ರೈಸ್ ಆಗಿದೆ. ಅದಕ್ಕೆ ಕಾರಣ ಮತ್ತದೇ ಅಡುಗೆ ಮನೆ. ಮೊದಲನೇ ವಾರ 'ಬಿಗ್ ಬಾಸ್' ಮನೆಯ ಕಿಚನ್ ನೇತೃತ್ವ ಸುಜಾತ ಮತ್ತು ಜೈಜಗದೀಶ್ ಪಾಲಾಗಿತ್ತು. ಊಟದ ವಿಚಾರಕ್ಕೆ ಜೈಜಗದೀಶ್ ಬಾಯಿಗೆ ಬಂದ ಹಾಗೆ ಬೈಯ್ಯುತ್ತಾರೆ ಅಂತ ಕಿಶನ್ ಆರೋಪಿಸಿದ್ದಾರೆ. ಮುಂದೆ ಓದಿರಿ...

ಜೈಜಗದೀಶ್ ತಾಳ್ಮೆ ಪರೀಕ್ಷಿಸಿದ ಅಡುಗೆ ಮನೆ

ಜೈಜಗದೀಶ್ ತಾಳ್ಮೆ ಪರೀಕ್ಷಿಸಿದ ಅಡುಗೆ ಮನೆ

'ಬಿಗ್ ಬಾಸ್' ನೀಡಿದ್ದ ರೇಷನ್ ನಲ್ಲಿ ಒಂದು ವಾರ 18 ಸ್ಪರ್ಧಿಗಳಿಗೆ ಮೂರು ಹೊತ್ತು ಅಡುಗೆ ಮಾಡುವುದು ದೊಡ್ಡ ಚಾಲೆಂಜ್. ಒಬ್ಬೊಬ್ಬರದ್ದು ಒಂದೊಂದು ಟೇಸ್ಟ್ ಇರುವಾಗ, ಎಲ್ಲರನ್ನೂ ಖುಷಿ ಪಡಿಸುವುದು ಅಸಾಧ್ಯ. ಅಂಥದ್ರಲ್ಲಿ ಜೈಜಗದೀಶ್ ಮತ್ತು ಸುಜಾತ ತಂಡ ಕೈಲಾದ ಪ್ರಯತ್ನ ಮಾಡಿದ್ದಾರೆ. ಎಲ್ಲರನ್ನೂ ಒಂದೇ ಸಮಯಕ್ಕೆ ಕರೆದು ಒಟ್ಟಿಗೆ ಊಟ ಬಡಿಸುವಷ್ಟರಲ್ಲಿ ಜೈಜಗದೀಶ್ ಗೆ ಸಾಕಾಗುತ್ತಿತ್ತು. ಈ ವೇಳೆ ಕೆಲವರನ್ನು ಬೈಯ್ದು ಜೈಜಗದೀಶ್ ತಮ್ಮ ಸಿಟ್ಟನ್ನು ಹೊರ ಹಾಕಿದ್ದರು. ಇದೇ ಕಿಶನ್ ಬೇಸರಕ್ಕೆ ಕಾರಣವಾಗಿದೆ.

ದಯವಿಟ್ಟು ಬೈಯ್ಯಬೇಡಿ

ದಯವಿಟ್ಟು ಬೈಯ್ಯಬೇಡಿ

''ತುಂಬಾ ಜನರಿಗೆ ನೀವು ಬೇಜಾರು ಮಾಡಿದ್ದೀರಾ. ಅಡುಗೆ ಮನೆಯಲ್ಲಿ ಎಲ್ಲರಿಗೂ ಕೆಟ್ಟದಾಗಿ ಬೈಯ್ಯುತ್ತೀರಾ. ಚೈತ್ರ ವಾಸುದೇವನ್, ಪ್ರಿಯಾಂಕಾ, ರಾಜು ತಾಳಿಕೋಟೆ ಮತ್ತು ಭೂಮಿ ಶೆಟ್ಟಿಗೆ ಕೆಟ್ಟ ಮಾತಿನಲ್ಲಿ ಬೈಯ್ದಿದ್ದೀರಾ. ದಯವಿಟ್ಟು ಬೈಯ್ಯಬೇಡಿ'' ಎಂದು ಜೈಜಗದೀಶ್ ಬಳಿ ಕಿಶನ್ ಕೇಳಿಕೊಂಡರು.

