ರಂಪ ಆದ್ಮೇಲೆ ಜೈಜಗದೀಶ್ ಬಳಿ ಕ್ಷಮೆ ಕೇಳಿದ ಕಿಶನ್

Recommended Video

Kishan apologizes to Jai Jagadeesh

''ಎಲ್ಲರ ಬಗ್ಗೆ ಜೈಜಗದೀಶ್ ಬಾಯಿಗೆ ಬಂದ ಹಾಗೆ ಮಾತನಾಡುತ್ತಾರೆ. ಎಲ್ಲರಿಗೂ ಕೆಟ್ಟ ಮಾತಿನಲ್ಲಿ ಬೈಯ್ಯುತ್ತಾರೆ'' ಅಂತ ಡ್ಯಾನ್ಸರ್ ಕಿಶನ್ ಆರೋಪ ಮಾಡಿದ್ದರು. ಇದೇ ವಿಚಾರಕ್ಕೆ 'ಬಿಗ್ ಬಾಸ್' ಮನೆಯೊಳಗೆ ರಂಪ ಕೂಡ ಆಗಿತ್ತು.

ಎಲ್ಲರ ಮುಂದೆ ಕಿಶನ್ ಬೆಟ್ಟು ಮಾಡಿ ತೋರಿಸಿದ್ದರಿಂದ, ನಟ ಜೈಜಗದೀಶ್ ರವರಿಗೆ ಅವಮಾನ ಆಯ್ತು. ಹೀಗಾಗಿ, ಜೈಜಗದೀಶ್ ಬೇಸರ ಮಾಡಿಕೊಂಡಿದ್ದರು.

''ಕಿಶನ್ ಮಾಡಿದ್ದು ಸರಿಯಲ್ಲ. ಜೈಜಗದೀಶ್ ರನ್ನ ಸಪರೇಟ್ ಆಗಿ ಕರೆದು ಮಾತನಾಡಬೇಕಿತ್ತು'' ಎಂಬ ಅಭಿಪ್ರಾಯ 'ಬಿಗ್ ಬಾಸ್' ಮನೆಯಲ್ಲಿ ವ್ಯಕ್ತವಾದ ಮೇಲೆ ಜೈಜಗದೀಶ್ ಬಳಿ ಕಿಶನ್ ಕ್ಷಮೆ ಕೇಳಿದ್ದಾರೆ.

bigg-boss-kannada-7-day-9-kishan-apologizes-jai-jagadeesh

''ದಯವಿಟ್ಟು ಕ್ಷಮಿಸಿ. ನನ್ನ ಉದ್ದೇಶ ಅದಲ್ಲ'' ಅಂತ ಜೈಜಗದೀಶ್ ಬಳಿ ಕಿಶನ್ ಕೈಮುಗಿದು ಕೇಳಿಕೊಂಡರು.

ಅದಾಗಲೇ ಮುನಿಸಿಕೊಂಡಿದ್ದ ಜೈಜಗದೀಶ್, ''ತಪ್ಪು ಮಾಡಿ ಆಯ್ತಲ್ಲ.. ಅವಮಾನ ಮಾಡಾಯ್ತಲ್ಲ.. ಬಿಟ್ಟುಬಿಡು.. ಏನೇ ಇದ್ದರೂ, ಒಬ್ಬರನ್ನೇ ಕರೆದು ಹೇಳಬೇಕಿತ್ತು. ಹೀರೋ ಆಗಲು ಪ್ರಯತ್ನ ಪಟ್ಟೆ. ನೀನೀಗ ಹೀರೋ. ನಿನಗೆ ಯಾರು ಹೇಳಿಕೊಟ್ಟರೋ, ಏನೋ ಗೊತ್ತಿಲ್ಲ'' ಅಂತ ಕೋಪದಿಂದ ನುಡಿದರು.

ಕಿಶನ್ ಕ್ಷಮೆ ಕೇಳಿದರೂ, ಜೈಜಗದೀಶ್ ಗೆ ಕಿಶನ್ ಮೇಲಿನ ಬೇಸರ ಮಾತ್ರ ಹಾಗೇ ಇದೆ.

More from Filmibeat

English summary
Bigg Boss Kannada 7: Day 9: Kishan apologizes Jai Jagadeesh.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X