ನಿಮಗೆ ಗೊತ್ತಾ.. ಚೈತ್ರ ಕೋಟೂರುಗೆ ಈಗಾಗಲೇ ಮದುವೆ ಆಗಿದ್ಯಂತೆ.!

Recommended Video

Bigg Boss Kannada 7 : Do you know about Chaitra Kottoor marriage story | FILMIBEAT KANNADA

'ಸೂಜಿದಾರ' ಸಿನಿಮಾ ಮತ್ತು ಕೆಲ ಧಾರಾವಾಹಿಗಳಲ್ಲಿ ನಟಿಸಿರುವ ಕೋಲಾರ ಮೂಲದ ಚೈತ್ರ ಕೋಟೂರು 'ಬಿಗ್ ಬಾಸ್' ಮನೆಯೊಳಗೆ ಕಾಲಿಟ್ಟ ಮೇಲೆ ಸಿಕ್ಕಾಪಟ್ಟೆ ಫೇಮಸ್ ಆಗ್ಬಿಟ್ಟಿದ್ದಾರೆ.

ಮೊದಲ ವಾರ ನಟ ಶೈನ್ ಶೆಟ್ಟಿ ಹಿಂದೆ ಬಿದ್ದು.. ''ಏನೂಂದ್ರೆ'' ಎಂದು ಕರೆಯುತ್ತಾ ಈ ಸೀಸನ್ ನಲ್ಲಿ ಮೊದಲ ಲವ್ ಆಂಗಲ್ ಓಪನ್ ಮಾಡಿದ ಚೈತ್ರ ಕೋಟೂರು ಎರಡನೇ ವಾರ ಶೈನ್ ಶೆಟ್ಟಿ ಸೂಟ್ ಕೇಸ್ ಒಳಗೆ ಕವನ ಬರೆದಿಟ್ಟು ಸುದ್ದಿಯಾದರು.

ನಾಮಿನೇಷನ್ ಗೆ ಹೆದರಿ ಸೇಫ್ ಗೇಮ್ ಆಡದ ಚೈತ್ರ ಕೋಟೂರು, 'ಬಿಗ್ ಬಾಸ್' ಮನೆಯಲ್ಲಿ ಉಳಿಯಲು ಏನೇನೋ ಸರ್ಕಸ್ ಮಾಡುತ್ತಿದ್ದಾರೆ. ಹೀಗಿರುವಾಗಲೇ, ತಮಗೆ ಮೂರು ವರ್ಷಗಳ ಹಿಂದೆ ಮದುವೆ ಆಗಿತ್ತು ಅಂತ 'ಬಿಗ್ ಬಾಸ್' ಮನೆಯಲ್ಲಿ ಇರುವವರೆಲ್ಲರಿಗೂ ಚೈತ್ರ ಕೋಟೂರು ಹೇಳಿದ್ದಾರೆ. ಆದರೆ ಅವರ 'ಮದುವೆ ಕಥೆ'ಯನ್ನ ನಂಬಲು ಯಾರೂ ರೆಡಿ ಇಲ್ಲ.

ಏನಿದು ಹೊಸ ಕಥೆ ಅಂತಿದ್ದೀರಾ.? ಸಂಪೂರ್ಣ ಮಾಹಿತಿ ಫೋಟೋ ಸ್ಲೈಡ್ ಗಳಲ್ಲಿದೆ ಓದಿರಿ...

ಮೂರು ವರ್ಷದ ಹಿಂದೆ ಮದುವೆ

ಮೂರು ವರ್ಷದ ಹಿಂದೆ ಮದುವೆ

ಈ ವರ್ಷದ ನವೆಂಬರ್ ಬಂದರೆ, ಚೈತ್ರ ಕೋಟೂರು ಮದುವೆ ಆಗಿ ಮೂರು ವರ್ಷ ಆಗುತ್ತಂತೆ. ಶಾಸ್ತ್ರೋಕ್ತವಾಗಿ ಮದುವೆ ಆಗದ ಚೈತ್ರ ಕೋಟೂರು, ಸಹಿ ಹಾಕಿ ದಾಂಪತ್ಯ ಜೀವನ ಆರಂಭಿಸಿದ್ದಾರಂತೆ. ಹಾಗಂತ ಇತರೆ ಸ್ಪರ್ಧಿಗಳಿಗೆಲ್ಲ ಚೈತ್ರ ಕೋಟೂರು ಹೇಳಿದ್ದಾರೆ.

ಚೈತ್ರ ಕೋಟೂರು ಮದುವೆ ಆಗಿರೋದು ಯಾರನ್ನ.?

ಚೈತ್ರ ಕೋಟೂರು ಮದುವೆ ಆಗಿರೋದು ಯಾರನ್ನ.?