ಎಲ್ಲವೂ ನೇರ-ನೇರ

ಎಲ್ಲವೂ ನೇರ-ನೇರ

''ನಾನು ಎಲ್ಲವನ್ನೂ ಡೈರೆಕ್ಟ್ ಆಗಿ ಹೇಳುತ್ತೇನೆ. ಹಿಂದೆ-ಮುಂದೆ ಮಾತನಾಡುವ ಅಭ್ಯಾಸ ನನಗಿಲ್ಲ. ನೀನು (ಕಿಶನ್) ಇಲ್ಲಿ ಇರಲಿಲ್ಲ. ಇಲ್ಲಿ ಏನೇನು ಆಗಿದೆ ಅಂತ ನಿನಗೆ (ಕಿಶನ್) ಗೊತ್ತಿಲ್ಲ'' ಎನ್ನುತ್ತಾ ಜೈಜಗದೀಶ್ ಸಿಟ್ಟು ಮಾಡಿಕೊಂಡರು. ಈ ನಡುವೆ ಕಿಶನ್ ಮತ್ತು ಜೈಜಗದೀಶ್ ನಡುವೆ ಮಾತಿನ ಚಕಮಕಿ ನಡೆಯಿತು.

ಜೈಜಗದೀಶ್ ಪರ ಬ್ಯಾಟಿಂಗ್

ಜೈಜಗದೀಶ್ ಪರ ಬ್ಯಾಟಿಂಗ್

''ಎಲ್ಲರ ಬಗ್ಗೆ ಜೈಜಗದೀಶ್ ರವರಲ್ಲಿ ನಿಜಕ್ಕೂ ಕಾಳಜಿ ಇದೆ. ಜೈಜಗದೀಶ್ ಒರಟಾಗಿ ಮಾತನಾಡುತ್ತಾರೆ. ಅವರು ಆಡಿರುವ ಮಾತುಗಳು ಆಡುಭಾಷೆ ಅಷ್ಟೆ'' ಎಂದು ಜೈಜಗದೀಶ್ ಪರವಾಗಿ ಸುಜಾತ, ಹರೀಶ್ ರಾಜ್ ಮತ್ತು ಶೈನ್ ಶೆಟ್ಟಿ ಬ್ಯಾಟಿಂಗ್ ಮಾಡಿದರು.

ಗಲಾಟೆ ಶುರು

ಗಲಾಟೆ ಶುರು

ಅಂತೂ ಇಲ್ಲಿಯವರೆಗೂ ಬೂದಿ ಮುಚ್ಚಿದ ಕೆಂಡದ ಹಾಗೆ ಇದ್ದ ಸಿಟ್ಟು-ಕೋಪ ಇದೀಗ 'ಬಿಗ್ ಬಾಸ್' ಮನೆಯಲ್ಲಿ ಸ್ಫೋಟಗೊಂಡಿದೆ. ಸೀಸನ್ ನ ಮೊದಲ ಜಗಳ ನಿನ್ನೆ ನಡೆದಿದೆ. 'ಬಿಗ್ ಬಾಸ್' ಮನೆಯಲ್ಲಿ ಇನ್ನೂ ಏನೇನು ಆಗುತ್ತೋ, ನಾವು-ನೀವು ಏನೇನು ನೋಡಬೇಕೋ.?!

More from Filmibeat

English summary
Bigg Boss Kannada 7: Day 7: Kishan locked horns with Jai Jagadeesh for using foul language.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X