ಮಾರ್ಕೆಟ್ ನಲ್ಲಿ ಸೊಪ್ಪು ಮಾರುವವರೊಬ್ಬರನ್ನ ಚೈತ್ರ ಕೋಟೂರು ಮದುವೆ ಆಗಿದ್ದಾರಂತೆ. ಅವರ ಹೆಸರು ರಾಜ್ ಕುಮಾರ್ ಅಂತೆ. ''ರಕ್ತ ಕೊಂಚ ಕಡಿಮೆ ಇತ್ತು. ಅದಕ್ಕೆ ಸೊಪ್ಪು ಮಾರುವವರನ್ನು ಮದುವೆ ಆದೆ. ಬೆಳಗ್ಗೆ ಮೂರು ಗಂಟೆಗೆ ಎದ್ದು ಸೊಪ್ಪು ತಂದು ನನಗೆ ಬೇಯಿಸಿಕೊಡುತ್ತಾರೆ'' ಅಂತ ಬೋಗಿ ಲೆಕ್ಕದಲ್ಲಿ ಚೈತ್ರ ಕೋಟೂರು ರೈಲು ಬಿಡುತ್ತಿದ್ದರು.

ಪಾಪ ಆಸೆ ಇರಲ್ವಾ.?

ಪಾಪ ಆಸೆ ಇರಲ್ವಾ.?

''ಯಾಕೆ ಇದೇ ಫೀಲ್ಡ್ ನಲ್ಲಿ ಇರುವವರನ್ನು ಮದುವೆ ಆಗಬೇಕು.? ಸೊಪ್ಪು, ತರಕಾರಿ, ಹೂ ಮಾರುವವರನ್ನು ಯಾಕೆ ಮದುವೆ ಆಗಬಾರದು.? ಅವರಿಗೂ ಚೆನ್ನಾಗಿ ಓದಿರುವ ಹುಡುಗಿಯನ್ನ ಮದುವೆ ಆಗಬೇಕು ಅಂತ ಆಸೆ ಇರುತ್ತೆ ಅಲ್ವಾ.?'' ಅಂತ ಪ್ರಶ್ನಿಸಿದ್ದಾರೆ ಚೈತ್ರ ಕೋಟೂರು.

ನಂಬಲು ಯಾರೂ ತಯಾರಿಲ್ಲ.!

ನಂಬಲು ಯಾರೂ ತಯಾರಿಲ್ಲ.!

ಮದುವೆ 'ಕಥೆ' ಬಗ್ಗೆ ಚೈತ್ರ ಕೋಟೂರು ಹೇಳ್ತಿದ್ರೆ, ಅದನ್ನ ನಂಬಲು ಯಾರೂ ತಯಾರಿರಲಿಲ್ಲ. ಚೈತ್ರ ಕಾಗೆ ಹಾರಿಸುತ್ತಿದ್ದಾರೆ ಅಂತಲೇ ಎಲ್ಲರೂ ಭಾವಿಸಿದರು. ''ತಾಳಿ ಹಾಕೊಂಡಿಲ್ಲ. ಕಾಲುಂಗುರ ಇಲ್ಲ... ಮದುವೆ ಆಗಿದೆ ಅನ್ನೋದಕ್ಕೆ ಏನು ಗ್ಯಾರೆಂಟಿ.?'' ಎಂಬ ಪ್ರಶ್ನೆಗಳೂ ಕೂಡ ತೂರಿಬಂತು.

ಕಥೆ ಕಟ್ಟುತ್ತಿದ್ದಾರಾ ಚೈತ್ರ.?

ಕಥೆ ಕಟ್ಟುತ್ತಿದ್ದಾರಾ ಚೈತ್ರ.?

ಹೇಳಿ ಕೇಳಿ ಚೈತ್ರ ಕೋಟೂರು ಬರಹಗಾರ್ತಿ. ಕಥೆ-ಕವನ ಬರೆಯುವುದರಲ್ಲಿ ಆಕೆ ಎತ್ತಿದ ಕೈ. ಹೀಗಾಗಿ, 'ಬಿಗ್ ಬಾಸ್' ಮನೆಯೊಳಗೆ ಫುಟೇಜ್ ಪಡೆಯಲು, ಸದಾ ಸುದ್ದಿಯಲ್ಲಿ ಇರಲು ಚೈತ್ರ ಕೋಟೂರು ಹೀಗೆಲ್ಲ ಕಥೆ ಕಟ್ಟುತ್ತಿದ್ದಾರಾ.? 'ಬಿಗ್ ಬಾಸ್' ಮನೆಯ ಸ್ಪರ್ಧಿಗಳಿಗೂ ಇಂಥ ಒಂದು ಡೌಟ್ ಕಾಡುತ್ತಿದೆ.

More from Filmibeat

English summary
Bigg Boss Kannada 7: Day 9: Chaitra Kotur Speaks About Her Mystery Husband.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X